Asianet Suvarna News Asianet Suvarna News

ಗಾಜಿನ ಬಳೆ ಧರಿಸಿ ಜಾತಕದಲ್ಲಿ ಬುಧ ಗ್ರಹಕ್ಕೆ ಬಲ ತುಂಬಿ!

ಬಳೆಗಳು, ಅದರಲ್ಲೂ ಗಾಜಿನ ಬಳೆಗಳು ಎಲ್ಲ ಹಿಂದೂ ಹೆಣ್ಮಕ್ಕಳ ಕೈ ಅಲಂಕರಿಸಿರುತ್ತಿದ್ದವು. ಆದರೆ, ಈಗೀಗ ಬಳೆಗಳ ಸದ್ದು ಅಪರೂಪವಾಗಿದೆ. ಆದರೆ, ಬಳೆಗಳನ್ನು ಹಾಕಿಕೊಳ್ಳುವುದರಿಂದ ಕೇವಲ ಅಂದ ಹೆಚ್ಚಿಸುವುದಲ್ಲ, ಜಾತಕದಲ್ಲಿ ಬುಧ ಗ್ರಹವನ್ನು ಕೂಡಾ ಬಲಪಡಿಸಬಹುದು. 

Wearing glass bangles gives strength to the planet Mercury skr
Author
Bangalore, First Published Jun 20, 2022, 4:33 PM IST

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ವಿವಾಹಿತ ಮಹಿಳೆ(married woman)ಗೆ ಹದಿನಾರು ರೀತಿಯ ಅಲಂಕಾರಗಳು ಬಹಳ ಮಹತ್ವದ್ದಾಗಿದೆ. ಅವುಗಳಲ್ಲಿ ಕೈಗಳಿಗೆ ಧರಿಸುವ ಬಳೆಗಳೂ(bangles) ಸೇರಿವೆ. ಮರ, ಗಾಜು, ಮೆಟಲ್, ಬೆಳ್ಳಿ, ಬಂಗಾರ ಸೇರಿದಂತೆ ವಿವಿಧ ಮೆಟೀರಿಯಲ್ ಬಳಸಿ ತಯಾರಿಸಿದ ಬಳೆಗಳು ಸಿಗುತ್ತವೆ. ಅವುಗಳಲ್ಲಿ ಗಾಜಿನ ಬಳೆ ಎಲ್ಲಕ್ಕಿಂತ ಶ್ರೇಷ್ಠವೆನಿಸಿಕೊಂಡಿದೆ.

ಹೆಣ್ಮಕ್ಕಳು ಕೈ ತುಂಬಾ ಬಳೆ ಧರಿಸಿ ಗಲಗಲನೆ ಸದ್ದು ಮಾಡುತ್ತಾ ಓಡಾಡುತ್ತಿದ್ದರೆ ಮನೆಯ ಕಳೆಯೇ ಬೇರೆ. ವಿಶೇಷ ಕಾರ್ಯಕ್ರಮಗಳಂತೂ ಈ ಬಳೆಗಳ ಸದ್ದು, ಅಲೆದಾಟದಲ್ಲೇ ಸಂಭ್ರಮ ಹೆಚ್ಚಿಸಿಕೊಳ್ಳುತ್ತವೆ. ಪ್ರತಿಯೊಬ್ಬ ಹಿಂದೂ ಹೆಣ್ಮಕ್ಕಳೂ ಬಳೆ ಧರಿಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಆದರೆ, ಆಧುನಿಕ ಯುಗದಲ್ಲಿ ಹೆಣ್ಮಕ್ಕಳಿಗೆ ಬಳೆಗಳೇಕೋ ಅಲರ್ಜಿಯಂತಾಗಿವೆ. ಬಳೆ, ಕಿವಿಯೋಲೆ, ಸರ ಎಲ್ಲವನ್ನೂ ತೆಗೆದಿಟ್ಟು ಬಿಚ್ಚೋಲೆ ಗೌರಮ್ಮನ ಹಾಗಿರುವುದೇ ಸ್ಟೈಲ್ ಎನ್ನುತ್ತಾರೆ. 

ಆದರೆ, ಬಳೆಗಳನ್ನು ಧರಿಸುವುದರಿಂದ ಎಷ್ಟೆಲ್ಲ ಲಾಭಗಳಿವೆ(benefits) ಎಂದು ತಿಳಿದರೆ ನೀವದನ್ನು ಮತ್ತೆ ಧರಿಸಲಾರಂಭಿಸುವಿರಿ. ಹೌದು, ವರ್ಣರಂಜಿತ ಬಳೆಗಳು ಧರಿಸಿದ ಕೈಯ ಸೌಂದರ್ಯ ಹೆಚ್ಚಿಸುತ್ತವೆ. ಜೊತೆಗೆ, ಗಾಜಿನ ಬಳೆಗಳು ಮಣಿಕಟ್ಟಿಗೆ ಹೊಡೆದಾಗ, ಅದು ಮಹಿಳೆಯರ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇಷ್ಟು ಮಾತ್ರವಲ್ಲದೆ, ಜ್ಯೋತಿಷ್ಯದಲ್ಲಿ ಕೂಡಾ ಬಳೆಗಳಿಗೆ ಮಹತ್ವದ ಸ್ಥಾನವಿದೆ. ಅವುಗಳನ್ನು ಅದೃಷ್ಟ(luck)ದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅದೇ ಸಮಯದಲ್ಲಿ, ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಿಳೆಯ ಬಳೆಗಳು ಧರಿಸುವ ರೀತಿ ಮತ್ತು ಬಣ್ಣವು ಅವಳ ಗಂಡನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಳೆಗಳನ್ನು ಧರಿಸುವ ಯಾವ ನಿಯಮಗಳನ್ನು ಹೇಳಲಾಗಿದೆ ಎಂದು ತಿಳಿಯೋಣ.

ಜ್ಯೋತಿಷ್ಯಶಾಸ್ತ್ರ(astrology)ದ ಪ್ರಕಾರ, ಮಂಗಳವಾರ ಮತ್ತು ಶನಿವಾರದಂದು ಬಳೆಗಳನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ನಿಮ್ಮ ಪತಿಗೆ ದುರಾದೃಷ್ಟ ಬರುತ್ತದೆ. ಮತ್ತೊಂದೆಡೆ, ಶುಕ್ರವಾರ ಮತ್ತು ಭಾನುವಾರ ಗಾಜಿನ ಬಳೆಗಳನ್ನು ಧರಿಸಲು ಅತ್ಯಂತ ಮಂಗಳಕರ ದಿನಗಳು ಎಂದು ಪರಿಗಣಿಸಲಾಗಿದೆ. ಇದು ನಿಮ್ಮ ಗಂಡನ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ.

Vastu Tips: ತಾಯಿ ಲಕ್ಷ್ಮಿ ಬರುವ ಮುನ್ನ ನೀಡೋ ಸೂಚನೆಗಳಿವು!

ಬಳೆಗಳ ಬಣ್ಣದ ನಿಯಮಗಳು
ವಿವಾಹಿತ ಮಹಿಳೆ ಕಪ್ಪು ಅಥವಾ ಬಿಳಿ ಬಳೆಗಳನ್ನು ಧರಿಸಬಾರದು ಎಂದು ಧರ್ಮ ಗ್ರಂಥಗಳಲ್ಲಿ ಹೇಳಲಾಗಿದೆ. ಈ ಬಣ್ಣದ ಬಳೆಗಳನ್ನು ಧರಿಸುವುದು ನಿಮ್ಮ ಗಂಡನ ಜೀವನದಲ್ಲಿ ನಕಾರಾತ್ಮಕತೆ(negativity)ಯನ್ನು ಉತ್ತೇಜಿಸುತ್ತದೆ ಎಂದು ನಂಬಲಾಗಿದೆ.

ಜ್ಯೋತಿಷಿಗಳ ಪ್ರಕಾರ, ಬಳೆಗಳ ಸುತ್ತಿನ ಆಕಾರದಿಂದಾಗಿ, ಅವು ಬುಧ ಮತ್ತು ಚಂದ್ರ ಗ್ರಹಗಳಿಗೆ ಸಂಬಂಧಿಸಿವೆ. ಆದ್ದರಿಂದ, ನೀವು ಚಿನ್ನದ ಬಳೆಗಳನ್ನು ಧರಿಸಿದರೆ, ಅದರೊಂದಿಗೆ ಗಾಜಿನ ಬಳೆಗಳನ್ನು ಧರಿಸುವುದರಿಂದ ಜಾತಕದಲ್ಲಿ ಬುಧ ಗ್ರಹವು ಬಲಗೊಳ್ಳುತ್ತದೆ. ಮತ್ತೊಂದೆಡೆ, ಮಂಗಳಕರ ಮತ್ತು ಪವಿತ್ರವೆಂದು ಪರಿಗಣಿಸಲಾದ ಗಾಜಿನ ಬಳೆಗಳು ನಿಮ್ಮ ಜೀವನದಲ್ಲಿ ಧನಾತ್ಮಕ ಶಕ್ತಿ(positive energy)ಯನ್ನು ಹೆಚ್ಚಿಸುತ್ತವೆ.

ಪೂರ್ವಜರು ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅವರೇನೋ ಸೂಚನೆ ಕೊಡುತ್ತಿರಬಹುದು!

ಶಾಸ್ತ್ರಗಳಲ್ಲಿ ಮಂಗಳಕರ ಸಂಕೇತವೆಂದು ಪರಿಗಣಿಸಲಾದ ಬಳೆಗಳನ್ನು ಧರಿಸುವಾಗ, ಯಾವುದೇ ಹೊಸ ಬಳೆಯನ್ನು ಧರಿಸುವ ಮೊದಲು, ಅದನ್ನು ತಾಯಿ ಗೌರಿಗೆ ಅರ್ಪಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಹೊಸ ಬಳೆಯನ್ನು ಬೆಳಿಗ್ಗೆ ಅಥವಾ ಸಂಜೆ ಮಾತ್ರ ಧರಿಸಬೇಕು. ಇದರಿಂದ ನಿಮ್ಮ ಗಂಡನ ಅದೃಷ್ಟ ಹೆಚ್ಚುತ್ತದೆ, ನಿಮ್ಮ ವೈವಾಹಿಕ ಜೀವನವೂ ಸುಖಮಯವಾಗಿರುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios