Asianet Suvarna News Asianet Suvarna News

Vastu Tips: ಗಂಡ-ಹೆಂಡತಿ ಮಧ್ಯೆ ಜಗಳ ತಂದಿಡುವ ವಾಸ್ತುದೋಷ!

ಮನೆ, ಕಚೇರಿ ಹೀಗೆ ಯಾವುದೇ ಕಟ್ಟಡವಿರಲಿ, ಅಲ್ಲಿ ವಾಸ್ತು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಒಬ್ಬರ ಏಳ್ಗೆಗೆ, ಯಶಸ್ಸಿಗೆ ವಾಸ್ತು ಹೇಗೆ ಮುಖ್ಯವಾಗುತ್ತದೆಯೋ, ಹಾಗೇ ಅಧೋಗತಿಗೂ ವಾಸ್ತುವೇ ಕಾರಣವಾಗಿಬಿಡುತ್ತದೆ. ದಂಪತಿ ನಡುವೆ ನಡೆಯುವ ವಿರಸ, ಜಗಳಗಳಿಗೆ ವಾಸ್ತು ದೋಷವೂ ಒಂದು ಕಾರಣವಾಗಿದ್ದು, ಇದರ ನಿವಾರಣೆಗೆ ಏನು ಮಾಡಬೇಕೆಂಬುದನ್ನು ನೋಡೋಣ.

Vastu defects will bring discord between couple
Author
Bangalore, First Published Feb 12, 2022, 2:55 PM IST | Last Updated Feb 12, 2022, 2:55 PM IST

ದಂಪತಿಯಾದ (Couple) ಮೇಲೆ ಜೀವನಕ್ಕೊಂದು (Life) ಪರಿಪೂರ್ಣತೆ ಸಿಗುತ್ತದೆ. ಆದರೆ, ಕೆಲವೊಮ್ಮೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಾಗಲೇ ಅಪೂರ್ಣ ಎನ್ನಿಸಲು ಶುರುವಾಗುತ್ತದೆ. ಅಷ್ಟರೊಳಗಿದ್ದ ನೆಮ್ಮದಿ ಕೊನೆಗೆ ಇಲ್ಲ ಎಂಬ ಮಾತುಗಳು ಕೇಳಿಬರುತ್ತದೆ. ಮನೆಯಲ್ಲಿ ಸದಾ ಜಗಳ (Fight), ತಪ್ಪು ತಿಳಿವಳಿಕೆ, ಕೋಪ (Angry), ಅಸಹನೆಗಳೇ ತುಂಬಿಕೊಂಡಿತ್ತದೆ. ಈ ಮಧ್ಯೆ ಪ್ರೀತಿಗೆ (Love), ಅನ್ಯೋನ್ಯತೆಗೆ (Intimacy) ಅವಕಾಶವೇ ಇರುವುದಿಲ್ಲ. ಒಮ್ಮೆ ಮನಸ್ಥಾಪಗಳು, ಜಗಳಗಳು ಪ್ರಾರಂಭವಾದರೆ ಕ್ರಮೇಣ ಬೆಳೆದುಬಿಟ್ಟರೆ ಮುಂದೆ ಅದನ್ನು ಸರಿದಾರಿಗೆ ತರುವುದು ಬಹಳವೇ ಕಷ್ಟ. 

ಜಾತಕವನ್ನು ನೋಡಿ ಮದುವೆ ಮಾಡಿದರೂ ಈ ಜಗಳದ ಸಮಸ್ಯೆ (Problem) ಮಾತ್ರ ಉದ್ಭವವಾಗುವುದೂ ಉಂಟು. ಇದಕ್ಕೆ ಹಲವಾರು ಕಾರಣಗಳೂ ಇರಬಹುದು. ಆದರೆ, ಮನೆಯಲ್ಲಿನ ವಾಸ್ತುದೋಷವೂ (Vastu Dosha) ಒಂದು ಕಾರಣ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹೀಗಾಗಿ ಗಂಡ - ಹೆಂಡತಿ ನಡುವಿನ ಪ್ರೀತಿ ಮೂಡಲು, ಜಗಳ ಇಲ್ಲದಿರಲು ವಾಸ್ತು ಶಾಸ್ತ್ರದ ಅನುಸಾರ ಕೆಲವು ಚಿಕ್ಕಪುಟ್ಟ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು, ಈ ಪರಿಹಾರೋಪಾಯಗಳ ಅನುಸರಿಸಿ:- 

ಶಿವ-ಪಾರ್ವತಿ ವಿಗ್ರಹದ ಮುಂದೆ ತುಪ್ಪದ ದೀಪ
ವೈವಾಹಿಕ ಜೀವನದಲ್ಲಿ ನಿರಂತರ ಜಗಳಗಳು ಆಗುತ್ತಿದ್ದರೆ, ಶಿವ ಮತ್ತು ಪಾರ್ವತಿಯರ ವಿಗ್ರಹದ (Idol of Shiva and Parvati) ಮುಂದೆ ಪ್ರತಿದಿನ ತುಪ್ಪದ ದೀಪವನ್ನು (Ghee lamp) ಬೆಳಗಿಸಬೇಕು. ಹಾಗೇ ಶಿವ ಚಾಲೀಸಾವನ್ನು ಪಠಿಸಬೇಕು. ಶಿವ ಚಾಲಿಸಾವನ್ನು ಭಕ್ತಿಯಿಂದ ಪಠಿಸಿದಲ್ಲಿ ಪತಿ-ಪತ್ನಿಯರ ಸಂಬಂಧ ಗಟ್ಟಿಯಾಗಿ, ಪ್ರೀತಿ ಮೂಡುತ್ತದೆ. 

ಬೆಡರೂಂನಲ್ಲಿರಲಿ (Bed Room) ರಾಧಾ-ಕೃಷ್ಣರ (Radha-Krishna) ಫೋಟೋ (Photo)
ವೈವಾಹಿಕ ಜೀವನ ಸುಖಮಯವಾಗಿರಲು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ಹಾಕಬೇಕು. ಇದೇ ವೇಳೆ ಮನೆಯ ವಾಸ್ತುದೋಷವನ್ನು ನಿವಾರಿಸಲು ತುಪ್ಪದಲ್ಲಿ ಸಿಂಧೂರವನ್ನು ಬೆರೆಸಿ ಬಾಗಿಲಿಗೆ ಲೇಪಿಸಬೇಕು. ಇದರಿಂದ ವೈವಾಹಿಕ ಜೀವನದಲ್ಲಿ ಶಾಂತಿ (Peace) ನೆಲೆಸುತ್ತದೆ. 

ಶುಕ್ರವಾರ (Friday ) ಮಾಡುವ ಕೆಲಸ
ಜ್ಯೋತಿಷ್ಯದ ಪ್ರಕಾರ ಪತಿ-ಪತ್ನಿಯರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸಲು ಶುಕ್ರವಾರ ಮನೆಗೆ ಕನ್ಯಾ ರಾಶಿಯವರನ್ನು (Virgos) ಆಮಂತ್ರಿಸಬೇಕು. ಅವರಿಗೆ ಬಿಳಿ ಬಣ್ಣದ ಸಿಹಿ ತಿನಿಸುಗಳನ್ನು ತಿನ್ನಿಸಬೇಕು. ಈ ಪರಿಹಾರ ಕ್ರಮವನ್ನು ಶುಕ್ಲ ಪಕ್ಷದಿಂದ ಆರಂಭಿಸಬೇಕು. ಇದನ್ನು 11, 21 ಅಥವಾ 51 ದಿನಗಳ ಕಾಲ ಮಾಡಿದರೆ ಕ್ರಮೇಣ ದಾಂಪತ್ಯ ಸಂಬಂಧ ಸುಧಾರಿಸುತ್ತದೆ.

ಇದನ್ನು ಓದಿ: Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು! 

ಹೀಗೆ ಮಾಡಿದರೆ ಜಗಳಗಳು ಬಂದ್ 

1. ಮಲಗುವ ಕೋಣೆಯ ಗೋಡೆಗಳ ಬಣ್ಣ (Wall colour)  

ಗಂಡ-ಹೆಂಡತಿಯರ ಮಧ್ಯೆ ಜಗಳ ಮೂಡದಿರಲು ತಿಳಿ ಗುಲಾಬಿ, ತಿಳಿ ಹಳದಿ ಬಣ್ಣಗಳನ್ನು (Light pink, light yellow) ಮಲಗುವ ಕೋಣೆಗೆ ಬಳಿಸಬೇಕು. ಬೆಡ್ ರೂಮ್‌ನಲ್ಲಿ ಯಾವುದೇ ಕಾರಣಕ್ಕೂ ನೀಲಿ, ಕೆಂಪು, ಕಪ್ಪು, ನೇರಳೆ ಮುಂತಾದ ಗಾಢ ಬಣ್ಣಗಳನ್ನು ಬಳಸಬಾರದು. 

2. ಮಲಗುವಾಗ ಪಾದಗಳ ದಿಕ್ಕು (Direction of feet)
ಮಲಗುವಾಗ ನಿಮ್ಮ ಪಾದವು ಆಕಸ್ಮಿಕವಾಗಿಯೂ ಕೋಣೆಯ ಬಾಗಿಲಿನ ಕಡೆಗೆ ಇಲ್ಲದ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು. ವಿಶೇಷವಾಗಿ ದಕ್ಷಿಣ ದಿಕ್ಕಿಗೆ ಪಾದವನ್ನು ಹಾಕಿ ಮಲಗಬಾರದು. ಹೀಗೆ ಮಾಡಿದರೆ ತೊಂದರೆಗಳನ್ನು ಅನುಭವಿಸಬೇಕಾದೀತು. 

3. ಸಿಂಧೂರದ ಪ್ರಾಮುಖ್ಯತೆ (Importance of Sindoor)
ಪತಿಯ ಕೈಯಿಂದ ಸಿಂಧೂರವನ್ನು ಇಡಿಸಿಕೊಳ್ಳುವುದು ಮುತ್ತೈದೆ ಮಹಿಳೆಗೆ ದೊಡ್ಡ ಅದೃಷ್ಟ. ಹಾಗಾಗಿ ಪತ್ನಿಯು ತನ್ನ ಕುಂಕುಮ ಡಬ್ಬಿಯೊಳಗೆ ಗೋಮತಿ ಚಕ್ರವನ್ನು (Gomati Chakra) ಇಟ್ಟುಕೊಳ್ಳಬೇಕು. ಜೊತೆಗೆ ಪ್ರತಿದಿನ ಆ ಡಬ್ಬಿಯಲ್ಲಿರುವ ಕುಂಕುಮವನ್ನೇ ಪತಿ ಕೈಯಿಂದ ಹಚ್ಚಿಸಿಕೊಳ್ಳಬೇಕು. ಇದರಿಂದ ನಿಮ್ಮ ನಡುವಿನ ಅಂತರ ಕೊನೆಗೊಳ್ಳುತ್ತದೆ. ಸಂಬಂಧದಲ್ಲಿಯೂ ಮಧುರತೆ ಮೂಡುತ್ತದೆ. 

4. ಅಶ್ವತ್ಥ ಮರದ ಸುತ್ತ (Around the Ashvattha tree)
ಪ್ರತಿದಿನ ಬ್ರಾಹ್ಮಿ ಮುಹೂರ್ತದಲ್ಲಿ ಸ್ನಾನ ಮಾಡಿ, ನೀರು, ಹೂವುಗಳಿಂದ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಬೇಕು. ಅಲ್ಲದೆ, ಪ್ರತಿ ಗುರುವಾರ ಸಂಜೆ ಅರಳಿ ಮರದ (Peepul Tree) ಕೆಳಗೆ ದೀಪವನ್ನು ಬೆಳಗಬೇಕು. ಹೀಗೆ ಮಾಡಿದಲ್ಲಿ ಮನಸ್ಥಾಪಗಳು ದೂರಾಗಲಿದೆ. 

ಇದನ್ನು ಓದಿ: Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!

5. ಈ ದಿಕ್ಕಿನಲ್ಲಿ ದೀಪ ಬೆಳಗಿಸಿ
ಮನೆಯ ಪೂರ್ವ-ದಕ್ಷಿಣ ಮೂಲೆಯಲ್ಲಿ (East-South Corner) ದೀಪ ಹಚ್ಚುವುದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿಗಳು ಮೂಡುತ್ತವೆ. ಹೀಗಾಗಿ ದಿನ ಸಂಜೆ ಮನೆಯ ಪೂರ್ವ-ದಕ್ಷಿಣ ಮೂಲೆಯಲ್ಲಿ ದೀಪವನ್ನು ಬೆಳಗಿಸಬೇಕು. ಇದರಿಂದ ನಿಮ್ಮ ಸಂಬಂಧದಲ್ಲಿ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ಉಳಿಸಿಕೊಳ್ಳಬಹುದಾಗಿದೆ. 

Latest Videos
Follow Us:
Download App:
  • android
  • ios