Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ

ಈ ಬಾರಿ ಅಕ್ಷಯ ತೃತೀಯ ಹಬ್ಬವು ರೋಹಿಣಿ ನಕ್ಷತ್ರದ ಶೋಭನ್ ಯೋಗದಲ್ಲಿ ಸಂಭವಿಸಲಿದೆ. ಈ ಶುಭಯೋಗವು 30 ವರ್ಷಗಳ ನಂತರ ಅಕ್ಷಯ ತೃತೀಯದಂದು ಘಟಿಸುತ್ತಿದೆ. 

After 30 years auspicious yoga is being made on Akshaya Tritiya skr

ಪಂಚಾಂಗದ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯವನ್ನು ಅಕ್ಷಯ ತೃತೀಯ(Akshaya Tritiya) ಎಂದು ಕರೆಯಲಾಗುತ್ತದೆ. ಈ ಬಾರಿಯ ಅಕ್ಷಯ ತೃತೀಯವು 3ನೇ ಮೇ 2022ರಂದು ಬರುತ್ತಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿ ಅಕ್ಷಯ ತೃತೀಯವನ್ನು ರೋಹಿಣಿ ನಕ್ಷತ್ರದ ಶೋಭನ್ ಯೋಗದಲ್ಲಿ ಆಚರಿಸಲಾಗುತ್ತಿರುವುದು ವಿಶೇಷ. ವಾಸ್ತವವಾಗಿ, ಈ ಶುಭ ಯೋಗವು ಬರೋಬ್ಬರಿ 30 ವರ್ಷಗಳ ನಂತರ 2022ರ ಅಕ್ಷಯ ತೃತೀಯ ದಿನದಂದು ರೂಪುಗೊಳ್ಳುತ್ತಿದೆ.  ಅಕ್ಷಯ ತೃತೀಯ ದಿನದಂದು ಗ್ರಹಗಳ ಶುಭ ಸಂಯೋಜನೆಯಿಂದ ಶುಭ ಯೋಗವು ರೂಪುಗೊಳ್ಳುತ್ತದೆ. ಈ ದಿನ ಸಂತೋಷ ಮತ್ತು ಸಮೃದ್ಧಿ(happiness and prosperity)ಗಾಗಿ ಯಾವ ಕೆಲಸಗಳನ್ನು ಮಾಡಬೇಕು, ಈ ಶುಭ ಯೋಗ(auspicious yoga)ದ ವಿಶೇಷತೆ ಏನು ಎಲ್ಲವನ್ನೂ ನೋಡೋಣ. 

ಅಕ್ಷಯ ತೃತೀಯದಂದು ಗ್ರಹಗಳ ಸ್ಥಾನ(Position of planets)
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2022 ರ ಅಕ್ಷಯ ತೃತೀಯ ದಿನದಂದು ಗ್ರಹಗಳ ವಿಶೇಷ ಸಂಯೋಜನೆ ನಡೆಯುತ್ತಿದೆ. ವಾಸ್ತವವಾಗಿ, ಈ ದಿನ ಚಂದ್ರನು ತನ್ನ ಉತ್ಕೃಷ್ಟ ಚಿಹ್ನೆ ವೃಷಭ ರಾಶಿಯಲ್ಲಿ ಕುಳಿತುಕೊಳ್ಳುತ್ತಾನೆ. ಮತ್ತೊಂದೆಡೆ, ಶುಕ್ರವು ತನ್ನ ಉತ್ಕೃಷ್ಟ ಚಿಹ್ನೆ ಮೀನದಲ್ಲಿ ಉಳಿದಿರುತ್ತದೆ. ಇದಲ್ಲದೇ ಶನಿಯು ಸ್ವರಾಶಿಯಾದ ಕುಂಭ ರಾಶಿಯಲ್ಲಿ ಇರುತ್ತಾನೆ. ಗುರು ಕೂಡಾ ಮೀನ ರಾಶಿಯಲ್ಲಿ ಇರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ಗ್ರಹಗಳು ಏಕಕಾಲದಲ್ಲಿ ಅನುಕೂಲಕರ ಸ್ಥಾನದಲ್ಲಿರುವುದು ಬಹಳ ವಿಶೇಷ. ಮೊದಲೇ ಅಕ್ಷಯ ತೃತೀಯ ಎಂದರೆ ಎಲ್ಲ ಶುಭ ಕಾರ್ಯಗಳಿಗೂ ಹೇಳಿ ಮಾಡಿಸಿದ ದಿನವಾಗಿದೆ. ಅಂಥದರಲ್ಲಿ ಈ ಬಾರಿ ಗ್ರಹಗಳ ಈ ಶುಭ ಸಂಯೋಗವೂ ಸೇರಿ ಶೋಭನ್ ಯೋಗ ಬರುತ್ತಿದ್ದು, ಶುಭ ಕಾರ್ಯಗಳಿಗೆ ಮತ್ತಷ್ಟು ವಿಶೇಷವಾದ ದಿನವಾಗಿದೆ. 

Gemini: ಇತರ ರಾಶಿಗಳೊಂದಿಗೆ ಮಿಥುನ ರಾಶಿಯವರ ಸ್ನೇಹ, ಲವ್, ಲೈಂಗಿಕ ಲೈಫ್‌ ಹೇಗಿರುತ್ತೆ?

ಈ ಕಾರ್ಯಗಳನ್ನು ಅಕ್ಷಯ ತೃತೀಯದಂದು ಮಾಡಿ
ನಂಬಿಕೆಯ ಪ್ರಕಾರ, ಅಕ್ಷಯ ತೃತೀಯ ದಿನದಂದು 2 ಕಲಶವನ್ನು ದಾನ ಮಾಡುವುದು ತುಂಬಾ ಮಂಗಳಕರವಾಗಿದೆ. ಇವುಗಳಲ್ಲಿ ಒಂದು ಕಲಶವು ಪೂರ್ವಜರಿಗೆ ಮತ್ತು ಇನ್ನೊಂದು ಭಗವಾನ್ ವಿಷ್ಣು(Lord Vishnu)ವಿಗೆ ಎಂದು ನಂಬಲಾಗಿದೆ. ಪೂರ್ವಜರಿಗಾಗಿ ಕೊಡುವ ಕಳಸದಲ್ಲಿ ಪಿತೃಗಳ ಸಂತೋಷಕ್ಕಾಗಿ ಕಲಶವನ್ನು ಶುದ್ಧ ನೀರಿನಿಂದ ತುಂಬಿಸಿ ಅದರಲ್ಲಿ ಕಪ್ಪು ಎಳ್ಳು ಮತ್ತು ಬಿಳಿ ಚಂದನವನ್ನು ಹಾಕಿ. ಹಾಗೆಯೇ ವಿಷ್ಣುವಿಗಾಗಿ ದಾನ ಕೊಡುವ ಕಳಸದಲ್ಲಿ ನೀರು ತುಂಬಿಸಿ. ಅದರಲ್ಲಿ ಬಿಳಿ ಬಾರ್ಲಿ, ಹಳದಿ ಹೂವುಗಳು, ಶ್ರೀಗಂಧ ಮತ್ತು ಪಂಚಾಮೃತವನ್ನು ಮಿಶ್ರಣ ಮಾಡಿ. ನಂತರ ಅವನ್ನು ಒಳ್ಳೆಯ ಮನಸ್ಸಿನಿಂದ ದಾನ ನೀಡಿ. 
ಹೀಗೆ ಮಾಡುವುದರಿಂದ ಪಿತೃಗಳ ಮತ್ತು ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ಭಗವಂತ ಮತ್ತು ಪಿತೃಗಳ ಆಶೀರ್ವಾದವಿದ್ದಾಗ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಳಿಯುತ್ತದೆ. 

Venus Transit 2022: ಏ.27ಕ್ಕೆ ಮೀನಕ್ಕೆ ಶುಕ್ರ, ನಿಮ್ಮ ರಾಶಿಗೇನು ಫಲ?

ಪದ್ಮ ಪುರಾಣದಲ್ಲಿ, ವಿಷ್ಣುವು ನಾರದನಿಗೆ ಈ ದಿನದಂದು ಮಾನವರು ಯಾವುದೇ ಕಾರ್ಯಗಳನ್ನು ಮಾಡಿದರೂ, ಮರಣಾನಂತರದ ಜೀವನದಲ್ಲಿ ಅವರು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ ಎಂದು ಹೇಳಿರುವುದಾಗಿ ಬರೆಯಲಾಗಿದೆ. 
ಅಕ್ಷಯ ತೃತೀಯ ಸಂದರ್ಭದಲ್ಲಿ ಏನನ್ನಾದರೂ ಖರೀದಿಸಿದರೆ ಅದು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಇಂದು ಚಿನ್ನ, ಬೆಳ್ಳಿ, ಮನೆಯಂಥ ದೊಡ್ಡ ವಸ್ತುಗಳನ್ನು ಖರೀದಿಸಲಾಗುತ್ತದೆ. ಹೂಡಿಕೆಗೆ, ಆಸ್ತಿ ಖರೀದಿಗೆ, ಮನೆಯ ಎಲ್ಲ ರೀತಿಯ ಶುಭ ಸಮಾರಂಭಗಳಿಗೆ ಅಕ್ಷಯ ತೃತೀಯದ ಈ ದಿನ ಬಹಳ ಶುಭವಾಗಿರುತ್ತದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios