ತಿರುಪತಿಗೆ ಭಕ್ತರು ಆಗಮಿಸುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆ, ಕರಡಿ ಮತ್ತೊಮ್ಮೆ ಎಚ್ಚರಿಸಿದ ಟಿಟಿಡಿ
ತಿರುಪತಿಗೆ ಭಕ್ತರು ಆಗಮಿಸುವ ಕಾಲ್ನಡಿಗೆ ಮಾರ್ಗದಲ್ಲಿ ಚಿರತೆ, ಕರಡಿ: ಎಚ್ಚರಕ್ಕೆ ಚಸೂಚನೆ.

ತಿರುಪತಿ (ಅ.29): ಇಲ್ಲಿನ ತಿರುಮಲ ವೆಂಕಟೇಶ್ವರ ದೇಗುಲಕ್ಕೆ ಹೋಗುವ ಕಾಲು ದಾರಿಯಲ್ಲಿ ಮತ್ತೆ ಚಿರತೆ, ಕರಡಿ ಪ್ರತ್ಯಕ್ಷವಾಗಿದೆ. ಇದರಿಂದಾಗಿ ಜನರಿಗೆ ಓಡಾಡುವಾಗಿ ಅತಿ ಎಚ್ಚರಿಕೆಯಿಂದ ಇರಲು ಟಿಟಿಡಿ ತಿಳಿಸಿದೆ. ಅ.14ರಿಂದ 27ರವರೆಗೆ ಇಲ್ಲಿನ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇಗುಲ ಹಾಗೂ ಅಲಿಪಿರಿ ಬಳಿ ಚಿರತೆ ಹಾಗೂ ಕರಡಿ ಸಂಚರಿಸಿದ್ದು, ಇಲ್ಲಿನ ಸಿಸಿಟೀವಿಯಲ್ಲಿ ಸೆರೆಯಾಗಿದೆ. ಕೆಲ ದಿನಗಳ ಹಿಂದಷ್ಟೇ ಚಿರತೆಯೊಂದು ಬಾಲಕಿಯನ್ನು ಹೊತ್ತೊಯ್ದು ಕೊಂದು ಹಾಕಿದ್ದ ಕಾರಣ ಈ ಬಾರಿ ಭಕ್ತಾದಿಗಳಿಗೆ ಸಂಚರಿಸುವಾಗ ಬಡಿಗೆ ಹಿಡಿದು, ಮಕ್ಕಳನ್ನು ಒಂಟಿಯಾಗಿ ಬಿಟ್ಟು ತೆರಳದಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಸೂಚನೆ ನೀಡಿತ್ತು. ಮಾತ್ರವಲ್ಲ ಅಧಿಕಾರಿಗಳು 6ಕ್ಕೂ ಹೆಚ್ಚು ಚಿರತೆಗಳನ್ನು ಹಿಡಿದು ವಿವಿಧ ಸ್ಥಳಗಳಿಗೆ ಸ್ಥಳಾಂತರಿಸಿದರು.
ತಿರುಪತಿ ಅಭಿವೃದ್ಧಿಗೆ ಟಿಟಿಡಿ ಬಜೆಟ್‌ನ ಶೇ.1 ಹಣ: ಪ್ರಸ್ತಾವ ತಿರಸ್ಕರಿಸಿದ ಸಿಎಂ ಜಗನ್
ಹೀಗಾಗಿ ಅಲಿಪಿರಿ-ತಿರುಮಲ ನಡಿಗೆದಾರಿಯಲ್ಲಿ ಪಾದಯಾತ್ರೆ ಮಾಡುವಾಗ ಭಕ್ತರು ಜಾಗರೂಕರಾಗಿರಬೇಕು ಮತ್ತು ಗುಂಪುಗಳಾಗಿ ಮಾತ್ರ ನಡೆಯುವಂತೆ ಟಿಟಿಡಿ ಅಧಿಕಾರಿಗಳು ಭಕ್ತರಿಗೆ ಮನವಿ ಮಾಡಿದ್ದಾರೆ. ಆಗಸ್ಟ್‌ನಿಂದ ಇಲ್ಲಿಯವರೆಗೆ ಆರು ಚಿರತೆಗಳನ್ನು ಹಿಡಿಯಲಾಗಿದೆ. ಭಕ್ತರ ರಕ್ಷಣೆಗಾಗಿ ಟಿಟಿಡಿ ಮತ್ತು ಅರಣ್ಯ ಇಲಾಖೆ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಹೇಳಿದ್ದಾರೆ. ತಿರುಮಲ ನಡಿಗೆ ಮಾರ್ಗದಲ್ಲಿ ನಿರಂತರ ನಿಗಾ ವಹಿಸಲಾಗಿದೆ ಎಂದು ಟಿಟಿಡಿ ಅಧ್ಯಕ್ಷರು ತಿಳಿಸಿದ್ದಾರೆ.