ಮನೆಯಲ್ಲಿ ಸಮೃದ್ಧಿ ಬೇಕೆಂದರೆ Laughing Buddhaನನ್ನು ಇಲ್ಲಿಡಿ..
ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧ ಸಮೃದ್ಧಿಯ ಸಂಕೇತವಾಗಿದೆ. ಇದು ಸಂತೋಷ ಮತ್ತು ಧನಾತ್ಮಕ ಕಂಪನಗಳನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ. ನಗುವ ಬುದ್ಧನ ಪ್ರತಿಮೆಯನ್ನು ಸರಿಯಾದ ಸ್ಥಳದಲ್ಲಿ ಇಡುವುದರಿಂದ ಸರಿಯಾದ ಕಾಸ್ಮಿಕ್ ಶಕ್ತಿಯನ್ನು ಉತ್ಪಾದಿಸಬಹುದು.
ನಗುವ ಬುದ್ಧ(Laughing Buddha)ನನ್ನು ಪ್ರಪಂಚದಾದ್ಯಂತ ಕಾಣಬಹುದು. ಮನೆಗಳು, ರೆಸ್ಟೋರೆಂಟ್‌ಗಳು, ವ್ಯಾಪಾರದ ಸ್ಥಳಗಳು ಸೇರಿದಂತೆ ಲಾಫಿಂಗ್ ಬುದ್ಧ ಬಹಳಷ್ಟು ಕಡೆ ಉತ್ತಮ ಸ್ಥಾನ ಕಂಡುಕೊಂಡಿರುತ್ತಾನೆ. ಮನೆ ಅಥವಾ ವ್ಯಾಪಾರಕ್ಕೆ ಸಂಪತ್ತು ಮತ್ತು ಸಮೃದ್ಧಿಯನ್ನು ತರಲು ಹೆಸರುವಾಸಿಯಾಗಿರುವುದರಿಂದ ಅವರನ್ನು 'ಸಂಪತ್ತಿನ ಬುದ್ಧ' ಎಂದೂ ಕರೆಯಲಾಗುತ್ತದೆ.
ಹಳೆಯ ತಲೆಮಾರುಗಳು ಹೇಳುವ ಕಥೆಗಳ ಪ್ರಕಾರ, ನಾವು ಪ್ರತಿದಿನ ಬುದ್ಧನ ಹೊಟ್ಟೆಯನ್ನು ಉಜ್ಜಬೇಕಂತೆ, ಅದರಿಂದ ಆತ ಸಂತೋಷಪಟ್ಟು ಪ್ರತಿಯಾಗಿ, ಅವನು ನಮ್ಮ ಆಸೆಗಳನ್ನು ಪೂರೈಸುತ್ತಾನಂತೆ.
ಇನ್ನು ಮುಂದೆ ನೀವು ಲಾಫಿಂಗ್ ಬುದ್ಧನ ಹೊಟ್ಟೆಯನ್ನು ಉಜ್ಜುವಾಗ, ನೀವದನ್ನು ಸಕಾರಾತ್ಮಕ ಮನೋಭಾವದಿಂದ ಮಾಡಲು ಮರೆಯಬೇಡಿ. ನಿಮ್ಮ ಈ ನಡೆ ನಿಮ್ಮ ಚೈತನ್ಯವನ್ನು ಹೆಚ್ಚಿಸುವಂತಿರಬೇಕು. ಆಗ ಅದರಿಂದ ಉತ್ತಮ ಉಡುಗೊರೆಗಳನ್ನು ಪಡೆಯುವಿರಿ. ವಾಸ್ತು(vastu) ಪ್ರಕಾರ ಹಾಗೂ ಫೆಂಗ್ ಶುಯ್ ಪ್ರಕಾರ ಕೂಡಾ ಲಾಫಿಂಗ್ ಬುದ್ಧನನ್ನು ಮನೆಯಲ್ಲಿಡುವುದು ಬಹಳ ಒಳ್ಳೆಯದು. ಆದರೆ, ಹಾಗಿಡುವಾಗ ಅದನ್ನಿಡುವ ದಿಕ್ಕು(direction) ಸೇರಿದಂತೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಈ ವಿಗ್ರಹಕ್ಕೆ ಅಗೌರವ ತೋರಿದರೆ, ಅದು ಎಲ್ಲವನ್ನೂ ಹಿಮ್ಮೆಟ್ಟಿಸುತ್ತದೆ ಮತ್ತು ದುರದೃಷ್ಟವನ್ನು ತರುತ್ತದೆ. ಅದೇ ಸರಿಯಾದ ರೀತಿಯಲ್ಲಿಟ್ಟಾಗ ಅದು ಸಂಪತ್ತನ್ನು ಹೆಚ್ಚಿಸಿ ಮನೆಯಲ್ಲಿ ಸಂತೋಷವನ್ನೂ ಹೆಚ್ಚಿಸುತ್ತದೆ. ನಗುವ ಬುದ್ಧ ಗೃಹಪ್ರವೇಶಗಳಿಗೆ ಮತ್ತು ಹಬ್ಬದ ಸಮಯದಲ್ಲಿ ನೀಡಲು ಪರಿಪೂರ್ಣ ಕೊಡುಗೆಯಾಗಿದೆ.
ಕಾಲ್ಬೆರಳು ನೋಡಿ ವ್ಯಕ್ತಿತ್ವ ಹೇಳ್ಬಹುದು.. ನಿಮ್ಮ ಕಾಲ್ಬೆರಳು ಯಾವ ಆಕಾರವಿದೆ?
ಹೇಗೆ ಇಡುವುದು?
- ಪ್ರತಿಮೆಯ ಎತ್ತರವು ಕನಿಷ್ಠ ಕಣ್ಣಿನ ಮಟ್ಟದಲ್ಲಿರಬೇಕು. ವಿಗ್ರಹವನ್ನು ಕೆಳಗಿನಿಂದ ನೋಡುವುದು ಯಾವಾಗಲೂ ಗೌರವ(respect)ದ ವಿಷಯವಾಗಿದೆ ಮತ್ತು ಮೇಲಿನಿಂದ ಅದನ್ನು ನೋಡಬಾರದು. ಇದು ಅದಕ್ಕೆ ಅಗೌರವ ತೋರಿದಂತಾಗುತ್ತದೆ. ಅದೃಷ್ಟ(luck)ವನ್ನು ಆಕರ್ಷಿಸಲು ನೀವು ನಗುವ ಬುದ್ಧನ ವಿಗ್ರಹವನ್ನು ಮುಖ್ಯ ಬಾಗಿಲಿನ ಕಡೆಗೆ ಇಡುವುದು ಮುಖ್ಯ.
- ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮುಖ್ಯದ್ವಾರದ ಮುಂದೆ ಕನಿಷ್ಠ 30 ಇಂಚು ಎತ್ತರದಲ್ಲಿ ಇಡಬೇಕು. ಅದನ್ನು ಇರಿಸಲು ಸೂಕ್ತವಾದ ಎತ್ತರವು 30 ಇಂಚುಗಳಿಗಿಂತ ಹೆಚ್ಚು ಮತ್ತು 32.5 ಇಂಚುಗಳಿಗಿಂತ ಕಡಿಮೆಯಿರಬೇಕು.
- ವಿಗ್ರಹದ ಮೂಗು ಮನೆಯ ಯಜಮಾನನ ಎರಡೂ ಕೈಗಳ ಬೆರಳುಗಳಿಗೆ ಸಮನಾಗಿರಬೇಕು ಮತ್ತು ಗರಿಷ್ಠ ಎತ್ತರವು ಮನೆಯ ಯಜಮಾನನ ಕೈಯ ಗಾತ್ರಕ್ಕೆ ಸಮನಾಗಿರಬೇಕು.
- ಮುಖ್ಯ ದ್ವಾರದ ಮುಂದೆ ಇಟ್ಟಿರುವ ಲಾಫಿಂಗ್ ಬುದ್ಧ ವಿಗ್ರಹದ ಮುಖವೂ ಮುಖ್ಯ ದ್ವಾರ(Main door)ದ ಕಡೆಗೆ ಇರಬೇಕು. ಯಾಕೆಂದರೆ ಬಾಗಿಲು ತೆರೆದ ತಕ್ಷಣ ಯಾರಿಗಾದರೂ ಮೊದಲು ಲಾಫಿಂಗ್ ಬುದ್ಧನ ವಿಗ್ರಹ ಕಾಣಿಸುವುದರಿಂದ ಅವರಲ್ಲಿ ಧನಾತ್ಮಕ ಚಿಂತನೆ ಹರಿಯುತ್ತದೆ.
- ನಗುವ ಬುದ್ಧನ ಪ್ರತಿಮೆಯನ್ನು ಅಡುಗೆಮನೆ, ಊಟದ ಕೋಣೆ ಅಥವಾ ಮಲಗುವ ಕೋಣೆಯಲ್ಲಿ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ. ನೆಲದ ಮೇಲಂತೂ ಇಡಕೂಡದು. ಅಲ್ಲದೆ, ಅದನ್ನು ಪೂಜಿಸಬಾರದು.
- ಮನೆಯ ಪೂರ್ವ(east) ಭಾಗವು ಕುಟುಂಬದ ಅದೃಷ್ಟದ ತಾಣ ಎಂದು ಹೇಳಲಾಗುತ್ತದೆ. ನೀವು ಕುಟುಂಬಕ್ಕೆ ಸಾಮರಸ್ಯ ಮತ್ತು ಸಂತೋಷವನ್ನು ತರಲು ಬಯಸಿದರೆ, ಈ ದಿಕ್ಕಿನಲ್ಲಿ ಲಾಫಿಂಗ್ ಬುದ್ಧನ ವಿಗ್ರಹವನ್ನು ಇರಿಸಿ. ಇದರಿಂದ ಸಂಪತ್ತು ಹೆಚ್ಚುವುದು ಮಾತ್ರವಲ್ಲ, ನಿಮ್ಮ ಕುಟುಂಬವು ಆಂತರಿಕ ಕಲಹಗಳು, ವಾದಗಳು ಮತ್ತು ಘರ್ಷಣೆಗಳನ್ನೂ ನಗುವ ಬುದ್ಧನು ಪರಿಹರಿಸುತ್ತಾನೆ.
Saturnಗೆ ಇವು ಮಿತ್ರ ಗ್ರಹಗಳು, ಈ ರಾಶಿಯ ಮೇಲಿರುತ್ತೆ ಶನಿಕೃಪೆ
- ಕಛೇರಿಯಲ್ಲಿ ನಿಮ್ಮ ಮೇಜಿನ ಮೇಲೆ ಲಾಫಿಂಗ್ ಬುದ್ಧನನ್ನು ಇರಿಸುವುದು ನಿಮ್ಮ ವೃತ್ತಿಜೀವನ(career)ದಲ್ಲಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಈ ವಿಗ್ರಹವು ಸಹೋದ್ಯೋಗಿಗಳು, ಅಧೀನ ಅಧಿಕಾರಿಗಳು ಮತ್ತು ಮೇಲಧಿಕಾರಿಗಳೊಂದಿಗೆ ವಿವಾದಗಳು, ಜಗಳಗಳು ಮತ್ತು ವಾದಗಳನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.
- ವಿದ್ಯಾರ್ಥಿಗಳು ಈ ವಿಗ್ರಹವನ್ನು ತಮ್ಮ ಅಧ್ಯಯನದ ಮೇಜಿನ ಮೇಲೆ ಇರಿಸಬಹುದು. ಇದರಿಂದ ಅವರು ಹೆಚ್ಚಿನ ಏಕಾಗ್ರತೆಯನ್ನು ಪಡೆಯಬಹುದು ಮತ್ತು ತಮ್ಮ ಶೈಕ್ಷಣಿಕ ಕಾರ್ಯಕ್ಷಮತೆಯಲ್ಲಿ ಉತ್ಕೃಷ್ಟರಾಗಬಹುದು.
- ಚಲಿಸುವ ಭಾಗಗಳನ್ನು ಹೊಂದಿರುವ ಅಥವಾ ನಿರಂತರ ಶಬ್ದವನ್ನು ಉಂಟುಮಾಡುವ ವಿದ್ಯುತ್ ಲೈನ್‌ಗಳು ಮತ್ತು ಉಪಕರಣಗಳ ಬಳಿ ಲಾಫಿಂಗ್ ಬುದ್ಧ ಇಡಬೇಡಿ. ಏಕೆಂದರೆ ಇದರಿಂದ ಹೊಮ್ಮುವ ವಿದ್ಯುತ್ ತರಂಗಗಳು ವಿಗ್ರಹದ ಧನಾತ್ಮಕ ಶಕ್ತಿಯನ್ನು ಏರುಪೇರುಗೊಳಿಸಬಹುದು.