ತಿರುಪತಿ ಅಭಿವೃದ್ಧಿಗೆ ಟಿಟಿಡಿ ಬಜೆಟ್ನ ಶೇ.1 ಹಣ: ಪ್ರಸ್ತಾವ ತಿರಸ್ಕರಿಸಿದ ಸಿಎಂ ಜಗನ್
ತಿರುಪತಿ ನಗರದ ಅಭಿವೃದ್ಧಿಗೆ ತನ್ನ ವಾರ್ಷಿಕ ಬಜೆಟ್‌ನಲ್ಲಿ ಶೇ. 1ರಷ್ಟು ಹಣ ಮೀಸಲಿಡುವ ಟಿಟಿಡಿ ಮಂಡಳಿಯ ಪ್ರಸ್ತಾವನೆಯನ್ನು ಆಂಧ್ರ ಪ್ರದೇಶದ ಜಗನ್ಮೋಹನ ರೆಡ್ಡಿ ಸರ್ಕಾರ ತಿರಸ್ಕರಿಸಿದೆ.

ತಿರುಪತಿ: ತಿರುಪತಿ ನಗರದ ಅಭಿವೃದ್ಧಿಗೆ ತನ್ನ ವಾರ್ಷಿಕ ಬಜೆಟ್‌ನಲ್ಲಿ ಶೇ. 1ರಷ್ಟು ಹಣ ಮೀಸಲಿಡುವ ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಮಂಡಳಿಯ ಪ್ರಸ್ತಾವನೆಯನ್ನು ಆಂಧ್ರ ಪ್ರದೇಶದ ಜಗನ್ಮೋಹನ ರೆಡ್ಡಿ ಸರ್ಕಾರ ತಿರಸ್ಕರಿಸಿದೆ.
ಟಿಟಿಡಿಯ ವಾರ್ಷಿಕ ಬಜೆಟ್ ಒಟ್ಟಾರೆ 4,000 ಕೋಟಿ ರು.ಗಳಿದ್ದು ಇದರ ಶೇ.1ರಷ್ಟು ಎಂದರೆ ಸುಮಾರು 40 ಕೋಟಿ ರು.ಗಳನ್ನು ತಿರುಪತಿ ನಗರದ ಅಭಿವೃದ್ಧಿಗಾಗಿ ನೀಡಲಾಗುವುದು ಎಂದು ಅ.9 ರಂದು ಟಿಟಿಡಿ ಘೋಷಿಸಿತ್ತು ಹಾಗೂ ಇದಕ್ಕಾಗಿ ಸರ್ಕಾರಕ್ಕೆ ಅನುಮೋದನೆ ನೀಡಲು ಪ್ರಸ್ತಾವನೆ ಸಲ್ಲಿಸಿತ್ತು.
ಉಗ್ರರು ನುಸುಳಿರುವ ಬಗ್ಗೆ ಮಾಹಿತಿ, ದಸರಾ ಮೇಲೆಯೂ ಟೆರರಿಸ್ಟ್‌ಗಳ ಕರಿನೆರಳು? ತುರ್ತು ಭದ್ರತೆ ಹೆಚ್ಚಳ
ಆದರೆ ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳ ಹೊರತಾಗಿ ಬೇರೆ ಕೆಲಸಕ್ಕೆ ಉಪಯೋಗಿಸುವುದು ಸೂಕ್ತವಲ್ಲ ಎಂದು ರಾಜಕೀಯ ಪಕ್ಷಗಳು ಮತ್ತು ಇತರ ಸಂಘ ಸಂಸ್ಥೆಗಳು ವಿರೋಧಿಸಿದ್ದವು. ಹೀಗಾಗಿ ಸರ್ಕಾರವೇ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಅಲ್ಲದೇನಿದನ್ನು ಟಿಟಿಡಿಗೂ ತಿಳಿಸಿರುವುದಾಗಿ ಸರ್ಕಾರ ಹೇಳಿದೆ. ಧಾರ್ಮಿಕ ಚಟುವಟಿಕೆಗಳಿಂದ ಟಿಟಿಡಿ ಹಣವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಎಂದು ವಿಮರ್ಶಕರು ಹೇಳಿದ್ದಾರೆ. ಇದು ರಾಜ್ಯ ಸರ್ಕಾರದ ಕಿವಿಗೂ ಬಿದ್ದಿತ್ತು.
ಅಕ್ಟೋಬರ್ 20 ರಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿಯನ್ನು ಉದ್ದೇಶಿಸಿ ಅಧಿಕೃತ ಆದೇಶದಲ್ಲಿ, ಸರ್ಕಾರದ ವಿಶೇಷ ಮುಖ್ಯ ಕಾರ್ಯದರ್ಶಿ (ದತ್ತಿಗಳು) ಸರ್ಕಾರವು ಪ್ರಸ್ತಾವನೆಯನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
100 ಕೊಠಡಿಯ ಅರಮನೆಯಲ್ಲಿ ಭಾರತದ ಅತ್ಯಂತ ದುಬಾರಿ ರಾಜಮನೆತನದ ವಿವಾಹ, ಇಶಾ ಅಂಬಾನಿ ಮದುವೆಗೂ ಇದಕ್ಕೂ ಲಿಂಕ್ ಇಲ್ಲ
‘ತಿರುಪತಿಯ ಅಭಿವೃದ್ಧಿಗೆ ಟಿಟಿಡಿಯ ವಾರ್ಷಿಕ ಬಜೆಟ್‌ನಲ್ಲಿ ಶೇಕಡ ಒಂದರಷ್ಟನ್ನು ಮೀಸಲಿಡುವ ಪ್ರಸ್ತಾವನೆಗೆ ಸರ್ಕಾರದಿಂದ ಒಪ್ಪಿಗೆ ಇಲ್ಲ ಎಂದು ತಿರುಮಲ ತಿರುಪತಿ ದೇವಸ್ಥಾನಂಗಳ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಲಾಗಿದೆ’ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ತಿರುಪತಿಯ ಅಭಿವೃದ್ಧಿಗೆ ತನ್ನ ವಾರ್ಷಿಕ ಬಜೆಟ್‌ನಲ್ಲಿ 1% ರಷ್ಟು ಮೀಸಲಿಡುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಪ್ರಸ್ತಾವನೆಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಧಾರವನ್ನು ಬಿಜೆಪಿ ನಾಯಕಿ ಸಾದಿನೇನಿ ಯಾಮಿನಿ ಶರ್ಮಾ ಸ್ವಾಗತಿಸಿದ್ದಾರೆ. ವೈಎಸ್‌ಆರ್‌ಸಿ ಸರ್ಕಾರವು ಪವಿತ್ರ ದೇವಾಲಯವನ್ನು ವ್ಯಾಪಾರೀಕರಣಗೊಳಿಸುತ್ತಿದೆ ಎಂದು ಆರೋಪಿಸಿ ಟಿಟಿಡಿಯ ನಿರ್ಧಾರವನ್ನು ವಿರೋಧಿಸಿದ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿಜಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಸರ್ಕಾರವು ಈಗಾಗಲೇ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಗಮನಾರ್ಹ ಹಣವನ್ನು ಮೀಸಲಿಟ್ಟಿರುವಾಗ ಟಿಟಿಡಿ ಹಣವನ್ನು ತಿರುಪತಿಯ ಅಭಿವೃದ್ಧಿಗೆ ಏಕೆ ಬಳಸಲಾಗುತ್ತಿದೆ ಎಂದು ಪ್ರಶ್ನಿಸಿದ ಶರ್ಮಾ, ತಿರುಪತಿಯಿಂದ ಉತ್ಪತ್ತಿಯಾಗುವ ಗಣನೀಯ ಆದಾಯವನ್ನು ಗಮನಿಸಿದರೆ, ಅದರ ಅಭಿವೃದ್ಧಿಯಲ್ಲಿ ರಾಜ್ಯ ಸರ್ಕಾರವು ಹೆಚ್ಚು ಪ್ರಮುಖ ಪಾತ್ರ ವಹಿಸಬೇಕು ಎಂದು ವಾದಿಸುತ್ತಾರೆ.