ವಾರದ ಯಾವ ದಿನ ಯಾವ ಕೆಲಸಕ್ಕೆ ಸೂಕ್ತ?
ಮನೆ ಕಟ್ಟಲು, ಉದ್ಯೋಗ ಆರಂಭಿಸಲು, ಹೊಸ ಉದ್ಯಮ ಶುರು ಮಾಡಲು, ಕುಟುಂಬದೊಂದಿಗೆ ಕಳೆಯಲು... ಹೀಗೆ ಒಂದೊಂದು ಪ್ರಮುಖ ಕೆಲಸಕ್ಕೆ ವಾರದ ಒಂದೊಂದು ದಿನ ಉತ್ತಮವೆನಿಸಿವೆ. ಯಾವ ದಿನ ಯಾವ ಕೆಲಸಕ್ಕೆ ಶ್ರೇಷ್ಠ ನೋಡೋಣ.
ವಾರದ ಏಳೂ ದಿನಗಳೂ ಒಂದೊಂದು ಗ್ರಹಕ್ಕೆ, ಒಂದೊಂದು ದೇವರಿಗೆ ಮೀಸಲಾಗಿವೆ. ಈ ಪ್ರತಿ ದಿನಗಳಲ್ಲೂ ನಿರ್ದಿಷ್ಟ ಕೆಲಸ ಮಾಡುವುದು ಉತ್ತಮ ಫಲಗಳನ್ನು ತಂದುಕೊಡುತ್ತದೆ. ಯಾವ ದಿನ ಏನು ಮಾಡಬೇಕು ಎಂಬ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಭಾನುವಾರ(Sunday)
ಭಾನುವಾರ ಅಥವಾ ರವಿವಾರ, ಸೂರ್ಯದೇವನಿಗೆ ಮೀಸಲಾದ ದಿನ. ಇದು ವಾರದ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿರುವುದರಿಂದ, ಭಾನುವಾರ ಬೇಗ ಎದ್ದು ಸೂರ್ಯೋದಯವನ್ನು ನೋಡಲು ಪ್ರಯತ್ನಿಸಬೇಕು. ಇಂದು ನೀವು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಮಾಣಿಕ್ಯ ಖರೀದಿಸಿ ಧರಿಸಲು ಉತ್ತಮ ದಿನ. ಯಾವುದೇ ಅನಾರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಆರಂಭಿಸುವುದಾದರೆ ಭಾನುವಾರದಿಂದ ಶುರು ಮಾಡುವುದರಿಂದ ಉತ್ತಮ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಭಾನುವಾರ ವಾಹನ ಖರೀದಿಗೆ ಕೂಡಾ ಉತ್ತಮವಾಗಿದೆ. ಯಾವುದೋ ಸಂದರ್ಶನಕ್ಕೆ ಅರ್ಜಿ ಸಲ್ಲಿಸುವುದು, ಸಾಕು ಪ್ರಾಣಿ ಖರೀದಿಸುವುದು, ಯಾಗ, ಹವನ, ಹೋಮ ಪೂಜೆಗಳಿಗೆ ಭಾನುವಾರ ಶುಭ ದಿನವಾಗಿದೆ.
ಸೋಮವಾರ(Monday)
ಸೋಮವಾರ ಚಂದ್ರನ ದಿನವಾಗಿದೆ. ಸೋಮವಾರದಂದು, ಬಿಳಿ ಮತ್ತು ಪ್ರಕಾಶಮಾನವಾದ ಬಟ್ಟೆಗಳನ್ನು ಧರಿಸುವುದು ಶುಭ ಫಲಿತಾಂಶಗಳನ್ನು ನೀಡುತ್ತದೆ. ಇದರ ಜೊತೆಗೆ, ಮುತ್ತು ಖರೀದಿಗೆ ಶುಭದಿನ. ಶಂಖವನ್ನು ಕೂಡಾ ಸೋಮವಾರ ಖರೀದಿಸುವುದು ಯೋಗ್ಯವಾಗಿದೆ. ಈ ದಿನ ತೋಟಗಾರಿಕೆಗೆ ಸೂಕ್ತವಾಗಿದೆ. ಹೊಸ ಬಟ್ಟೆಗಳ ಖರೀದಿ ಮಾಡುವ ಉದ್ದೇಶವಿದ್ದರೆ ಸೋಮವಾರವೇ ಮಾಡಿ.
ಮಂಗಳವಾರ(Tuesday)
ಮಂಗಳವಾರವನ್ನು ಕೆಂಪು ಮತ್ತು ಹಿಂಸಾತ್ಮಕ ಗ್ರಹವೆನಿಸಿಕೊಂಡ ಮಂಗಳ ನಿಯಂತ್ರಿಸುತ್ತದೆ. ಹೀಗಾಗಿ, ಕೆಂಪು ಬಣ್ಣದ ಬಟ್ಟೆ ಧರಿಸುವುದು ಮಂಗಳವಾರ ಮಂಗಳಕರ. ಅಲ್ಲದೆ, ಕೆಂಪು ಹವಳದಂತಹ ರತ್ನಗಳನ್ನು ಧರಿಸಲು ಇದು ಅನುಕೂಲಕರ ದಿನವಾಗಿದೆ. ಸಂಬಂಧಿಕರನ್ನು ಭೇಟಿ ಮಾಡಲು ಮತ್ತು ನಿಮ್ಮ ಸುತ್ತಮುತ್ತಲಿನ ಜನರ ಆಲೋಚನೆಗಳನ್ನು ಕೇಳಲು ಇದು ಪರಿಪೂರ್ಣ ದಿನವಾಗಿದೆ. ಸ್ಪರ್ಧೆಗಳಲ್ಲಿ ಭಾಗವಹಿಸಲು ಮತ್ತು ಚರ್ಚೆಗಳ ಭಾಗವಾಗಲು, ಇದು ಉತ್ತಮ ದಿನವಾಗಿದೆ. ಮಂಗಳವಾರ ಯುದ್ಧ ಮತ್ತು ವಾದಗಳನ್ನು ಜಯಿಸುವುದು. ಹೀಗಾಗಿ, ಈ ದಿನದಂದು ನೀವು ನ್ಯಾಯಾಲಯದಲ್ಲಿ ಯಾವುದೇ ವಿಚಾರಣೆಯನ್ನು ಗೆಲ್ಲಬಹುದು.
ಯುಗಾದಿ ವರ್ಷ ಭವಿಷ್ಯ: ಯಾವ ರಾಶಿಗೆ ಹೇಗಿರಲಿದೆ?
ಬುಧವಾರ(Wednesday)
ಬುಧವಾರ ಬುಧನಿಗೆ ಮೀಸಲಾದ ದಿನ. ಈ ದಿನ ಹಸಿರು ಬಟ್ಟೆಗಳನ್ನು ಧರಿಸುವುದು ಮತ್ತು ಹಸಿರು ವಸ್ತುಗಳನ್ನು ಖರೀದಿಸುವುದು ಅದೃಷ್ಟ ತರುತ್ತದೆ. ಅಲ್ಲದೆ, ಪಚ್ಚೆ ರತ್ನ ಖರೀದಿಸಿ ಧರಿಸಲು ಇದು ಪರಿಪೂರ್ಣ ದಿನ. ಯಾರಿಗಾದರೂ ಸಾಲ ನೀಡಲೇಬೇಕಿದ್ದಲ್ಲಿ ಬುಧವಾರದಂದು ನೀಡಿ. ಅದು ಸಕಾಲದಲ್ಲಿ ಹಿಂತಿರುಗುತ್ತದೆ. ಮನೆಯ ನಿರ್ಮಾಣ ಕಾರ್ಯ ಆರಂಭಕ್ಕೆ ಕೂಡಾ ಈ ದಿನ ಸೂಕ್ತವಾಗಿದೆ.
ಗುರುವಾರ(Thursday)
ಭಾನುವಾರದಂತೆಯೇ ಯಾಗ, ಹವನ ಮತ್ತು ಪೂಜೆಗಳನ್ನು ಮಾಡಲು ಗುರುವಾರ ಸಮೃದ್ಧವಾಗಿದೆ. ಹೊಸ ಉದ್ಯೋಗವನ್ನು ಆರಂಭಿಸಲು ಗುರುವಾರ ಆಯ್ಕೆ ಮಾಡಿಕೊಳ್ಳಿ. ಆ ಉದ್ಯೋಗದಲ್ಲಿ ಯಶಸ್ಸು ಗಳಿಸುವುದು ಸಾಧ್ಯವಾಗುತ್ತದೆ. ನಿಮ್ಮ ಸ್ವಂತದ ಯೋಜನೆಗಳನ್ನು ಕೂಡಾ ಈ ದಿನ ಆರಂಭಿಸಿ. ಇಂದು ಧಾರ್ಮಿಕ ಪುಸ್ತಕಗಳನ್ನು ಓದುವುದು ಅದೃಷ್ಟವನ್ನು ತರುತ್ತದೆ.
ಶುಕ್ರವಾರ(Friday)
ಶುಕ್ರವಾರವು ಶುಕ್ರ ಗ್ರಹದಿಂದ ನಿಯಂತ್ರಿಸಲ್ಪಡುವ ದಿನವಾಗಿದ್ದು ಅದು ಪ್ರೀತಿ, ಪ್ರಣಯ, ಸಂತೋಷ ಮತ್ತು ಸಂಬಂಧಕ್ಕೆ ಸಂಬಂಧಿಸಿರುವುದಾಗಿದೆ. ಶುಕ್ರವಾರ ಕುಟುಂಬದೊಂದಿಗೆ ಸಮಯ ಕಳೆಯಿರಿ. ಈ ದಿನ ಗುಲಾಬಿ, ಬಿಳಿ ಮತ್ತು ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಅದೃಷ್ಟವನ್ನು ತರುತ್ತದೆ. ವಜ್ರ ಮತ್ತು ಬಿಳಿ ನೀಲಮಣಿಯಂತಹ ರತ್ನದ ಕಲ್ಲುಗಳನ್ನು ಶುಕ್ರವಾರ ಧರಿಸುವುದರಿಂದ ಸಮೃದ್ಧಿಯನ್ನು ಆಕರ್ಷಿಸಬಹುದಾಗಿದೆ. ಹೊಸ ಮನೆ ನಿರ್ಮಾಣಕ್ಕೂ ಉತ್ತಮ ದಿನವಾಗಿದೆ. ಮನರಂಜನೆಗಾಗಿಯೂ ಮೀಸಲಿರಿಸಿಕೊಳ್ಳಿ.
Vastu Shastra: ಈ ಎಂಟು ವಸ್ತುಗಳನ್ನು ತಪ್ಪಿಯೂ ಯಾರಿಗೂ ಉಡುಗೊರೆ ನೀಡಬೇಡಿ!
ಶನಿವಾರ(Saturday)
ಶನಿವಾರ ಶನಿ ಗ್ರಹದ ದಿನ. ಕಪ್ಪು ಮತ್ತು ಕಡು ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಅದೃಷ್ಟವನ್ನು ತರುತ್ತದೆ. ಈ ದಿನದಂದು ನೀಲಮಣಿ ರತ್ನ ಧರಿಸುವುದರಿಂದ ಅದೃಷ್ಟವನ್ನು ಆಕರ್ಷಿಸಬಹುದಾಗಿದೆ. ಕುಟುಂಬ ವಿವಾದ ಮತ್ತು ಸ್ನೇಹಿತರ ನಡುವಿನ ಸಂಘರ್ಷವನ್ನು ಪರಿಹರಿಸಲು, ಶನಿವಾರ ಅತ್ಯುತ್ತಮ ಸಂದರ್ಭವಾಗಿದೆ. ಶನಿವಾರ ಉತ್ತಮ ಮರವಾಗುವ ಗಿಡಗಳನ್ನು ನೆಡುವುದು ಶುಭವಾಗಿದೆ.