ಬರೋಬ್ಬರಿ 30 ವರ್ಷಗಳ ನಂತರ ಶನಿಯು ತನ್ನ ಸ್ವರಾಶಿಯಾದ ಕುಂಭಕ್ಕೆ ಏಪ್ರಿಲ್ 29ರಂದು ಪ್ರವೇಶಿಸುತ್ತಿದ್ದಾನೆ. ಇದರಿಂದ ಕೆಲ ರಾಶಿಗಳಿಗೆ ಸಾಕಷ್ಟು ಸಮಸ್ಯೆ ಎದುರಾಗಲಿದೆ. ಈಗಿಂದಲೇ ಪರಿಹಾರ ಕೈಗೊಳ್ಳಿ.
ಶನಿಯು ಅತ್ಯಂತ ನಿಧಾನಗತಿಯಲ್ಲಿ ಸಂಚರಿಸುವ ಗ್ರಹ. ಒಂದು ರಾಶಿಯಿಂದ ಮತ್ತೊಂದಕ್ಕೆ ಹೋಗಲು ಶನಿಗೆ ಎರಡೂವರೆ ವರ್ಷಗಳು ಬೇಕಾಗುತ್ತವೆ. ಇದೀಗ 30 ವರ್ಷಗಳ ಬಳಿಕ ಮಕರ ರಾಶಿಯಿಂದ ಕುಂಭ ರಾಶಿಗೆ ಶನಿ ಎಂಟ್ರಿ ಕೊಡುತ್ತಿದ್ದಾನೆ. ಏಪ್ರಿಲ್ 29ಕ್ಕೆ ಶನಿ ಕುಂಭಕ್ಕೆ ಹೋಗುತ್ತಿದ್ದಾನೆ. ಏಪ್ರಿಲ್ 30ಕ್ಕೆ ಸೂರ್ಯ ಗ್ರಹಣ ಸಂಭವಿಸುತ್ತಿದೆ. ಶನಿ ಹಾಗೂ ಗ್ರಹಣವೆರಡೂ ಅಶುಭವನ್ನೇ ನೀಡುತ್ತವೆ ಎನ್ನಲಾಗುತ್ತದೆ. ಇಂಥ ಸಂದರ್ಭದಲ್ಲಿ ಶನಿಯ ರಾಶಿ ಪರಿವರ್ತನೆಯಿಂದ ಕೆಲ ರಾಶಿಗಳಿಗೆ ಲಾಭವಾಗಬಹುದು. ಕೆಲ ರಾಶಿಯು ಶನಿಯ ಸಾಡೇಸಾತಿಯಿಂದ ಮುಕ್ತಿ ಪಡೆಯಬಹುದು. ಆದರೆ, ಮತ್ತೆ ಕೆಲ ರಾಶಿಗೆ ಸಾಡೇಸಾತಿ ಆರಂಭವಾಗುತ್ತದೆ. ಶನಿಯ ಕೆಟ್ಟ ದೃಷ್ಟಿ ಕೆಲ ರಾಶಿಗಳ ಮೇಲೆ ಬೀಳಲಿದೆ. ಇದರಿಂದ ಅವರು ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ. ಆ ರಾಶಿಗಳು ಈಗಿಂದಲೇ ಪರಿಹಾರಗಳನ್ನು ಕೈಗೊಳ್ಳುವುದರಿಂದ ಶನಿಯ ಕಷ್ಟಗಳಿಂದ ಕೊಂಚ ಮಟ್ಟಿಗೆ ಸಮಾಧಾನ ಪಡೆಯಬಹುದು. ಹಾಗಿದ್ದರೆ ಯಾವೆಲ್ಲ ರಾಶಿಗಳಿಗೆ ಸಂಕಷ್ಟ ಶುರುವಾಗುತ್ತದೆ ಮತ್ತು ಅವರು ಕೈಗೊಳ್ಳಬೇಕಾದ ಪರಿಹಾರಗಳೇನು ನೋಡೋಣ.
ಈ ರಾಶಿಗಳಿಗೆ ಶನಿಯ ಸಂಚಾರ ಸಮಸ್ಯೆ ತರಲಿದೆ..
ಶನಿಯು ಕರ್ಮಕ್ಕೆ ತಕ್ಕ ಫಲ ನೀಡುವವನಾದರೂ ಕೆಲ ಸಮಯ ಕೆಲ ರಾಶಿಗಳಿಗೆ ಪ್ರತಿಕೂಲವಾಗಲಿದೆ. ಈ ಬಾರಿಯ ಶನಿ ಗೋಚಾರವು ವೃಷಭ, ಕಟಕ, ಸಿಂಹ, ತುಲಾ, ಧನು ಹಾಗೂ ಮಕರ ರಾಶಿಗಳಿಗೆ ಅಪಾಯಕಾರಿಯಾಗಿರಲಿದೆ. ಸಾಕಷ್ಟು ಸಮಸ್ಯೆಗಳನ್ನು ತರಲಿದೆ. ಇದರೊಂದಿಗೆ ಕಟಕ ಹಾಗೂ ವೃಶ್ಚಿಕ ರಾಶಿಗೆ ಶನಿ ಧೈಯ್ಯ ಶುರುವಾಗಲಿದೆ.
ಮನೆಯಲ್ಲಿ ಸಮೃದ್ಧಿ ಬೇಕೆಂದರೆ Laughing Buddhaನನ್ನು ಇಲ್ಲಿಡಿ..
ಶನಿಯ ಅಶುಭ ಫಲಕ್ಕೆ ಪರಿಹಾರ
ಶನಿ ನೀಡುವ ಕಷ್ಟನಷ್ಟಗಳನ್ನು ತಗ್ಗಿಸಲು, ಶನಿ ದೋಷ ಕಡಿಮೆ ಮಾಡಿಕೊಳ್ಳಲು ಈಗಿಂದಲೇ ನೀವು ಕೈಗೊಳ್ಳಬೇಕಾದ ಪರಿಹಾರಗಳು ಇಲ್ಲಿವೆ.
- ಪ್ರತಿದಿನ ಎರಡು ಹೊತ್ತು ಊಟಕ್ಕೆ ಕಪ್ಪು ಉಪ್ಪು ಮತ್ತು ಕರಿಮೆಣಸಿನ ಪುಡಿ ಬಳಸಿ.
- ಪ್ರತಿ ಶನಿವಾರ ಕಪ್ಪು ಹಸುವಿಗೆ ಆಹಾರ ನೀಡಿ. ಹಸುವಿಗೆ ನೀವು ಆಹಾರ ಸೇವಿಸುವ ಮೊದಲೇ ಆಹಾರ ನೀಡಿ ಮತ್ತು ಜೊತೆಗೆ ಅದರ ಹಣೆಗೆ ತಿಲಕವಿಡಿ. ಹಸುವಿನ ಕೊಂಬಿಗೆ ಕಪ್ಪು ದಾರ ಕಟ್ಟಿ. ಬಳಿಕ ಅದಕ್ಕೆ ಆರತಿ ಎತ್ತಿ. ಇದರಿಂದ ಶನಿ ದೋಷ ಪರಿಹಾರವಾಗುತ್ತದೆ.
- ಶನಿವಾರ 1 ಕೆಜಿ ಧಾನ್ಯವನ್ನು ದಾನ ಮಾಡಿ. ಈ ಧಾನ್ಯದಲ್ಲಿ ಏಳು ವಿಧಗಳಿರಬೇಕು. ಅರ್ಧ ಕೆಜಿ ಕರಿ ಎಳ್ಳು, ಅರ್ಧ ಕೆಜಿ ಕರಿ ಬೇಳೆ, ಕೊಂಚ ಸಾಸಿವೆ ಹಾಗೂ ಕಬ್ಬಿಣದ ಮೊಳೆಗಳನ್ನು ಕಪ್ಪು ಇಲ್ಲವೇ ನೀಲಿ ಬಟ್ಟೆಯಲ್ಲಿ ಕಟ್ಟಿ ಶನಿ ದೇವಾಲಯಕ್ಕೆ ದಾನ ಮಾಡಿ. ಇದರಿಂದ ಶನಿಯ ಆಶೀರ್ವಾದ ಸಿಗಲಿದೆ.
- ಶನಿವಾರದ ದಿನ ಕಬ್ಬಿಣದ ಬಟ್ಟಲಲ್ಲಿ ಸಾಸಿವೆ ಎಣ್ಣೆ ತುಂಬಿ ಮತ್ತು ಅದರಲ್ಲಿ ನಿಮ್ಮ ಮುಖ ನೋಡಿಕೊಳ್ಳಿ. ನಂತರ ಈ ಎಣ್ಣೆಯನ್ನು ಶನಿ ದೇವಾಲಯಕ್ಕೆ ದಾನ ಮಾಡಿ.
ಕಾಲ್ಬೆರಳು ನೋಡಿ ವ್ಯಕ್ತಿತ್ವ ಹೇಳ್ಬಹುದು.. ನಿಮ್ಮ ಕಾಲ್ಬೆರಳು ಯಾವ ಆಕಾರವಿದೆ? - ಚಪಾತಿಗೆ ಎಳ್ಳೆಣ್ಣೆ ಅಥವಾ ಸಾಸಿವೆ ಎಣ್ಣೆ ಹಚ್ಚಿ ಶನಿವಾರದ ದಿನ ನಾಯಿಗೆ ತಿನ್ನಿಸಿ. ಇದನ್ನು 21 ಶನಿವಾರಗಳ ಕಾಲ ಮಾಡಿ. ಇದರಿಂದ ಶನಿ ದೋಷ ಪರಿಹಾರವಾಗಿ ಜೀವನದಲ್ಲಿ ಸಂತೋಷ ತುಂಬುತ್ತದೆ.
- ಸಾಸಿವೆ ಎಣ್ಣೆಯ ದೀಪವನ್ನು ಪ್ರತಿದಿನ ಮನೆಯಲ್ಲಿ ಪೂಜಾ ಕೋಣೆಯಲ್ಲಿ ಹಚ್ಚಿ. ನಂತರ ಕಪ್ಪು ಉದ್ದು, ಕಬ್ಬಿಣ ಸೇರಿದಂತೆ ಕಪ್ಪು ವಸ್ತುಗಳನ್ನು ದಾನ ಮಾಡಿ. ಇದರೊಂದಿಗೆ ಪ್ರತಿ ದಿನ ಶನಿ ದೇವಾಲಯಕ್ಕೆ ಭೇಟಿ ನೀಡಿ 'ಓಂ ಶನ್ ಶನೈಶ್ಚರಾಯ ನಮಃ' ಅಥವಾ 'ಓಂ ಪ್ರಮ್ ಪ್ರಿಮ್ ಪ್ರೌನ್ ಸಹಾ ಶನೈಶ್ಚರಾಯ ನಮಃ' ಮಂತ್ರ ಹೇಳಿ. ಶನಿ ಚಾಲೀಸಾವನ್ನು ಹೇಳಿಕೊಳ್ಳಿ.
- ಪ್ರತಿ ಶನಿವಾರ ಅಶ್ವತ್ಥ ಮರಕ್ಕೆ ಸಿಹಿಯಾದ ನೀರು ಮತ್ತು ಹಾಲನ್ನು ಎರೆಯಿರಿ. ನಂತರ ಅಲ್ಲಿ ಸಾಸಿವೆ ಎಣ್ಣೆಯ ದೀಪ ಹಚ್ಚಿ. ಊದುಬತ್ತಿ ಹಚ್ಚಿ. ಬಳಿಕ ಅಲ್ಲಿಯೇ ಕುಳಿತು ಹನುಮಾನ್ ಚಾಲೀಸಾ ಹಾಗೂ ಶನಿ ಚಾಲೀಸಾ ಹೇಳಿಕೊಳ್ಳಿ. ಬಳಿಕ ಅಶ್ವತ್ಥ ಮರಕ್ಕೆ ಏಳು ಸುತ್ತು ಬಂದು ನಮಸ್ಕಾರ ಮಾಡಿ.
