Astro tips: ಹೊಸ ವರ್ಷದಲ್ಲಿ ಆರ್ಥಿಕ ಸ್ಥಿತಿ ಬಲಪಡಿಸಲು ನವಿಲುಗರಿಯ ಈ ಟ್ರಿಕ್ಸ್ ಬಳಸಿ..

ನವಿಲು ಗರಿಗಳಿಗೆ ಸಂಬಂಧಿಸಿದ ಈ ಕ್ರಮಗಳು ಹೊಸ ವರ್ಷದಲ್ಲಿ ಸಂತೋಷ ಮತ್ತು ಸಮೃದ್ಧಿಗೆ ಬಹಳ ಉಪಯುಕ್ತವಾಗಿದೆ. ನವಿಲು ಗರಿಗಳಿಗೆ ಸಂಬಂಧಿಸಿದ ಕೆಲವು ಖಚಿತವಾದ ತಂತ್ರಗಳ ಬಗ್ಗೆ ನಾವು ತಿಳಿಸುತ್ತೇವೆ.

try these trick of peacock feathers in 2023 for money skr

ಹೊಸ ವರ್ಷವನ್ನು ಸಂತೋಷ ಮತ್ತು ಸಮೃದ್ಧಿಯಿಂದ ತುಂಬಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಏಕೆಂದರೆ ಹೊಸ ವರ್ಷವೆಂಬುದು ಎಲ್ಲರಿಗೂ ವಿಶೇಷವಾಗಿದೆ. ಹಳೆಯ ವರ್ಷಗಳಲ್ಲಿ ಎದುರಿಸಿದ ಸಮಸ್ಯೆಗಳು ಹೊಸ ವರ್ಷದಲ್ಲಿ ಬೇಡವೆಂದೇ ಎಲ್ಲರೂ ಪ್ರಾರ್ಥಿಸುತ್ತಾರೆ. ಆರ್ಥಿಕ ಸಮೃದ್ಧಿ ಹೊಂದಲು ಬಯಸುತ್ತಾರೆ. ಇದಕ್ಕಾಗಿ ಕಷ್ಟ ಪಟ್ಟು ಕೆಲಸ ಮಾಡುವ ಜೊತೆಗೆ ಅದೃಷ್ಟದ ಸಾಥ್ ಕೂಡಾ ಬೇಕಾಗುತ್ತದೆ. ಹೊಸ ವರ್ಷದಲ್ಲಿ ಆರ್ಥಿಕ ಸಮೃದ್ಧಿಗಾಗಿ ನವಿಲು ಗರಿಗಳಿಗೆ ಸಂಬಂಧಿಸಿದ ಕೆಲವು ಖಚಿತವಾದ ತಂತ್ರಗಳು ಇಲ್ಲಿವೆ. 

ನವಿಲು ಗರಿಗೆ ಸಂಬಂಧಿಸಿದ ಉಪಾಯ ಬಹಳ ಪರಿಣಾಮಕಾರಿ. ನವಿಲು ಗರಿಗಳನ್ನು ದೇವರ ನೆಚ್ಚಿನ ಆಭರಣವೆಂದು ಪರಿಗಣಿಸಲಾಗುತ್ತದೆ. ಇದನ್ನು ವಿಶೇಷವಾಗಿ ಶ್ರೀಕೃಷ್ಣನಿಗೆ ಅರ್ಪಿಸಲಾಗುತ್ತದೆ.

ವಾಸ್ತುವಿನಲ್ಲೂ ನವಿಲು ಗರಿಗಳಿಗೆ ವಿಶೇಷ ಮಹತ್ವವಿದೆ. ಇದನ್ನು ಮನೆಯಲ್ಲಿ ಇಡುವುದರಿಂದ ಹಲವಾರು ರೀತಿಯ ವಾಸ್ತು ದೋಷಗಳು ನಿವಾರಣೆಯಾಗುತ್ತವೆ. ಇದು ಆರ್ಥಿಕ ಸ್ಥಿತಿಯನ್ನು ಸಹ ಬಲಪಡಿಸುತ್ತದೆ. ನವಿಲು ಗರಿಗಳು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.

ಇಷ್ಟು ಶುಕ್ರವಾರ Vaibhav Laxmi Vrat ಆಚರಿಸಿದ್ರೆ ಹಣದ ಕೊರತೆ ಇರದು!

ಹೊಸ ವರ್ಷದಲ್ಲಿ ಮನೆಯಲ್ಲಿ ಸುಖ-ಸಮೃದ್ಧಿ ತುಂಬಲು ನವಿಲು ಗರಿಗಳನ್ನು ಯಾವ ದಿಕ್ಕಿನಲ್ಲಿ ಇಡಬೇಕು ಎಂದು ತಿಳಿಯೋಣ. ನವಿಲು ಗರಿಗಳಿಗೆ ಸಂಬಂಧಿಸಿದ ಕೆಲವು ಖಚಿತವಾದ ತಂತ್ರಗಳ ಬಗ್ಗೆ ತಿಳಿಸುತ್ತೇವೆ. ಅದನ್ನು ನೀವು ಹೊಸ ವರ್ಷದಲ್ಲಿ ಸಹ ಪ್ರಯತ್ನಿಸಬಹುದು.

ಈ ದಿಕ್ಕಿನಲ್ಲಿ ನವಿಲು ಗರಿಗಳನ್ನು ಇಡುವುದು ಶುಭ..
ನವಿಲಿನ ಗರಿಗಳಲ್ಲಿ ಎಲ್ಲಾ ದೇವತೆಗಳು ಮತ್ತು ಒಂಬತ್ತು ಗ್ರಹಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಅದಕ್ಕಾಗಿಯೇ ಇದನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ಎಲ್ಲಾ ತೊಂದರೆಗಳು ದೂರವಾಗುತ್ತವೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿ ಬರುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ನವಿಲು ಗರಿಗಳನ್ನು ಯಾವಾಗಲೂ ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ಮನೆಯ ವಾತಾವರಣವೂ ಉತ್ತಮವಾಗಿರುತ್ತದೆ.

ನವಿಲು ಗರಿಗಳು ದುಂದುವೆಚ್ಚದಿಂದ ಉಳಿಸುತ್ತವೆ..
ನಿಮ್ಮ ಬಳಿ ಹಣವಿಲ್ಲದಿದ್ದರೆ ಅಥವಾ ದುಂದುಗಾರಿಕೆಯ ಅಭ್ಯಾಸವನ್ನು ಹೊಂದಿದ್ದರೆ, ನವಿಲು ಗರಿಗಳ ಕೆಲವು ಪರಿಹಾರಗಳು ನಿಮಗೆ ಪರಿಹಾರವನ್ನು ನೀಡಬಹುದು.

ನಿಮ್ಮ ಪೂಜಾ ಕೋಣೆಯಲ್ಲಿ ನವಿಲು ಗರಿಗಳನ್ನು ಇಡುವುದರಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ. ಪೂಜಾಕೋಣೆಯಲ್ಲಿ ಅಥವಾ ದೇವಸ್ಥಾನದಲ್ಲಿ ಇರಿಸಲಾಗಿರುವ ನವಿಲು ಗರಿಯು ಮನೆಗೆ ಆಶೀರ್ವಾದವನ್ನು ತರುತ್ತದೆ. ಇದರಿಂದ ಕುಟುಂಬ ಸದಸ್ಯರ ನಡುವಿನ ಸಂಬಂಧವೂ ಮಧುರವಾಗುತ್ತದೆ.

Ashwini Nakshatraದಲ್ಲಿ ಜನಿಸಿದವರಿಗೆ ಈ ವೃತ್ತಿಯೇ ಬೆಸ್ಟ್.. ಇವರಿಗೆ ಯಾವಾಗ ವಿವಾಹವಾಗುತ್ತೆ?

ಕಾಳಸರ್ಪ ದೋಷವನ್ನು ತೊಡೆದು ಹಾಕಿ
ಜಾತಕದಲ್ಲಿ ಕಾಳ ಸರ್ಪ ದೋಷವಿದ್ದರೆ ಅದಕ್ಕೆ ನವಿಲು ಗರಿಯ ಪರಿಹಾರಗಳು ತುಂಬಾ ಪರಿಣಾಮಕಾರಿ. ವ್ಯಕ್ತಿ ತನ್ನ ದಿಂಬಿನ ಕೆಳಗೆ 7 ನವಿಲು ಗರಿಗಳನ್ನು ಇಟ್ಟುಕೊಳ್ಳಬೇಕು. ನವಿಲು ಗರಿಗಳ ಈ ಪರಿಹಾರವನ್ನು ಮಾಡುವುದರಿಂದ ಕಾಳ ಸರ್ಪ ದೋಷದಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.

ಯಾವುದೇ ರಾಧಾ-ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ ಮತ್ತು ಕೃಷ್ಣನ ಕಿರೀಟದಲ್ಲಿ ಕೆಲವು ನವಿಲು ಗರಿಗಳನ್ನು ಇರಿಸಿ. 40 ದಿನಗಳ ನಂತರ, ಆ ನವಿಲು ಗರಿಗಳನ್ನು ಮನೆಗೆ ತಂದು 'ಗಂಗಾಜಲ' ಸಿಂಪಡಿಸಿದ ನಂತರ ದೇವರ ಕೋಣೆಯಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ನಿಮ್ಮ ಸಂಪತ್ತು ಮತ್ತು ಸಮೃದ್ಧಿಯ ಜೊತೆಗೆ ನಿಮ್ಮ ಅದೃಷ್ಟವನ್ನು ಹೆಚ್ಚಿಸುತ್ತದೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios