ಗುಪ್ತ್ ಗುಪ್ತ್
ಸ್ವಲ್ಪ ಸಾಹಸ, ಹೆಚ್ಚು ಭಂಡತನ, ಕೊಂಚ ಮೊಂಡುತನ, ಬಂಡೆಗೆ ತಲೆ ಗುದ್ದಿಕೊಳ್ಳುವ ಸ್ವಭಾವ ಎಲ್ಲ ಸೇರಿದರೆ ಆರ್ ಅಕ್ಷರದಿಂದ ಶುರುವಾಗುವ ಹೆಸರಿನವರು. ಬಂಡೆಗೆ ತಲೆ ಚಚ್ಚಿಕೊಳ್ಳುವುದು ಅಂತಾರಲ್ಲ, ಹಾಗೆ ಅಸಂಭವವನ್ನು ಸಾಧಿಸುವ ಯತ್ನದಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ. ಇವರು ಬುದ್ಧಿವಂತರು ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಆತುರದ ಸ್ವಭಾವದವರು. ಇವರಿಗೆ ಕಾನೂನಿನಿಂದ ತೊಂದರೆ ಆಗುವ ಸಾಧ್ಯತೆ ಹೆಚ್ಚು. ಇಷ್ಟಾದರೂ ಕಾನೂನಿನ ಚೌಕಟ್ಟು ಮೀರುವ ಸ್ವಭಾವ ಇವರದಲ್ಲ. ಆರೋಗ್ಯದಲ್ಲಿ ಏರುಪೇರು ಜಾಸ್ತಿ ಆಗುತ್ತಿರುತ್ತದೆ. ಯಾವುದೇ ಕೆಲಸವನ್ನಾಗಲೀ ಗುಪ್ತವಾಗಿ ಮಾಡಲು ಬಯಸುವಂಥ ಜನರಿವರು. ಇವರು ಯಾವುದೇ ವಿಷಯವನ್ನು ಮನಸು ಬಿಚ್ಚಿ ಮಾತನಾಡುವುದಿಲ್ಲ. ನೋವಾದರೂ ತಾವೇ ಕೊರಗುತ್ತಾರೆ. ಸಂತೋಷವಾದರೂ ಮನಸ್ಸಿನಲ್ಲೇ ಸಂತೋಷ ಪಡುತ್ತಾರೆ. ಈ ಸ್ವಭಾವವನ್ನು ಕಡ್ಡಾಯವಾಗಿ ಬಿಡಬೇಕು.

ಶಾಂತಿ ಪ್ರಿಯರು
ಇವರು ಶಾಂತಿಪ್ರಿಯರು. ಗಣಿತ, ಲೆಕ್ಕ ಪರಿಶೋಧನೆ, ವಿಜ್ಞಾನ, ಜ್ಯೋತಿಷ್ಯ, ವಾಣಿಜ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಾರೆ. ಆದ್ದರಿಂದ ಈ ಕ್ಷೇತ್ರಗಳಿಗೆ ಸಂಬಂಧಿಸಿದ ಕೋರ್ಸ್‌ಗಳನ್ನು ಮಾಡುವುದು ಉತ್ತಮ. ಆದರೆ ಕೆಲ ಬಾರಿ ಕೆಲಸ-ಕಾರ್ಯಗಳನ್ನು ಮುಂದಕ್ಕೆ ಹಾಕುವ ಸ್ವಭಾವ ಇವರದು. ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಗೊಂದಲ ಹೆಚ್ಚಾಗಿರುತ್ತದೆ. ಇವರು ಬಹುತೇಕ ಶ್ರೀಮಂತರಾಗುತ್ತಾರೆ. ಭವಿಷ್ಯದ ಬಗ್ಗೆ ವಿಪರೀತ ಕನಸು ಕಾಣುವ ಜನ ಇವರು. ಆತ್ಮವಿಶ್ವಾಸ, ಆತ್ಮಾಭಿಮಾನ ಹೆಚ್ಚಿರುವ ಜನ ಇವರು. ತಲೆ ನೋವು, ಗಂಟಲು ನೋವು, ಕಫ ಕಾಣಿಸಿಕೊಳ್ಳುತ್ತದೆ. ವೈವಾಹಿಕ ಜೀವನದಲ್ಲೂ ಸ್ವಲ್ಪ ತೊಂದರೆ ಆಗುತ್ತದೆ. ಇವರು ಇನ್ಫರ್ಮೇಷನ್ ಟೆಕ್ನಾಲಜಿ, ಇವೆಂಟ್ ಮ್ಯಾನೇಜ್ ಮೆಂಟ್, ರೇಡಿಯಾಲಜಿಸ್ಟ್, ವೈದ್ಯಕೀಯ ಕ್ಷೇತ್ರದಲ್ಲೇ ಉನ್ನತವಾದ ಅಭ್ಯಾಸ ಮಾಡಬಹುದು. ವಿದೇಶದಲ್ಲಿ ವ್ಯಾಸಂಗ ಮಾಡುವಂಥ ಅವಕಾಶಗಳು ದೊರೆಯುತ್ತವೆ.

ಎಲ್ ಅಕ್ಷರದಿಂದ ಶುರುವಾಗೋ ಹೆಸರಿನವರು ಬೆಸ್ಟ್ ಲವರ್ಸ್! ...

ಸೂಕ್ಷ್ಮ ಸ್ವಭಾವ
ಲಲಿತ ಕಲೆಗಳಲ್ಲಿ ಇವರಿಗೆ ಆಸಕ್ತಿ ಹೆಚ್ಚಾಗಿ ಇರುತ್ತದೆ. ಮೊದಲು ಜೀವನದಲ್ಲಿ ನೆಲೆ ಕಾಣುವುದೇ ಪ್ರಾಶಸ್ತ್ಯ. ಆ ಕಾರಣಕ್ಕೆ ಉತ್ತಮ ಉದ್ಯೋಗ, ಬ್ಯಾಂಕ್ ನಲ್ಲಿ ಬ್ಯಾಲೆನ್ಸ್ ಹಾಗೂ ಸ್ವಂತ ಮನೆ...ಹೀಗೆ ಎಲ್ಲ ಒಂದು ಹಂತಕ್ಕೆ ಇದೆ ಅಂದ ನಂತರವೇ ವಿವಾಹವಾಗುತ್ತಾರೆ. ಬಹಳ ಸೂಕ್ಷ್ಮ ಸ್ವಭಾವದ ವ್ಯಕ್ತಿತ್ವ ಇವರದು. ಯಾವುದೇ ವಿಚಾರದ ಆರಂಭ ಗೊತ್ತಾದರೆ ಸಾಕು, ಅದರ ತುದಿ ಹೀಗೆ ಎಂದು ನಿರ್ಧರಿಸಬಲ್ಲ ಶಕ್ತಿ ಇರುತ್ತದೆ. ಮಾತು ಬಹಳ ಸ್ಪಷ್ಟವಾಗಿರುತ್ತದೆ. ಉತ್ತಮವಾದ ಧ್ವನಿ ಇರುತ್ತದೆ. ಮನಸಿಗೆ ತಕ್ಕಂತೆಯೇ ಜೀವನದಲ್ಲೂ ಬದಲಾವಣೆ ಕಾಣುತ್ತಾ ಬರುತ್ತಾರೆ. ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳುವ ಸ್ವಭಾವ. ನಾನು ಹಾಗೂ ನನ್ನ ಕುಟುಂಬದವರು ಚೆನ್ನಾಗಿರಬೇಕು ಎಂಬ ಅಭಿಲಾಷೆ ಇರುತ್ತದೆ. ಸಮಾಜಕ್ಕೆ ಹೆದರಿ ನಡೆಯುವಂಥ ಸ್ವಭಾವದವರು. ಮಾನ-ಮರ್ಯಾದೆಗೆ ಅಂಜುತ್ತಾರೆ. ಸಾಧ್ಯವಾದಷ್ಟು ಜಗಳ-ಕಲಹದಿಂದ ದೂರ ಉಳಿಯುತ್ತಾರೆ.

ಜೆ ಅಕ್ಷರದಿಂದ ಶುರುವಾಗೋ ಹೆಸರಿನವರು ಗುಪ್ತ್‌ ಗುಪ್ತ್‌! ...

ಕೇಡು ಬಯಸುವವರಲ್ಲ
ಇನ್ನೊಬ್ಬರಿಗೆ ಕೇಡು ಬಯಸುವ ಸ್ವಭಾವ ಇವರದಲ್ಲ. ತಮ್ಮ ಹೆಸರಿನಿಂದ ರಾಜಾ ಎನಿಸಿಕೊಂಡರೂ ಯಾವುದೇ ರಾಜ ಅಥವಾ ಬಾಸ್‌ ಜೊತೆಗೆ ತಗ್ಗಿ ಬಗ್ಗಿ ಹೊಂದಿಕೊಂಡು ಹೋಗುವ ಸ್ವಭಾವ. ಹಾಗೇ ಕೆಲಸದ ಸ್ಥಳದಲ್ಲೂ ಇವರು ಹೇಳಿದ ಕೆಲಸ ಮಾಡಿಕೊಂಡು ಹೋಗುತ್ತಾರೆ. ಜಗಳಗಳನ್ನು ಸಾಧ್ಯವಾದಷ್ಟು ಶಾಂತಿಯಿಂದ, ಪ್ರೀತಿಯಿಂದ ಪರಿಹರಿಸಲು ಯತ್ನಿಸುತ್ತಾರೆ. ಆಹಾರದ ವಿಷಯದಲ್ಲಿ ಸ್ವಲ್ಪ ನಾಜೂಕು. ದ್ರವಾಹಾರ ಹೆಚ್ಚು ಇಷ್ಟ. ತಣ್ಣನೆಯ ಪದಾರ್ಥಗಳನ್ನು ಇಷ್ಟಪಡುತ್ತಾರೆ. ಹುಣ್ಣಿಮೆಯ ಸಂದರ್ಭದಲ್ಲಿ ಹೆಚ್ಚು ಆಕ್ಟಿವ್ ಆಗಿರುತ್ತಾರೆ.

ಕುಜ ದೋಷಕ್ಕೂ ಲೈಂಗಿಕ ಸಕ್ರಿಯತೆಗೂ ಸಂಬಂಧ ಇದೆಯಾ? ...