Asianet Suvarna News Asianet Suvarna News

ಪೂರ್ವಜರು ಕನಸಲ್ಲಿ ಕಾಣಿಸಿಕೊಳ್ಳುತ್ತಿದ್ದಾರಾ? ಅವರೇನೋ ಸೂಚನೆ ಕೊಡುತ್ತಿರಬಹುದು!

ನಿಮ್ಮ ಕನಸಿನಲ್ಲಿ ಪೂರ್ವಜರು ಕಂಡು ಬಂದರೆ ಅದು ಅವರು ನಿಮಗೆ ಏನೋ ಹೇಳಲು ಬಯಸುತ್ತಿರುವ ಸೂಚನೆ. ಕನಸಿನ ವಿಜ್ಞಾನದ ಪ್ರಕಾರ, ಪೂರ್ವಜರ ಕನಸುಗಳು ಸೂಚಿಸುವುದೇನು ನೋಡೋಣ.

Ancestors dreams are the communication they are trying to do skr
Author
Bangalore, First Published Jun 20, 2022, 12:12 PM IST

ಕನಸುಗಳು(dreams) ವಿಚಿತ್ರ. ಅವುಗಳಲ್ಲಿ ಹೂವು ಮೊಗ್ಗಾದರೂ ಅಚ್ಚರಿಯಲ್ಲ, ಕಾಗೆಗೆ ನವಿಲಿನಂಥ ಗರಿಯಿದ್ದರೂ ಅಚ್ಚರಿಯಲ್ಲ. ಕೆಲವೊಮ್ಮೆ ಕನಸಿನಲ್ಲಿ ವಿಶೇಷ ವ್ಯಕ್ತಿಗಳು ಕಾಣಿಸಿಕೊಳ್ಳುವುದುಂಟು. ಅದರಲ್ಲೂ ಅಪರೂಪಕ್ಕೆ ಪೂರ್ವಜರು(ancestors) ಕಾಣಿಸಿಕೊಳ್ಳಬಹುದು. ಈ ಲೋಕ ತೊರೆದ ಪಿತೃಗಳು ಕಾಣಿಸಿಕೊಳ್ಳಬಹುದು. ಇಂಥ ಕನಸುಗಳಿಗೆ ಜ್ಯೋತಿಷ್ಯಶಾಸ್ತ್ರ(Astrology)ದಲ್ಲಿ ವಿಶೇಷ ಅರ್ಥವಿದೆ. ನಿಮಗೂ ಹೀಗೆ ಪದೇ ಪದೆ ಕನಸಿನಲ್ಲಿ ಪೂರ್ವಜರು ಕಾಣಿಸಿಕೊಳ್ಳುತ್ತಿದ್ದರೆ ಅಂಥ ಕನಸಿನ ಅರ್ಥವೇನು ತಿಳಿಯಿರಿ. 

ಸಂವಹನ ಪ್ರಯತ್ನ(Communication attempt)
ಪೂರ್ವಜರು ಕನಸಿನಲ್ಲಿ ಕಾಣಿಸಿಕೊಂಡರೆ ಅವರು ನಿಮಗೆ ಏನನ್ನಾದರೂ ತಿಳಿಸಲು ಬಯಸುತ್ತಿದ್ದಾರೆ ಎಂದರ್ಥ. ಹೀಗಾಗಿ, ಅವರ ಮಾತುಗಳನ್ನು ತಳ್ಳಿ ಹಾಕಬಾರದು ಮತ್ತು ಅವರಿಗೆ ಗಮನ ಕೊಡುವ ಮೂಲಕ ಪರಿಸ್ಥಿತಿಯನ್ನು ಸರಿಪಡಿಸಬೇಕು. ನಿಮ್ಮ ಪೂರ್ವಜರು ಈ ಕನಸುಗಳ ಮೂಲಕ ನಿಮ್ಮೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿರುವ ಕಾರಣ, ನೀವು ಅವರ ಸಂಕೇತಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಅನೇಕ ಬಾರಿ, ನಿಮ್ಮ ಪೂರ್ವಜರು ತಮ್ಮ ಕೋಪವನ್ನು ಕನಸಿನಲ್ಲಿ ನಿಮ್ಮೊಂದಿಗೆ ತಿಳಿಸುತ್ತಾರೆ, ಕೆಲವೊಮ್ಮೆ ತಮ್ಮ ಸಂತೋಷವನ್ನೂ ತೋರಿಸುತ್ತಾರೆ. ಹೀಗೆ ನಿಮಗೆ ಬಿದ್ದ ಕನಸುಗಳು ಮಂಗಳಕರವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಮುಂದೆ ಓದಿ.

ಕನಸಿನಲ್ಲಿ ನಿಮ್ಮ ಪೂರ್ವಜ ಕಷ್ಟದಲ್ಲಿರುವುದನ್ನು ನೋಡುವುದು!
ಕನಸಿನಲ್ಲಿ ನಿಮ್ಮ ಪೂರ್ವಜರು ಯಾರಾದರೂ ಕಷ್ಟದಲ್ಲಿರುವುದನ್ನು ನೀವು ನೋಡಿದರೆ, ಅವರು ಆಹಾರ, ಪಾನೀಯ ಅಥವಾ ಇತರ ವಸ್ತುಗಳಿಗೆ ಭಿಕ್ಷೆ ಬೇಡುತ್ತಿರುವುದು ಕಂಡುಬಂದರೆ, ಇದು ಉತ್ತಮ ಸೂಚಕವಲ್ಲ. ಇದು ನಿಮ್ಮ ಪಿತೃಗಳು ಸಂತೋಷದಲ್ಲಿಲ್ಲ. ನೆಮ್ಮದಿಯಾಗಿ ವಿಶ್ರಾಂತಿ ಪಡೆಯುತ್ತಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ಸನ್ನಿವೇಶದಲ್ಲಿ ಬಡವರ ದುಃಖವನ್ನು ನಿವಾರಿಸಲು ನೀವು ಅವರಿಗೆ ಕೊಡುಗೆ(donate) ನೀಡಬೇಕು. ಅಲ್ಲದೆ, ಗೀತೆ ಮತ್ತು ರಾಮಾಯಣವನ್ನು ಪ್ರತಿ ದಿನ ಪಠಿಸಬೇಕು. ಅಮಾವಾಸ್ಯೆಯ ದಿನ ಸಾಕಷ್ಟು ದಾನ ಮಾಡಬೇಕು. ಇದರಿಂದ ಅವರ ಆತ್ಮಕ್ಕೆ ನೆಮ್ಮದಿ ಸಿಗುತ್ತದೆ. 

ಯಾವ ಆಹಾರ ನೈವೇದ್ಯ ಮಾಡಿದರೆ ದೇವರು ಬೇಗ ಒಲಿಯುತ್ತಾನೆ?

ಕಾಗೆಗೆ ಕಾಟ ಕೊಟ್ಟಂತೆ ಕನಸು ಬಿದ್ದರೆ
ಪಿತೃಪಕ್ಷದ ಸಮಯದಲ್ಲಿ ಕಾಗೆ(crow)ಗೆ ಆಹಾರ ನೀಡುತ್ತೇವೆ. ಕಾಗೆಯು ಪೂರ್ವಜರಿಗೆ ಆಹಾರವನ್ನು ಸಾಗಿಸುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮ ಕನಸಿನಲ್ಲಿ ನೀವು ಕಾಗೆಯನ್ನು ಚುಚ್ಚಿದರೆ, ಅಥವಾ ಬೆದರಿಸಿ ಓಡಿಸುವುದು ಇತ್ಯಾದಿ ಕಾಟ ಕೊಡುವಂತೆ ಕಂಡುಬಂದರೆ, ನಿಮ್ಮ ಪಿತೃಗಳು ನಿಮ್ಮ ಮೇಲೆ ಕೋಪಗೊಂಡಿದ್ದಾರೆ ಎಂದರ್ಥ. ಈ ಸಂದರ್ಭದಲ್ಲಿ, ನೀವು ಎಲ್ಲಿ ತಪ್ಪು ಮಾಡಿದ್ದೀರಿ ಮತ್ತು ನೀವು ಏನು ತಪ್ಪು ಮಾಡಿದ್ದೀರಿ ಎಂಬುದನ್ನು ಕಂಡುಕೊಳ್ಳಬೇಕು. ನಿಯಮಿತ ತರ್ಪಣ, ಶ್ರಾದ್ಧ ಮತ್ತು ಪೂರ್ವಜರಿಗಾಗಿ ದಾನವನ್ನೂ ಮಾಡಬೇಕು. ಅಂತ್ಯಸಂಸ್ಕಾರ ಸರಿಯಾಗಿ ಮಾಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.

ಕನಸಿನಲ್ಲಿ ಪೂರ್ವಜರು ಅಳುವುದನ್ನು ನೋಡುವುದು
ನಿಮ್ಮ ಪೂರ್ವಜರು ಕನಸಿನಲ್ಲಿ ಅಳುವುದನ್ನು ನೋಡುವುದು ನಿಮ್ಮ ಪಿತೃಗಳು ಇನ್ನೂ ಮೋಕ್ಷವನ್ನು ಪಡೆದಿಲ್ಲ ಎಂಬುದರ ಸಂಕೇತವಾಗಿದೆ. ಅಂಥ ಸಂದರ್ಭದಲ್ಲಿ, ನೀವು ಅವರಿಗಾಗಿ ಬ್ರಾಹ್ಮಣ ಔತಣವನ್ನು ಸಿದ್ಧಪಡಿಸಬೇಕು ಮತ್ತು ಅವರ ವಿಮೋಚನೆಗಾಗಿ ದೇವರನ್ನು ಪ್ರಾರ್ಥಿಸುವಾಗ ಗೀತೆಯನ್ನು ಓದಬೇಕು.

ಈ ಐದು ರಾಶಿಗಳೊಂದಿಗೆ ವಾದಿಸಿ, ಜಗಳ ಮಾಡಿ ಗೆಲ್ಲೋದು ಸುಲಭವಲ್ಲ!

ಪಿತೃಗಳ ಕೋಪ
ನಿಮ್ಮ ಕನಸಿನಲ್ಲಿ ನಿಮ್ಮ ಪಿತೃವಿನ ಮೇಲೆ ನೀವು ಕೋಪಗೊಂಡಿದ್ದರೆ, ಇದು ನಿಮ್ಮ ಮನೆಯಲ್ಲಿ ಪಿತೃದೋಷವಿದೆ ಎಂದು ಸೂಚಿಸುತ್ತದೆ. ಈ ಸಂದರ್ಭದಲ್ಲಿ ನೀವು ಪರಿಸ್ಥಿತಿಯನ್ನು ನಿವಾರಿಸಲು ಜ್ಯೋತಿಷಿಯನ್ನು ಭೇಟಿ ಮಾಡಬೇಕು. ಏಕೆಂದರೆ ಪಿತೃ ದೋಷವು ಇಡೀ ಕುಟುಂಬವನ್ನು ಹಾಳು ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ದಿನ ಭವಿಷ್ಯ, ವಾರ ಭವಿಷ್ಯ, ಸಂಖ್ಯಾ ಶಾಸ್ತ್ರ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿ ದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios