Asianet Suvarna News Asianet Suvarna News

ಮಹಿಳೆಯರೇಕೆ ದಾಂಪತ್ಯದಲ್ಲಿ ದ್ರೋಹ ಮಾಡುತ್ತಾರೆ?

ಪ್ರತಿ ದಿನ ನಮ್ಮ ಸುತ್ತ ಸಾಕಷ್ಟು ದಾಂಪತ್ಯ ವಂಚನೆಯ ಪ್ರಕರಣಗಳು ಗಾಸಿಪ್‌ಗಳಾಗಿ ಓಡಾಡುತ್ತಿರುತ್ತವೆ. ಇಷ್ಟಕ್ಕೂ ಸಂಬಂಧದಲ್ಲಿ ಮಹಿಳೆಯರು ಮೋಸ ಮಾಡುವುದೇಕೆ? 

Here are the reasons for Why do women cheat on their partners skr
Author
First Published Jan 8, 2024, 6:15 PM IST | Last Updated Jan 8, 2024, 6:15 PM IST

ಮೊದಲೆಲ್ಲ ಮದುವೆಯಲ್ಲಿ ವಂಚನೆ ಎಂದರೆ ಅದು ಬಹುತೇಕ ಗಂಡನಿಂದಲೇ ಆಗುತ್ತಿದ್ದುದು. ಕಷ್ಟವೋ, ಸುಖವೋ ಗಂಡ ಕುಡುಕನೋ, ವಂಚಕನೋ ಏನಾದರೂ ಆಗಿರಲಿ ಮಹಿಳೆ ಅನುಸರಿಸಿಕೊಂಡು ಹೋಗುತ್ತಿದ್ದಳು. ಇದಕ್ಕೆ ಆಕೆಯ ಆರ್ಥಿಕ ಅವಲಂಬನೆ, ಸಾಮಾಜಿಕ ಬಹಿಷ್ಕಾರ, ತವರಿಗೆ ಕೆಟ್ಟ ಹೆಸರು ತರುವ ಭಯ, ತಂಗಿಯರ ವಿವಾಹವಾಗದ ಭಯ, ಬೆಳೆದು ಬಂದ ರೀತಿ ಇತ್ಯಾದಿಗಳು ಕಾರಣವಾಗುತ್ತದ್ದವು. 
ಆದರೆ ಈಗ ಹಾಗಲ್ಲ. ಮಹಿಳೆ ಆರ್ಥಿಕವಾಗಿ ಸ್ವತಂತ್ರಳಾಗಿದ್ದಾಳೆ. ಸಂಗಾತಿಗೆ ಸಮಾನವಾಗಿ ಜೀವನ ನಡೆಸುತ್ತಾಳೆ. ಅದೇ ರೀತಿಯ ಗೌರವ ಬಯಸುತ್ತಾಳೆ. ಯಾವುದರಲ್ಲೂ ಪತಿಗೆ ಕಡಿಮೆ ಇಲ್ಲದ ಮೇಲೆ ಆತನ ಎಲ್ಲ ದೌರ್ಜನ್ಯವನ್ನು ಸಹಿಸಿಕೊಂಡಿರಬೇಕಾದ ದರ್ದು ಆಕೆಗಿಲ್ಲ. ಅವೆಲ್ಲ ಸರಿಯೇ, ಆದರೆ, ವಂಚನೆಯ ವಿಷಯದಲ್ಲೂ ಆಕೆ ಪತಿಯ ಮಟ್ಟಕ್ಕೇ ಇಳಿಯುವುದು ಮಾತ್ರ ಸರಿಯಲ್ಲ. ಈಗ ಪುರುಷರಷ್ಟೇ ವಂಚಿಸುವುದಿಲ್ಲ, ದಾಂಪತ್ಯದಲ್ಲಿ ಮಹಿಳೆಯರೂ ವಂಚಿಸುತ್ತಾರೆ. ಸಂಬಂಧದಲ್ಲಿ ಅಸಮಾಧಾನವನ್ನು ಅನುಭವಿಸುವ ಈ ಶತಮಾನದ ಮಹಿಳೆ ತನ್ನ ಸಂಗಾತಿಗೆ ಮೋಸ ಮಾಡಲು ನಿರಾಕರಿಸುವುದಿಲ್ಲ. ಅಷ್ಟಕ್ಕೂ ಮಹಿಳೆಯರು ಏಕೆ ಮೋಸ ಮಾಡುತ್ತಾರೆ?

1. ಜೀವನಶೈಲಿ ಬದಲಾವಣೆ
ಮೊದಲು, ಪುರುಷರು ಮತ್ತು ಮಹಿಳೆಯರ ಪಾತ್ರ ಸಂಬಂಧದಲ್ಲಿ ಕುಟುಂಬವನ್ನು ಸಾಕುವುದು ಮತ್ತು ನಡೆಸುವುದಾಗಿ ಇರುತ್ತಿತ್ತು.  ಈಗ  ಇಬ್ಬರೂ ಸಂಬಂಧ ಅಥವಾ ಮದುವೆಯಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಈಗ, ಸಂತೋಷ, ಉತ್ತಮ ಲೈಂಗಿಕತೆ, ಸ್ನೇಹ ಮತ್ತು ಹೆಚ್ಚಿನವುಗಳಿಗೆ ಸ್ಥಳವಿದೆ. ಹಾಗಾಗಿ ಒತ್ತಡ ಹೆಚ್ಚು. ಅತೃಪ್ತಿ ಅಥವಾ ಭಾವನಾತ್ಮಕ ಸಂಪರ್ಕದ ಕೊರತೆಯಿದ್ದಾಗ ವಂಚನೆ ತಪ್ಪಲ್ಲ ಎಂಬಂತೆ ಬಾಲಿವುಡ್ ಅಥವಾ ಕೆ-ಡಾಮಾಗಳು, ಸೆಲೆಬ್ರಿಟಿಗಳ ಜೀವನಶೈಲಿಗಳು ಬಿಂಬಿಸುತ್ತಿವೆ. 

ಹೆಣ್ಣುಮಕ್ಕಳ ಬಗ್ಗೆ ಕೇವಲವಾಗಿ ಮಾತಾಡಿದ್ರೆ ಕೆರಳಿ ಕೆಂಡವಾಗೋ ಸುದೀಪ್‌, ಕಿಚ್ಚನಿಗೆ ಹೆಚ್ಚಾಗ್ತಿದ್ದಾರೆ ಮಹಿಳಾ ಫ್ಯಾನ್ಸ್‌

2. ಅಗೌರವ, ಆಸೆ
ಮಹಿಳೆಯರಲ್ಲಿ ದಾಂಪತ್ಯ ದ್ರೋಹವು ಸಾಮಾನ್ಯವಾಗಿ ಪೂರೈಸದ ಭಾವನಾತ್ಮಕ ಅಗತ್ಯಗಳು, ಮೌಲ್ಯೀಕರಣಕ್ಕಾಗಿ ಹಂಬಲ ಅಥವಾ ಸಿಗದ ಗೌರವದಿಂದಾಗಿ ಜರುಗುತ್ತದೆ. ಅತಿಯಾದ ಆಸೆ, ಶ್ರೀಮಂತಿಕೆಯಿಂದ ಬದುಕುವ ದುರಾಸೆ ಕೂಡಾ ಇದಕ್ಕೆ ಕಾರಣವಾಗುತ್ತದೆ. ಕೆಲಸದಿಂದ ದಣಿದಿರುವ ಜನರಿಗೆ, ಹಳೆಯ ಸಂಬಂಧದಲ್ಲಿ  ವಾದಗಳಿಗೆ ಪ್ರವೇಶಿಸುವುದಕ್ಕಿಂತ ಹೊಸ ಸಂಬಂಧದಲ್ಲಿ ತಿಳುವಳಿಕೆ ಮತ್ತು ಗೌರವ ಎರಡನ್ನೂ ಕಂಡುಕೊಳ್ಳುವುದು ಸುಲಭ. 

3. ಸ್ವಾವಲಂಬನೆ
ಈಗ ಮಹಿಳೆ ಯಾವ ವಿಷಯದಲ್ಲೂ ಯಾರ ಮೇಲೂ ಅವಲಂಬಿತಳಾಗಿಲ್ಲ. ಪತಿಗೆ ಸರಿಸಮನಾಗಿ ದುಡಿವ ಆಕೆ ಆತ ಹೇಳಿದ್ದೆಲ್ಲ ಹೇಳಿಸಿಕೊಳ್ಳುವುದಿಲ್ಲ. ಪತಿಯ ಮನೆಯಲ್ಲಿ ಎಷ್ಟೇ ಐಶಾರಾಮಿತನ ಇದ್ದರೂ ತನಗೆ ಬೆಲೆ ದೊರೆಯುತ್ತಿಲ್ಲವೆಂದರೆ, ಅವರನ್ನು ವಂಚಿಸುವುದು ಆಕೆಗೆ ತಪ್ಪೆನಿಸುವುದಿಲ್ಲ. 

4. ಪ್ರತೀಕಾರ
ಕೆಲವು ಮಹಿಳೆಯರಿಗೆ, ದಾಂಪತ್ಯ ದ್ರೋಹವು ಕೇವಲ ಪ್ರತೀಕಾರದ ಕ್ರಿಯೆಯಾಗಿದೆ. ಅವರು ತಮ್ಮ ಭಾವನೆಗಳನ್ನು ನೋಯಿಸುವ ತಮ್ಮ ಸಂಗಾತಿಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಾರೆ. ಪತಿ ಮೋಸ ಮಾಡಿದ್ದಕ್ಕೆ ಪ್ರತೀಕಾರವಾಗಿ ಕೆಲವರು ಮೋಸ ಮಾಡಬಹುದು. ಮತ್ತೆ ಕೆಲವರು ಪತಿ ತಮ್ಮ ಮೇಲೆ ಆಸಕ್ತಿ ತೋರದಿದ್ದಾಗ, ಆತನನ್ನು ಕೆಣಕಿ, ನನಗೂ ಬೀಳುವವರಿದ್ದಾರೆ. ನಿನಗೆ ನನ್ನ ಬೆಲೆ ಅರಿವಿಲ್ಲವಷ್ಟೇ ಎಂದು ತೋರಿಸುವುದೂ ಮತ್ತೊಂದು ಕಾರಣ. 

6. ಪೂರೈಸದ ನಿರೀಕ್ಷೆ
ಪ್ರತೀ ಹೆಣ್ಣೂ ತನ್ನ ಗಂಡ ಹೀಗೆ ಇರಬೇಕು, ತನ್ನನ್ನು ಹೀಗೇ ನೋಡಿಕೊಳ್ಳಬೇಕು, ಪ್ರೀತಿಸಬೇಕು ಎಂಬ ಆಸೆ, ನಿರೀಕ್ಷೆಯಲ್ಲಿ ವಿವಾಹವಾಗುತ್ತಾಳೆ. ಈ ನಿರೀಕ್ಷೆಗಳನ್ನು ಪೂರೈಸದ ನಂತರ ಉಂಟಾಗುವ ಕೋಪದ ಭಾವನೆಯಿಂದ ಅವರು ದಾಂಪತ್ಯ ವಂಚನೆಗೆ ತೊಡಗಬಹುದು. 

ಕ್ರಷ್​ ಇದ್ದದ್ದು ಅಂಕಲ್​ ಜೊತೆ, ಮದ್ವೆಯಾಗಿದ್ದು ಇನ್ನೊಬ್ರ ಜೊತೆ: ಇಂಟರೆಸ್ಟಿಂಗ್​ ವಿಷ್ಯ ರಿವೀಲ್​ ಮಾಡ್ರು ರಣವೀರ್​ ಅಮ್ಮ!

5. ಸ್ವಾಭಿಮಾನ
ಪಾಲುದಾರನು ಅವಳನ್ನು ಸಾಕಷ್ಟು ಹೊಗಳದಿದ್ದರೆ ಅಥವಾ ಅವಳು ದಡ್ಡಿ ಎಂಬಂತೆ ಕಡೆಗಣಿಸಿದರೆ ಅದು ಅವಳ ಸ್ವಾಭಿಮಾನವನ್ನು ಕೆಣಕುತ್ತದೆ. ತಾನು ಕೂಡಾ ಪುರುಷ ಬಯಸುವಂಥವಳು ಎಂಬುದನ್ನು ಸಾಬೀತು ಮಾಡಲು ಆಕೆ ವಂಚನೆಗಿಳಿಯಬಹುದು. 

6. ಒಂಟಿತನ
ಪತಿ ಸಿಕ್ಕಾಪಟ್ಟೆ ಬ್ಯುಸಿ ಇದ್ದು ಪತ್ನಿಗೆ ಬೇಕೆಂದಾಗ ಯಾವಾಗಲೂ ಸಿಗದಿದ್ದರೆ ಮಹಿಳೆ ಒಂಟಿತನ ಅನುಭವಿಸುತ್ತಾಳೆ. ಆಗ ತನ್ನ ಭಾವನೆಗಳನ್ನು ಹೇಳಿಕೊಳ್ಳಲು ಅವಳು ಹೊರಗೆ ಹುಡುಕಾಟಕ್ಕೆ ತೊಡಗಬಹುದು.
 

Latest Videos
Follow Us:
Download App:
  • android
  • ios