Durva Pooja: ಗಣೇಶನ ಮನ ಗೆಲ್ಲೋಕೆ ದೊಡ್ಡ ಹರಕೆ ಬೇಕಿಲ್ಲ, ಭಕ್ತಿಯಿಂದ ಪುಟ್ಟ ಗರಿಕೆ ಇಟ್ಟರೂ ಸಾಕು!
ದೇವತೆಗಳ ಕೃಪೆ ಪಡೆಯಲು ಆಯಾ ದೇವರಿಗೆ ಪ್ರಿಯವಾದದ್ದನ್ನು ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆ, ವಿಷ್ಣುವಿಗೆ ತುಳಸಿ ಹಾಗೆಯೇ ಶ್ರೀ ಗಣೇಶನಿಗೆ ದೂರ್ವೆಯನ್ನು ಅರ್ಪಿಸುವುದರಿಂದ ಮನೋ ಕಾಮನೆಗಳು ಪೂರ್ಣಗೊಳ್ಳುತ್ತವೆ. ಗಣೇಶನಿಗೆ ದೂರ್ವೆ ಏಕೆ ಪ್ರಿಯ?
ವಿಘ್ನನಿವಾರಕ, ಪ್ರಥಮ ಪೂಜಕ, ಸಂಕಷ್ಟಹರ ಎಂದೆಲ್ಲ ಕರೆಸಿಕೊಳ್ಳುವ ಶ್ರೀ ಗಣೇಶನಿಗೆ ಕೇವಲ ಗರಿಕೆಯನ್ನು (Garike) ಅರ್ಪಿಸುವುದರಿಂದ ಮನದ ಇಷ್ಟಾರ್ಥ ಸಿದ್ಧಿಸುತ್ತದೆ ಎಂದು ಹೇಳಲಾಗುತ್ತದೆ. ಹಿಂದೂ ಧರ್ಮದಲ್ಲಿ ಗಣೇಶನ (Lord Ganesha) ಪೂಜೆಗೆ ವಿಶೇಷ ಮಹತ್ವವಿದೆ. ಎಲ್ಲಾ ದೇವತೆಗಳಿಗಿಂತಲೂ ಮೊದಲು (First) ಪೂಜೆ (Pooja) ಸಲ್ಲುವುದು ಗಣಪತಿಗೆ.
ಎಲ್ಲ ಶುಭ ಕಾರ್ಯಗಳನ್ನು ಮೊದಲು ಗಣೇಶನ ಪೂಜೆ ನೆರವೇರಿಸಲಾಗುತ್ತದೆ. ಅಷ್ಟೇ ಅಲ್ಲದೆ ಗಣೇಶನಿಗೆ ಪ್ರಿಯವಾದ ದೂರ್ವೆ ಅಥವಾ ಗರಿಕೆಯನ್ನು ಅರ್ಪಿಸಿ ಗಣೇಶನ ಕೃಪೆಯನ್ನು ಪಡೆಯಬಹುದಾಗಿದೆ. ಕೆಲವು ದೇವತೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ದೇವಾನು ದೇವತೆಗಳಿಗೆ ಗರಿಕೆ ಶ್ರೇಷ್ಠವೆಂದೆ ಹೇಳಲಾಗುತ್ತದೆ. ಅದರಲ್ಲೂ ಗಣೇಶನಿಗೆ ಅತಿ ಪ್ರಿಯವಾದದ್ದು ಈ ಗರಿಕೆ.
ಇದನ್ನು ಓದಿ : Zodiac sign: ರಾಶಿ ಅನುಸಾರ, ಹುಡುಗಿಯರ ಕನಸಿನ ರಾಜ ಹೀಗಿರಬೇಕಂತೆ!
ಶಿವನಿಗೆ (Lord Shiva) ಬಿಲ್ವಪತ್ರೆ, ವಿಷ್ಣುವಿಗೆ (Lord Maha Vishnu) ತುಳಸಿ ಹಾಗೆಯೇ ಗಣೇಶನಿಗೆ ದೂರ್ವೆಯನ್ನು ಅರ್ಪಿಸುವುದು ಅತ್ಯಂತ ಶ್ರೇಷ್ಠವೆಂದು ಹೇಳಲಾಗುತ್ತದೆ. ಹಾಗಾಗಿ ಗಣೇಶನಿಗೂ ದೂರ್ವೆಗೂ ಇರುವ ನಂಟು ಏನು ಎಂಬುದನ್ನು ತಿಳಿಯೋಣ...
ದೂರ್ವೆ ಅಥವಾ ಗರಿಕೆ ಎಂದರೇನು ?
ಗರಿಕೆಯು ಒಂದು ಜಾತಿಯ ಹುಲ್ಲು(Grass).
ಪೌರಾಣಿಕ ಕತೆಗಳ ಪ್ರಕಾರ ಸಮುದ್ರ ಮಂಥನದ ಕಾಲದಲ್ಲಿ ಶ್ರೀ ಮಹಾವಿಷ್ಣುವು ತನ್ನ ತೊಡೆಗಳಿಗೆ (Thigh) ಆದಿಶೇಷನನ್ನು ಕಟ್ಟಿ ಎಳೆಯುತ್ತಿದ್ದಾಗ ತೊಡೆಯ ಕೂದಲು (Hair) ಕಿತ್ತು ಮಂಥನಗೊಂಡು ದೂರ್ವೆಯಾಗಿ ಉತ್ಪನ್ನವಾಯಿತೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ರಾಮಾಯಣದ (Ramayana) ಕಾಲದಲ್ಲಿ ಸೀತಾಮಾತೆಯನ್ನು ಪುನಃ ಭೂಮಿಯಲ್ಲಿ ಇಳಿದು ಹೊರಟಾಗ ಶ್ರೀರಾಮನು ಆಕೆಯನ್ನು ತಡೆಯಲು ಪ್ರಯತ್ನಿಸಿದ ಸಂದರ್ಭದಲ್ಲಿ ಆಕೆಯ ಕೂದಲು ಕಿತ್ತು ಹೋಯಿತು. ಅದು ನಂತರ ದೂರ್ವೆಯಾಗಿ ಉತ್ಪನ್ನವಾಯಿತೆಂದು ಹೇಳಲಾಗುತ್ತದೆ.
ಚಿರಂಜೀವಿಯಾದ (Immortal) ಗರಿಕೆ : ಸಮುದ್ರಮಂಥನದ ಕಾಲದಲ್ಲಿ ಅಮೃತವನ್ನು ಪಡೆದ ನಂತರ ಅದನ್ನು ದೂರ್ವೆ ಮೇಲೆ ಇಡಲಾಗಿತ್ತು. ಆಗ ಅದರ ಮೇಲೆ ಅಮೃತದ ಹನಿಗಳು ಬಿದ್ದ ಕಾರಣ ಗರಿಕೆಯು ಚಿರಂಜೀವಿಯಾಯಿತು. ಹಾಗಾಗಿ ಎಷ್ಟೇ ಕಿತ್ತರೂ ದೂರ್ವೆಯು ಮತ್ತೆ ಹುಟ್ಟುತ್ತದೆ.
ದೂರ್ವೆಯು ಗಣೇಶನಿಗೆ ಏಕೆ ಪ್ರಿಯ?
- ದೂರ್ವೆಯು ಹಸಿರಾಗಿರುತ್ತದೆ (Green gross) ಮತ್ತು ಕೋಮಲ ಪ್ರಕೃತಿಯುಳ್ಳದ್ದಾಗಿರುತ್ತದೆ. ಆನೆಗಳಿಗೆ ಗರಿಕೆಯು ಅತ್ಯಂತ ಪ್ರಿಯವಾಗಿರುತ್ತದೆ. ಆನೆಗಳು ಇದನ್ನು ತುಂಬಾ ಪ್ರೀತಿಯಿಂದ ತಿನ್ನುತ್ತವೆ. ಗಜಮುಖನಿಗೆ ಗರಿಕೆಯು ಅತ್ಯಂತ ಪ್ರಿಯವಾದದ್ದಾಗಿದೆ.
- ದೂರ್ವೆಯ ಗುಣವು ನಿರ್ಮಲ ಮತ್ತು ತಂಪು ನೀಡುವುದಾಗಿದೆ ಹಾಗಾಗಿ ಗಣೇಶನಿಗೆ ಸರಳ ಮತ್ತು ನಿರ್ಮಲ ಹೃದಯದಿಂದ ಪೂಜಿಸುವವರನ್ನು ಕಂಡರೆ ಪ್ರೀತಿ.
ಇದನ್ನು ಓದಿ : ಜಾತಕದಲ್ಲಿ ಈ ದೋಷಗಳಿದ್ದರೆ ಪರಿಹರಿಸಿಕೊಳ್ಳಿ!!!
- ಒಂದು ಪೌರಾಣಿಕ ಕಥೆಯ ಅನುಸಾರ ಅನಲಾಸುರ (Analasura) ಎಂಬ ದೈತ್ಯನು ದೇವತೆಗಳು ಮತ್ತು ಮನುಷ್ಯರನ್ನು ಜೀವಂತವಾಗಿ ತಿಂದು ಬಿಡುತ್ತಿದ್ದ. ಇದರಿಂದ ದೇವತೆಗಳು ಭಯ ಭೀತರಾಗಿ ಶ್ರೀ ಗಣೇಶನ ಬಳಿಗೆ ಬರುತ್ತಾರೆ. ಅನಲಾಸುರನ ಕಾಟದಿಂದ ತಮ್ಮನ್ನೆಲ್ಲಾ ಪಾರು (Rescue) ಮಾಡಬೇಕಾಗಿ ಕೇಳಿಕೊಳ್ಳುತ್ತಾರೆ. ಆಗ ಗಣೇಶನು ಅನಲಾಸುರನನ್ನು ನುಂಗಿ ಬಿಡುತ್ತಾನೆ. ಅದರ ಪರಿಣಾಮವಾಗಿ ಗಣೇಶನಿಗೆ ಹೊಟ್ಟೆಯಲ್ಲಿ (Stomach) ಅಸಾಧ್ಯ ಉರಿ ಆರಂಭವಾಯಿತು. ಆಗ ಕಶ್ಯಪ ಋಷಿಗಳು ದೂರ್ವೆಗೆ ಇಪ್ಪತ್ತೊಂದು (Twenty one) ಗಂಟುಗಳನ್ನು ಹಾಕಿ ತಿನ್ನಲು ಕೊಡುತ್ತಾರೆ. ದೂರ್ವೆಯನ್ನು ತಿನ್ನತ್ತಿದ್ದಂತೆಯೇ ಹೊಟ್ಟಿ ಉರಿ ಕಡಿಮೆ ಆಗಿದ್ದಲ್ಲದೇ, ತಂಪಿನ ಅನುಭವವಾಯಿತು. ಹಾಗಾಗಿ ಅದಾದ ನಂತರದಿಂದ ದೂರ್ವೆಯು ಗಣೇಶನಿಗೆ ಪ್ರಿಯವಾಯಿತು ಎಂದು ಹೇಳಲಾಗುತ್ತದೆ. ಗಣೇಶನ ಪೂಜೆಗೆ ದೂರ್ವೆಯನ್ನು ಅರ್ಪಿಸುವುದರಿಂದ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ಹೇಳಲಾಗುತ್ತದೆ.
ಗಣೇಶನ ಪೂಜೆಗೆ ದೂರ್ವೆ ಬೇಕೇ ಬೇಕು....
ಗಣೇಶನಿಗೆ ದೂರ್ವೆಯನ್ನು ಅರ್ಪಿಸಿ ಪೂಜಿಸುವುದರಿಂದ ಕುಲ ವೃದ್ಧಿಸುತ್ತದೆ. ಅಷ್ಟೇ ಅಲ್ಲದೆ ಮನೆಯಲ್ಲಿ ಸುಖ –ಸಮೃದ್ಧಿ ನೆಲೆಸುತ್ತದೆ.