Vastu Shastra: ಈ ಎಂಟು ವಸ್ತುಗಳನ್ನು ತಪ್ಪಿಯೂ ಯಾರಿಗೂ ಉಡುಗೊರೆ ನೀಡಬೇಡಿ!
ವಾಸ್ತು ಶಾಸ್ತ್ರದ ಪ್ರಕಾರ ಕೆಲ ವಸ್ತುಗಳನ್ನು ಉಡುಗೊರೆಯಾಗಿ ನೀಡುವುದು ಸಮಂಜಸವಲ್ಲ. ಅದರಿಂದ ಸಮಸ್ಯೆಗಳಾಗುತ್ತದೆ. ಅಂಥ ಐದು ವಸ್ತುಗಳು ಯಾವುವು ನೋಡೋಣ.
ಯಾರದಾದರೂ ಮನೆಯಲ್ಲಿ ಗೃಹಪ್ರವೇಶ, ಉಪನಯನ, ಮದುವೆ, ಹುಟ್ಟು ಹಬ್ಬ ಆಚರಣೆ ಸೇರಿದಂತೆ ಯಾವುದೇ ಶುಭ ಸಮಾರಂಭ ನಡೆಯುತ್ತಿದ್ದಾಗಲೂ ಉಡುಗೊರೆ ಕೊಡುವ ಸಂಪ್ರದಾಯ ಹಿಂದಿನಿಂದಲೂ ಬೆಳೆದು ಬಂದಿದೆ. ಉಡುಗೊರೆ ದೊಡ್ಡದೇ ಆಗಿರಬೇಕಿಲ್ಲ, ಅಥವಾ ಬಹಳ ದುಡ್ಡಿನದಾಗಿರಬೇಕಿಲ್ಲ. ಅದನ್ನು ಕೊಡುವವರ ಮನಸ್ಥಿತಿಯಷ್ಟೇ ಮುಖ್ಯವಾಗುತ್ತದೆ. ಎಲ್ಲವೂ ಶುಭವಾಗಲಿ ಎಂದು ಹಾರೈಸಿ ನೀಡುವ ಆ ಧನಾತ್ಮಕ ಚಿಂತನೆ ಪ್ರಮುಖವಾಗುತ್ತದೆ. ಸಾಮಾನ್ಯವಾಗಿ ಆತ್ಮೀಯರಿಗೆ ಉಡುಗೊರೆ ನೀಡುವಾಗ ಅವರ ಖುಷಿ ಹೆಚ್ಚಿಸಲು ಬಯಸುತ್ತೇವೆ. ಆದರೆ, ನಮ್ಮ ಒಳ್ಳೆತನ ಅಜ್ಞಾನದ ಕಾರಣಕ್ಕೆ ಅವರಿಗೆ ಕೆಟ್ಟದ್ದನ್ನು ಮಾಡಬಾರದಲ್ಲ.. ಹೌದು, ವಾಸ್ತು ಪ್ರಕಾರ ಈ ಕೆಲವೊಂದು ಉಡುಗೊರೆಗಳನ್ನು ಕೊಡುವುದು ಅಶುಭವಾಗಿದೆ. ಅವು ಯಾವುವು ಎಂದು ತಿಳಿದಿದ್ದರೆ ನಿಮ್ಮಿಂದ ಅಂಥ ತಪ್ಪಾಗುವುದನ್ನು ತಡೆಯಬಹುದಾಗಿದೆ.
ನೀರಿಗೆ ಸಂಬಂಧಿಸಿದ ವಸ್ತುಗಳು(Anything with water)
ಸಾಮಾನ್ಯವಾಗಿ ಮನೆಗೆ ಲಕ್ಷಣವಾಗಿರುತ್ತದೆ ಹಾಗೂ ವಾಸ್ತು ಪ್ರಕಾರವೂ ಮನೆಯಲ್ಲಿ ಚಲನಶೀಲತೆ ತರುತ್ತದೆ ಎಂಬ ಕಾರಣಕ್ಕೆ ಅಕ್ವೇರಿಯಂ ಉಡುಗೊರ ನೀಡುವವರಿದ್ದಾರೆ. ಆದರೆ, ಅಕ್ವೇರಿಯಂ ಉಡುಗೊರೆಯಾಗಿ ನೀಡಬಾರದು. ಇದು ಮಾತ್ರವಲ್ಲ, ಸಣ್ಣ ಕಾರಂಜಿ ಸೇರಿದಂತೆ ನೀರನ್ನು ಹೊಂದಿರುವ ಯಾವೊಂದು ವಸ್ತುವೂ ಉಡುಗೊರೆಗೆ ಯೋಗ್ಯವಲ್ಲ. ಏಕೆಂದರೆ ನೀರಿನ ವಸ್ತುಗಳು ಮನೆಯ ಆರ್ಥಿಕ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ನೀರು ನಿರಂತರ ಚಲನೆಯಲ್ಲಿರಬೇಕು. ಅದನ್ನು ಉಡುಗೊರೆ ತೆಗೆದುಕೊಂಡ ವ್ಯಕ್ತಿ ಅರಿಯದೆ ಹೋದರೆ ಅದರಿಂದ ಹಣಕಾಸು ಕಳೆದುಕೊಳ್ಳಬೇಕಾಗುತ್ತದೆ. ಅಲ್ಲದೆ, ನೀರಿನ ವಸ್ತುಗಳನ್ನು ಯಾವ ದಿಕ್ಕಿನಲ್ಲಿಡಬೇಕು ಎಂಬುದನ್ನು ಕೂಡಾ ತಿಳಿದಿರಬೇಕು. ಇದಕ್ಕಿಂತ ವಿಂಡ್ ಚೈಮ್ ಉಡುಗೊರೆಗೆ ಹೆಚ್ಚು ಯೋಗ್ಯವಾಗಿವೆ.
ಕರವಸ್ತ್ರಗಳು ಮತ್ತು ಟವೆಲ್‌ಗಳು(Napkins and Towels)
ಸಾಮಾನ್ಯವಾಗಿ ಮದುವೆ ಮುಂಜಿಗಳಲ್ಲಿ ಆತಿಥೇಯರೇ ಅತಿಥಿಗಳಿಗೆ ಕರವಸ್ತ್ರ ಇಲ್ಲವೇ ಟವಲ್ ಕೊಡುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಇದು ಉತ್ತಮ ಆಯ್ಕೆಯಲ್ಲ. ಇದು ತೆಗೆದುಕೊಂಡವರಲ್ಲಿ ನಿರಾಶಾವಾದವನ್ನು ಹುಟ್ಟು ಹಾಕುತ್ತದೆ. ಒಂದು ವೇಳೆ ಇದನ್ನೇ ಕೊಡಬೇಕೆಂದರೆ ಅದರ ಜೊತೆ ನಾಣ್ಯವನ್ನಿಟ್ಟು ಕೊಡಲು ಮಾಡಿ.
ಭರವಸೆ ಕಳೆದುಕೊಂಡ ಬದುಕಿಗೆ ಗುರಿ ತೋರುವ ಆಶ್ರಮಗಳು
ದೇವರ ವಿಗ್ರಹಗಳು
ಪ್ರತಿ ಹಿಂದೂ ಮನೆಯ ಪೂಜಾ ಕೋಣೆಯಲ್ಲಿ ದೇವರ ವಿಗ್ರಹಗಳು, ಫೋಟೋಗಳು ಇರುತ್ತವೆ. ದೇವರ ಫೋಟೋ ಉಡುಗೊರೆಯಾಗಿ ಕೊಡುವುದು ಅತ್ಯಂತ ಶುಭ ಎಂದುಕೊಳ್ಳುತ್ತೇವೆ. ಆದರೆ ಹಾಗಿಲ್ಲ, ದೇವರ ಚಿತ್ರಗಳು, ವಿಗ್ರಹಗಳನ್ನು ಉಡುಗೊರೆಯಾಗಿ ಕೊಡಕೂಡದು. ಮೊದಲನೆಯದಾಗಿ ಮನೆಯಲ್ಲಿ ದೊಡ್ಡ ವಿಗ್ರಹಗಳನ್ನು ಇಡಲೇಬಾರದು. ಇನ್ನು ಸಣ್ಣ ವಿಗ್ರಹವಾದರೂ ಸರಿ, ಆಯಾ ದೇವರಿಗೆ ಸರಿಯಾಗಿ ನಡೆದುಕೊಳ್ಳದಿದ್ದರೆ ಅಪಚಾರವಾಗುವುದು. ಈ ಬಗ್ಗೆ ಹೆಚ್ಚೇನು ತಿಳಿಯದವರಿಗೆ ವಿಗ್ರಹ ನೀಡಿದರೆ ಕೊಟ್ಟವರಿಗೂ, ಸ್ವೀಕರಿಸಿದವರಿಗೂ ಸಮಸ್ಯೆಯಾಗುತ್ತದೆ.
ಸ್ಟೇಶನರಿ ವಸ್ತುಗಳು(Stationary things)
ಮಕ್ಕಳಿರುವ ಮನೆಗೆ ಹೋಗುವಾಗ ಸಾಮಾನ್ಯವಾಗಿ ಎಲ್ಲರೂ ಬುಕ್ಸ್, ಪೆನ್ನು, ಸ್ಕೆಚ್‌ಪೆನ್ ಇತ್ಯಾದಿಗಳನ್ನು ಉಡುಗೊರೆಯಾಗಿ ತೆಗೆದುಕೊಂಡು ಹೋಗುತ್ತಾರೆ. ಬರ್ತ್‌ಡೇ ಪಾರ್ಟಿ ಎಂದರಂತೂ ಬರುವ 10 ಉಡುಗೊರೆಯಲ್ಲಿ 5 ಸ್ಟೇಶನರಿ ವಸ್ತುಗಳೇ ಆಗಿರುತ್ತವೆ. ಮಕ್ಕಳಿಗೆ ಬಳಕೆಯಾಗುತ್ತದೆ ಎಂಬ ಆಲೋಚನೆ ಇದರ ಹಿಂದಿರುತ್ತದೆ. ಆದರೆ, ಇದು ಉತ್ತಮ ನಿರ್ಧಾರವಲ್ಲ. ಈ ವಸ್ತುಗಳು ಕೆಲವರ ವೃತ್ತಿ ಜೀವನ ಹಾಳು ಮಾಡಬಲ್ಲವು. ಯಾರು ಯಾವ ಕ್ಷೇತ್ರದಲ್ಲಿರುತ್ತಾರೋ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೂಡಾ ನೀಡಬಾರದು. ಇದರಿಂದ ನಿಮ್ಮ ಬೇಡದ ಕರ್ಮಗಳನ್ನು ಅವರಿಗೆ ದಾಟಿಸಿದಂತಾಗುತ್ತದೆ.
ಮೊನಚಾದ ವಸ್ತುಗಳು(Sharp items)
ಚೂಕು, ಚೂರಿ, ಕತ್ತಿಯನ್ನು ಯಾರೂ ಉಡುಗೊರೆ ಎಂದು ನೀಡುವುದಿಲ್ಲ. ಆದರೆ ಅಡುಗೆ ಮನೆಯ ಪಾತ್ರೆ ಪರಡಿಗಳನ್ನಂತೂ ನೀಡುತ್ತಾರೆ. ಅವುಗಳಲ್ಲಿ ಕೆಲ ಮೊನಚು ವಸ್ತುಗಳಿರಬಹುದು. ಇಂಥ ಮೊನಚಾದ ವಸ್ತುಗಳು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತವೆ. ಮನೆಯ ಸದಸ್ಯರ ನಡುವೆ ಜಗಳ ತಂದಿಡುತ್ತವೆ. ಇದರ ಬದಲು ಕುಕ್ಕರ್, ಸ್ಟೌವ್, ಸ್ಟೋರೇಜ್ ಸೆಟ್‌ಗಳು ಹೆಚ್ಚು ಚೆನ್ನಾಗಿರುತ್ತವೆ.
ವ್ಯಾಲೆಟ್ಸ್(Wallets)
ಪುರುಷರಿಗೆ ಗಿಫ್ಟ್ ಕೊಡುವುದೆಂದ ಕೂಡಲೇ ಮೊದಲು ತಲೆಗೆ ಬರುವುದೇ ವ್ಯಾಲೆಟ್ಸ್. ಬಹಳ ಉಪಯುಕ್ತ ಉಡುಗೊರೆ ಎಂದು ನೀಡುತ್ತೀರಿ. ಆದರೆ, ವ್ಯಾಲೆಟ್ ಉಡುಗೊರೆಯಾಗಿ ನೀಡಕೂಡದು. ಇದರಿಂದ ಕೊಡುವವರ ಜೊತೆಗಿದ್ದ ಪಾಸಿಟಿವ್ ಆರ್ಥಿಕ ಶಕ್ತಿಯು ತೆಗೆದುಕೊಂಡವರಿಗೆ ಪಾಸಾಗುತ್ತದೆ.
ನಿಮ್ಮ ಹೆಸರು A ಅಕ್ಷರದಿಂದ ಶುರುವಾಗುತ್ತಾ? ಅದು ನಿಮ್ಮ ಬಗ್ಗೆ ಏನು ಹೇಳ್ತಿದೆ ಗೊತ್ತಾ?
ಉಪ್ಪಿನಕಾಯಿ(Pickles)
ನಾಲಿಗೆಯಲ್ಲಿ ನೀರು ತರಿಸುವ ಉಪ್ಪಿನಕಾಯಿ ಯಾರಿಗೆ ಇಷ್ಟವಿಲ್ಲ ಹೇಳಿ? ಹಾಗಂಥ ಉಪ್ಪಿನಕಾಯಿಯನ್ನು ಉಡುಗೊರೆಯಾಗಿ ನೀಡಬಾರದು. ಇದರಿಂದ ನಿಮ್ಮ ಸಂಬಂಧದ ನಡುವೆ ಕಹಿ ಹೆಚ್ಚುತ್ತದೆ. ಹಾಗೊಂದು ವೇಳೆ ಕೊಡಲೇಬೇಕಿದ್ದರೆ, 10 ರೂಪಾಯಿಯನ್ನು ತೆಗೆದುಕೊಂಡು ಕೊಡಿ.
ಅಲಂಕಾರಿಕ ಹೂವುಗಳು
ಅಲಂಕಾರಿಕ ಹೂವುಗಳೆಂದರೆ ಒಣಗಿದ ಹೂವಿನಂಥದ್ದು. ಅವು ನಕಾರಾತ್ಮಕತೆ, ಚಲನಹೀನತೆಯನ್ನು ಸೂಚಿಸುತ್ತವೆ, ಅದೇ ತಾಜಾ ಹೂವುಗಳಾದರೆ ಜೀವಂತಿಕೆಯ ಪ್ರತೀಕ. ಹೀಗಾಗಿ, ಅಲಂಕಾರಿಕ ಹೂವುಗಳನ್ನು ಯಾರಿಗೂ ನೀಡಬಾರದು. ಅವುಗಳಿಂದ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚುತ್ತದೆ.