Asianet Suvarna News Asianet Suvarna News

15 ದಿನಗಳ ಅಂತರದಲ್ಲಿ ಎರಡು ಗ್ರಹಣಗಳು, ಯಶಸ್ಸಿನ ಉತ್ತುಂಗ ನೋಡುವ 3 ರಾಶಿಗಳು

2022 ರಲ್ಲಿ, 15 ದಿನಗಳ ಅವಧಿಯಲ್ಲಿ ಎರಡು ದೊಡ್ಡ ಗ್ರಹಣಗಳು ಸಂಭವಿಸುತ್ತವೆ. ಈ 3 ರಾಶಿಯ ಜನರು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ.

two eclipses in a span of 15 days people of 3 zodiacs will get success skr
Author
Bangalore, First Published Apr 27, 2022, 1:47 PM IST

2022 ರಲ್ಲಿ ಒಟ್ಟು 4 ಗ್ರಹಣಗಳು(eclipses) ಸಂಭವಿಸುತ್ತವೆ. ಇದರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಎರಡು ಚಂದ್ರ ಗ್ರಹಣಗಳು ಇರುತ್ತವೆ. ಸೂರ್ಯ ಮತ್ತು ಭೂಮಿಯ ನಡುವೆ ಚಂದ್ರ (Moon) ಬಂದರೆ ಸೂರ್ಯಗ್ರಹಣ (Solar eclipse) ಸಂಭವಿಸುತ್ತದೆ. ಹಾಗೆಯೇ ಚಂದ್ರ ಮತ್ತು ಸೂರ್ಯನ ನಡುವೆ ಭೂಮಿ ಬಂದರೆ ಚಂದ್ರಗ್ರಹಣ (Lunar eclipse) ಆಗುತ್ತದೆ. ಗ್ರಹಣಕ್ಕೆ ವೈಜ್ಞಾನಿಕವಾಗಿಯೂ ಮತ್ತು ಧಾರ್ಮಿಕ ದೃಷ್ಟಿಕೋನದಿಂದಲೂ ವಿಶೇಷ ಪ್ರಾಮುಖ್ಯತೆ ಇದೆ.

ಈ ವರ್ಷದ ಮೊದಲ ಗ್ರಹಣ ಏಪ್ರಿಲ್ 30 ರಂದು ಸಂಭವಿಸಲಿದೆ.ಇದು ಸೂರ್ಯಗ್ರಹಣ. ಇದು ಶನಿವಾರ ಹಾಗೂ ಅಮಾವಾಸ್ಯೆಯ ದಿನ ಬರುತ್ತಿದೆ. ಮೊದಲ ಸೂರ್ಯಗ್ರಹಣವು ಭಾಗಶಃ ಇರುತ್ತದೆ, ಇದರಿಂದಾಗಿ ಭಾರತದಲ್ಲಿ ಸೂತಕದ ಅವಧಿ ಇರುವುದಿಲ್ಲ. ಎರಡನೇ ಗ್ರಹಣವು ನಿಖರವಾಗಿ 15 ದಿನಗಳ ನಂತರ ಸಂಭವಿಸುತ್ತದೆ, ಅಂದರೆ ಮೇ 16 ರಂದು. ಇದು ಚಂದ್ರಗ್ರಹಣವಾಗಿರುತ್ತದೆ. ಇದು ಕೂಡಾ ಭಾರತದಲ್ಲಿ ಗೋಚರವಾಗುವುದಿಲ್ಲ,

ಈ ಎರಡೂ ಗ್ರಹಣಗಳು ಜನ ಜೀವನದ ಮೇಲೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಒಟ್ಟಿನಲ್ಲಿ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಗ್ರಹಣಗಳನ್ನು ಕೆಟ್ಟದ್ದೆಂದೇ ಭಾವಿಸಲಾಗುತ್ತದೆ.  ಗ್ರಹಣದ ಸಮಯದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಆದ್ದರಿಂದ ಜನರು ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡಬಾರದು ಎನ್ನಲಾಗುತ್ತದೆ. ಆದರೆ ಈಗ ಸಂಭವಿಸುವ ಈ 2 ಗ್ರಹಣಗಳು 3 ರಾಶಿಚಕ್ರಗಳಿಗೆ ಬಹಳ ಶುಭವಾಗಿ ಪರಿಣಮಿಸಲಿವೆ. ಇದರಿಂದ ಈ 3 ರಾಶಿಯ ಜನರು ಸಾಕಷ್ಟು ಯಶಸ್ಸನ್ನು ಪಡೆಯುತ್ತಾರೆ. ಯಾವುದು ಆ 3 ರಾಶಿಗಳು ನೋಡೋಣ. 

Akshaya Tritiya 2022: ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?

ಮೇಷ(Aries): ಈ ಎರಡೂ ಗ್ರಹಣಗಳು ಈ ರಾಶಿಯವರಿಗೆ ಮಂಗಳಕರ ಪರಿಣಾಮಗಳನ್ನು ಬೀರಲಿದೆ. ಆರ್ಥಿಕ ಸ್ಥಿತಿಯಲ್ಲಿ ಮಹತ್ತರವಾದ ಸುಧಾರಣೆ ಕಂಡು ಬರುವುದು. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಯಶಸ್ಸು ದೊರೆಯಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸ ಹೆಚ್ಚು ಪ್ರಶಂಸೆಗೆ ಪಾತ್ರವಾಗುತ್ತದೆ. ನೀವು ಕೈ ಹಾಕುವ ಯಾವುದೇ ಕೆಲಸದಲ್ಲಿ ಯಶಸ್ಸ(success)ನ್ನು ಪಡೆಯುವ ಸಾಧ್ಯತೆಗಳಿವೆ. ವ್ಯಾಪಾರದಲ್ಲಿ ಲಾಭ ಪಡೆಯಲು ಉತ್ತಮ ಅವಕಾಶಗಳಿವೆ. ಈ ಅವಧಿಯಲ್ಲಿ ಮಾಡಿದ ಪ್ರಯಾಣದಿಂದ ನೀವು ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ.

ಸಿಂಹ(Leo): ಈ ರಾಶಿಯವರಿಗೆ ಗ್ರಹಣವು ತುಂಬಾ ಶುಭ ಪರಿಣಾಮವನ್ನು ಬೀರುತ್ತದೆ. ಪ್ರಯಾಣವು ಆಹ್ಲಾದಕರವಾಗಿರುತ್ತದೆ. ಹೊಸ ಉದ್ಯೋಗದ ಹುಡುಕಾಟ ಮುಗಿಯಲಿದೆ. ನೀವು ಕೆಲಸ ಮಾಡುತ್ತಿದ್ದರೆ, ಈ ಸಮಯದಲ್ಲಿ ನೀವು ಅನೇಕ ಉತ್ತಮ ಉದ್ಯೋಗದ ಅವಕಾಶಗಳನ್ನು ಹಾಗೂ ಕೊಡುಗೆಗಳನ್ನು ಪಡೆಯಬಹುದು. ಬಡ್ತಿ ಸಿಗುವ ಮತ್ತು ಸಂಬಳ ಹೆಚ್ಚಾಗುವ ಸಾಧ್ಯತೆಗಳು ಗೋಚರಿಸುತ್ತಿವೆ. ಹೊಸ ಕೆಲಸವನ್ನು ಪ್ರಾರಂಭಿಸಲು ಉತ್ತಮ ಸಮಯ. ಈ ಸಮಯದಲ್ಲಿ ನೀವು ಹಣ(money)ವನ್ನು ಉಳಿಸಲು ಸಹ ಸಾಧ್ಯವಾಗುತ್ತದೆ.

Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ

ಧನು ರಾಶಿ(Sagittarius): ಈ ಸಮಯವು ನಿಮಗೆ ತುಂಬಾ ಮಂಗಳಕರವಾಗಿರುತ್ತದೆ. ನೀವು ಬಹುತೇಕ ಎಲ್ಲದರಲ್ಲೂ ಯಶಸ್ಸನ್ನು ಪಡೆಯುವ ನಿರೀಕ್ಷೆಯಿದೆ. ಪೋಷಕರ ಸಂಪೂರ್ಣ ಬೆಂಬಲ ಇರುತ್ತದೆ. ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಕೆಲಸದ ಸ್ಥಳದಲ್ಲಿ ನೀವು ಕೆಲವು ಉತ್ತಮ ಸಾಧನೆಗಳನ್ನು ಮಾಡಬಹುದು. ಹೊಸ ಯೋಜನೆಗಳಲ್ಲಿ ಕೆಲಸ ಮಾಡುವುದು ಲಾಭವನ್ನು ನೀಡುತ್ತದೆ. ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios