ಬಂದಿದೆ ಅಂಗಾರಕ ಯೋಗ - ಈ ನಾಲ್ಕು ರಾಶಿಯವರಿಗೆ ಕೆಟ್ಟ ದಿನಗಳ ಆರಂಭ? ಇಲ್ಲಿದೆ ಪರಿಹಾರ

Astrology Tips in Kannada: ಮಂಗಳ ಮತ್ತು ರಾಹು ಗ್ರಹವು ಒಂದೇ ರಾಶಿಯಲ್ಲಿ ಸ್ಥಿತವಿರುವಾಗ ಉಂಟಾಗುವ ಯೋಗವೇ ಅಂಗಾರಕ ಯೋಗವಾಗಿದೆ. ಈ ಯೋಗವು ಕೆಲವು ರಾಶಿಯವರಿಗೆ ಸಂಕಷ್ಟವನ್ನು ತಂದೊಡ್ಡಲಿದೆ. ಹಾಗಾಗಿ ಆ ರಾಶಿಯವರು ಹನುಮಂತನನ್ನು ಆರಾಧಿಸುವುದು ಉತ್ತಮ. ಆ ರಾಶಿಗಳು ಯಾವುವು ಅದಕ್ಕಿರುವ ಪರಿಹಾರವೇನು ಎಂಬುದನ್ನು ತಿಳಿಯೋಣ..

Angharaka Yoga trouble for these Zodiac signs

ವೈದಿಕ ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ಗ್ರಹಗಳ (Planet) ಸ್ಥಾನ ಮತ್ತು ಸ್ಥಿತಿಯು ಅನೇಕ ಯೋಗಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಈ ಯೋಗಗಳಲ್ಲಿ ಕೆಲವು ವ್ಯಕ್ತಿಗೆ ಒಳಿತನ್ನು ಮಾಡಿದರೆ ಇನ್ನು ಕೆಲವು ವ್ಯಕ್ತಿಗೆ ಸಂಕಷ್ಟವನ್ನು ತಂದೊಡ್ಡುತ್ತದೆ. ಅಷ್ಟೇ ಅಲ್ಲದೇ ಒಂದು ಗ್ರಹವು ಇನ್ನೊಂದು ಗ್ರಹದ ಜೊತೆ ಯುತಿಯಾದಾಗ (ಜಾತಕದ ಒಂದೇ ಮನೆಯಲ್ಲಿ ಎರಡು ಗ್ರಹಗಳು ಸ್ಥಿತವಾದರೆ ಅದನ್ನು ಯುತಿ ಎಂದು ಕರೆಯುತ್ತಾರೆ) ಅದರ ನೇರ ಪರಿಣಾಮ ವ್ಯಕ್ತಿಯ ಮೇಲಾಗುತ್ತದೆ. ಮಂಗಳ ಗ್ರಹವು ಜೂನ್ 27ರಂದು ಸ್ವರಾಶಿಯಾದ ಮೇಷ (Aries) ರಾಶಿಯನ್ನು ಪ್ರವೇಶಿಸಿದೆ. ಈ ರಾಶಿಯಲ್ಲಿ ರಾಹು (Rahu) ಗ್ರಹವು ಈ ಮುಂಚೆಯೇ ಸ್ಥಿತವಾಗಿದೆ. ಮಂಗಳ ಗ್ರಹವು ಇನ್ನು ನಲವತ್ತೈದು ದಿನಗಳ ಕಾಲ ಮೇಷ ರಾಶಿಯಲ್ಲಿಯೇ ಸ್ಥಿತವಾಗಿರಲಿದೆ. ಅದೇ ಆಗಸ್ಟ್10ರಂದು ವೃಷಭ (Taurus) ರಾಶಿಗೆ ಪ್ರವೇಶಿಸಲಿದೆ. ಈ ಎರಡು ಗ್ರಹಗಳ ಯುತಿಯಿಂದಾಗಿ ಅಂಗಾರಕ ಯೋಗ ನಿರ್ಮಾಣವಾಗಿದೆ. ಈ ಯೋಗವು ಶುಭವಲ್ಲವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಹಾಗಾಗಿ ಈ ಯೋಗದಿಂದ ಯಾವ್ಯಾವ ರಾಶಿಯವರು ಎಚ್ಚರದಿಂದಿರಬೇಕೆಂದು ನೋಡೋಣ.

ವೃಷಭ ರಾಶಿ (Taurus) 
ಈ ರಾಶಿಯ ವ್ಯಕ್ತಿಗಳಿಗೆ ಆಗಸ್ಟ್ (August) ಹತ್ತರ ವರೆಗೆ ಶತ್ರುಗಳಿಂದ ಎಚ್ಚರವಾಗಿರಬೇಕು. ವೃಷಭ ರಾಶಿಯವರಿಗೆ 12ನೇ ಮನೆಯಲ್ಲಿ ಅಂಗಾರಕ ಯೋಗ ನಿರ್ಮಾಣವಾಗಿದೆ. ಇದು ಹಾನಿ ಮತ್ತು ವ್ಯಯದ ಮನೆಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ಖರ್ಚು ಹೆಚ್ಚುವ ಸಂಭವವಿದೆ. ಅಷ್ಟೇ ಅಲ್ಲದೆ ಸಹೋದರ ಅಥವಾ ಸಹೋದರಿಯೊಂದಿಗೆ ಮನಸ್ತಾಪಗಳಾಗುವ ಸಂಭವ ಹೆಚ್ಚಿದೆ. ಹಾಗಾಗಿ ಮಾತಿನ ಮೇಲೆ ಆದಷ್ಟು ಹಿಡಿತವಿದ್ದರೆ ಉತ್ತಮ. ಈ ಅವಧಿಯಲ್ಲಿ ಶತ್ರುಗಳ ಕಾಟ ಹೆಚ್ಚಲಿದೆ. ಈ ಅವಧಿಯಲ್ಲಿ ಯಾವುದೇ ಒಪ್ಪಂದವನ್ನು ಒಪ್ಪಿಕೊಳ್ಳದಿರುವುದು ಉತ್ತಮ. ಇದರಿಂದ ನಷ್ಟ (Loss) ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ. ವೃಷಭ ರಾಶಿಯ ವ್ಯಕ್ತಿಗಳು ಹನುಮಾನ್ ಚಾಲಿಸಾ ಅಥವಾ ಸುಂದರಕಾಂಡವನ್ನು ಪಠಿಸುವುದು ಉತ್ತಮ.

ಇದನ್ನು ಓದಿ: ಇನ್ನೊಂದು ವರ್ಷ ಈ 3 ರಾಶಿಯವರಿಗೆ ಕೇತುವಿನ ಕೃಪೆ - ಧನಲಾಭ

ಸಿಂಹ ರಾಶಿ (Leo)
ಜಾತಕದ ನವಮ ಸ್ಥಾನದಲ್ಲಿ ಅಂಗಾರಕ ಯೋಗದ ನಿರ್ಮಾಣವಾಗುತ್ತದೆ. ಇದು ಅದೃಷ್ಟ (Luck) ಮತ್ತು ವಿದೇಶ (Foreign) ಯಾತ್ರೆಯ ಮನೆಯಾಗಿದೆ. ಹಾಗಾಗಿ ಈ ಅವಧಿಯಲ್ಲಿ ಅದೃಷ್ಟ ಸಾಥ್ ನೀಡುವುದಿಲ್ಲ. ವ್ಯಾಪಾರದಲ್ಲಿ ದೊಡ್ಡ –ದೊಡ್ಡ ಒಪ್ಪಂದಗಳು ಆಗುತ್ತವೆ ಎನ್ನುವಾಗ ನಿಂತುಹೊಗುತ್ತವೆ. ವಿದೇಶ ಪ್ರಯಾಣದ ಬಗ್ಗೆ ಯೋಚಿಸುತ್ತದ್ದರೆ, ಅದು ನಿಗದಿಯಾಗಿದ್ದರೂ ಸಹ ಯಾವುದಾದರೂ ಕಾರಣಗಳಿಂದ ಕ್ಯಾನ್ಸಲ್ ಆಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲದೆ ವಾಹನವನ್ನು (Vehicle) ಚಲಾಯಿಸುವಾಗ ಜಾಗ್ರತೆ ವಹಿಸುವುದು ಉತ್ತಮ. ಹೊರಗಡೆಯ ಆಹಾರ (Food) ಪದಾರ್ಥಗಳನ್ನು ತಿನ್ನದಿರುವುದು ಉತ್ತಮ."

ತುಲಾ ರಾಶಿ (Libra)
ಈ ರಾಶಿಯ ವ್ಯಕ್ತಿಗಳಿಗೆ ಅಂಗಾರಕ ಯೋಗವು (Angharaka yoga) ಪಂಚಮ ಮನೆಯಲ್ಲಿ ಗೋಚಾರವಾಗಲಿದೆ. ಇದು ಉನ್ನತ ಪದವಿ ಮತ್ತು ಪ್ರೇಮ ವಿವಾಹದ ಕಾರಕ ಮನೆಯಾಗಿದೆ. ಹಾಗಾಗಿ ಈ ಯೋಗದ ಅವಧಿಯಲ್ಲಿ ಪ್ರೀತಿ – ಪ್ರೇಮ ವಿಚಾರದಲ್ಲಿ ಕಹಿಯನ್ನು ಅನುಭವಿಸಬೇಕಾಗುತ್ತದೆ. ಉನ್ನತ ಶಿಕ್ಷಣಕ್ಕೂ (Education) ಅಡೆತಡೆಗಳು ಉಂಟಾಗುತ್ತವೆ. ಈ ಅವಧಿಯಲ್ಲಿ ಮಾತಿನ ಮೇಲೆ ಹಿಡಿತವಿಟ್ಟಕೊಳ್ಳುವುದು ಉತ್ತಮ. ಜೊತೆಗೆ ಜಗಳಗಳು ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಉದ್ಯೋಗದಲ್ಲೂ (Job) ಸಹ ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಇವೆಲ್ಲದರಿಂದ ಪಾರಾಗಲು ಮಂಗಳವಾರದಂದು ಹನುಮಂತನನ್ನು ಆರಾಧಿಸಬೇಕು.

ಇದನ್ನು ಓದಿ: 64 ದಿನಗಳ ಬಳಿಕ ಮತ್ತೆ ಮಕರ ರಾಶಿಗೆ ಶನಿ ಪ್ರವೇಶ, ಈ 2 ರಾಶಿಯ ಕಥೆ ಏನು?

ಮಕರ ರಾಶಿ (Capricorn)
ಅಂಗಾರಕ ಯೋಗವು ಈ ರಾಶಿಯವರಿಗೆ ಸ್ವಲ್ಪ ಮಟ್ಟಿನ ಕಷ್ಟವನ್ನೇ ತಂದೊಡ್ಡುತ್ತದೆ. ಈ ಅವಧಿಯಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಖರ್ಚು (Expenses) ಹೆಚ್ಚುವುದರಿಂದ ಖಿನ್ನತೆ (Depression) ಕಾಡುವ ಸಾಧ್ಯತೆ ಇರುತ್ತದೆ. ಪರಿಶ್ರಮಕ್ಕೆ ತಕ್ಕ ಫಲ ದೊರಕುವುದಿಲ್ಲ. ಹಲವು ಸಮಯಗಳಿಂದ ಕೂಡಿಟ್ಟ ಹಣ ಈ ಅವಧಿಯಲ್ಲಿ ಖರ್ಚಾಗುವ ಸಾಧ್ಯತೆ ಇದೆ. ಕಾರ್ಯ ಕ್ಷೇತ್ರದಲ್ಲಿ ಜಗಳಗಳು ಆಗುವ ಸಾಧ್ಯತೆ ಇರುತ್ತದೆ. ಈ ರಾಶಿಯ ವ್ಯಕ್ತಿಗಳು ಮಂಗಳವಾರದಂದು ಹನುಮಾನ್ (Lord Hanuman) ಚಾಲೀಸ ಮತ್ತು ಸುಂದರಕಾಂಡವನ್ನು ಪಠಿಸಬೇಕು.

Latest Videos
Follow Us:
Download App:
  • android
  • ios