Vastu Tips: ಮನೆಯ ಈ ಜಾಗದಲ್ಲಿ ತಾಮ್ರದ ಸೂರ್ಯನಿಟ್ಟು ನೋಡಿ
ವಾಸ್ತು ಶಾಸ್ತ್ರದ ಪ್ರಕಾರ ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ಹೋಗಬಹುದು, ಆದ್ರೆ ಮನೆಯಲ್ಲಿ ಕೆಲ ವಸ್ತುಗಳನ್ನಿಟ್ಟು ವಾಸ್ತು ದೋಷವನ್ನು ನಿವಾರಿಸಬಹುದು. ವಾಸ್ತು ದೋಷ ಕಡಿಮೆ ಮಾಡಿ, ಮನೆಯಲ್ಲಿ ಶಕ್ತಿ ಹೆಚ್ಚಿಸಬೇಕೆಂದ್ರೆ ನೀವು ಮನೆಯಲ್ಲಿ ಸೂರ್ಯನ ಈ ವಸ್ತು ಇಡಿ.

ಹಿಂದೂ ಧರ್ಮದಲ್ಲಿ ಸೂರ್ಯನನ್ನು ಕಣ್ಣಿಗೆ ಕಾಣುವ ದೇವರು ಎಂದು ನಂಬಲಾಗುತ್ತದೆ. ಪ್ರತಿ ದಿನ ಸೂರ್ಯನಿಗೆ ಜಲವನ್ನು ಅರ್ಪಿಸಿ ಪೂಜೆ ಮಾಡಲಾಗುತ್ತದೆ. ಮನೆಯ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅನೇಕ ವಸ್ತುಗಳನ್ನು ಇಡಲಾಗುತ್ತದೆ. ಮನೆಯಲ್ಲಿಡುವ ವಸ್ತುಗಳು ಮನೆಯ ಸಮೃದ್ಧಿಯನ್ನು ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ವಾಸ್ತುಶಾಸ್ತ್ರದಲ್ಲಿ ತಾಮ್ರದ ಸೂರ್ಯನಿಗೂ ಹೆಚ್ಚಿನ ಮಹತ್ವ ನೀಡಲಾಗಿದೆ.
ತಾಮ್ರ (Copper) ದ ಸೂರ್ಯ (Sun) ನನ್ನು ಅನೇಕರ ಮನೆಯ ಗೋಡೆ ಮೇಲೆ ನೇತು ಹಾಕಲಾಗುತ್ತದೆ. ವಾಸ್ತು (Vastu) ಶಾಸ್ತ್ರದ ಪ್ರಕಾರ, ಯಾವಾಗ್ಲೂ ಮನೆಯ ಗೋಡೆ ಮೇಲೆಯೇ ಸೂರ್ಯನ ಮೂರ್ತಿಯನ್ನು ನೇತುಹಾಕಬೇಕು. ಮನೆಯಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸಲು ತಾಮ್ರದ ಸೂರ್ಯನನ್ನು ಯಾವ ಸ್ಥಳದಲ್ಲಿ ಇಡಬೇಕು ಎಂದು ನಾವಿಂದು ಹೇಳ್ತೆವೆ.
Astro tips: ಹೊಸ ವರ್ಷದಲ್ಲಿ ಆರ್ಥಿಕ ಸ್ಥಿತಿ ಬಲಪಡಿಸಲು ನವಿಲುಗರಿಯ ಈ ಟ್ರಿಕ್ಸ್ ಬಳಸಿ..
ವಾಸ್ತು ಪ್ರಕಾರ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇರಿಸುವ ಪ್ರಯೋಜನಗಳು :
ಮನೆಗೆ ಸಕಾರಾತ್ಮಕ (Positive) ಶಕ್ತಿ ಪ್ರವೇಶವಾಗ್ಬೇಕೆಂದ್ರೆ ಸೂರ್ಯನ ಮೂರ್ತಿಯನ್ನು ಇಡುವುದು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಸೂರ್ಯನ ಮೂರ್ತಿಯಿದ್ರೆ ಅದು ಖ್ಯಾತಿ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ.
ತಾಮ್ರ ಪ್ರಭಾವಶಾಲಿ ಲೋಹವಾಗಿದೆ. ಸೂರ್ಯ ಮನೆಗೆ ಧನಾತ್ಮಕ ಶಕ್ತಿಯನ್ನು ನೀಡುತ್ತಾನೆ. ತಾಮ್ರದಿಂದ ಮಾಡಿದ ಸೂರ್ಯನ ಮೂರ್ತಿ, ಮನೆಯ ಜನರ ನಡುವೆ ಸಾಮರಸ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಹೊರಹೊಮ್ಮುವ ಶಕ್ತಿ ಕುಟುಂಬವನ್ನು ವೈಷಮ್ಯದಿಂದ ಮುಕ್ತಗೊಳಿಸುತ್ತದೆ. ಮನೆಯಲ್ಲಿ ಸದಾ ಸುಖ, ಸಮೃದ್ಧಿ ಇರಬೇಕು ಎಂದಾದ್ರೆ ನೀವು ಕೂಡ ಮನೆಯಲ್ಲಿ ತಾಮ್ರದ ಸೂರ್ಯನನ್ನು ಹಾಕಿ.
ತಾಮ್ರದ ಸೂರ್ಯನನ್ನು ಮನೆಯ ಯಾವ ಜಾಗದಲ್ಲಿ ಇಡಬೇಕು? :
ಪೂರ್ವದಿಕ್ಕಿನಲ್ಲಿಟ್ಟರೆ ಪ್ರಯೋಜನ : ಮನೆಯ ಪೂರ್ವ ದಿಕ್ಕಿನಲ್ಲಿ ನೀವು ಸೂರ್ಯನ ಮೂರ್ತಿಯನ್ನು ಇಡಬೇಕು. ಆದ್ರೆ ಪೂರ್ವ ದಿಕ್ಕಿನ ಗೋಡೆಗೆ ಕಿಟಕಿ ಅಥವಾ ಬಾಗಿಲು ಇದ್ದರೆ ಆ ಜಾಗದಲ್ಲಿ ನೀವು ಸೂರ್ಯನ ಮೂರ್ತಿಯನ್ನು ಇಡಬೇಡಿ. ಪೂರ್ವದಿಕ್ಕಿನಲ್ಲಿ ನೀವು ಸೂರ್ಯನ ಈ ಮೂರ್ತಿ ಇಡೋದರಿಂದ ಇದು ಮನೆಗೆ ಶಕ್ತಿಯನ್ನು ಪೂರೈಸುತ್ತದೆ. ಈ ದಿಕ್ಕಿನಲ್ಲಿ ನೇತಾಡುವ ತಾಮ್ರದ ಸೂರ್ಯನು ಮನೆಯಲ್ಲಿ ವಾಸಿಸುವ ಜನರ ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತಾನೆ. ಇದು ಪ್ರೀತಿಯನ್ನು ಹೆಚ್ಚಿಸುತ್ತದೆ. ಮನೆಯಲ್ಲಿ ಕೆಲಸ ಮಾಡುವ ಸ್ಥಳದ ಪೂರ್ವ ದಿಕ್ಕಿನ ಗೋಡೆಗೆ ನೀವು ತಾಮ್ರದ ಸೂರ್ಯನನ್ನು ಇಡಬೇಕು. ಅದು ಯಶಸ್ಸನ್ನು ತರಲು ಸಹಾಯ ಮಾಡುತ್ತದೆ. ಉದ್ಯೋಗವನ್ನು ಅರಸುತ್ತಿದ್ದರೆ ಅಂಥವರ ಆಸೆ ಬೇಗ ಈಡೇರುತ್ತದೆ.
ತಾಮ್ರದ ಸೂರ್ಯನ ಮೂರ್ತಿ ಇಡಲು ಇದು ಉತ್ತಮ ದಿಕ್ಕು : ಪೂಜಾ ಕೋಣೆಯ ಈಶಾನ್ಯ ಮೂಲೆಯಲ್ಲಿ ತಾಮ್ರದ ಸೂರ್ಯನನ್ನು ನೇತುಹಾಕಿದರೆ ಅದು ಮಂಗಳಕರ ಫಲವನ್ನು ನೀಡುತ್ತದೆ. ಲಿವಿಂಗ್ ರೂಮಿನ ಪೂರ್ವ ದಿಕ್ಕಿನಲ್ಲಿ ನೀವು ತಾಮ್ರದ ಸೂರ್ಯನ ಮೂರ್ತಿಯನ್ನು ನೇತುಹಾಕಬೇಕು. ಲಿವಿಂಗ್ ರೂಮಿನ ಪೂರ್ವ ದಿಕ್ಕಿನ ಯಾವುದೇ ಸ್ಥಳದಲ್ಲಿ ನೀವು ಇದನ್ನು ಇಡಬಹುದು. ಇದ್ರಿಂದ ಶುಭ ಫಲ ನಿಮಗೆ ಪ್ರಾಪ್ತಿಯಾಗುತ್ತದೆ. ತಾಮ್ರದ ಸೂರ್ಯನ ಮೂರ್ತಿಯನ್ನು ಯಾವಾಗಲೂ ಸ್ವಚ್ಛವಾದ ಸ್ಥಳದಲ್ಲಿ ಇಡಬೇಕು. ಹಾಗೆಯೇ ಅದ್ರ ಸ್ವಚ್ಛತೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ. ಸೂರ್ಯನ ಮೂರ್ತಿ ಸ್ವಚ್ಛವಾಗಿದ್ದರೆ ಅದು ಧನಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.
ಈ ಸ್ಥಳದಲ್ಲಿ ಇಡಬೇಡಿ : ಮನೆಯ ಕೆಲ ಸ್ಥಳದಲ್ಲಿ ಎಂದೂ ಸೂರ್ಯನ ತಾಮ್ರದ ಮೂರ್ತಿಯನ್ನು ಇಡಬಾರದು. ಬೆಡ್ ರೂಮಿನಲ್ಲಿ ಹಾಗೂ ಬಾತ್ ರೂಮಿನಲ್ಲಿ ಅಥವಾ ಬಾತ್ ರೂಮಿನ ಬಳಿ ಯಾವುದೇ ಗೋಡೆಯ ಮೇಲೆ ಇದನ್ನು ಇಡಬಾರದು.
ಮೃತ ಆತ್ಮೀಯರು ಸಂದೇಶ ಕಳಿಸಿದ್ದಾರೆ! ಯಾವ ರಾಶಿಯವರು ಹೇಗೆ ಸಂದೇಶ ಪಡೆಯುತ್ತಾರೆ!
ಇಂಥ ಮೂರ್ತಿ ಇಡಬೇಡಿ : ನಿಮ್ಮ ಮನೆಯಲ್ಲಿರುವ ತಾಮ್ರದ ಸೂರ್ಯನ ಮೂರ್ತಿ ಬಿರುಕು ಬಿಟ್ಟಿದ್ದರೆ ಅಥವ ಎಲ್ಲಾದ್ರೂ ಒಡೆದಿದ್ದರೆ ಅದನ್ನು ನೀವು ಬಳಸಬೇಡಿ. ಅದನ್ನು ಮನೆಯಿಂದ ಹೊರಗೆ ಹಾಕಿ.