Gemstones astrology 2022: ರತ್ನ ಪ್ರಪಂಚದಲ್ಲಿ ನಿಮ್ಮ ರಾಶಿಯ ಅದೃಷ್ಟ ರತ್ನವಿದು..
ರತ್ನಗಳೆಲ್ಲವೂ ಒಂದಕ್ಕಿಂದ ಒಂದು ಚೆಂದ. ಹಾಗಂಥ ಕೇವಲ ಆಭರಣವಾಗಿ ಅವನ್ನು ತೊಡಲಾಗುವುದಿಲ್ಲ. ಏಕೆಂದರೆ ರತ್ನಗಳಿಗೂ ಜ್ಯೋತಿಷ್ಯಕ್ಕೂ ಉಂಟು ನಂಟು. ಹೀಗಾಗಿ, ರಾಶಿ ಪ್ರಕಾರ, ನಿಮಗಾಗುವ ರತ್ನವನ್ನು ಮಾತ್ರ ಧರಿಸಿ. ಇಲ್ಲದಿದ್ದಲ್ಲಿ ಅಪಾಯವಾಗುವುದು.
ವಜ್ರ, ಮುತ್ತು, ಹವಳ, ಪಚ್ಚೆ.. ರತ್ನಗಳ ಹೆಸರು ಕೇಳಿದರೇ ಕಿವಿಯರಳುತ್ತದೆ. ನೋಡಿದಾಗ ಕಣ್ಣೂ ಅರಳುತ್ತದೆ. ಹಾಗೆಯೇ ತೊಟ್ಟಾಗ ಅದೃಷ್ಟವೂ ಅರಳುತ್ತದೆ. ಆದರೆ, ನೀವು ನಿಮ್ಮ ರಾಶಿಗೆ ಸರಿಯಾದ ರತ್ನವನ್ನು ಧರಿಸಿರಬೇಕಷ್ಟೇ.
ಹೌದು, ರತ್ನಗಳೆಲ್ಲವೂ ಚೆಂದವೆಂದೂ ಎಲ್ಲರೂ ಎಲ್ಲವನ್ನೂ ಧರಿಸಕೂಡದು ಎನ್ನುತ್ತದೆ ಜ್ಯೋತಿಷ್ಯ. ರತ್ನಗಳು ಕೇವಲ ಆಭರಣಗಳಲ್ಲ. ಅವೆಲ್ಲವೂ ಒಂದೊಂದು ಗ್ರಹಕ್ಕೆ ಸಂಬಂಧಿಸಿದೆ. ಮತ್ತು ಒಂದೊಂದು ಗ್ರಹವೂ ಕೆಲವೊಂದು ರಾಶಿಯ ಅಧಿಪತ್ಯ ಹೊಂದಿವೆ. ಹೀಗಾಗಿ, ಎಲ್ಲ ರತ್ನಗಳೂ ಎಲ್ಲರಿಗೂ ಆಗಿ ಬರುವುದಿಲ್ಲ. ಅವು ಹೊಂದದಿದ್ದಾಗ ಸಮಸ್ಯೆ ತರುತ್ತವೆ. ಮತ್ತೆ ಕೆಲ ರತ್ನಗಳು ಗ್ರಹ ಬಲ ಹೆಚ್ಚಿಸಿ ಅದೃಷ್ಟವನ್ನು ತಂದುಕೊಡುತ್ತವೆ. ಹಾಗಾದರೆ ನಿಮ್ಮ ರಾಶಿಯ ಪ್ರಕಾರ ನೀವು ಧರಿಸಬಹುದಾದ ರತ್ನ ಯಾವುದು, ಯಾವುದು ನಿಮಗೆ ಅದೃಷ್ಟ ತಂದುಕೊಡುತ್ತದೆ ನೋಡೋಣ.
ಮೇಷ(Aries)
ಮೇಷ ರಾಶಿಯ ಅಧಿಪತಿ ಮಂಗಳ ಗ್ರಹ. ಹಾಗಾಗಿ ಮೇಷ ರಾಶಿಯವರು ಹವಳ(Coral)ವನ್ನು ಧರಿಸಬೇಕು. ಈ ಕಲ್ಲನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಸ್ಥಿತಿ ಹೆಚ್ಚುತ್ತದೆ. ಈ ರತ್ನವನ್ನು ನಿಮ್ಮ ಬಲಗೈಯ ಕಿರುಬೆರಳಿಗೆ ಅಥವಾ ತೋರು ಬೆರಳಿಗೆ ಮಂಗಳವಾರ ಸ್ನಾನದ ನಂತರ ಧರಿಸಬೇಕು.
ವೃಷಭ(Taurus)
ವೃಷಭ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರು ವಜ್ರ(diamond) ಧರಿಸಬೇಕು. ಇದನ್ನು ಧರಿಸುವುದರಿಂದ ವೃಷಭ ರಾಶಿಯವರು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ಇದನ್ನು ಬಲಗೈಯ ಮಧ್ಯದ ಬೆರಳಿಗೆ ಶುಕ್ರವಾರದ ಸ್ನಾನದ ಬಳಿಕ ಧರಿಸಬೇಕು.
ಮಿಥುನ(gemini)
ಮಿಥುನ ರಾಶಿಯ ಅಧಿಪತಿ ಬುಧ. ಇವರು ಪಚ್ಚೆ ರತ್ನ ಧರಿಸಬೇಕು. ಪಚ್ಚೆ(emerald) ಧರಿಸುವುದರಿಂದ ನಿಮ್ಮ ಆರೋಗ್ಯ, ಆರ್ಥಿಕ ಕ್ಷೇತ್ರ, ಸಂತೋಷ, ಸಮೃದ್ಧಿ ಇತ್ಯಾದಿಗಳು ಹೆಚ್ಚುತ್ತವೆ. ಇದರೊಂದಿಗೆ, ನೀವು ಅನೇಕ ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ. ಮಿಥುನ ರಾಶಿಯವರು ಪಚ್ಚೆಯನ್ನು ಬುಧವಾರ ಸ್ನಾನ ಮಾಡಿದ ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸಬೇಕು.
ಈ ಬಾರಿಯ ಭಾಗಶಃ Solar Eclipse ಭಾರತದಲ್ಲಿ ಕಾಣುವುದೇ? ನೋಡುವುದು ಹೇಗೆ?
ಕಟಕ(Cancer)
ಕಟಕ ರಾಶಿಯ ಅಧಿಪತಿ ಚಂದ್ರ. ಈ ರಾಶಿಯವರು ಮುತ್ತ(pearl)ನ್ನು ಧರಿಸುವುದು ಶುಭವಾಗಿದೆ. ಇದರಿಂದ ಮಾನಸಿಕ ಕಾಯಿಲೆಗಳು, ಕಿರಿಕಿರಿಗಳಿಂದ ಮುಕ್ತರಾಗಬಹುದು. ಅಷ್ಟೇ ಅಲ್ಲ, ಈ ರತ್ನಧಾರಣೆಯಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ತುಂಬುತ್ತದೆ. ಸೋಮವಾರ ಸ್ನಾನದ ಬಳಿಕ ತಮ್ಮ ಬಲಗೈಯ ಉಂಗುರ ಬೆರಳಿಗೆ ಇದನ್ನು ಧರಿಸಬೇಕು.
ಸಿಂಹ(Leo)
ಸಿಂಹ ರಾಶಿಯ ಅಧಿಪತಿ ಸೂರ್ಯ. ಹಾಗಾಗಿ ಈ ರಾಶಿಯವರು ಮಾಣಿಕ್ಯ ಧರಿಸಬೇಕು. ಇದನ್ನು ಧರಿಸಿದ ನಂತರ, ನಿಮ್ಮ ವ್ಯವಹಾರದಲ್ಲಿ ಲಾಭ, ಉತ್ತಮ ಆರೋಗ್ಯ ಮತ್ತು ಖ್ಯಾತಿಯನ್ನು ಪಡೆಯುತ್ತೀರಿ.
ಸಿಂಹ ರಾಶಿಯವರು ಈ ರತ್ನವನ್ನು ಭಾನುವಾರ ಬೆಳಿಗ್ಗೆ ಸ್ನಾನದ ನಂತರ ಬಲಗೈಯ ಕಿರುಬೆರಳಿಗೆ ಧರಿಸಬೇಕು.
Akshaya Tritiya 2022: 30 ವರ್ಷಗಳ ಬಳಿಕ ಅಕ್ಷಯ ತೃತೀಯದಂದು ಬರುತ್ತಿದೆ ಈ ಶುಭಯೋಗ
ಕನ್ಯಾ(Virgo)
ಕನ್ಯಾ ರಾಶಿಯ ಅಧಿಪತಿ ಬುಧ. ಇವರು ಪಚ್ಚೆ ರತ್ನ ಧರಿಸಬೇಕು. ಇದರಿಂದ ಇವರ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಆರ್ಥಿಕ ಸಬಲತೆ, ಜೀವನದಲ್ಲಿ ಸಂತೋಷ ದೊರೆಯುತ್ತದೆ. ಬುಧವಾರ ಸ್ನಾನ ಮಾಡಿದ ತಮ್ಮ ಬಲಗೈಯ ಉಂಗುರ ಬೆರಳಿಗೆ ಧರಿಸಬೇಕು.
ತುಲಾ(Libra)
ತುಲಾ ರಾಶಿಯ ಅಧಿಪತಿ ಶುಕ್ರ. ಈ ರಾಶಿಯವರು ವಜ್ರ(diamond) ಧರಿಸಬೇಕು. ಇದನ್ನು ಧರಿಸುವುದರಿಂದ ಆರೋಗ್ಯ ಸಮಸ್ಯೆಗಳು ದೂರಾಗುತ್ತವೆ. ಇದರೊಂದಿಗೆ ಸಂತೋಷ ಹೆಚ್ಚುತ್ತದೆ. ಇದನ್ನು ಬಲಗೈಯ ಮಧ್ಯದ ಬೆರಳಿಗೆ ಶುಕ್ರವಾರದ ಸ್ನಾನದ ಬಳಿಕ ಧರಿಸಬೇಕು.
ವೃಶ್ಚಿಕ(Scorpio)
ವೃಶ್ಚಿಕ ರಾಶಿಯ ಅಧಿಪತಿ ಮಂಗಳ. ಹೀಗಾಗಿ ಈ ರಾಶಿಯವರು ಹವಳ(Coral)ವನ್ನು ಧರಿಸಬೇಕು. ಈ ಕಲ್ಲನ್ನು ಧರಿಸುವುದರಿಂದ ಸಂಬಂಧಗಳು ಬಲಗೊಳ್ಳುತ್ತವೆ. ಮನೆಯಲ್ಲಿ ಹಣದ ಕೊರತೆ ಇರದು. ಈ ರತ್ನವನ್ನು ನಿಮ್ಮ ಬಲಗೈಯ ಕಿರುಬೆರಳಿಗೆ ಅಥವಾ ತೋರು ಬೆರಳಿಗೆ ಮಂಗಳವಾರ ಸ್ನಾನದ ನಂತರ ಧರಿಸಬೇಕು.
ಧನು(Sagittarius)
ಧನು ರಾಶಿಯ ಅಧಿಪತಿ ಗುರು(Jupiter). ಈ ರಾಶಿಯವರು ಹಳದಿ ನೀಲಮಣಿ ಧರಿಸಬೇಕು. ಇದು ನಿಮ್ಮ ಜೀವನದಲ್ಲಿ ಸಂತೋಷ ತರುವ ಜೊತೆಗೆ ಧೀರ್ಘ ಕಾಲದ ಸಮಸ್ಯೆಗಳನ್ನು ತೆಗೆದು ಹಾಕುತ್ತದೆ. ಗುರವಾರ ಸ್ನಾನದ ಬಳಿಕ ಈ ರತ್ನ ಧರಿಸಬೇಕು.
ಮಕರ(Capricorn)
ಮಕರ ರಾಶಿಯ ಅಧಿಪತಿ ಶನಿದೇವರು. ಆದ್ದರಿಂದ ಈ ರಾಶಿಯ ಜನರು ನೀಲಮಣಿಯನ್ನು ಧರಿಸಬೇಕು. ಈ ಕಲ್ಲನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಇದು ನಿಮ್ಮನ್ನು ಆರೋಗ್ಯ ಸಮಸ್ಯೆಗಳಿಂದ ದೂರವಿಡುತ್ತದೆ. ಮಾತ್ರವಲ್ಲದೆ ಈ ರತ್ನವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಶನಿವಾರ ಸ್ನಾನದ ಬಳಿಕ ಇದನ್ನು ಧರಿಸಬೇಕು.
ಈ ರಾಶಿಯ ಮಹಿಳೆಯರು ಗಂಡನಿಗಾಗಿ ಹುಲಿಯನ್ನು ಎದುರಿಸೋಕೂ ರೆಡಿ!
ಕುಂಭ(Aquarius)
ಕುಂಭ ರಾಶಿಯ ಅಧಿಪತಿ ಕೂಡಾ ಶನಿಯೇ ಆಗಿದ್ದು, ನೀವು ನೀಲಮಣಿ ಧರಿಸಬೇಕು. ಇದರಿಂದ ಬದುಕಿನಲ್ಲಿ ಸಂತೋಷ ತುಂಬುತ್ತದೆ. ಇದನ್ನು ಶನಿವಾರ ಸ್ನಾನದ ಬಳಿಕ ಬಲಗೈಯ ಬೆರಳಿಗೆ ಧರಿಸಿ.
ಮೀನ(Pisces)
ಮೀನ ರಾಶಿಯ ಅಧಿಪತಿ ಗುರು. ಹಾಗಾಗಿ ಈ ರಾಶಿಯವರು ಗೋಮೋದಿಕ ರತ್ನವನ್ನು ಧರಿಸಬೇಕು. ಇದಲ್ಲದೆ, ಹಳದಿ ನೀಲಮಣಿ, ಮುತ್ತು, ಹವಳವನ್ನೂ ನೀವು ಧರಿಸಬಹುದು. ಇದನ್ನು ಗುರುವಾರ ಧರಿಸಿ.