ವಿವಾಹಕ್ಕೆ ಮುಂಚಿತವಾಗಿ ಹುಡುಗ-ಹುಡಗಿಯ ಜಾತಕದ ಹೊಂದಾಣಿಕೆಯನ್ನು ಮಾಡುವ ಪದ್ಧತಿ ಹಿಂದೂ ಸಂಪ್ರದಾಯದಲ್ಲಿದೆ. ಅಂದರೆ, ಅವರಿಬ್ಬರಿಗೆ ಮುಂದೆ ಜೀವನದಲ್ಲಿ ಹೊಂದಾಣಿಕೆಯಾಗುತ್ತದೆಯೆ? ಅವರ ಸಂಸಾರ ಸುಖ ಹೇಗಿರಲಿದೆ..? ಕಷ್ಟ-ಸುಖಗಳು ಯಾವ ಪ್ರಮಾಣದಲ್ಲಿರುತ್ತದೆ..? ಆಯುಷ್ಯ, ಆರೋಗ್ಯ, ಐಶ್ವರ್ಯದ ಬಗ್ಗೆ ಏನಿದೆ? ಕುಟುಂಬದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ? ಹೀಗೆ ಅವರ ಅನ್ಯೋನ್ಯತೆಯಿಂದ ಹಿಡಿದು ಇನ್ನಿತರ ವಿಷಯಗಳ ಬಗ್ಗೆಯೂ ಗಮನಹರಿಸಲಾಗುತ್ತದೆ. ಆದರೆ, ಕೇವಲ ರಾಶಿಯೊಂದನ್ನೇ ನೋಡಿ ತೀರ್ಮಾನಕ್ಕೆ ಬರಲಾಗದು. ರಾಶಿಯಲ್ಲಿ ವ್ಯತ್ಯಾಸಗಳು ಕಂಡುಬಂದರೂ ಜಾತಕದ ಇತರ ಗುಣಗಳು ಹೊಂದಾಣಿಕೆಯಾದರೆ ಮದುವೆಯಾಗಬಹುದಾಗಿದೆ. 

ಹೀಗಿದ್ದರೂ ಕೆಲವು ರಾಶಿಗಳ ಮಧ್ಯೆ ಹೊಂದಾಣಿಕೆ ಸಮಸ್ಯೆ ಇದ್ದೇ ಇರಲಿದೆ. ಹೀಗಾಗಿ ರಾಶಿಗಳ ಹೊಂದಾಣಿಕೆ ಆಗಲಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ಮಾಡಲಾಗುತ್ತದೆ. ಒಂದು ವೇಳೆ ರಾಶಿ ಸಹಿತ ಯಾವ ಗುಣಗಳೂ ಹೊಂದಾಣಿಕೆಯಾಗದಿದ್ದರೂ ವಿವಾಹ ಮಾಡಿದರೆ, ಮಾಡಿಕೊಂಡರೆ ಮನೆಯಲ್ಲಿ ಯಾವಾಗಲೂ ಅಶಾಂತಿ ಹಾಗೂ ಕಲಹಗಳು ನಡೆಯುತ್ತವೆ. ಹಾಗಾದರೆ ಯಾವ ರಾಶಿಯವರಿಗೆ ಯಾವ ರಾಶಿಯವರು ಅಷ್ಟಾಗಿ ಆಗಿ ಬರುವುದಿಲ್ಲ. ಅವು ಯಾವುವು ಎಂಬುದನ್ನು ನೋಡೋಣ.ಇದನ್ನು ಓದಿ: 2021ರಲ್ಲಿ ಧನ ಸಮೃದ್ಧಿಯಾಗಲು ರಾಶಿಯನುಸಾರ ಹೀಗೆ ಮಾಡಿ..!

ಕರ್ಕಾಟಕ – ಸಿಂಹ ರಾಶಿ
ಜ್ಯೋತಿಷ್ಯದಲ್ಲಿ ಹೇಳುವ ಪ್ರಕಾರ ಕರ್ಕಾಟಕ ಹಾಗೂ ಸಿಂಹ ರಾಶಿಯವರ ಮಧ್ಯೆ ವಿವಾಹವಾದರೆ ಅವರು ಗೊಂದಲದಲ್ಲಿಯೇ ಇರುತ್ತಾರಂತೆ. ಯಾವುದಕ್ಕೂ ಒಂದು ದೃಢ ನಿರ್ಧಾರಕ್ಕೆ ಅವರು ಬರುವುದಿಲ್ಲ. ಇದಕ್ಕೆ ಕಾರಣವೇನೆಂದರೆ ಕರ್ಕಾಟಕ ರಾಶಿಯವರಿಗೆ ಸಂಗಾತಿಯನ್ನು ಬಹಳವೇ ಪ್ರೀತಿಸುತ್ತಾರೆ. ಆದರೆ, ಸಿಂಹ ರಾಶಿಯವರು ಅಸುರಕ್ಷತಾ ಭಾವ ಇರುವುದರಿಂದ ಸದಾ ಸಂಗಾತಿ ಬಗ್ಗೆ ಗೊಂದಲದಲ್ಲೇ ಇರುತ್ತಾರೆ. 

ಮಕರ – ಕುಂಭ ರಾಶಿ
ಈ ಎರಡು ರಾಶಿಯವರು ಸಂಬಂಧಗಳನ್ನು ನಿಭಾಯಿಸಲು ಇಷ್ಟಪಡುತ್ತಾರೆ. ಆದರೆ, ಅವರಿಬ್ಬರ ವಿಚಾರಗಳು ಹೊಂದಾಣಿಕೆಯಾಗದೇ ಕಲಹಕ್ಕೆ ಕಾರಣವಾಗುತ್ತದೆ. ಮಕರ ರಾಶಿಯವರು ಬಹಳವೇ ಭಾವನಾತ್ಮಕ ಜೀವಿಗಳಾಗಿದ್ದು, ಕುಂಭ ರಾಶಿಯವರು ತಮ್ಮ ಸಂಬಂಧದ ಬಗ್ಗೆ ಬಹಳವೇ ವ್ಯಾವಹಾರಿಕವಾಗಿಯೇ ಚಿಂತಿಸುತ್ತಾರೆ. ಹೀಗಾಗಿ ಈ ರಾಶಿಯವರ ನಡುವೆ ಜಗಳವೇ ಮುಗಿಯುವುದಿಲ್ಲ. ಸಂಬಂಧವೂ ಇದರಿಂದ ಹಾಳಾಗುವತ್ತ ಸಾಗುತ್ತದೆ. 

ಇದನ್ನು ಓದಿ: ಮುಂಜಾನೆ ಎದ್ದಾಗ ಈ ಧ್ವನಿ ಕೇಳಿದರೆ, ಆ ವಸ್ತು ಕಂಡರೆ ನಿಮ್ಮ ಲಕ್ ಖುಲಾಯಿಸುತ್ತೆ!

ಮಿಥುನ-ಕನ್ಯಾ ರಾಶಿ
ಈ ರಾಶಿಯವರ ಕಥೆಯೂ ಮಕರ ಹಾಗೂ ಕುಂಭ ರಾಶಿಯವರಂತೆಯೇ ಇರುತ್ತದೆ. ಕನ್ಯಾ ರಾಶಿಯವರು ಬಹಳಾ ವ್ಯಾವಹಾರಿಕ ಸ್ವಭಾವದವರಾಗಿದ್ದು, ಮಿಥುನ ರಾಶಿಯವರು ಭಾವನಾತ್ಮಕ ಜೀವಿಗಳಾಗಿರುತ್ತಾರೆ. ಕನ್ಯಾ ರಾಶಿಯವರು ಸಂಗಾತಿಯನ್ನು ತೊರೆದರೂ ಏನೂ ಆಗದಂತೆ ಇರುವ ಸ್ವಭಾವದವರಾಗಿದ್ದರೆ, ಮಿಥುನ ರಾಶಿಯವರಿಗೆ ಈ ಸಂಕೋಲೆಯಿಂದ ಹೊರಬರಲಾರದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. 

ವೃಷಭ – ತುಲಾ ರಾಶಿಯವರು
ಜ್ಯೋತಿಷ್ಯದ ಪ್ರಕಾರ ಈ ಎರಡೂ ರಾಶಿಯವರು ಮೃದು ಸ್ವಭಾವದವರು. ಈ ಇಬ್ಬರಿಗೂ ಪರಸ್ಪರ ಅರ್ಥ ಮಾಡಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಆದರೆ, ಕೆಲವು ಸಮಯದ ನಂತರ ಈ ಇಬ್ಬರೂ ತಮ್ಮ ತಮ್ಮ ಇಷ್ಟಗಳನ್ನು ಇನ್ನೊಬ್ಬರ ಮೇಲೆ ಹೇರಿಕೆ ಮಾಡಲು ಪ್ರಯತ್ನಿಸುತ್ತಾರೆ. ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುತ್ತದೆ. 

ಮೀನ- ವೃಶ್ಚಿಕ ರಾಶಿಯವರು
ವೃಶ್ಚಿಕ ರಾಶಿಯವರು ಪ್ರೀತಿಯ ನಿವೇದನೆಯಲ್ಲಿ ಯಾವಾಗಲೂ ಬೇಜವಾಬ್ದಾರಿಯನ್ನು ಹೊಂದಿರುತ್ತಾರೆ. ಆದರೆ, ಮೀನ ರಾಶಿಯವರು ತದ್ವಿರುದ್ಧವಾಗಿದ್ದು, ಬಹಳವೇ ಭಾವನಾತ್ಮಕ ಚಿಂತನೆಯಲ್ಲಿರುತ್ತಾರೆ. ಅಲ್ಲದೆ, ಮೀನ ರಾಶಿಯವರಿಗೆ ಸಂಬಂಧದಲ್ಲಿ ಬಹಳವೇ ಸ್ಪೇಸ್ ಬೇಕು ಎಂದು ಬಯಸುತ್ತಾರೆ. ಆದರೆ, ವೃಶ್ಚಿಕ ರಾಶಿಯವರಿಗೆ ಅನುಮಾನವೇ ಮುಗಿಯುವುದಿಲ್ಲ. ಈ ರೀತಿಯ ಸ್ವಭಾವ ಸಂಬಂಧವನ್ನು ಹಾಳು ಮಾಡುತ್ತದೆ. 

ಇದನ್ನು ಓದಿ: ಈ ಐದು ರಾಶಿಯವರು ಕೊನೇ ತನಕ ಪ್ರೀತಿಯನ್ನು ನಿಭಾಯಿಸಬಲ್ಲರು! 

ಕರ್ಕಾಟಕ - ಧನು ರಾಶಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಎರಡು ರಾಶಿಗೆ ಆಗಿಯೇ ಬರುವುದಿಲ್ಲ. ಕಾರಣವೇನೆಂದರೆ ಧನು ರಾಶಿಯವರು ಸಮಯದ ಜೊತೆ ಜೊತೆಗೆ ಬದಲಾವಣೆಯನ್ನು ಇಷ್ಟಪಡುತ್ತಾರೆ. ಆದರೆ, ಕರ್ಕಾಟಕ ರಾಶಿಯವರು ಅವರದ್ದೇ ಗುಂಗಿನಲ್ಲಿರುತ್ತಾರೆ. ಬದಲಾವಣೆಗಳು ಅವರ ಮೇಲೆ ಯಾವುದೇ ಪರಿಣಾಮವನ್ನು ತರುವುದಿಲ್ಲ. ಹಾಗಾಗಿ ಇವರಿಬ್ಬರ ಮಧ್ಯೆ ಹೊಂದಾಣಿಕೆಯೇ ಆಗದೆ, ಯಾವುದೇ ಒಂದು ನಿಲುವಿಗೆ ಬರಲು ಸಾಧ್ಯವಾಗುವುದಿಲ್ಲ.