ಗಂಡಸರೇ ಇಲ್ಲಿ ಓದಿ, ಈ ಕೆಲಸ ಮಾಡುತ್ತಿರುವ ಹೆಣ್ಣನ್ನು ಯಾವತ್ತೂ ಡಿಸ್ಟರ್ಬ್ ಮಾಡಬಾರದಂತೆ!
ಮಹಿಳೆಯರು ಈ ಕೆಳಗಿನ ಕೆಲವು ಕೆಲಸಗಳನ್ನು ಮಾಡುವಾಗ ಪುರುಷರು ಅವರಿಗೆ ತೊಂದರೆ ಕೊಡಬಾರದು ಎಂದು ವಾತ್ಸಾಯನ ಹೇಳಿದ್ದಾನೆ. ಹಾಗಿದ್ದರೆ ಅವು ಯಾವುವು?
ವಾತ್ಸಾಯನ ಕಾಮಶಾಸ್ತ್ರ ಎಂಬುದು ಪ್ರಾಚೀನ ಭಾರತದ ಶ್ರೇಷ್ಠ ಗ್ರಂಥಗಳಲ್ಲಿ ಒಂದು. ಇದರಲ್ಲಿ ಬರೀ ಕಾಮಸೂತ್ರಗಳನ್ನು ಮಾತ್ರ ಹೇಳಿರುವುದಲ್ಲ. ಅತ್ಯುತ್ತಮ ಕೌಟುಂಬಿಕ, ದಾಂಪತ್ಯ ಬದುಕಿಗೆ, ಸುಖೀ ಬದುಕಿಗೆ ಬೇಕಾದ ಸೂತ್ರಗಳನ್ನು ತಿಳಿಸಿಕೊಡಲಾಗಿದೆ. ಶ್ರೇಷ್ಠ ಪುರುಷ- ಮಹಿಳೆ ಮಂಚದಲ್ಲಿ ಹೇಗಿರುತ್ತಾರೆ, ಹೇಗಿರಬೇಕು, ಇಬ್ಬರೂ ಪರಸ್ಪರರನ್ನು ಒಲಿಸಿಕೊಳ್ಳುವುದು ಹೇಗೆ, ಇದೆಲ್ಲವನ್ನೂ ಅವನು ಹೇಳುತ್ತಾನೆ.
ವಾತ್ಸಾಯನ ಎಂಥ ಮಹಿಳೆಯರನ್ನು ನಂಬಬೇಕು, ಎಂಥ ಮಹಿಳೆಯರನ್ನು ನಂಬಬಾರದು, ಯಾವ ಸ್ತ್ರೀ ಅಥವಾ ಯಾವ ಬಗೆಯ ಪುರುಷ ಸರಿಯಾದ ಭೋಗಿ, ಸುಖ ಪಡೆಯುವವರು ಹಾಗೂ ಸುಖ ಕೊಡುವವರು, ಸುರತ ಸುಖಕ್ಕೆ ಅಗತ್ಯವಾದ ಕೌಶಲ್ಯವೇನು ಎಂಬುದನ್ನೆಲ್ಲ ಹೇಳುತ್ತಾನೆ. ಮಹಿಳೆಯರನ್ನು ಹೇಗೇ ಗೌರವಿಸಬೇಕೆಂದೂ ಹೇಳುತ್ತಾನೆ. ಜೊತೆಗೆ, ಮಹಿಳೆಯರು ಈ ಕೆಳಗಿನ ಕೆಲವು ಕೆಲಸಗಳನ್ನು ಮಾಡುವಾಗ ಪುರುಷರು ಅವರಿಗೆ ತೊಂದರೆ ಕೊಡಬಾರದು ಎಂದೂ ಹೇಳಿದ್ದಾನೆ. ಹಾಗಿದ್ದರೆ ಅವು ಯಾವುವು?
ಮಗುವಿಗೆ ಹಾಲುಣಿಸುವಾಗ: ಸ್ತನ್ಯಪಾನ ಪುಣ್ಯದ ಕೆಲಸ. ಮಹಿಳೆ ತನ್ನ ಮಗುವಿಗೆ ಹಾಲುಣಿಸುವುದನ್ನು ಯಾವುದೇ ಪುರುಷ ಅಥವಾ ಗಂಡನೇ ಆಗಲಿ ನೋಡಬಾರದು ಅತವಾ ತೊಂದರೆ ಕೊಡಬಾರದು. ಪುರುಷ ಆ ಕಾಟ ನೀಡಿದರೆ ಆಕೆ ವಿಚಲಿತಳಾಗ್ತಾಳೆ. ಇದ್ರಿಂದ ಹಾಲು ಕುಡಿಯುತ್ತಿರುವ ಮಗುವಿಗೆ ತೊಂದರೆಯಾಗುತ್ತದೆ ಎನ್ನುತ್ತಾನೆ ವಾತ್ಸಾಯನ.
ಅಲಂಕಾರ ಮಾಡಿಕೊಳ್ಳುವಾಗ : ಮಹಿಳೆ ತನ್ನ ಮುಖದ ಅಥವಾ ಮೈಯ ಅಲಂಕಾರವನ್ನು ಮಾಡುವಾಗ ಅಥವಾ ಸರಿಪಡಿಸಿಕೊಳ್ಳುವಾಗ ಅಥವಾ ಕೂದಲು ಬಾಚಿಕೊಳ್ಳುವಾಗ ಗಂಡ ಕೂಡ ಅವಳನ್ನು ನೋಡಬಾರದಂತೆ. ಪುರುಷ ಈ ಸಮಯದಲ್ಲಿ ಮಹಿಳೆಯನ್ನು ನೋಡಿದ್ರೆ ಅವಳ ಗಮನ ಬೇರೆಡೆಗೆ ಹೋಗುತ್ತದೆ. ಈ ಸಮಯದಲ್ಲಿ ಪುರುಷ ಅಲ್ಲಿಂದ ದೂರ ಹೋದರೆ ಒಳ್ಳೆಯದು ಎನ್ನುತ್ತಾನೆ ವಾತ್ಸಾಯನ.
ಊಟ ಮಾಡುವಾಗ: ಊಟ ಮಾಡುವುದನ್ನು ಬೇರೆಯವರು ನೋಡ್ತಿದ್ದರೆ ಸರಿಯಾಗಿ ಊಟ ಸೇರುವುದಿಲ್ಲ. ವಾತ್ಸಾಯನನ ಪ್ರಕಾರ, ಮಹಿಳೆ ಊಟ ಮಾಡುವಾಗ ಕುಟುಂಬ ಸದಸ್ಯನಲ್ಲದ ಪುರುಷನು ಅವಳನ್ನು ನೋಡಬಾರದು. ಇದು ಶಿಷ್ಟಾಚಾರಕ್ಕೆ ವಿರುದ್ಧವಾಗಿದೆ. ಮಹಿಳೆ ಊಟ ಮಾಡುವಾಗ ಪುರುಷ ನೋಡಿದ್ರೆ ಇದು ಮಹಿಳೆಯ ಮುಜುಗರಕ್ಕೆ ಕಾರಣವಾಗುತ್ತದೆ. ಇದರಿಂದ ಮಹಿಳೆಗೆ ಸರಿಯಾಗಿ ತಿನ್ನಲು ಸಾಧ್ಯವಾಗುವುದಿಲ್ಲ.
ಮಹಿಳೆಯರೇಕೆ ದಾಂಪತ್ಯದಲ್ಲಿ ದ್ರೋಹ ಮಾಡುತ್ತಾರೆ?
ಸೀನು, ಆಕಳಿಕೆ : ಬರೀ ಊಟ ಮಾತ್ರವಲ್ಲ ಮಹಿಳೆ ಸೀನುತ್ತಿದ್ದರೆ ಆಗ ಕೂಡ ಪುರುಷ ಆಕೆಯನ್ನು ನೋಡಬಾರದಂತೆ. ಅಂತಹ ಸಂದರ್ಭದಲ್ಲಿ ದೇಹದ ಮೇಲಿನ ಉಡುಪುಗಳು ತಂತಾನೇ ಅಸ್ತವ್ಯಸ್ತಗೊಳ್ಳುತ್ತದೆ. ಅದು ಸಭ್ಯತೆ ಅಲ್ಲ.
ಬಟ್ಟೆ ಸರಿಪಡಿಸುವಾಗ : ಹೆಣ್ಣು ಬಟ್ಟೆ ಧರಿಸುವುದೇ ಮರ್ಯಾದೆ ಮುಚ್ಚಿಕೊಳ್ಳೋಕೆ. ಹೀಗಿರುವಾಗ ಮಹಿಳೆ ತನ್ನ ಬಟ್ಟೆಗಳನ್ನು ಸರಿಪಡಿಸುತ್ತಿರುವಾಗ ಪುರುಷ ಅವಳನ್ನು ನೋಡಿದರೆ ಆಕೆಗೆ ಮತ್ತಷ್ಟು ಮುಜುಗರವಾಗುತ್ತದೆ. ಮಹಿಳೆ ಬಟ್ಟೆ ಸರಿ ಮಾಡಿಕೊಳ್ಳುವಾಗ ನೋಡುವುದು ತಪ್ಪು. ಮಹಿಳೆ ಬಟ್ಟೆ ಸರಿ ಮಾಡಿಕೊಳ್ತಿದ್ದಾಳೆ ಎಂಬುದು ಗೊತ್ತಾದ್ರೆ ಪುರುಷ ಎಚ್ಚೆತ್ತುಕೊಳ್ಳಬೇಕು. ಆಕೆಯನ್ನು ಅಪ್ಪಿತಪ್ಪಿಯೂ ನೋಡಬಾರದು. ಆಕೆಗೆ ಗೌರವ ನೀಡಿ, ಅಲ್ಲಿಂದ ಹೋಗಬೇಕು ಎನ್ನುತ್ತಾನೆ ವಾತ್ಸಾಯನ.
ಅಂಗಮರ್ದನ: ಅಂಗಮರ್ದನ ಅಥವಾ ಮಸಾಜ್ ಮಾಡಿಕೊಳ್ಳುತ್ತಿರುವಾಗ ಪುರುಷನಾದವನು ಆಕೆಯನ್ನು ನೋಡಬಾರದು. ಇದು ಆಕೆ ಗೌರವಕ್ಕೆ ಧಕ್ಕೆ ತರುತ್ತದೆ. ಪುರುಷರ ಮರ್ಯಾದೆಗೂ ಅದು ತಕ್ಕುದಲ್ಲ.
ನನ್ನಮ್ಮನ ಜೊತೆಯೇ ಗಂಡನ ರಾಸಲೀಲೆ, ಏನ್ಮಾಡೋದು ಕೇಳ್ತಿದ್ದಾಳೆ ಹೆಂಡತಿ?