Asianet Suvarna News Asianet Suvarna News

Diwali 2022: ಧನ ತ್ರಯೋದಶಿ ದಿನ ರಾಶಿ ನೋಡಿ ಖರೀದಿ ಮಾಡಿ

ದೀಪಾವಳಿ ಹತ್ತಿರ ಬರ್ತಿದೆ. ಧನ ತ್ರಯೋದಶಿಯಂದು ಏನು ಖರೀದಿ ಮಾಡ್ಬೇಕು ಎಂಬುದರ ಬಗ್ಗೆ ಜನರು ಈಗ್ಲೇ ಪ್ಲಾನ್ ಮಾಡ್ತಿದ್ದಾರೆ. ನೀವೂ ಧನ ತ್ರಯೋದಶಿ ದಿನ ಏನ್ ಖರೀದಿ ಮಾಡೋದು ಎಂಬ ಚಿಂತೆಯಲ್ಲಿದ್ದರೆ ನಿಮ್ಮ ರಾಶಿಗೆ ತಕ್ಕಂತೆ ಖರೀದಿಗೆ ಮುಂದಾಗಿ.
 

Things To Buy According To Zodiac Sign
Author
First Published Oct 13, 2022, 3:15 PM IST | Last Updated Oct 13, 2022, 3:15 PM IST

ದೀಪಾವಳಿ ಹಬ್ಬದ ಸಂಭ್ರಮವನ್ನು ದುಪ್ಟಟ್ಟು ಮಾಡೋದು ಧನ ತ್ರಯೋದಶಿ. ಯಾಕೆಂದ್ರೆ ಆ ದಿನ ಕೆಲ ವಸ್ತುಗಳ ಖರೀದಿಗೆ ಮಹತ್ವವಿದೆ. ಧನ ತ್ರಯೋದಶಿ ದಿನ, ಧನ್ವಂತರಿ, ತಾಯಿ ಲಕ್ಷ್ಮಿ, ಕುಬೇರ ಹಾಗೂ ಗಣೇಶನ ಪೂಜೆಯನ್ನು ಮಾಡಲಾಗುತ್ತದೆ. ಹಾಗೆ ಬೆಳ್ಳಿ, ಬಂಗಾರ, ಹಿತ್ತಾಳೆ ವಸ್ತುಗಳು ಸೇರಿದಂತೆ ಅನೇಕ ವಸ್ತುಗಳನ್ನು ಶಾಪಿಂಗ್ ಮಾಡಲಾಗುತ್ತದೆ. ಧನ ತ್ರಯೋದಶಿ ದಿನ ಶಾಪಿಂಗ್ ಗೆ ಮಹತ್ವವಿದೆ. ಈ ದಿನ ಚಿನ್ನ, ಬೆಳ್ಳಿ, ಪೊರಕೆ ಖರೀದಿ ಮಾಡಿದ್ರೆ ತಾಯಿ ಲಕ್ಷ್ಮಿ ಹಾಗೂ ಕುಬೇರನ ಕೃಪೆ ನಿಮ್ಮ ಮೇಲಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗುತ್ತದೆ. ಧನ ತ್ರಯೋದಶಿ ದಿನ ರಾಶಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿ ಮಾಡಿದ್ರೆ ಸಂತೋಷ, ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಸಂಪತ್ತಿನ ದೇವತೆಯ ಆಶೀರ್ವಾದ ನಿಮಗೆ ಬೇಗ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ಇಂದು ನಾವು ಧನ ತ್ರಯೋದಶಿ ದಿನ ಯಾವ ವಸ್ತುಗಳನ್ನು ಯಾವ ರಾಶಿಯವರು ಖರೀದಿ ಮಾಡಬೇಕು ಎಂಬುದನ್ನು ತಿಳಿಸ್ತೇವೆ.

ರಾಶಿಗೆ ಅನುಗುಣವಾಗಿರಲಿ ಶಾಪಿಂಗ್ (Shopping) :

ಮೇಷ ರಾಶಿ : ಮೇಷ ರಾಶಿಯವರು ಧನ ತ್ರಯೋದಶಿ (Dhanteras) ದಿನದಂದು  ಬೆಳ್ಳಿಯ ವಸ್ತು, ಪಾತ್ರೆಗಳು ಅಥವಾ ಆಭರಣಗಳನ್ನು ಖರೀದಿಸಬೇಕು. ಬೆಳ್ಳಿ ವಸ್ತು ಖರೀದಿ ಮಾಡಿದ್ರೆ ಈ ರಾಶಿಯವರಿಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಸುಖ, ಸಮೃದ್ಧಿಯ ಸಂಪತ್ತು ಲಭಿಸುತ್ತದೆ.

ವೃಷಭ ರಾಶಿ : ವೃಷಭ ರಾಶಿಯ ಜನರು ಧನ ತ್ರಯೋದಶಿಯ ಶುಭ ಸಂದರ್ಭದಲ್ಲಿ ಬೆಳ್ಳಿ (Silver) ಯ ಪಾತ್ರೆಗಳನ್ನು ಖರೀದಿಸಬೇಕು. ಇದು ಅವರಿಗೆ ವಿಶೇಷ ಪ್ರಯೋಜನಗಳನ್ನು ನೀಡುತ್ತದೆ. ಸಂಪತ್ತಿನ ದೇವರಾದ ಕುಬೇರ, ಬೆಳ್ಳಿ ಪ್ರಿಯ. ಹಾಗಾಗಿ ಈ ದಿನ ಬೆಳ್ಳಿ ಪಾತ್ರೆ ಖರೀದಿ ಮಾಡಿದ್ರೆ ಕುಬೇರ ಸಂತುಷ್ಟನಾಗುತ್ತಾನೆ. 

ಮಿಥುನ ರಾಶಿ : ಮಿಥುನ ರಾಶಿಯ ಜನರು ಧನ ತ್ರಯೋದಶಿ ದಿನ ಚಿನ್ನದ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸಿ. ನೀವು ಆ ದಿನ ಚಿನ್ನ ಖರೀದಿ ಮಾಡಿದ್ರೆ ಲಾಭ ಹೆಚ್ಚು. ಬಂಗಾರ ಖರೀದಿ ಸಾಧ್ಯವಿಲ್ಲ ಎನ್ನುವವರು ಹಸಿರು ಬಣ್ಣದ ಯಾವುದೇ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಬಹುದು.  

ಕರ್ಕ ರಾಶಿ :  ಧನ ತ್ರಯೋದಶಿ ದಿನ ಕರ್ಕ ರಾಶಿಯ ಜನರು ಬೆಳ್ಳಿ ಯಂತ್ರವನ್ನು ಖರೀದಿಸಿದ್ರೆ ಒಳ್ಳೆಯ ಫಲ ಸಿಗುತ್ತದೆ. ಇದ್ರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಧನ್ವಂತರಿ ದೇವರ ಆಶೀರ್ವಾದ ಇವರ ಮೇಲೆ ಇರುತ್ತದೆ.

ಸಿಂಹ ರಾಶಿ : ಧನ ತ್ರಯೋದಶಿ ದಿನ ಸಿಂಹ ರಾಶಿಯವರು ಚಿನ್ನ ಖರೀದಿಸಿದ್ರೆ ಒಳ್ಳೆಯದು. ಇದ್ರಿಂದ ಮಂಗಳಕರ ಸುದ್ದಿ ನಿಮಗೆ ಸಿಗಲಿದೆ. ಚಿನ್ನದ ನಾಣ್ಯ, ಆಭರಣಗಳು ಅಥವಾ ಪಾತ್ರೆ ಇವುಗಳಲ್ಲಿ ಯಾವುದನ್ನು ಬೇಕಾದ್ರೂ ನೀವು ಖರೀದಿ ಮಾಡಬಹುದು. ಚಿನ್ನ ಅಸಾಧ್ಯ ಎನ್ನುವವರು ಧಾರ್ಮಿಕ ಪುಸ್ತಕವನ್ನು ಖರೀದಿ ಮಾಡಿ. 

ಕನ್ಯಾ ರಾಶಿ : ಕನ್ಯಾ ರಾಶಿಯ ಜನರು ಈ ಬಾರಿಯ ಧನ ತ್ರಯೋದಶಿಯಂದು ದಂತದಿಂದ ಮಾಡಿದ ವಸ್ತುಗಳನ್ನು ಖರೀದಿಸಿದ್ರೆ ಒಳ್ಳೆಯದು. ಇದ್ರಿಂದ ಮನೆಯಲ್ಲಿ ಆಹಾರ ಮತ್ತು ಹಣದ ಕೊರತೆ ಎದುರಾಗುವುದಿಲ್ಲ.

ತುಲಾ ರಾಶಿ : ತುಲಾ ರಾಶಿಯವರು ಈ ಶುಭ ಸಂದರ್ಭದಲ್ಲಿ ಸೌಂದರ್ಯ ವರ್ದಕಗಳನ್ನು ಖರೀದಿ ಮಾಡಿದ್ರೆ ಒಳಿತು. ನೀವು ಬೆಳ್ಳಿ ನಾಣ್ಯಗಳನ್ನು ಸಹ ಖರೀದಿಸಬಹುದು. ಇದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.

ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಜನರು ಧನ ತ್ರಯೋದಶಿ ದಿನ ಚಿನ್ನದ ಆಭರಣ ಅಥವಾ ನಾಣ್ಯ ಖರೀದಿಸಿದ್ರೆ ಒಳ್ಳೆಯದು. ತಾಮ್ರದ ಪಾತ್ರೆ ಸಹ ಖರೀದಿಸಬಹುದು. ಹಿತ್ತಾಳೆಯಿಂದ ಮಾಡಿದ ವಸ್ತು ಖರೀದಿಸಿದ್ರೂ ಲಾಭ ಸಿಗುತ್ತದೆ.  

ಧನು ರಾಶಿ : ಬೆಳ್ಳಿ ಪಾತ್ರೆ ಮತ್ತು ವಾಹನ ಖರೀದಿ ಈ ರಾಶಿಯವರಿಗೆ ಶುಭ ತರಲಿದೆ. ಬೆಳ್ಳಿ ಅತ್ಯಂತ ಮಂಗಳಕರವೆನ್ನಲಾಗುತ್ತದೆ. ಹಾಗಾಗಿ ಧನ ತ್ರಯೋದಶಿಯಂದು ಬೆಳ್ಳಿ ಖರೀದಿಸಬೇಕು. ಇದು ಮನೆಯಲ್ಲಿ ಸುಖ, ಸಮೃದ್ಧಿ ನೀಡುತ್ತದೆ.  

Deepavali 2022 : ಧನ ತ್ರಯೋದಶಿ ದಿನ ಹಿತ್ತಾಳೆ ಖರೀದಿ ಹಿಂದಿದೆ ಕಾರಣ

ಮಕರ ರಾಶಿ : ವಾಹನ ಮತ್ತು ಅಲಂಕಾರಿಕ ವಸ್ತುಗಳನ್ನು ಈ ರಾಶಿಯವರು ಖರೀದಿ ಮಾಡಬಹುದು. ಬೆಳ್ಳಿ ಮತ್ತು ಉಕ್ಕಿನ ಪಾತ್ರೆಗಳನ್ನು ಸಹ ಖರೀದಿಸುವುದು ಪ್ರಯೋಜನಕಾರಿ. ವಾಹನ ಖರೀದಿಸುತ್ತಿದ್ದರೆ ಧನ ತ್ರಯೋದಶಿಗೆ ಒಂದು ದಿನ ಮೊದಲೇ ಹಣ ಪಾವತಿ ಮಾಡಿ.

ಕುಂಭ ರಾಶಿ : ಕುಂಭ ರಾಶಿಯವರು ಧನ ತ್ರಯೋದಶಿ ದಿನ ಬೆಳ್ಳಿ ಮತ್ತು ಸ್ಟೀಲ್ ಪಾತ್ರೆ ಖರೀದಿಸಬೇಕು. ಇದ್ರಿಂದ ಕುಬೇರನ ಕೃಪೆಗೆ ಪಾತ್ರರಾಗಬಹುದು.

Food Astro: ಸಿಹಿ ಪದಾರ್ಥ ಸೇವನೆ ಎಷ್ಟು ಒಳ್ಳೇದು? ಎಷ್ಟು ಕೆಟ್ಟದ್ದು?

ಮೀನ ರಾಶಿ :  ಧನ ತ್ರಯೋದಶಿ ದಿನ ಮೀನ ರಾಶಿಯವರು ಬೆಳ್ಳಿ ಪಾತ್ರೆ ಅಥವಾ ಬೆಳ್ಳಿ ಆಭರಣ ಖರೀದಿಸಬೇಕು. ಈ ರಾಶಿಯವರಿಗೆ ಬೆಳ್ಳಿ ಮಂಗಳಕರ ಧಾತುವಾಗಿದೆ. ಬೆಳ್ಳಿ ಖರೀದಿ ಮಾಡಿದ್ರೆ ಸಂಪತ್ತಿನಲ್ಲಿ ವೃದ್ಧಿಯಾಗುತ್ತದೆ.
 

Latest Videos
Follow Us:
Download App:
  • android
  • ios