ಇನ್ನೊಂದು ವರ್ಷ ಈ 3 ರಾಶಿಯವರಿಗೆ ಕೇತುವಿನ ಕೃಪೆ - ಧನಲಾಭ

ಗ್ರಹಗಳ ರಾಶಿ ಪರಿವರ್ತನೆ ಆಗುತ್ತಲೇ ಇರುತ್ತವೆ. ಇದರಿಂದ ಲಾಭ - ನಷ್ಟಗಳು ಉಂಟಾಗುತ್ತಲೇ ಇರುತ್ತವೆ. ಇದೀಗ ಕೇತು ಗ್ರಹವು ತುಲಾ ರಾಶಿಗೆ ಈಗಾಗಲೇ ಪ್ರವೇಶ ಮಾಡಿದ್ದು, ಇನ್ನೂ 10 ತಿಂಗಳ ಕಾಲ ಅಲ್ಲಿಯೇ ಸ್ಥಿತವಾಗಿರಲಿದ್ದಾನೆ. ಇದರಿಂದ 3 ರಾಶಿಯವರಿಗೆ ಅದೃಷ್ಟ ಖುಲಾಯಿಸಿದ್ದು, ಅವು ಯಾವುವು ಎಂಬುದನ್ನು ನೋಡೋಣ...

These 3 zodiac sign people will get Ketu planet blessings

ಜ್ಯೋತಿಷ್ಯಶಾಸ್ತ್ರದ (Astrology) ಅನುಸಾರ ಎಲ್ಲಾ ಗ್ರಹಗಳೂ ನಿಶ್ಚಿತ ಅವಧಿಯಲ್ಲಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರವನ್ನು ಮಾಡುತ್ತವೆ. ಈ ಸಂಚಾರವು ವ್ಯಕ್ತಿಯ ಜೀವನದ (Life) ಮೇಲೆ ನೇರ ಪರಿಣಾಮವನ್ನು ಬೀರುತ್ತದೆ. ಈ ಗೋಚಾರದಿಂದ ಕೆಲವರಿಗೆ ಶುಭ ಫಲವಾದರೆ, ಮತ್ತೆ ಕೆಲವರಿಗೆ ಅಶುಭ ಫಲ ಪ್ರಾಪ್ತಿಯಾಗುತ್ತದೆ. ಕೆಲವರಿಗೆ ಅದೃಷ್ಟ (Luck) ಖುಲಾಯಿಸಿದರೆ ಮತ್ತೆ ಕೆಲವರಿಗೆ ಸಂಕಷ್ಟಗಳ ಸರಮಾಲೆಯೇ ಎದುರಾಗುತ್ತದೆ. ಹಾಗೆಯೇ ಕೇತು ಗ್ರಹವು 2022ರ ಏಪ್ರಿಲ್ 12ರಂದೇ ತುಲಾ ರಾಶಿಗೆ ಪ್ರವೇಶ ಮಾಡಿದ್ದು, ಇದು 2023ರ ವರೆಗೆ ಅಲ್ಲೇ ಸ್ಥಿತವಾಗಿರಲಿದೆ. 

ಕೇತು ಗ್ರಹದ ಈ ರಾಶಿ ಪರಿವರ್ತನೆಯಿಂದ ಎಲ್ಲಾ ಗ್ರಹಗಳ ಮೇಲೂ ಪ್ರಭಾವ ಬೀರುತ್ತದೆ. ಅದರಲ್ಲೂ ವಿಶೇಷವಾಗಿ ಈ 3 ಗ್ರಹಗಳಿಗೆ (Planets) ಉತ್ತಮ ರೀತಿಯಲ್ಲಿ ಧನಲಾಭವಾಗುತ್ತದೆ. ಆ 3 ರಾಶಿಗಳ ಬಗ್ಗೆ ತಿಳಿಯೋಣ.

ಮಕರ ರಾಶಿ (Capricorn)
ಮಕರ ರಾಶಿಯ ವ್ಯಕ್ತಿಗಳಿಗೆ ಕೇತುಗ್ರಹದ ರಾಶಿ ಪರಿವರ್ತನೆಯಿಂದ ಶುಭ ಫಲಗಳು ಪ್ರಾಪ್ತವಾಗುತ್ತದೆ. ಕೇತು ಗ್ರಹ ಹನ್ನೊಂದನೇ ಮನೆಯಲ್ಲಿ ಗೋಚಾರವಾಗುತ್ತಿದೆ. ಹನ್ನೊಂದನೇ ಮನೆಯನ್ನು ಆದಾಯ (Income) ಮತ್ತು ಲಾಭದ (Profit) ಸ್ಥಾನವೆಂದು ಹೇಳಲಾಗುತ್ತದೆ. ಹಾಗಾಗಿ ಈ ಅವಧಿಯಲ್ಲಿ ಅನೇಕ ಮಾರ್ಗಗಳಿಂದ ಧನಲಾಭ ಆಗುವುದಲ್ಲದೆ ಆರ್ಥಿಕವಾಗಿ ಸಮೃದ್ಧತೆಯನ್ನು ಕಾಣಬಹುದಾಗಿದೆ. ವ್ಯಾಪಾರದಲ್ಲಿ (Business) ಸಹ ಉತ್ತಮ ಪ್ರಗತಿಯನ್ನು ಕಾಣುವುದಲ್ಲದೆ ಲಾಭವು ಅಧಿಕವಾಗಿ ಬರಲಿದೆ. ಇಷ್ಟೇ ಅಲ್ಲದೆ ಆಕಸ್ಮಿಕವಾಗಿ ಧನ ಲಾಭವಾಗುವ ಯೋಗವು ಸಹ ಇವರಿಗೆ ಇದೆ. ವ್ಯಾಪಾರದಲ್ಲಿ ಹೊಸ ವ್ಯವಹಾರಕ್ಕೆ ಅಥವಾ ಒಪ್ಪಂದಕ್ಕೆ ನೀವು ಯೋಚಿಸುತ್ತಿದ್ದರೆ ಇದು ಸಕಾಲವಾಗಿದೆ. ಇನ್ನೂ ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೂ ಸಹ ಇದು ಉತ್ತಮವಾಗಿದ್ದು, ಪ್ರಮೋಷನ್ ಅಥವಾ ವೇತನ ಹೆಚ್ಚಳದ ಸಾಧ್ಯತೆ ಸಹ ದಟ್ಟವಾಗಿದೆ. ಬಹಳ ಕಾಲದಿಂದ ಹಣವು ನಿಮ್ಮ ಕೈ ಸೇರದೆ ಇದ್ದ ಪಕ್ಷದಲ್ಲಿ ಈ ಸಂದರ್ಭದಲ್ಲಿ ಆ ಹಣವು ಸಹ ನಿಮ್ಮ ಕೈ ಸೇರಲಿದೆ. ಒಟ್ಟಾರೆ ಹೇಳಬೇಕೆಂದರೆ ಕೇತು ಗೋಚಾರವು ಈವರೆಗೆ ಶುಭ ಫಲವನ್ನು ನೀಡುತ್ತದೆ. ಮಕರ ರಾಶಿಯ ವ್ಯಕ್ತಿಗಳು ನೀಲಿ ಉಪ ರತ್ನವನ್ನು ಧಾರಣೆ ಮಾಡಬಹುದಾಗಿದೆ. ಈ ರತ್ನವು ಇವರಿಗೆ ಮತ್ತಷ್ಟು ಅದೃಷ್ಟವನ್ನು ತಂದುಕೊಡಲಿದೆ.

ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!

ಕರ್ಕಾಟಕ ರಾಶಿ (Cancer)
ಈ ರಾಶಿಯ ವ್ಯಕ್ತಿಗಳಿಗೆ ಕೇತು ಗ್ರಹವು ನಾಲ್ಕನೇ ಮನೆಯಲ್ಲಿ ಗೋಚರವಾಗುತ್ತದೆ. ಇದು ಸುಖ, ತಾಯಿ (Mother) ಮತ್ತು ವಾಹನದ (Vehicle) ಸ್ಥಾನವಾಗಿದೆ. ಹಾಗಾಗಿ ಕೇತುಗ್ರಹದ ಗೋಚಾರವು ಈ ರಾಶಿಯವರಿಗೆ ಒಳ್ಳೆಯದನ್ನು ಮಾಡಲಿದೆ. ಹಲವಾರು ಭಾಷೆಗಳನ್ನು ಕಲಿಯುವ ಆಸಕ್ತಿಯನ್ನು ಹೊಂದಿರುವವರು ಅನುವಾದಕರಾಗಿ ಸಹ ತಮ್ಮ ನೃತ್ಯ ಕ್ಷೇತ್ರವನ್ನಾಗಿ ಮಾಡಿಕೊಳ್ಳಬಹುದಾಗಿದೆ. ಜತೆಗೆ ಈ ಅವಧಿಯಲ್ಲಿ ಹೊಸ ವೃತ್ತಿಗೆ ಅವಕಾಶ ದೊರೆಯುವ ಸಾಧ್ಯತೆ ಬಹಳ ಹೆಚ್ಚು ಇದೆ. ಇನ್ನೂ ಉದ್ಯೋಗದಲ್ಲಿ ಇರುವವರಿಗೆ ಪ್ರಮೋಷನ್ (Promotion) ಸಿಗಲಿದೆ. ವಿವಾಹವಾಗದ ವ್ಯಕ್ತಿಗಳಿಗೆ ಈ ಸಂದರ್ಭದಲ್ಲೇ ಪ್ರೇಮಾಂಕುರವಾಗುವ ಸಂಭವ ಇದೆ. ಈ ಸಂದರ್ಭದಲ್ಲಿ ಆಸ್ತಿಪಾಸ್ತಿಯನ್ನು ಹೆಚ್ಚಿಸಿಕೊಳ್ಳುವ, ಇಲ್ಲವೇ ಹೊಸ ವಾಹನ ಖರೀದಿಸುವ ಯೋಗವೂ ಇದೆ. ಅಷ್ಟೇ ಅಲ್ಲದೇ ಈ ಸಮಯದಲ್ಲಿ ತಾಯಿಯ ಪೂರ್ಣ ಸಹಯೋಗ ದೊರೆಯಲಿದೆ. ಇನ್ನೂ ಕಾರ್ಯಕ್ಷೇತ್ರದಲ್ಲಿ ಸ್ಥಾನ ಪರಿವರ್ತನೆಯಾಗುವ ಸಾಧ್ಯತೆಯೂ ಇದೆ. ಕರ್ಕಾಟಕ ರಾಶಿಯ ವ್ಯಕ್ತಿಗಳು ಈ ಸಮಯದಲ್ಲೇ ಮೂನ್ ಸ್ಟೋನ್ ಧರಿಸಿದರೆ ಅದೃಷ್ಟವನ್ನು ಪಡೆದುಕೊಳ್ಳಬಹುದಾಗಿದೆ.

64 ದಿನಗಳ ಬಳಿಕ ಮತ್ತೆ ಮಕರ ರಾಶಿಗೆ ಶನಿ ಪ್ರವೇಶ, ಈ 2 ರಾಶಿಯ ಕಥೆ ಏನು?

ಕುಂಭ ರಾಶಿ (Lu)
ಈ ರಾಶಿಯ ವ್ಯಕ್ತಿಗಳಿಗೆ ಕೇತುಗ್ರಹದ ರಾಶಿ ಪರಿವರ್ತನೆಯು ಶುಭಫಲವನ್ನು ನೀಡುತ್ತದೆ. ಕುಂಭ ರಾಶಿಯಿಂದ ನವಮ ಸ್ಥಾನದಲ್ಲಿ ಕೇತು ಗ್ರಹವು ಪ್ರವೇಶಿಸಿದೆ. ಇದನ್ನು ಅದೃಷ್ಟ ಮತ್ತು ವಿದೇಶ ಯಾತ್ರೆಯ (Foreign trip) ಸ್ಥಾನ ಎಂದು ಹೇಳಲಾಗುತ್ತದೆ. ಹಾಗಾಗಿ ಈ ಸಮಯದಲ್ಲಿ ಅದೃಷ್ಟವೂ ಈ ವ್ಯಕ್ತಿಗಳ ಜೊತೆಗಿರುತ್ತದೆ. ಇವರು ಯಾವುದೇ ಕೆಲಸಕ್ಕೆ ಕೈಹಾಕಿದರೂ ಅದರಲ್ಲಿ ಯಶಸ್ಸು (Success) ಲಭ್ಯವಾಗುತ್ತದೆ. ವ್ಯಾಪಾರ ವ್ಯವಹಾರದ ಉದ್ದೇಶದಿಂದ ಅನೇಕ ಪ್ರಯಾಣಗಳನ್ನು ಮಾಡುವ ಸಾಧ್ಯತೆಯಿದ್ದು, ಭವಿಷ್ಯದಲ್ಲಿ (Future ) ಇದು ಲಾಭವನ್ನು ತಂದುಕೊಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ಅವಧಿಯಲ್ಲಿ ಸಫಲತೆ ಸಿಗುತ್ತದೆ. ಒಂದು ವೇಳೆ ನಿಮಗೆ ವೇತನ ಹೆಚ್ಚಳ ಆಗದೆ ಬಾಕಿ ಉಳಿದಿದ್ದರೆ ಈ ಸಂದರ್ಭದಲ್ಲಿ ಅದು ಕೈಗೂಡಲಿದೆ. ಈ ಸಂದರ್ಭದಲ್ಲಿ ಉಪ ರತ್ನವನ್ನು ಧಾರಣೆ ಮಾಡುವುದರಿಂದ ಒಳಿತಾಗುತ್ತದೆ. 

Latest Videos
Follow Us:
Download App:
  • android
  • ios