ಪಾಕಿಸ್ತಾನದ ಮೇಲೆ ಭಾರತ ನಡೆಸಿದ ಕ್ಷಿಪಣಿ ದಾಳಿಯ ಸಮಯದ ಗ್ರಹಗಳ ಸ್ಥಾನ ಹೇಗಿತ್ತು? ಪಾಕಿಸ್ತಾನದ ಭವಿಷ್ಯದ ಬಗ್ಗೆ ಜ್ಯೋತಿಷಿಗಳ ಭವಿಷ್ಯವಾಣಿಗಳೇನು? ಭಾರತದ ಜಾತಕ ಏನು ಹೇಳುತ್ತದೆ?
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಪಾಕಿಸ್ತಾನದ 9 ಉಗ್ರರ ತಾಣಗಳ ಮೇಲೆ ದಾಳಿ ನಡೆಸಿದೆ. ಭಾರತೀಯರು ಪ್ರತೀಕಾರ ಎಂದು ಕಾಯುತ್ತಿದ್ದಾರೆ. ಇದೀಗ ಮೂರು ಸೇನೆಗಳು ಜಂಟಿಯಾಗಿ ಕಾರ್ಯಚರಣೆ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಬಿಗ್ ಶಾಕ್ ನೀಡಿದೆ. ಈ ಕ್ಷಿಪಣಿ ದಾಳಿಯಲ್ಲಿ ಸುಮಾರು ಉಗ್ರದ ಮಸೂದ್ ಅಜರ್ ಕುಟುಂಬದ 14 ಸದಸ್ಯರು ಸೇರಿದಂತೆ 80ಕ್ಕೂ ಅಧಿಕ ಉಗ್ರರು ಮಟಾಷ್ ಆಗಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಭಾರತದ ಅನೇಕ ಜ್ಯೋತಿಷಿಗಳು ಯುದ್ಧ ಸೇರಿದಂತೆ ಅನೇಕ ಭವಿಷ್ಯವಾಣಿಗಳನ್ನು ನುಡಿದಿದ್ದರು. ಇದೀಗ ಮತ್ತೊಮ್ಮೆ ಅಂದ್ರೆ ದಾಳಿ ನಡೆದ ಸಮಯದ ಆಧಾರದ ಮೇಲೆ ಕೆಲವು ಭವಿಷ್ಯವಾಣಿಗಳು ಹೊರಬಂದಿವೆ. ಭಾರತವು 'ಆಪರೇಷನ್ ಸಿಂಧೂರ್' ಅಡಿಯಲ್ಲಿ ಪ್ರತೀಕಾರ ತೀರಿಸಿಕೊಂಡಾಗ, ಗ್ರಹಗಳ ಸ್ಥಾನ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.
'ಆಪರೇಷನ್ ಸಿಂಧೂರ್ ' ಸಮಯದಲ್ಲಿ ಗ್ರಹಗಳ ಸ್ಥಾನ ಹೇಗಿತ್ತು?
ವರದಿಗಳ ಪ್ರಕಾರ ಮೇ 7ರ ರಾತ್ರಿ 1.30ಕ್ಕೆ ಭಾರತ ಕ್ಷಿಪಣಿ ದಾಳಿಯನ್ನು ನಡೆಸಿತ್ತು. ಕೇವಲ 23 ನಿಮಿಷದಲ್ಲಿಯೇ ಉಗ್ರರ ತಾಣಗಳನ್ನು ಉಡೀಸ್ ಮಾಡಿ ನಮ್ಮ ಸೈನಿಕರು ಸುರಕ್ಷಿತವಾಗಿ ಹಿಂದಿರುಗಿದ್ದರು. ಭಾರತ ವಾಯದಾಳಿ ನಡೆಸಿದ ಸಂದರ್ಭದಲ್ಲಿ ಮೀನ ರಾಶಿಯಲ್ಲಿಯೇ ಶನಿ, ರಾಹು ಮತ್ತು ಶುಕ್ರ ಗ್ರಹವಿತ್ತು. ಇನ್ನು ಬುಧ ಗ್ರಹ ಇಂದು ಬೆಳಗಿನ ಜಾವ 3.53ಕ್ಕೆ ಮೇಷ ರಾಶಿಯನ್ನು ಪ್ರವೇಶಿಸಿದೆ. ಸದ್ಯ ಪಾಕಿಸ್ತಾನದ ಜಾತಕದಲ್ಲಿ ಶುಕ್ರನ ಅಂತರದಶ ಮತ್ತು ಚಂದ್ರನ ಮಹಾದಶ ನಡೆಯುತ್ತಿದೆ.
ಜ್ಯೋತಿಷಿಗಳ ಪ್ರಕಾರ, ಶುಕ್ರನು ಮಾರಕೇಶನಾಗುವ ಮೂಲಕ ಪಾಕಿಸ್ತಾನವನ್ನು ನಾಶಮಾಡಲು ಸಿದ್ಧನಾಗಿದ್ದಾನೆ. ಶುಕ್ರನ ಸಂಚಾರದಿಂದ ಭವಿಷ್ಯದಲ್ಲಿ ಪಾಕಿಸ್ತಾನ ಮತ್ತಷ್ಟು ಸಮಸ್ಯೆಗಳಿಗೆ ಸಿಲುಕಿಕೊಳ್ಳಲಿದೆ. ಮೇ ತಿಂಗಳಲ್ಲಿ 3 ದೊಡ್ಡ ಗ್ರಹಗಳು ಸಹ ತಮ್ಮ ಚಲನೆಯನ್ನು ಬದಲಾಯಿಸುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಗ್ರಹಗಳ ಈ ಸ್ಥಾನವು ಪಾಕಿಸ್ತಾನವನ್ನು ಭೀಕರ ಆರ್ಥಿಕ ಮತ್ತು ಮಿಲಿಟರಿ ಬಿಕ್ಕಟ್ಟಿಗೆ ಸಿಲುಕಿಸಬಹುದು ಎಂದು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ.
ಪಾಕಿಸ್ತಾನದ ಜಾತಕದಲ್ಲಿ ಆಂಗ್-ಭಾಂಗ್ ಯೋಗ
ಮೇ 14ರ ಬಳಿಕ ಮಿಥುನ ರಾಶಿಗೆ ಗುರು ಗ್ರಹದ ಪ್ರವೇಶವಾಗುತ್ತದೆ. ಗುರುವಿನ ಆಕ್ರಮಣಕಾರಿ ಚಲನೆಯಿಂದಾಗಿ ಪಾಕಿಸ್ತಾನದ ಜಾತಕದಲ್ಲಿ ಆಂಗ್-ಭಾಂಗ್ ಎಂಬ ವಿಶೇಷ ಯೋಗ ರೂಪಗೊಳ್ಳುತ್ತದೆ. ಈ ಆಂಗ್-ಭಾಂಗ್ ಯೋಗವು ಪಾಕಿಸ್ತಾನದ ನಾಶಕ್ಕೆ ಕಾರಣವಾಗುಬಹುದು ಅಥವಾ ಪಾಕಿಸ್ತಾನ ಇಬ್ಬಾಗ ಆಗಲಬಹುದು ಎಂದು ಜ್ಯೋತಿಷಿಗಳು ಹೇಳುತ್ತಿದ್ದಾರೆ. ಪಾಕಿಸ್ತಾನ ತುಂಡು ತುಂಡು ಆಗುವ ಸಾಧ್ಯತೆಗಳಿವೆ ಎಂಬ ಅಚ್ಚರಿ ಭವಿಷ್ಯವನ್ನು ನುಡಿಯಲಾಗಿದೆ.
ಅದೇ ಸಮಯದಲ್ಲಿ ಮಂಗಳನ ಮಹಾದಶಾ ಮತ್ತು ಮಂಗಳನ ಅಂತರದಶಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಅಂತರವು ಮತ್ತಷ್ಟು ಹೆಚ್ಚಾಗುತ್ತದೆ. ಮಂಗಳ ಗ್ರಹವು ಕೋಪ ಮತ್ತು ರಕ್ತದ ಅಂಶವಾಗಿದೆ, ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನದ ಭೂಮಿ ರಕ್ತದಿಂದ ಕೆಂಪಾಗುತ್ತದೆ. ಇಂದಿನ ದಾಳಿಯಲ್ಲಿ ಸುಮಾರು 80 ಉಗ್ರರ ರಕ್ತ ಪಾಕಿಸ್ತಾನದಲ್ಲಿ ಹರಿದಿದೆ.
ಹಾಗಾದ್ರೆ ಭಾರತದ ಜಾತಕ ಏನು ಹೇಳುತ್ತೆ?
ವೃಷಭ ಲಗ್ನದಲ್ಲಿ ಭಾರತವಿದ್ದು, ನಮ್ಮ ದೇಶದ ಜಾತಕದಲ್ಲಿ ಸೂರ್ಯನ ಅಂತರದಶಾ ನಡೆಯುತ್ತಿದೆ. ಸೂರ್ಯನು ಜಾತಕದಲ್ಲಿ ನಾಲ್ಕನೇ ಮನೆಯ ಅಧಿಪತಿಯಾಗಿದ್ದಾನೆ. ಇದರೊಂದಿಗೆ, ಚಂದ್ರನ ಸ್ಥಿತಿಯಲ್ಲಿ ಸೂರ್ಯನ ಅಂತರದಶವು ಭಾರತದ ಜಾತಕದಲ್ಲಿದೆ. ಜ್ಯೋತಿಷ್ಯದ ಪ್ರಕಾರ, ಸೆಪ್ಟೆಂಬರ್ 2025 ರಲ್ಲಿ ಭಾರತದ ಖ್ಯಾತಿ ಮತ್ತಷ್ಟು ಹೆಚ್ಚಾಗುತ್ತದೆ ಮತ್ತು ಇದು ಭಾರತಕ್ಕೆ ಸುವರ್ಣ ಸಮಯವಾಗಿರುತ್ತದೆ.
Disclaimer:ಈ ಮಾಹಿತಿ ಅಂತರ್ಜಾಲದಲ್ಲಿರುವ ಮಾಹಿತಿಯನ್ನು ಆಧರಿಸಿದೆ.ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.


