Asianet Suvarna News Asianet Suvarna News

Vastu Tips : ಪತಿ – ಪತ್ನಿ ಮಧ್ಯೆ ಸರಸ ಹೆಚ್ಚಿಸುವ ಕೊಳಲು

ವಾಸ್ತು ಶಾಸ್ತ್ರದಲ್ಲಿ ಸಂತೋಷ, ಸುಖ, ಸಮೃದ್ಧಿ ಜೀವನಕ್ಕೆ ಏನು ಮಾಡ್ಬೇಕೆಂದು ಹೇಳಲಾಗಿದೆ. ದಂಪತಿ ಮಧ್ಯೆ ನಡೆಯುವ ಜಗಳಕ್ಕೆ ಹೇಗೆ ಬ್ರೇಕ್ ಹಾಕ್ಬೇಕು ಎಂಬುದನ್ನು ಕೂಡಾ ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. 
 

Vastu benefits of keeping flute at home
Author
Bangalore, First Published Apr 28, 2022, 4:42 PM IST

ಮನೆ (Home) ಯಲ್ಲಿರುವ ಸಣ್ಣ ಪುಟ್ಟ ವಸ್ತು (Material) ಗಳನ್ನು ಕೂಡ ನಾವು ಅಲ್ಲಲ್ಲಿ ಇಡ್ತೇವೆ. ಮುಂದೆ ಯಾವಾಗಲಾದ್ರೂ ಕೆಲಸ (Work) ಕ್ಕೆ ಬರಬಹುದು ಎಂಬ ಮುಂದಾಲೋಚನೆಯಲ್ಲಿಯೇ ಎಲ್ಲವನ್ನೂ ಕೂಡಿಡುತ್ತೇವೆ. ಅನೇಕ ಬಾರಿ ಮನೆಯಲ್ಲಿ ಆ ವಸ್ತುವಿದೆ ಎನ್ನುವುದೇ ಮರೆತು ಹೋಗಿರುತ್ತದೆ. ಅಗತ್ಯವಿದ್ದಾಗ ವಸ್ತು ಕೈಗೆ ಸಿಗುವುದಿಲ್ಲ. ಆಗ ಮತ್ತೊಂದನ್ನು ಖರೀದಿ ಮಾಡ್ತೇವೆ. ಈ ಬೇಕು – ಬೇಡದ ವಸ್ತುಗಳು ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಬೇಡದ ವಸ್ತುಗಳು ನಕಾರಾತ್ಮಕ ಪರಿಣಾಮ ಬೀರುತ್ತವೆ. ಮನೆಯಲ್ಲಿ ಉಂಟಾಗುವ ಈ ನಕಾರಾತ್ಮಕ ಮತ್ತು ಧನಾತ್ಮಕ ಪ್ರಭಾವ ನಮ್ಮ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತವೆ.

ವಾಸ್ತುಶಾಸ್ತ್ರದ ಪ್ರಕಾರ ಮನೆಯಲ್ಲಿ ಎಂದೂ ಬೇಡದ ವಸ್ತುಗಳನ್ನು ಇಡಬಾರದು. ಹಾಗೆ ಕೆಲ ವಸ್ತುಗಳನ್ನು ಮನೆಯ ಅಲಂಕಾರಕ್ಕೆ ಬಳಸಬೇಕು. ಇದ್ರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮನೆಯ ಅಲಂಕಾರಕ್ಕೆಂದು ತರುವ ವಸ್ತುಗಳನ್ನು ವಾಸ್ತು ಪ್ರಕಾರವೇ ಜೋಡಿಸಬೇಕು. ದಿಕ್ಕು ಬದಲಾದ್ರೂ ಸಮಸ್ಯೆ ತಲೆದೂರುತ್ತದೆ. ಮನೆಯ ಅಲಂಕಾರಕ್ಕೆ ಅಥವಾ ಮಕ್ಕಳಿಗಾಗಿ ನಾವು ಕೃಷ್ಣ  (Krishna) ನ ಕೊಳಲ (Flute) ನ್ನು ಖರೀದಿಸಿ ಮನೆಗೆ ತರ್ತೇವೆ. ಶ್ರೀಕೃಷ್ಣನ ಕೊಳಲು ನಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಮನೆಯ ಯಾವ ದಿಕ್ಕಿನಲ್ಲಿ ಕೊಳಲನ್ನು ಇಡಬೇಕು ಎಂಬುದು ಕೂಡ ನಮಗೆ ತಿಳಿದಿರಬೇಕು. ಇಂದು ನಾವು ಯಾವ ಕೊಳಲನ್ನು ಎಲ್ಲಿ ಇಡಬೇಕು ಎಂಬುದನ್ನು ಹೇಳ್ತೇವೆ.

ಯಾವ ಕೊಳಲಿನಿಂದ ಏನು ಲಾಭ 
ಹಸಿರು ಕೊಳಲು :
ಪತಿ-ಪತ್ನಿಯರ ನಡುವಿನ ಸಂಬಂಧದಲ್ಲಿ ಕೆಲವೊಮ್ಮೆ ಕಹಿ ಉಂಟಾಗುತ್ತದೆ. ಪರಸ್ಪರ ತಿಳುವಳಿಕೆಯ ಕೊರತೆಯಿಂದಾಗಿ, ಸಂಬಂಧದಲ್ಲಿ ಬಿರುಕು ಪ್ರಾರಂಭವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೋಣೆಯಲ್ಲಿ  ಹಸಿರು ಕೊಳಲನ್ನು ಇಡಬೇಕು. ಇದು ನಿಮ್ಮ ಸಂಬಂಧಕ್ಕೆ ಮಾಧುರ್ಯವನ್ನು ನೀಡುತ್ತದೆ. ಪರಸ್ಪರ ಗೌರವವೂ ಹೆಚ್ಚುತ್ತದೆ.

ಶನೈಶ್ಚರಿ ಅಮಾವಾಸ್ಯೆ 2022: ಶನಿ ದೋಷದ ಸಮಸ್ಯೆಗಳಿಂದ ಮುಕ್ತರಾಗಲು ನೀವೇನು ಮಾಡಬೇಕು ಗೊತ್ತಾ?

ಆರ್ಥಿಕ ವೃದ್ಧಿ ಬಯಸುವವರು ಹೀಗೆ ಮಾಡಿ : ನಿಮ್ಮ ಮನೆಯಲ್ಲಿ ಹಣದ ಕೊರತೆಯಿದ್ದರೆ, ಮನೆಯ ಯಾವುದೇ ಗೋಡೆಯ ಹೊರಗೆ ಒಂದು ಜೋಡಿ ಕೊಳಲುಗಳನ್ನು ನೇತುಹಾಕಿ. ಮನೆಯಲ್ಲಿ ಹಣವು ಹೆಚ್ಚಾಗಲು ಪ್ರಾರಂಭಿಸುತ್ತದೆ ಮತ್ತು ಆದಾಯದ ಹೊಸ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಶ್ರೀಕೃಷ್ಣನ ನೆಚ್ಚಿನ ಕೊಳಲು ನಿಮ್ಮ ಮನೆಯಲ್ಲಿ ಹಣದ ಕೊರತೆಯಾಗಲು ಬಿಡುವುದಿಲ್ಲ.

ನವಿಲು ಗರಿಯ ಕೊಳಲು :  ಅನೇಕ ಬಾರಿ ಕೆಲಸದ ಗೊಂದಲ ನಮಗೆ ಎದುರಾಗುತ್ತದೆ. ಕೆಲಸದಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕೆಲಸ ಕಳೆದುಕೊಳ್ಳುವ ಭಯವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮನೆಯ ಗೋಡೆಯ ಮೇಲೆ ನವಿಲು ಗರಿಗಳನ್ನು ಹಾಕಿರುವ ಕೊಳಲನ್ನು ಹಾಕಬೇಕು. ಇದ್ರಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ. ಮನೆಯಲ್ಲಿ ನೆಮ್ಮದಿ ಪ್ರಾಪ್ತಿಯಾಗುತ್ತದೆ. 

ಈ ಉಡುಗೊರೆಗಳು ನಿಮಗೆ ಸಿಕ್ರೆ ಅದೃಷ್ಟವೇ ಬದಲಾಗತ್ತೆ

ಮಕ್ಕಳ ಕೋಣೆಯಲ್ಲಿ ಕೊಳಲನ್ನು ಇಡಿ :  : ಮನೆಯಲ್ಲಿ ಮಕ್ಕಳಿಗಾಗಿ ಪ್ರತ್ಯೇಕ ಕೋಣೆಯಿದ್ದರೆ ಅವರ ಕೋಣೆಯಲ್ಲಿ ನೀವು ಬಿಳಿ ಕೊಳಲನ್ನು ಇಡಬೇಕು. ಇದರಿಂದ ಅವರಿಗೆ ಅಧ್ಯಯನದಲ್ಲಿ ಆಸಕ್ತಿ ಮೂಡುತ್ತದೆ. ಅಧ್ಯಯನದಲ್ಲಿ ಬರುತ್ತಿದ್ದ ಸಮಸ್ಯೆಗಳೂ ದೂರವಾಗುತ್ತವೆ. ವಿದ್ಯಾಭ್ಯಾಸದಲ್ಲಿ ಮಕ್ಕಳು ಏಳ್ಗೆ ಕಾಣ್ತಾರೆ. ಯಶಸ್ಸು ಅವರನ್ನು ಅರಸಿ ಬರುತ್ತದೆ. 

ಜನ್ಮಾಷ್ಟಮಿಯ ದಿನ ಕೊಳಲು ನುಡಿಸಿ : ವಾಸ್ತು ಶಾಸ್ತ್ರದ ಪ್ರಕಾರ, ಜನ್ಮಾಷ್ಟಮಿಯ ದಿನದಂದು ಶ್ರೀಕೃಷ್ಣನಿಗೆ ಪ್ರಿಯವಾದ ಕೆಲಸವನ್ನು ಭಕ್ತರು ಮಾಡ್ತಾರೆ. ಕೃಷ್ಣ ಕೊಳಲು ಪ್ರಿಯ. ಕೃಷ್ಣ ಜನ್ಮಾಷ್ಟಮಿಯ ದಿನ ನೀವು, ಮನೆಯಲ್ಲಿ ಕೃಷ್ಣನ ಕೊಳಲನ್ನು ನುಡಿಬೇಕು.  ಶ್ರೀ ಕೃಷ್ಣನ ಕೊಳಲು ನುಡಿಸುವುದ್ರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಸದಾ ನೆಲೆಸಿರುತ್ತದೆ. ಕೌಟುಂಬಿಕ ಗಲಾಟೆಯಾಗ್ಲಿ ಇಲ್ಲ ಆರ್ಥಿಕ ಸಮಸ್ಯೆಯಾಗ್ಲಿ ಕಾಡುವುದಿಲ್ಲ. 

Follow Us:
Download App:
  • android
  • ios