Astrology in Kannada: ನಕಾರಾತ್ಮಕ ಆಲೋಚನೆ ಮನುಷ್ಯನನ್ನು ಹಾಳು ಮಾಡುತ್ತೆ. ಹಾಗೆ ಪಾಸಿಟಿವ್ ಆಲೋಚನೆಗಳು ನಮಗೆ ಧೈರ್ಯ ನೀಡಿ, ಹೊಸ ಕೆಲಸಗಳನ್ನು ಮಾಡಲು ಪ್ರೋತ್ಸಾಹ ನೀಡುತ್ತದೆ. ಜ್ಯೋತಿಷ್ಯ ಹಾಗೂ ಮನುಷ್ಯನ ಸ್ವಭಾವದ ಮಧ್ಯೆ ನಂಟಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವ ಹುಡುಗಿಯರು ಧನಾತ್ಮಕವಾಗಿ ಆಲೋಚನೆ ಮಾಡ್ತಾರೆ ಎಂಬುದನ್ನು ನೋಡೋಣ.
ಈಗ ಹುಡುಗಿಯರು ಯಾವುದ್ರಲ್ಲೂ ಕಮ್ಮಿಯಿಲ್ಲ. ಎಲ್ಲ ಕ್ಷೇತ್ರದಲ್ಲೂ ಹುಡುಗಿಯರು ಎತ್ತಿದ ಕೈ. ಆದರೆ ಜ್ಯೋತಿಷ್ಯ (Astrology) ದ ಪ್ರಕಾರ, ಎಲ್ಲ ರಾಶಿ (Zodiac Signs) ಯ ಹುಡುಗಿಯರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಹುಡುಗಿಯ ಸ್ವಭಾವ, ಯಶಸ್ಸು, ಸಾಧನೆಗೆ ಆಕೆಯ ಜಾತಕ (Horoscope), ಗ್ರಹ, ರಾಶಿಗಳು ಕೂಡ ಪ್ರಭಾವ ಬೀರುತ್ತವೆ. ಕೆಲವು ರಾಶಿಯ ಹುಡುಗಿಯರು ತುಂಬಾ ಬುದ್ಧಿವಂತರು. ಅವರು ಎಲ್ಲರ ಹೃದಯ ಗೆಲ್ಲುವಲ್ಲಿ ಮುಂದಿರುತ್ತಾರೆ. ಅವರು ತಮ್ಮ ವ್ಯಕ್ತಿತ್ವದ ಬಗ್ಗೆ ತುಂಬಾ ಧನಾತ್ಮಕವಾಗಿರುತ್ತಾರೆ (Positive Vibes). ಯಾವಾಗ ಗ್ರಹಗಳು ಅವರ ಮೇಲೆ ದೃಷ್ಟಿ ಬೀರುತ್ತವೆಯೋ ಆಗ ಈ ಹುಡುಗಿಯರು ತಮ್ಮ ಕಲೆಯಿಂದ ಎಲ್ಲರ ಮನ ಗೆಲ್ಲುತ್ತಾರೆ. ಅವರು ಹೋದಲ್ಲೆಲ್ಲಾ ವಿಭಿನ್ನ ರೀತಿಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಆದ್ದರಿಂದ ತಾಯಿ ಲಕ್ಷ್ಮಿಯ ವಿಶೇಷ ಕೃಪೆಯೂ ಅವರ ಮೇಲೆ ಉಳಿದಿದೆ. ಸದಾ ಉತ್ಸಾಹದಿಂದಿರುವ ಹಾಗೂ ಎಲ್ಲರ ಮನಸ್ಸು ಗೆಲ್ಲುವ ಹುಡುಗಿಯರು ಯಾರು? ಯಾವ ರಾಶಿಯ ಹುಡುಗಿಯರು ಸದಾ ಪಾಸಿಟಿವ್ ಆಗಿ ಆಲೋಚನೆ ಮಾಡ್ತಾರೆ ಎಂಬುದನ್ನು ನಾವಿಂದು ಹೇಳ್ತೇವೆ.
ಸದಾ ಸಕಾರಾತ್ಮಕವಾಗಿ ಆಲೋಚನೆ ಮಾಡ್ತಾರೆ ಈ ರಾಶಿಯ ಹುಡುಗಿಯರು :
ತುಲಾ ರಾಶಿಯ ಹುಡುಗಿಯರು : ತುಲಾ ರಾಶಿಯ ಹುಡುಗಿಯರು ತುಂಬಾ ವೇಗವಾಗಿರುತ್ತಾರೆ. ಕಂಪ್ಯೂಟರ್ ಗಿಂತ ವೇಗವಾಗಿ ಆಲೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಹುಡುಗಿಯರು ಯಾವಾಗಲೂ ತಮ್ಮ ಮನೆ ಹಾಗೂ ಮನೆಯವರ ಜೊತೆ ಸಂಪರ್ಕದಲ್ಲಿರುತ್ತಾರೆ. ಅವರು ತಮ್ಮ ಸಂಬಂಧಗಳನ್ನು ತುಂಬಾ ಗೌರವಿಸುತ್ತಾರೆ. ತನಗೆ ವಿಶೇಷವಾದವರನ್ನು ಸದಾ ಸಂತೋಷವಾಗಿಡಲು ಕೈಲಾದ ಎಲ್ಲ ಪ್ರಯತ್ನವನ್ನೂ ಅವರು ಮಾಡುತ್ತಾರೆ. ತುಲಾ ರಾಶಿಯ ಹುಡುಗಿಯರು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಅವರು ಅದನ್ನು ಮಾಡಿ ಮುಗಿಸುವವರೆಗೂ ಬಿಡುವುದಿಲ್ಲ. ಛಲವಿಟ್ಟು ಕೆಲಸ ಮಾಡ್ತಾರೆ. ಅತ್ತೆಯ ಮನೆಯಲ್ಲಿ ತುಂಬಾ ಒಳ್ಳೆಯ ಸೊಸೆ ಎನ್ನಿಸಿಕೊಳ್ಳುವ ಇವರು ಎಲ್ಲರ ಮೆಚ್ಚುಗೆ ಗಳಿಸುವುದ್ರಲ್ಲಿ ಮುಂದಿರುತ್ತಾರೆ. ಯಾರಿಗೂ ನೋವುಂಟು ಮಾಡದೆ ನಡೆದುಕೊಳ್ಳುವ ಸ್ವಭಾವ ಇವರದ್ದಾಗಿರುತ್ತದೆ.
ಇದನ್ನೂ ಓದಿ: GEMSTONES ASTROLOGY 2022: ರತ್ನ ಪ್ರಪಂಚದಲ್ಲಿ ನಿಮ್ಮ ರಾಶಿಯ ಅದೃಷ್ಟ ರತ್ನವಿದು..
ವೃಷಭ ರಾಶಿಯ ಹುಡುಗಿಯರು : ವೃಷಭ ರಾಶಿಯ ಹುಡುಗಿಯರ ವ್ಯಕ್ತಿತ್ವ ಎಲ್ಲರಿಗಿಂತ ಭಿನ್ನ. ಅವರು ತಮ್ಮ ಆಹ್ಲಾದಕರ ಸ್ವಭಾವದಿಂದ ಜನರ ಮನಸ್ಸನ್ನು ಗೆಲ್ಲುವಲ್ಲಿ ಸದಾ ಯಶಸ್ವಿಯಾಗ್ತಾರೆ. ಅವರು ಸ್ವಭಾವತಃ ತುಂಬಾ ಸಕಾರಾತ್ಮಕವಾಗಿರುತ್ತಾರೆ. ಅವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇದರಿಂದಾಗಿ ಅವರ ಸುತ್ತಲಿನ ಪರಿಸರವೂ ಆಹ್ಲಾದಕರವಾಗಿರುತ್ತದೆ. ಅವರು ತುಂಬಾ ಹಠಮಾರಿ ಮತ್ತು ಉತ್ಸಾಹದಿಂದ ತುಂಬಿದವರಾಗಿರುತ್ತಾರೆ. ಪ್ರತಿಯೊಂದು ಕೆಲಸವನ್ನು ಹಾಗೂ ಸಂಗತಿಯನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವ ಸ್ವಭಾವ ಅವರದ್ದು. ವೃಷಭ ರಾಶಿಯ ಹುಡುಗಿಯನ್ನು ಮದುವೆಯಾಗುವ ಹುಡುಗ ಸದಾ ಖುಷಿಯಾಗಿರಬಲ್ಲ. ವೃಷಭ ರಾಶಿಯ ಹುಡುಗಿ ಮನೆಗೆ ಬಂದ್ರೆ ಲಕ್ಷ್ಮಿ ಬಂದಂತೆ. ಆಕೆಯನ್ನು ಕೈಹಿಡಿದ ಹುಡುಗ ಹಾಗೂ ಆತನ ಮನೆಯವರಿಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.
ಇದನ್ನೂ ಓದಿ: Vastu Tips : ಪತಿ – ಪತ್ನಿ ಮಧ್ಯೆ ಸರಸ ಹೆಚ್ಚಿಸುವ ಕೊಳಲು
ಧನು ರಾಶಿ ಹುಡುಗಿಯರು : ಧನು ರಾಶಿಯ ಹುಡುಗಿಯರು ಮೂಡಿ ಸ್ವಭಾವದವರು. ಆಗಾಗ ಅವರ ಮೂಡ್ ಬದಲಾಗುತ್ತಿರುತ್ತದೆ. ಆದ್ರೆ ತಮ್ಮ ಆಹ್ಲಾದಕರ ಸ್ವಭಾವದಿಂದ ಎಲ್ಲರ ಮನ ಗೆಲ್ಲುತ್ತಾರೆ. ಯಾವುದೇ ರೀತಿಯ ಪರಿಸ್ಥಿತಿಯನ್ನು ತುಂಬ ಹೃದಯದಿಂದ ಎದುರಿಸುತ್ತಾರೆ. ಅವರು ಯಾವುದೇ ಪರಿಸ್ಥಿತಿಯಲ್ಲಿ ಭಯಪಡುವುದಿಲ್ಲ. ಎಲ್ಲವನ್ನು ಆರಾಮವಾಗಿ ಎದುರಿಸುವ ಈ ರಾಶಿಯವರು ತಮ್ಮ ಕಾರ್ಯವೈಖರಿಯಿಂದ ಸಮಾಜದಲ್ಲಿ ವಿಭಿನ್ನ ರೀತಿಯ ಗುರುತನ್ನು ಸೃಷ್ಟಿಸುತ್ತಾರೆ. ಧನು ರಾಶಿ ಹುಡುಗಿಯರನ್ನು ಮದುವೆಯಾಗುವ ಹುಡುಗ ಕೂಡ ಅದೃಷ್ಟ ಮಾಡಿದ್ದಾನೆ ಎನ್ನಬಹುದು. ಯಾಕೆಂದ್ರೆ ಈ ರಾಶಿಯ ಹುಡುಗಿಯರು ಗಂಡನ ಜೊತೆ ತುಂಬಾ ಚೆನ್ನಾಗಿ ಬಾಳ್ವೆ ಮಾಡುತ್ತಾರೆ.
