Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!

ತಮ್ಮನ್ನು ಮದುವೆಯಾಗುವ ಹುಡುಗರ ಬಗ್ಗೆ ಹುಡುಗಿಯರ ಕಲ್ಪನೆ, ನಿರೀಕ್ಷೆಗಳು ಬಹಳಷ್ಟಿರುತ್ತವೆ. ರಾಶಿಗಳಿಗನುಗುಣವಾಗಿ ಹುಡುಗಿಯರ ಸಂಗಾತಿ ಆಯ್ಕೆ ಹೇಗಿರುತ್ತದೆ ನೋಡೋಣ.

What girls dream boy be like as per their zodiac sign

ಎಲ್ಲರಿಗೂ ತಮ್ಮ ಲೈಫ್ ಪಾರ್ಟ್ನರ್ (Life Partner) ಬಗ್ಗೆ ಅವರದ್ದೇ ಆದ ಕನಸುಗಳು (Dream) ಇರುತ್ತವೆ. ಹಾಗಿರಬೇಕು... ಹೀಗಿರಬೇಕು.. ಹೇಗೆಲ್ಲಾ ನೋಡಿಕೊಳ್ಳಬೇಕು... ತಮಗಿಷ್ಟವಾದಾಗ ಔಟಿಂಗ್ ಕರೆದೊಯ್ಯಬೇಕು... ಬೆಟ್ಟದಷ್ಟು ಪ್ರೀತಿಸಬೇಕು... ಕೇಳಿದ ಯಾವುದಕ್ಕೂ ಇಲ್ಲ ಎನ್ನದಿರಬೇಕು.. ಹೀಗೆ ಅನೇಕ ರೀತಿಯ ಕನಸುಗಳು ಇರುತ್ತವೆ. ರಾಶಿಗಳಿಗನುಗುಣವಾಗಿ ತಮ್ಮ ಲೈಫ್ ಪಾರ್ಟ್ನರ್ ಬಗ್ಗೆ ಅವರಿಗಿರುವ ಕನಸುಗಳು ಏನು ಎಂಬುದನ್ನು ನೋಡೋಣ...

ಮೇಷ ರಾಶಿ (Aries)
ಮೇಷ ರಾಶಿಯ ಹುಡುಗಿಯರು ಸಖತ್ ಪೊಸೆಸ್ಸೀವ್ (Possessive). ಇವರು ತಮ್ಮ ಹುಡುಗ ಇತರೆ ಹುಡುಗಿಯರ ನೋಡುವುದನ್ನು ಸಹಿಸುವುದೇ ಇಲ್ಲ. ಹಾಗಿದ್ದರೆ ರಂಪಾಟ ಅಲ್ಲಿ ಗ್ಯಾರಂಟಿ ಎಂದೇ ಲೆಕ್ಕ. ನೀನೇ ನನಗೆಲ್ಲ ಎನ್ನುವಂಥ ಗಂಡು ಅವನಾಗಿದ್ದರೆ ಮಾತ್ರ ಒಪ್ಪಿಗೆ ಸೂಚಿಸುವ ಸ್ವಭಾವದವರು (Nature) ಈ ಹುಡುಗಿಯರು. 

ವೃಷಭ ರಾಶಿ  (Taurus)
ವೃಷಭ ರಾಶಿಯ ಹುಡುಗಿಯರು ಕೋಪಿಷ್ಠರು. ಆದರೆ, ಪ್ರೀತಿ (Love) ವಿಷಯಕ್ಕೆ ಬಂದರೆ ಇವರಂತಹ ಮೃದು ಸ್ವಭಾವದವರು ಮತ್ತೊಬ್ಬರಿಲ್ಲ. ಇವರು ತಮ್ಮನ್ನು ಪ್ರೀತಿ ಮಾಡುವ ಹುಡುಗ ನಿಷ್ಠೆ (Loyalty) ಮತ್ತು ಪ್ರಾಮಾಣಿಕತೆಯಿಂದ (Honesty) ಇರಬೇಕು ಎಂದು ಬಯಸುತ್ತಾರೆ. 

ಮಿಥುನ ರಾಶಿ (Gemini)
ಮಿಥುನ ರಾಶಿಯ ಹುಡುಗಿಯರು ರೊಮ್ಯಾಂಟಿಕ್ ( Romantic) ಆಗಿರಲು ಇಷ್ಟಪಡುತ್ತಾರೆ. ಇವರಿಗೆ ಕ್ಷಣಕ್ಕೊಂದು ಬುದ್ಧಿ ಇರುವುದರಿಂದ ಇವರನ್ನು ಒಪ್ಪಿಸಲು ಹುಡುಗರು ಬಹಳವೇ ಕಷ್ಟ ಪಡಬೇಕು. ಹಾಗಾಗಿ ಇವರಿಗೆ ಸರ್ಪ್ರೈಸ್‌ಗಳನ್ನು (Surprise) ನೀಡುವ, ರೊಮ್ಯಾಂಟಿಕ್ ಆಗಿರುವ ಹುಡುಗರೆಂದರೆ ಬಹಳ ಇಷ್ಟ. 

ಕರ್ಕಾಟಕ ರಾಶಿ (Cancer)
ಈ ರಾಶಿಯ ಹುಡುಗಿಯರು ಸುಲಭವಾಗಿ ಯಾರನ್ನೂ ನಂಬುವುದಿಲ್ಲ. ನಂಬಿದಂತೆ (Trust) ಇದ್ದರೂ ಅವರನ್ನು ಪರೀಕ್ಷೆಗೊಳಪಡಿಸುತ್ತಲೇ ಇರುತ್ತಾರೆ. ಸಾಕಷ್ಟು ಸಮಯ (Time) ತೆಗೆದುಕೊಂಡ ಬಳಿಕವೇ ಅವರ ಜೊತೆ ಮುಂದುವರಿಯುತ್ತಾರೆ. ಪ್ರೀತಿಯ ವಿಷಯದಲ್ಲಿ ಇವರು ತುಂಬಾ ನಿಧಾನ (Slow). ತಮ್ಮನ್ನು ಪ್ರೀತಿಸುವವರು ರಕ್ಷಿಸುವವರು, ಸಮರ್ಪಣಾಭಾವವನ್ನು ಹೊಂದಿರುವವರಾಗಿರಬೇಕೆಂದು ಇಷ್ಟಪಡುತ್ತಾರೆ. 

ಇದನ್ನೂ ಓದಿ: Father And Son: ಅಪ್ಪನಿಗೆ ಹೆಮ್ಮೆ ತರುವ ಹುಡುಗರ ರಾಶಿಯಿದು..

ಸಿಂಹ ರಾಶಿ (Leo)
ಈ ರಾಶಿ ಹುಡುಗಿಯರು ಬೇಗ ಪ್ರೀತಿಯಲ್ಲಿ ಬೀಳುತ್ತಾರೆ. ಆದರೆ ಇವರ ಕಲ್ಪನೆಗೆ ತಕ್ಕ ಹುಡುಗ ಸಿಕ್ಕಾಗ ಮಾತ್ರ. ಅಂದರೆ, ತಮ್ಮನ್ನು ಪ್ರೀತಿಸುವವರು ಸಖತ್ ಕೇರಿಂಗ್ (Care) ಆಗಿರಬೇಕೆಂದು ಬಯಸುತ್ತಾರೆ. 

ಕನ್ಯಾ ರಾಶಿ (Virgo)
ಈ ರಾಶಿಯ ಹುಡುಗಿಯರು ಹೆಚ್ಚು ಭಾವುಕರಾಗಿರುತ್ತಾರೆ. ಜೊತೆಗೆ ಉದ್ವೇಗದ ಸ್ವಭಾವದವನ್ನು ಹೊಂದಿರುವುದರಿಂದ ಸಂಗಾತಿಯಲ್ಲಿ ಯಾವುದೇ ದುರ್ಬಲತೆಯನ್ನು ಸಹಿಸುವುದಿಲ್ಲ. ಹೀಗಾಗಿ ಇವರು ಮಿಸ್ಟರ್ ಪರ್ಫೆಕ್ಟ್ ಅನ್ನೇ ಹುಡುಕುತ್ತಾರೆ. 

ತುಲಾ ರಾಶಿ (Libra)
ತುಲಾ ರಾಶಿಯ ಹುಡುಗಿಯರು ತಮ್ಮನ್ನು ಮದುವೆಯಾಗುವವರಿಗೆ ತಾವೇ ಪ್ರಪಂಚವಾಗಿರಬೇಕೆಂಬ ಬಯಕೆ. ಎಲ್ಲದರಲ್ಲೂ ಸರಿ ಸಮವಾದ ಪಾಲನ್ನು ಅವರಿಂದ ಬಯಸುತ್ತಾರೆ. 

ವೃಶ್ಚಿಕ ರಾಶಿ (Scorpio)
ಇವರಿಗೆ ಸಂಗಾತಿಯಿಂದ ಎಲ್ಲವೂ ಬೇಕು. ಆದರೆ, ಏನು ಬೇಕೆಂಬ ಬಗ್ಗೆ ಸ್ಪಷ್ಟತೆ ಕೊಡುವುದಿಲ್ಲ. ಹೀಗಾಗಿ ಇವರಿಗೆ ಏನು ಬೇಕೆಂದು ಅರ್ಥ ಮಾಡಿಕೊಳ್ಳುವುದಕ್ಕೆ ಆ ಹುಡುಗ ಬಹಳವೇ ಕಷ್ಟಪಡಬೇಕು. 

ಧನು ರಾಶಿ (Sagittarius)
ಧನು ರಾಶಿಯ ಹುಡುಗಿಯರು ತಮ್ಮನ್ನು ಮದುವೆಯಾಗುವ ಹುಡುಗ ದೈಹಿಕವಾಗಿ ಹಾಗೂ ಮಾನಸಿಕವಾಗಿ ತನಗೆ ಸರಿಸಮನಾಗಿರಬೇಕೆಂದು ಬಯಸುತ್ತಾರೆ. ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ಪ್ರೀತಿಸುವವನು ಇವರಿಗೆ ಬೇಕು. 

ಮಕರ ರಾಶಿ (Capricorn)
ಮಕರ ರಾಶಿಯ ಹುಡುಗಿಯರು ತುಂಬಾ ಪರ್ಫೆಕ್ಷನ್ ಬಯಸುತ್ತಾರೆ. ತಮ್ಮನ್ನು ಮದುವೆಯಾಗುವ ಗಂಡು ಎಲ್ಲ ರೀತಿಯಲ್ಲಿಯೂ ಹೊಂದಾಣಿಕೆಯಾಗುವಂತೆ ಇರಬೇಕು ಎಂದು ಇಷ್ಟಪಡುತ್ತಾರೆ.

ಇದನ್ನೂ ಓದಿ: Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?

ಕುಂಭ ರಾಶಿ (Aquarius)
ಕುಂಭ ರಾಶಿಯ ಹುಡುಗಿಯರು ಆತ್ಮವಿಶ್ವಾಸವನ್ನು (Confidence) ಹೆಚ್ಚೇ ಹೊಂದಿದವರಾಗಿದ್ದು, ತಮ್ಮಂತೆ ದೃಢವಿಶ್ವಾಸವನ್ನು ಹೊಂದಿರುವ ಹುಡುಗರೆಂದರೆ ಇವರಿಗಿಷ್ಟ. 

ಮೀನ ರಾಶಿ (Pisces)
ಮೀನ ರಾಶಿಯ ಹುಡುಗಿಯರಿಗೆ ತಮ್ಮ ಸಂಗಾತಿಯು ದಿನವಿಡೀ ತಮ್ಮದೇ ಜಪ ಮಾಡಬೇಕು. ತಮ್ಮನ್ನು ಅತಿಯಾಗಿ ಪ್ರೀತಿಸಬೇಕೆಂದು ಇಷ್ಟಪಡುತ್ತಾರೆ. ಸಂಗಾತಿಯು ಬೇರೆಯವರ ಜೊತೆಗೆ ಲಿಬರಲ್ (Liberal) ಆಗಿರಲು ಇಷ್ಟಪಡುವುದಿಲ್ಲ. 

Latest Videos
Follow Us:
Download App:
  • android
  • ios