ಯುಗಾದಿ ವರ್ಷ ಭವಿಷ್ಯ: ನಿಮ್ಮ ರಾಶಿಗೆ ಈ ನವ ವರ್ಷ ಹೇಗಿರಲಿದೆ ನೋಡಿ

ಹಿಂದೂಗಳಿಗೆ ಯುಗಾದಿಯಿಂದ ಹೊಸ ವರ್ಷ. ಈ ವರ್ಷ ನಿಮ್ಮ ರಾಶಿಗೆ ಹೇಗಿರಲಿದೆ ನೋಡಿ. 

Check Ugadi annual predictions for 12 zodiac signs skr

ಹಿಂದೂಗಳಿಗೆ ಯುಗಾದಿಯೇ ಹೊಸ ವರ್ಷದ ಆರಂಭ. ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ದಿನ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪಾದ ತಿಥಿಯಂದು ಅಂದರೆ ಏಪ್ರಿಲ್ ಎರಡರಂದು ಶುಭಕೃತ್ ಸಂವತ್ಸರಕ್ಕೆ ಕಾಲಿಡುತ್ತಿದ್ದೇವೆ. ಈ ಶುಭಕೃತ್ ಸಂವತ್ಸರ ಯಾರಿಗೆಲ್ಲ ಶುಭವಾಗಲಿದೆ ಎಂಬುದನ್ನು ರಾಶಿ ಆಧಾರದಲ್ಲಿ ನೋಡೋಣ. 

ಮೇಷ(Aries)
ನಿಮ್ಮ ಕೆಲಸಗಳ ಮೇಲೆ ಗಮನ ಕೇಂದ್ರೀಕರಿಸುವುದನ್ನು ಮುಂದುವರಿಸಿ. ಶನಿಯು 10ನೇ ಮನೆಯಲ್ಲಿದ್ದಾನೆ. ಅಂದರೆ ಸ್ವಗೃಹದಲ್ಲಿ. ಹಾಗಾಗಿ, ಸದ್ಯ 11ನೇ ಮನೆಯಲ್ಲಿರುವ ಗುರುವಿನ ಬೆಂಬಲದಿಂದ ಉತ್ತಮ ಫಲಿತಾಂಶಗಳು ದೊರೆಯುತ್ತವೆ. ಏಪ್ರಿಲ್‌ನಲ್ಲಿ ಶನಿಯು 11ನೇ ಮನೆಗೆ ಕಾಲಿಡಲಿದ್ದಾನೆ. ಕಳೆದ ವರ್ಷ ಹಾಕಿದ ಎಲ್ಲ ಶ್ರಮಕ್ಕೂ ಪ್ರತಿಫಲ ದೊರೆಯಲಿದೆ. ಆದರೆ, ನೀವು ದಾನ, ಧ್ಯಾನ ಹಾಗೂ ಆಂತರಿಕ ಬೆಳವಣಿಗೆಗಳ ಕಡೆ ಗಮನ ಹರಿಸಬೇಕು. ಇದರಿಂದ ಇಡೀ ವರ್ಷ ಆರ್ಥಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ಸಾಕಷ್ಟನ್ನು ಗಳಿಸಬಹುದು. ರಾಹು ಗೋಚಾರದಿಂದ ಮನಸ್ಥಿತಿಯಲ್ಲಿ ಆಸಕ್ತಿಕರ ಬದಲಾವಣೆ ಕಾಣಬಹುದು. ಇದರಿಂದಾಗಿ ಎಂಥದೇ ಸವಾಲನ್ನೂ ಎದುರಿಸಲು ಮಾನಸಿಕವಾಗಿ ಸಿದ್ಧರಿರುವಿರಿ. ವರ್ಷದ ಎರಡನೇ ಅವಧಿಯಲ್ಲಿ ಅವಿವಾಹಿತರಿಗೆ ಸಂಬಂಧ ಕೂಡಿ ಬರುತ್ತದೆ. ಮೊದಲನೇ ದಿನದಿಂದಲೇ ಆ ಕನೆಕ್ಷನ್ ಅನುಭವಿಸುವಿರಿ. 

ವೃಷಭ(Taurus)
ಈಗಾಗಲೇ ಸಂಬಂಧದಲ್ಲಿರುವವರಿಗೆ ಈ ವರ್ಷ ನೀವು ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಆರೋಗ್ಯ ಸಮಸ್ಯೆಗಳನ್ನು ಯಾವತ್ತೂ ನಿರ್ಲಕ್ಷಿಸಬಾರದು. ಉತ್ತಮ ಡಯಟ್ ಹಾಗೂ ಜೀವನಶೈಲಿ ಅನುಸರಿಸಿ. ದೇಹಾರೋಗ್ಯವಿದ್ದರೆ ಮನಸ್ಸೂ ಆರೋಗ್ಯಕರವಾಗಿರುವುದು. ನಿಮ್ಮ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಇತರೆ ಜನರಿಂದ ಈ ವರ್ಷ ಸಾಕಷ್ಟು ಬೆಂಬಲ ಸಿಗಲಿದೆ. ನಿಮ್ಮ ಯೋಜನೆಗಳನ್ನು ಜಾರಿಗೊಳಿಸಲು ಈಗ ಸಮಯ ಬಂದಿದೆ. ಯಶಸ್ಸಿನ ರುಚಿ ನೋಡುವಿರಿ. 

ಮಿಥುನ(Gemini)
ನಿಮ್ಮ ಗುರುಹಿರಿಯರ ಕಡೆಯಿಂದ ಈ ವರ್ಷ ಸಾಕಷ್ಟು ಅವಕಾಶಗಳು ನಿಮ್ಮ ಬಳಿ ಬರಲಿವೆ. ಎಲ್ಲ ಕೆಲಸಗಳ ಪ್ರತಿಫಲ ಏಪ್ರಿಲ್‌ನಿಂದಲೇ ಬರಲಾರಂಭಿಸುತ್ತದೆ. ನಿಮ್ಮ ಉದ್ಯೋಗದಲ್ಲೂ ಯಶಸ್ಸು ಪಡೆಯುವಿರಿ. ಸಮಾಜ ಸೇವೆ, ಪ್ರವಾಸ, ಆಹಾರ, ಮಾನಸಿಕ ಆರೋಗ್ಯ, ಲೈಫ್ ಸೈನ್ಸ್, ಪಬ್ಲಿಕ್ ಸ್ಪೀಕಿಂಗ್, ಕಲೆ ಮತ್ತು ಸಾಹಿತ್ಯ ರಂಗದಲ್ಲಿರುವವರು ಅಪಾರ ಯಶಸ್ಸು ಕಾಣುತ್ತಾರೆ. ಈಗಾಗಲೇ ಸಂಬಂಧದಲ್ಲಿರುವವರು ಮೇ ನಂತರ ವಿವಾಹವಾಗುತ್ತಾರೆ. 

ಕಟಕ(Cancer)
ವೃತ್ತಿಯಾಗಲೀ, ಪ್ರೇಮ ಜೀವನವೇ ಆಗಲೀ, ಈ ವರ್ಷ ಕಟಕ ರಾಶಿಯವರಿಗೆ ಅದ್ಬುತವಾಗಿರಲಿದೆ. ಈ ವರ್ಷ ನಿಮ್ಮೆಲ್ಲ ಬಯಕೆಗಳು ಈಡೇರಲು ಪೂರ್ತಿ ಪ್ರಯತ್ನ ಹಾಕಿದಿರಾದರೆ ಯಶಸ್ಸು ಖಚಿತ. ಮನೆಯ ಸದಸ್ಯರ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನ ವಹಿಸಿ. ನಿಮ್ಮ ಹಾಗೂ ಸಂಗಾತಿ ನಡುವೆ ಅಂತರ ಹೆಚ್ಚಾಗದಂತೆ ಎಚ್ಚರ ವಹಿಸಿ. ನಿಮ್ಮ ಮಾನಸಿಕ ಹಾಗೂ ಭಾವನಾತ್ಮಕ ಶಕ್ತಿಯೇ ನಿಮ್ಮ ಸಂಗಾತಿ ಎಂಬುದು ನೆನಪಿರಲಿ. ಇನ್ನೂ ಓದುತ್ತಿರುವವರು ವಿಜ್ಞಾನದ ಕಡೆ ಗಮನ ಹರಿಸಿ. ದೈಹಿಕವಾಗಿ ಚಟುವಟಿಕೆಯಿಂದಿರಿ. ಫಿಟ್ನೆಸ್ ಕಡೆ ಗಮನ ಹರಿಸಿ. 

Vastu Shastra: ಈ ಎಂಟು ವಸ್ತುಗಳನ್ನು ತಪ್ಪಿಯೂ ಯಾರಿಗೂ ಉಡುಗೊರೆ ನೀಡಬೇಡಿ!

ಸಿಂಹ(Leo)
ಸಿಂಗಲ್ ಆಗಿರುವವರು ಸಂಗಾತಿ ಹುಡುಕಿಕೊಳ್ಳಲು ಈ ವರ್ಷ ಸಕಾಲ. ಏಪ್ರಿಲ್‌ನಲ್ಲಿ ನಿಮ್ಮ ಸಂಗಾತಿಯ ಮುಚ್ಚಿಟ್ಟ ಪ್ರತಿಭೆ ಹಾಗೂ ಗುಣಗಳು ಬೆಳಕಿಗೆ ಬರಲಿವೆ. ಸಂವಹನ ಕಲೆ ಉತ್ತಮಪಡಿಸಿಕೊಳ್ಳುವತ್ತ ಗಮನ ಕೊಡಿ. ಇದರಿಂದ ಸಂಬಂಧಗಳು ಉತ್ತಮಗೊಳ್ಳುತ್ತವೆ. ಆರೋಗ್ಯದ ಕಡೆ ಹೆಚ್ಚಿನ ಲಕ್ಷ್ಯ ಅಗತ್ಯ, ಲೈಫ್‌ಸ್ಟೈಲ್ ಚೆನ್ನಾಗಿದ್ದರೆ ತಲೆಬಿಸಿ ಇಲ್ಲ. ವೃತ್ತಿ ಜೀವನ ಚೆನ್ನಾಗಿರಲಿದೆ. 

ಕನ್ಯಾ(Virgo)
ಸಿಂಗಲ್ ಆಗಿರುವವರಿಗೆ ಸಂಗಾತಿ ಸಿಗುವರು. ಫೈನಾನ್ಸ್‌ನಲ್ಲಿರುವವರಿಗೆ ಈ ವರ್ಷ ತುಂಬಾ ಚೆನ್ನಾಗಿರಲಿದೆ. ಸಮಸ್ಯೆಗಳ ಆಳ ಅರ್ಥ ಮಾಡಿಕೊಳ್ಳುವ, ಚೆನ್ನಾಗಿ ಯೋಜಿಸುವ ಹಾಗೂ ಕಾರ್ಯರೂಪಕ್ಕೆ ತರುವ ನಿಮ್ಮ ಗುಣ ನಿಮ್ಮನ್ನು ಕಾಪಾಡಲಿದೆ. ವರ್ಷದ ಎರಡನೇ ಭಾಗದಲ್ಲಿ ವೃತ್ತಿ ಜೀವನದಲ್ಲಿ ಸಾಕಷ್ಟು ಲಾಭಗಳಿವೆ. ಸಂವಹನ, ಸಂಗೀತ, ಫೈನ್ ಆರ್ಟ್ಸ್, ಜರ್ನಲಿಸಂ, ಬಿಸ್ನೆಸ್, ಟ್ರಾವೆಲ್ ವೃತ್ತಿರಂಗದಲ್ಲಿರುವವರಿಗೆ ಉತ್ತಮ ವರ್ಷ. 

ತುಲಾ(Libra)
ಸಿಂಗಲ್ ಆಗಿರುವವರಿಗೆ ಸಂಗಾತಿ ಪಡೆಯಲು ಸಾಕಷ್ಟು ಅವಕಾಶಗಳು ದೊರೆಯುತ್ತವೆ. ಈ ವರ್ಷ ಆಗುವ ವಿವಾಹಗಳು ಉತ್ತಮವಾಗಿರಲಿವೆ. ಧೀರ್ಘಕಾಲಿಕವಾಗಿರಲಿವೆ. ಗಡಿಬಿಡಿಯಲ್ಲಿ ಯಾವ ನಿರ್ಧಾರವನ್ನೂ ಮಾಡಬೇಡಿ. ಚೆನ್ನಾಗಿ ಯೋಚಿಸಿ ಮಾಡಿದ್ದು ಕೈ ಕೊಡದು. ಗುರಿ ಕಡೆ ಶ್ರದ್ಧೆಯಿಂದ ಕೆಲಸ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. 

Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?

ವೃಶ್ಚಿಕ(Scorpio)
ಈ ವರ್ಷ ನೀವು ನಾಯಕತ್ವ ವಹಿಸಿಕೊಂಡು ಇತರರಿಗೆ ಮಾದರಿಯಾಗುವಿರಿ. ವರ್ಕ್- ಲೈಫ್ ಬ್ಯಾಲೆನ್ಸ್ ಮಾಡುವುದು ಕಷ್ಟವೆನಿಸಬಹುದು. ಯಾವುದಕ್ಕೆ ಪ್ರಾಮುಖ್ಯತೆ ಕೊಡಬೇಕೆಂಬುದು ಗೊತ್ತಿರಲಿ. ಈಗಾಗಲೇ ವಿವಾಹವಾಗಿರುವ ದಂಪತಿ ಮಕ್ಕಳ ಬಗ್ಗೆ ಯೋಚಿಸಲು ಈ ವರ್ಷ ಸಕಾಲವಾಗಿದೆ. ಇನ್ನು ಮಕ್ಕಳಿರುವವರಿಗೆ ಈ ವರ್ಷ ಮಕ್ಕಳಿಂದ ಸಾಕಷ್ಟು ಸಂತಸ ಸಿಗಲಿದೆ.ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ. 

ಧನು(Sagittarius)
ವ್ಯಾಪಾರ, ಉದ್ಯಮ, ಅವಕಾಶಗಳ ಹುಡುಕಾಟದಲ್ಲಿರುವವರು ತೆಗೆದುಕೊಳ್ಳುವ ಸವಾಲಿನ ನಿರ್ಧಾರಗಳು ಉಲ್ಟಾ ಹೊಡೆಯಬಹುದು. ವಿವಾಹಿತರು ತಮ್ಮ ಕುಟುಂಬದ ಗುರಿಗಳತ್ತ ಹೆಚ್ಚು ಗಮನ ವಹಿಸಬೇಕು. ಮಾಲಿನ್ಯಯುತ ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳಬೇಡಿ. ಸರಿಯಾಗಿ ಯೋಜಿಸಿದರೆ ಈ ವರ್ಷ ನಿಮಗೆ ಚೆನ್ನಾಗಿರಲಿದೆ. ಕನಸುಗಳು ಮುಖ್ಯ ಆದರೆ, ಗುರಿ ಹಾಕಿಕೊಳ್ಳುವುದರಿಂದ ಯಶಸ್ಸಿನತ್ತ ಸಾಗುವಿರಿ. 

ನಿಮ್ಮ ಹೆಸರು A ಅಕ್ಷರದಿಂದ ಶುರುವಾಗುತ್ತಾ? ಅದು ನಿಮ್ಮ ಬಗ್ಗೆ ಏನು ಹೇಳ್ತಿದೆ ಗೊತ್ತಾ?

ಮಕರ(Capricorn)
ಒಂಟಿಯಾಗಿರುವವರು ಜಂಟಿಯಾಗಲು ಉತ್ತಮ ಸಮಯ. ಕುಟುಂಬದ ಸಂಪೂರ್ಣ ಸಹಕಾರ ಇರುತ್ತದೆ. ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಲು ಸಕಾಲವಾಗಿದೆ. ಇಲ್ಲವೇ ಕೃಷಿ ಸಂಬಂಧಿ ಚಟುವಟಿಕೆ, ದೊಡ್ಡ ಮಟ್ಟದ ಸೇವೆ ನೀಡುವ ಉದ್ಯಮಗಳಲ್ಲಿ ಹೂಡಿಕೆ ಮಾಡಬಹುದು. ವೃತ್ತಿ ಜೀವನ ತುಂಬಾ ಚೆನ್ನಾಗಿರಲಿದೆ. 

ಕುಂಭ(Aquarius)
ವೃತ್ತಿ ವಿಷಯವಾಗಿ ಹೆಚ್ಚಿನ ಶಿಸ್ತು ಹಾಗೂ ಸ್ಪಷ್ಟ ಯೋಚನೆಗಳಿರಬೇಕು. ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಸಮಯ. ವರ್ಷದ ಎರಡನೇ ಅವಧಿಯಲ್ಲಿ ಹಣದ ವಿಷಯಕ್ಕೆ ಬಲ ಸಿಗಲಿದೆ. ಹಾಸ್ಯಪ್ರಜ್ಞೆ ಜಾಗೃತವಾಗಿಟ್ಟುಕೊಳ್ಳಿ. ಜೀವನ ಚೆಂದ ಎನಿಸುತ್ತದೆ. ನಿಮ್ಮ ಸಂವಹನ ಕೌಶಲ್ಯದ ಮೇಲೆ ಹೆಚ್ಚು ಕೆಲಸ ಮಾಡಿ. ಯೋಗ, ಧ್ಯಾನ ಹಾಗೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಿ. 

ಮೀನ(Pisces)
ಸಾಡೇಸಾತಿ ಶುರುವಾಗುತ್ತದೆ. ನೀವು ಹೆಚ್ಚು ಶಿಸ್ತುಬದ್ಧವಾಗಿರಬೇಕು. ಹೊಸ ಹೊಸ  ಅವಕಾಶಗಳು ಎದುರಾಗಲಿವೆ. ಆಧ್ಯಾತ್ಮಿಕ ಶಕ್ತಿಯಿಂದಾಗಿ ಧನಾತ್ಮಕ ಬದಲಾವಣೆ ಸಾಧ್ಯ. ಹಳೆಯ ಕೆಲಸಗಳಿಗೆ ಈಗ ಫಲಿತಾಂಶ ಸಿಗಲಿದೆ. ವೃತ್ತಿಜೀವನದಲ್ಲಿ ಶಸ್ಸು ಸಾಧಿಸುವಿರಿ. 
 

Latest Videos
Follow Us:
Download App:
  • android
  • ios