ಡಿ.23ರ ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪ ದರ್ಶನದ 2.25 ಲಕ್ಷ ಟಿಕೆಟ್‌ಗಳು, ನ.10ರಂದು ಟಿಕೆಟ್‌ ಮಾರಾಟ ಆರಂಭವಾದ ಕೇವಲ 20 ನಿಮಿಷದಲ್ಲಿ ಮಾರಾಟವಾಗಿದ್ದು, ಭರ್ಜರಿ 6.75 ಕೋಟಿ ರು. ಆದಾಯ ಹರಿದು ಬಂದಿದೆ

ತಿರುಮಲ: ಡಿ.23ರ ವೈಕುಂಠ ಏಕಾದಶಿಯ ತಿರುಪತಿ ತಿಮ್ಮಪ್ಪ ದರ್ಶನದ 2.25 ಲಕ್ಷ ಟಿಕೆಟ್‌ಗಳು, ನ.10ರಂದು ಟಿಕೆಟ್‌ ಮಾರಾಟ ಆರಂಭವಾದ ಕೇವಲ 20 ನಿಮಿಷದಲ್ಲಿ ಮಾರಾಟವಾಗಿದ್ದು, ಭರ್ಜರಿ 6.75 ಕೋಟಿ ರು. ಆದಾಯ ಹರಿದು ಬಂದಿದೆ. ಇದು ದಾಖಲೆಯಾಗಿದೆ. ತಿಮ್ಮಪ್ಪನ ಸನ್ನಿಧಾನದಲ್ಲಿ ಜರುಗುವ ವೈಕುಂಠ ಎಕಾದಶಿ ಮಹೋತ್ಸವದ ಪ್ರಯುಕ್ತ ವೈಕುಂಠ ದ್ವಾರ ವಿಶೇಷ ದರ್ಶನದ ವಿಶೇಷ ಟಿಕೆಟ್‌ಗಳನ್ನು ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ನೀಡುತ್ತಿದೆ. 

ಶುಕ್ರವಾರ 11 ಗಂಟೆಗೆ ಆನ್‌ಲೈನ್‌ನಲ್ಲಿ 300 ರು. ಮುಖಬೆಲೆಯ ಟಿಕೆಟ್‌ ಮಾರಾಟ ಆರಂಭವಾಗಿತ್ತು. ಇದಾದ 20 ನಿಮಿಷದಲ್ಲಿ 2.25 ಲಕ್ಷ ಟಿಕೆಟ್‌ ಮಾರಾಟವಾಗಿ ಟಿಟಿಡಿಗೆ ಬರೋಬ್ಬರಿ 6.75 ಕೋಟಿ ರು. ಆದಾಯ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರ ಜೊತೆಗೆ ಸಮಿತಿಯು ಶ್ರೀವಾಣಿಯ ದರ್ಶನ ಹಾಗೂ ಕಾಣಿಕೆಯ ಟಿಕೆಟ್‌ಗಳನ್ನು ಜಂಟಿಯಾಗಿ ಆರಂಭಿಸಿದ್ದರಿಂದ ಭಕ್ತಾದಿಗಳು ಕೆಲಕಾಲ ಗೊಂದಲಕ್ಕೊಳಗಾಗಿದ್ದರು. ನಂತರ ಟಿಟಿಡಿಯು ಅದನ್ನು ಸ್ಥಗಿತಗೊಳಿಸಿ ಡಿ.22ರಂದು ತಿರುಪತಿಯಲ್ಲೇ ಟಿಕೆಟ್‌ ಮಾರಾಟ ಮಾಡುವುದಾಗಿ ಸ್ಪಷ್ಟನೆ ನೀಡಿತು.

ತಿರುಪತಿಗೆ ಭಕ್ತರು ಆಗಮಿಸುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆ, ಕರಡಿ ಮತ್ತೊಮ್ಮೆ ಎಚ್ಚರಿಸಿದ ಟಿಟಿಡಿ

ತಿರುಪತಿ ಅಭಿವೃದ್ಧಿಗೆ ಟಿಟಿಡಿ ಬಜೆಟ್‌ನ ಶೇ.1 ಹಣ: ಪ್ರಸ್ತಾವ ತಿರಸ್ಕರಿಸಿದ ಸಿಎಂ ಜಗನ್‌