Asianet Suvarna News Asianet Suvarna News

ಹೂಡಿಕೆ, ಬಂಗಾರ – ಭೂ ಖರೀದಿಗೆ ಬಂದಿದೆ ಈ ಯೋಗ!

ಗುರುವಾರ ಪುಷ್ಯ ನಕ್ಷತ್ರ ಬರುವ ದಿನವನ್ನು ಗುರುಪುಷ್ಯಾಮೃತ ಯೋಗವೆಂದು ಕರೆಯಲಾಗುತ್ತದೆ. ಇದು ಅತ್ಯಂತ ಪವಿತ್ರವಾದ ಸಮಯವಾಗಿದ್ದು, ಈ ಮುಹೂರ್ತದಲ್ಲಿ ಹೊಸ ಕೆಲಸವನ್ನು ಆರಂಭಿಸಲು ಉತ್ತಮ ಯೋಗವೆಂದು ಶಾಸ್ತ್ರ ಹೇಳುತ್ತದೆ. ಹಾಗಾದರೆ ಗುರು ಪುಷ್ಯಾಮೃತ ಯೋಗದ ಬಗ್ಗೆ ಇನ್ನಷ್ಟು ತಿಳಿಯೋಣ...

This yoga has come to invest, buy gold and land
Author
Bangalore, First Published Jun 30, 2022, 6:15 PM IST

ಗುರುವಾರ ಪುಷ್ಯಾ ನಕ್ಷತ್ರವು ಬಂದರೆ ಅದನ್ನು ಗುರು ಪುಷ್ಯಾಮೃತ ಯೋಗ (Gurupushyamrut Yoga) ಗುರು ಪುಷ್ಯ ಯೋಗ ಎಂದು ಕರೆಯಲಾಗುತ್ತದೆ. ಈ ಯೋಗವು ಈ ವರ್ಷ ಬಂದಿದ್ದು, ಹೂಡಿಕೆದಾರರಿಗೆ (Investor), ಹೊಸ ಸಾಹಸಕ್ಕೆ ಕೈ ಹಾಕುವವರಿಗೆ ಉತ್ತಮವಾದ ದಿನಗಳಾಗಿವೆ.

ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಇದು ಎಲ್ಲ ಮುಹೂರ್ತಕ್ಕಿಂತ ಸಾವಿರ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಈ ದಿನವನ್ನು ಗುರು ಪುಷ್ಯ ನಕ್ಷತ್ರ ಎಂದೂ ಕರೆಯಲಾಗುತ್ತದೆ. ಸಾಮಾನ್ಯವಾಗಿ, ಗುರುಪುಷ್ಯಾಮೃತ ಯೋಗವು ಪುಷ್ಯ ನಕ್ಷತ್ರ ಮತ್ತು ಗುರುವಾರದೊಂದಿಗೆ ವರ್ಷಕ್ಕೆ ಎರಡು ಅಥವಾ ಮೂರು ಬಾರಿ ಸಂಭವಿಸುತ್ತದೆ. ಚಿನ್ನದ (Gold) ಮೇಲಿನ ಹೂಡಿಕೆಗೆ ಈ ದಿನ ಬಹಳ ಪ್ರಾಶಸ್ತ್ಯ ಎಂದೂ ಸಹ ಹಲವು ಕಡೆ ನಂಬಲಾಗಿದೆ.

ಗುರು ಪುಷ್ಯ ಯೋಗವು ಹೊಸ ಪ್ರಾರಂಭಕ್ಕೆ ಇಲ್ಲವೇ ಯಾವುದೇ ಗುರಿಯನ್ನು ತಲುಪಲು ಇಲ್ಲವೇ ಸಾಧನೆಯನ್ನು ಮಾಡಲು ಮಂಗಳಕರವಾದ ಮಹೂರ್ತವಾಗಿದೆ. ಈ ದಿನ ಪ್ರತ್ಯೇಕವಾಗಿ ಮುಹೂರ್ತವನ್ನು ಹುಡುಕುವ ಅಗತ್ಯವಿಲ್ಲ. ಈ ದಿನದ ಪ್ರತಿಯೊಂದು ಕ್ಷಣವೂ ಮಂಗಳಕರ ಎಂಬುದು ಮಹತ್ವಪೂರ್ಣ ವಿಷಯವಾಗಿದೆ. 

2022ರಲ್ಲಿ ಈ ಯೋಗವು ಮೂರು ಬಾರಿ ಬರಲಿದ್ದು, ಜುಲೈ 1, ಜುಲೈ 29 ಮತ್ತು ಆಗಸ್ಟ್ 25ರಂದು ಈ ಯೋಗವು ಬರಲಿದೆ. ಅತ್ಯಂತ ಪವಿತ್ರವಾದ ಯೋಗ ಇದಾಗಿದೆ. ಈ ದಿನ ಲಕ್ಷ್ಮೀ ದೇವಿಯನ್ನು (Goddess Laxmi) ಶ್ರದ್ಧೆ ಭಕ್ತಿಯಿಂದ ಪೂಜೆ ಹಾಗೂ ಆರಾಧನೆ ಮಾಡುವುದರಿಂದ ಆಕೆಯ ಕೃಪಾಶೀರ್ವಾದವೂ ಲಭಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ದಿನ ಅಮೃತ ಯೋಗ ಇರುತ್ತದೆ. ಹಾಗಾಗಿ ಚಿನ್ನ ಖರೀದಿ ಮಾಡಲು, ಹೂಡಿಕೆ ಮಾಡಲು, ಹೊಸ ವ್ಯಾಪಾರ (Business) ಅಥವಾ ಉದ್ಯಮವನ್ನು ಆರಂಭಿಸಲು, ಹೊಸ ಉದ್ಯೋಗಕ್ಕೆ ಸೇರಲು ಇದು ಉತ್ತಮ ಮುಹೂರ್ತವಾಗಿದ್ದು, ಇದರಿಂದ ಯೋಗ ಪ್ರಾಪ್ತಿಯಾಗುತ್ತದೆ.

3 ಬಾರಿಯ ಈ ಯೋಗದ ಬಗ್ಗೆ ನೋಡೋಣ:
• 2022ರ ಜೂನ್ 30ರ (June) ಗುರುವಾರ ರಾತ್ರಿ 11.58ರಿಂದ ಈ ಯೋಗವು ಪ್ರಾರಂಭವಾಗಲಿದ್ದು, ಜುಲೈ 1ರ (July) ಸೂರ್ಯೋದಯದ ವರೆಗೆ ಮಾತ್ರ ಇರುತ್ತದೆ. ಈ ದಿನದಂದು ಮಾತ್ರ ಬಹುಬೇಗ ಈ ಯೋಗವು ಸಮಾಪ್ತಿಗೊಳ್ಳಲಿದೆ. 
• 2022ರ ಜುಲೈ 28ರ ಸೂರ್ಯೋದಯಕ್ಕೆ ಗುರು ಪುಷ್ಯಾಮೃತ ಯೋಗವು ಆರಂಭವಾಗಲಿದ್ದು, ಜುಲೈ 29ರ ಸೂರ್ಯೋದಯದ ವರೆಗೂ ಇರಲಿದೆ. 
• 2022ರ ಆಗಸ್ಟ್ 25ರ (August) ಸೂರ್ಯೋದಿಂದ ಈ ಯೋಗವು ಪ್ರಾರಂಭವಾಗಲಿದ್ದು, ಅದೇ ದಿನ ಸಂಜೆ 5.03 ನಿಮಿಷಕ್ಕೆ ಸಮಾಪ್ತಿಗೊಳ್ಳಲಿದೆ. 

ಇದನ್ನೂ ಓದಿ: ಇನ್ನೊಂದು ವರ್ಷ ಈ 3 ರಾಶಿಯವರಿಗೆ ಕೇತುವಿನ ಕೃಪೆ - ಧನಲಾಭ

ಪ್ರಯೋಜನಗಳೇನು?
ಚಿನ್ನ, ಪ್ಲಾಟಿನಂ, ಬೆಳ್ಳಿ (Silver), ವಜ್ರ (Diamond) ಮತ್ತು ಇತರ ಲೋಹಗಳಲ್ಲಿ ಹೂಡಿಕೆ ಮಾಡಲು ಇದು ಪ್ರಶಸ್ತವಾದ ದಿನವಾಗಿದ್ದು, ಈ ದಿನದಂದು ಮಾಡಿದ ಹೂಡಿಕೆಗಳು ಅನೇಕ ಪಟ್ಟು ಹೆಚ್ಚಾಗುತ್ತವೆ. ಫ್ಲ್ಯಾಟ್, ಹೊಸ ಮನೆ, ಕಾರ್ಖಾನೆ, ಅಂಗಡಿ ಇತ್ಯಾದಿಗಳನ್ನು ಖರೀದಿಸಲು ಸಹ ಇದು ಸುಸಮಯವಾಗಿದ್ದು, ಆಸ್ತಿ (Property) ಇತ್ಯಾದಿಗಳಲ್ಲಿಯೂ ಹೂಡಿಕೆ ಮಾಡಬಹುದಾಗಿದೆ. ವಾಹನ ಇಲ್ಲವೇ ಭೂಮಿ ಖರೀದಿ ಮಾಡುವವರು ಈ ದಿನ ಮುಂಗಡ ಪಾವತಿ ಕೊಡಲು ಇದು ಒಳ್ಳೆಯ ಸಮಯವಾಗಿದೆ. 

ಆಚರಣೆ ಹೇಗೆ?
ಗುರು ಪುಷ್ಯಾಮೃತ ಯೋಗದ ದಿನದಂದು ಗಣೇಶ, ವಿಷ್ಣು, ಲಕ್ಷ್ಮಿ, ಕುಬೇರ ಮತ್ತು ಬೃಹಸ್ಪತಿ (ಗುರು) ಗೆ ಪ್ರಾರ್ಥನೆ ಸಲ್ಲಿಸಬೇಕು. ಅಲ್ಲದೆ, ಈ ದಿನ ಹಳದಿ ಬಣ್ಣದ ಉಡುಪನ್ನು ಧರಿಸಬೇಕು. ಪೂಜೆಯ ಸಮಯದಲ್ಲಿ ಹಸುವಿನ ತುಪ್ಪವನ್ನು ಬಳಸಿ ದೀಪವನ್ನು ಬೆಳಗಿಸಬೇಕು. ಇದು ಮತ್ತಷ್ಟು ಶ್ರೇಷ್ಟತೆಯನ್ನು ತಂದುಕೊಡುತ್ತದೆ. ಹಳದಿ ಹೂವುಗಳು ಅರ್ಪಿಸಬೇಕಿದ್ದು, ಪೂಜೆಯ ಸಮಯದಲ್ಲಿ ಹಳದಿ ಹಣ್ಣು ಮತ್ತು ಶ್ರೀಗಂಧದ ಪೇಸ್ಟ್ ಅನ್ನು ಸಮರ್ಪಿಸಬೇಕು. ಬಾಳೆಹಣ್ಣು (Banana) ಅಥವಾ ಇತರ ಹಳದಿ ಬಣ್ಣದ ಹಣ್ಣುಗಳನ್ನು ದಾನ ಮಾಡುವುದು ಸೇರಿದಂತೆ ಹಣ್ಣಿನ ಮರಗಳು ಅಥವಾ ಬಾಳೆಗಿಡಗಳನ್ನು ನೆಡುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಅಲ್ಲದೆ, ಗೋಮಾತೆಗೆ ಶುದ್ಧ ತುಪ್ಪವನ್ನು ಹರಡಿದ ರೊಟ್ಟಿಗಳನ್ನು ತಿನ್ನಿಸಬೇಕು. 

ಇದನ್ನೂ ಓದಿ: ಬಂದಿದೆ ಅಂಗಾರಕ ಯೋಗ - ಈ ನಾಲ್ಕು ರಾಶಿಯವರಿಗೆ ಕೆಟ್ಟ ದಿನಗಳ ಆರಂಭ? ಇಲ್ಲಿದೆ ಪರಿಹಾರ

ಈ ಮಂತ್ರ ಜಪಿಸಿ
"ಓಂ ನಮೋ ನಾರಾಯಣಾಯ" ಅಥವಾ "ಓಂ ನಮೋ ಭಗವತೇ ವಾಸುದೇವಾಯ" ಮಂತ್ರವನ್ನು (Mantra) ಸಾಧ್ಯವಾದಷ್ಟು ಬಾರಿ ಪಠಿಸಬೇಕು. ಈ ಮೂಲಕ ಸಕಲ ಧನಪ್ರಾಪ್ತಿ ನಿಮ್ಮದಾಗುತ್ತದೆ.

Follow Us:
Download App:
  • android
  • ios