Asianet Suvarna News Asianet Suvarna News

Akshaya Tritiya 2022: ಈ ದಿನ ಜನರು ಚಿನ್ನ ಖರೀದಿಗೆ ಮುಗಿ ಬೀಳುವುದೇಕೆ?

ಅಕ್ಷಯ ತೃತೀಯ ಹಬ್ಬಕ್ಕೆ ಧಾರ್ಮಿಕ ಮಹತ್ವವಿದೆ. ಈ ದಿನ ಯಾವುದೇ ತಪ್ಪನ್ನು ಮಾಡುವುದು ಅಥವಾ ಮತ್ತೊಬ್ಬರ ಬಗ್ಗೆ ತಪ್ಪು ಮಾತಾಡುವುದು ಸಲ್ಲದು. ಅಕ್ಷಯ ತೃತೀಯದ ಹಿನ್ನೆಲೆ ಮತ್ತು ಮಹತ್ವವೇನು ನೋಡೋಣ. 

Why Do People Buy Gold And Silver on Akshaya Tritiya 2022 skr
Author
Bangalore, First Published Apr 26, 2022, 12:04 PM IST

ಅತ್ಯಂತ ಮಂಗಳಕರವಾದ ಹಿಂದೂ ಹಬ್ಬಗಳಲ್ಲಿ ಒಂದಾದ ಅಕ್ಷಯ ತೃತೀಯ(Akshaya Tritiya)ವನ್ನು ಪ್ರತಿ ವರ್ಷ ಹಿಂದೂ ಕ್ಯಾಲೆಂಡರ್ ತಿಂಗಳ ವೈಶಾಖ ಶುಕ್ಲ ಪಕ್ಷದ ತೃತೀಯ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ ಮೇ 3ರಂದು ಭಾರತದಾದ್ಯಂತ ಅಕ್ಷಯ ತೃತೀಯ ಆಚರಿಸಲಾಗುತ್ತದೆ. ಸಮೃದ್ಧಿಯ ಹಬ್ಬವೆನಿಸಿಕೊಂಡಿರುವ ಅಕ್ಷಯ ತೃತೀಯವು ಮನೆಗೆ ಅದೃಷ್ಟ, ಐಶ್ವರ್ಯವನ್ನು ತರುತ್ತದೆ ಎಂಬ ನಂಬಿಕೆ ಇದೆ. 
ಅಕ್ಷಯ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಶಾಶ್ವತ ಎಂದಾಗಿದೆ. ತೃತೀಯ ಎಂದರೆ ಮೂರನೆಯದು. ವೈಶಾಖಾ ಮಾಸದ ಮೂರನೇ ದಿನವಾದ್ದರಿಂದ ತೃತೀಯ ಎನ್ನಲಾಗುತ್ತದೆ. ಅಕ್ಷಯ ತೃತೀಯ ಸಂದರ್ಭದಲ್ಲಿ ಏನನ್ನಾದರೂ ಖರೀದಿಸಿದರೆ ಅದು ನಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತದೆ ಎಂಬ ನಂಬಿಕೆ ಇದೆ. ಹೀಗಾಗಿಯೇ ಇಂದು ಚಿನ್ನ, ಬೆಳ್ಳಿ, ಮನೆಯಂಥ ದೊಡ್ಡ ವಸ್ತುಗಳನ್ನು ಖರೀದಿಸಲಾಗುತ್ತದೆ. 

ಪೌರಾಣಿಕ ಹಿನ್ನೆಲೆ
ಈ ಹಬ್ಬಕ್ಕೆ ವಿಶೇಷ ಧಾರ್ಮಿಕ ಮಹತ್ವವಿದೆ. ಪೌರಾಣಿಕ ಕಥೆಯ ಪ್ರಕಾರ, ಇದೇ ದಿನ, ಬ್ರಹ್ಮ ದೇವನ ಮಗ ಅಕ್ಷಯ ಕುಮಾರ ಜನಿಸಿದರು. ಆದ್ದರಿಂದ ಈ ದಿನವನ್ನು ಅಕ್ಷಯ ತೃತೀಯ ಎಂದು ಕರೆಯಲಾಗುತ್ತದೆ. ಈ ದಿನಾಂಕದಂದು ಅಕ್ಷಯ ತೃತೀಯವನ್ನು ಹೊರತುಪಡಿಸಿ, ಗಂಗಾ ಅವತಾರ ಮತ್ತು ಪರಶುರಾಮ ಜಯಂತಿ(Parashuram Jayanti)ಯನ್ನು ಸಹ ಆಚರಿಸಲಾಗುತ್ತದೆ. ಅಕ್ಷಯ ತೃತೀಯದ ದಿನ ಯಾವುದೇ ತಪ್ಪು ಹೆಜ್ಜೆ ಇಡಬಾರದು ಹಾಗೂ ಯಾರ ಬಗ್ಗೆಯೂ ತಪ್ಪಾಗಿ ಯೋಚಿಸಬಾರದು. ಪದ್ಮ ಪುರಾಣದಲ್ಲಿ, ವಿಷ್ಣುವು ನಾರದನಿಗೆ ಈ ದಿನದಂದು ಮಾನವರು ಯಾವುದೇ ಕಾರ್ಯಗಳನ್ನು ಮಾಡಿದರೂ, ಮರಣಾನಂತರದ ಜೀವನದಲ್ಲಿ ಅವರು ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ ಎಂದು ಹೇಳಿರುವುದಾಗಿ ಬರೆಯಲಾಗಿದೆ. ಈ ದಿನ ಖರೀದಿಸಿದ ವಸ್ತುಗಳು ಶಾಶ್ವತವಾಗಿರುವುದರ ಜೊತೆಗೆ ಅಕ್ಷಯವಾಗುತ್ತಾ ಅಂದರೆ ಹೆಚ್ಚುತ್ತಾ ಹೋಗುತ್ತವೆ ಎಂಬ ನಂಬಿಕೆ ಇದೆ. 

ಈ ನಾಲ್ಕು ರಾಶಿಯ ಪತಿ ಮಹಾಶಯರು ನಿಷ್ಠೆಗೆ ಇನ್ನೊಂದು ಹೆಸರು!

ಅಕ್ಷಯ ತೃತೀಯದಂದು ಏನು ಮಾಡಬೇಕು?
ದೇಶಾದ್ಯಂತ ಜನರು ಈ ದಿನದಂದು ಲಕ್ಷ್ಮಿ ದೇವಿ(Goddess Lakshmi)ಯನ್ನು ಪೂಜಿಸುತ್ತಾರೆ. ಎಲ್ಲರ ಮನೆಗಳಲ್ಲಿ ಆಕೆಯ ಆಶೀರ್ವಾದವನ್ನು ಕೋರಿ ಸಂಪತ್ತು ಮತ್ತು ಸಮೃದ್ಧಿ ಕರುಣಿಸುವಂತೆ ಬೇಡುತ್ತಾರೆ. ಜನರು ತಮ್ಮ ಜೀವನದಲ್ಲಿ ಸಂತೋಷ ಮತ್ತು ಅದೃಷ್ಟಕ್ಕಾಗಿ ಇಂದು ಭಗವಾನ್ ವಿಷ್ಣುವಿನ ಆಶೀರ್ವಾದವನ್ನು ಸಹ ಬಯಸುತ್ತಾರೆ.

ಅನೇಕರು ಅಕ್ಷಯ ತೃತೀಯದ ದಿನ ಬೆಳ್ಳಿ, ಚಿನ್ನವನ್ನು ಖರೀದಿಸುತ್ತಾರೆ. ಮನೆಗೆ ಅದೃಷ್ಟವನ್ನು ತರಲು ಈ ದಿನದಂದು ಆಸ್ತಿ ಖರೀದಿ, ವ್ಯಾಪಾರ ಆರಂಭ ಮತ್ತುಇತರ ಬೆಲೆ ಬಾಳುವ ವಸ್ತುಗಳನ್ನು ಖರೀದಿಸುತ್ತಾರೆ ಹಾಗೂ ಅವುಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ವಸ್ತುಗಳನ್ನು ಈ ದಿನದ ಮಂಗಳಕರ ಸಮಯದಲ್ಲಿ ಮಾತ್ರ ಖರೀದಿಸಬೇಕು. ಹಾಗಾದರೆ ಅಕ್ಷಯ ತೃತೀಯದ ಪೂಜಾ ಸಮಯ ಮತ್ತು ಚಿನ್ನ, ಬೆಳ್ಳಿ(gold and silver) ಖರೀದಿಯ ಮುಹೂರ್ತವೇನು ನೋಡೋಣ.

ಪೂಜೆ ಮತ್ತು ಖರೀದಿ ಮುಹೂರ್ತ
ಪಂಚಾಂಗದ ಪ್ರಕಾರ, ಅಕ್ಷಯ ತೃತೀಯ ತಿಥಿಯು ಮೇ 3 ರಂದು ಬೆಳಿಗ್ಗೆ 5.18 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮೇ 4 ರಂದು ಬೆಳಿಗ್ಗೆ 7.32ರವರೆಗೆ ಇರುತ್ತದೆ. ಮಂಗಳವಾರ, ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸುವ ಶುಭ ಸಮಯವು ಬೆಳಿಗ್ಗೆ 5.39 ರಿಂದ ಮಧ್ಯಾಹ್ನ 12.18 ರವರೆಗೆ ಇರುತ್ತದೆ.

ಈ ರಾಶಿಗಳಿಗೆ ಚಿನ್ನ ಧರಿಸಿದ್ರೆ ಅದೃಷ್ಟವೋ ಅದೃಷ್ಟ!

ಅಕ್ಷಯ ತೃತೀಯವು ಎಂಥ ಒಂದು ದಿನವೆಂದರೆ, ಇಂದು ಶುಭ ಸಮಯದ ಬಗ್ಗೆ ಯೋಚಿಸದೆಯೇ ನಿಮ್ಮ ಹಣವನ್ನು ಯಾವುದಕ್ಕೂ ಹಾಕಬಹುದು. ಚಿನ್ನ, ಬೆಳ್ಳಿ ಅಥವಾ ಇನ್ನಾವುದೇ ವಸ್ತುವಿನಲ್ಲಿ ಹೂಡಿಕೆ ಮಾಡಲು ಇಡೀ ದಿನ ಫಲಪ್ರದ ಎಂದು ಹೇಳಲಾಗುತ್ತದೆ. ಇದಲ್ಲದೆ, ನಿಶ್ಚಿತಾರ್ಥಗಳು ಮತ್ತು ಮದುವೆಗಳಿಗೆ ಕೂಡಾ ಈ ದಿನವು ತುಂಬಾ ಮಂಗಳಕರವಾಗಿದೆ.

Latest Videos
Follow Us:
Download App:
  • android
  • ios