Asianet Suvarna News Asianet Suvarna News

ಕಾಲ್ಬೆರಳು ನೋಡಿ ವ್ಯಕ್ತಿತ್ವ ಹೇಳ್ಬಹುದು.. ನಿಮ್ಮ ಕಾಲ್ಬೆರಳು ಯಾವ ಆಕಾರವಿದೆ?

ಕಾಲ್ಬೆರಳುಗಳ ಆಕಾರ, ಗಾತ್ರ ಎಲ್ಲವೂ ವ್ಯಕ್ತಿಯ ಸ್ವಭಾವದ ಬಗ್ಗೆ ಸಾಕಷ್ಟನ್ನು ಹೇಳುತ್ತವೆ. ಅಂದ ಹಾಗೆ ನಿಮ್ಮ ಕಾಲ್ಬೆರಳ ಆಕಾರ ಹೇಗಿದೆ?

the size and shape of your toes tell about your personality skr
Author
Bangalore, First Published Apr 24, 2022, 1:32 PM IST

ಹುಡುಗಿಯ ಕಾಲಿನ ಎರಡನೇ ಬೆರಳು ಮೊದಲನೆಯದಕ್ಕಿಂತ ಉದ್ದವಾಗಿದ್ದರೆ, ಈಕೆ ಹಿರಿಸೊಸೆಯಾಗಿ ಹೋಗುತ್ತಾಳೆ, ಮನೆಯ ಯಜಮಾನಿಕೆ ಮಾಡುತ್ತಾಳೆ ಎನ್ನೋದು ಕೇಳಿರಬಹುದು. ಲಕ್ಷಣ ಶಾಸ್ತ್ರದಲ್ಲಿ ದೇಹದ ಪ್ರತಿ ಭಾಗದ ಆಕಾರ, ಚಿಹ್ನೆ, ಮಾರ್ಕ್‌ ನೋಡಿ ವ್ಯಕ್ತಿಯ ಭವಿಷ್ಯ, ಸ್ವಭಾವ ಎಲ್ಲವನ್ನೂ ಹೇಳಲಾಗುತ್ತದೆ. ಈ ಲಕ್ಷಣ ಶಾಸ್ತ್ರದ ವಿಷಯಗಳೇ ಆಡುಮಾತುಗಳಲ್ಲಿ ಒಂದಾಗಿ ಇಂಥ ಮಾತುಗಳು ಕೇಳಿ ಬರುವುದು. 

ಕೈ ಬರಹ ವಿನ್ಯಾಸ(handwriting styles) ನೋಡಿ, ರಾಶಿ ಚಕ್ರಗಳನ್ನು ನೋಡಿ, ಮುಖ ಲಕ್ಷಣಗಳನ್ನು ನೋಡಿ ವ್ಯಕ್ತಿತ್ವ(personality)ದ ಬಗ್ಗೆ ಹೇಳುವಂತೆ ತಜ್ಞರು ಕಾಲ್ಬೆರಳ ಆಕಾರ ನೋಡಿಯೂ ವ್ಯಕ್ತಿಯ ಸ್ವಭಾವಗಳನ್ನು ಹೇಳಬಲ್ಲರು. ಈಗ ಕಾಲ್ಬೆರಳ ಉದ್ದ, ಅಗಲ, ಆಕಾರ ಹೇಗಿದ್ದರೆ ಏನು ಸ್ವಭಾವ ನೋಡೋಣ. 

ಈಜಿಪ್ಟಿಯನ್ ಬೆರಳು(Egyptian toe)
ಕಾಲಿನ ಹೆಬ್ಬೆರಳು ಉದ್ದವಾಗಿ ದೊಡ್ಡವಾಗಿದ್ದು, ಉಳಿದ ನಾಲ್ಕು ಬೆರಳುಗಳು ಕಿರುಬೆರಳತ್ತ ವಾಲಿದ್ದರೆ ಅದು ಈಜಿಪ್ಟಿಯನ್ ಬೆರಳು. ಈ ರೀತಿಯ ಬೆರಳಿರುವವರು ಒಂದು ಶಕ್ತಿಯುತವಾದ ತೇಜಸ್ಸನ್ನು ಹೊಂದಿರುತ್ತಾರೆ. ಇವರು ತನಮ್ಮ ಸುತ್ತಲಿನ ಜನರು ತಮ್ಮ ಉಪಸ್ಥಿತಿಯನ್ನು ಗೌರವಿಸುವಂತೆ ಒತ್ತಾಯಿಸುತ್ತಾರೆ. ಇವರನ್ನು ಎದುರು ಹಾಕಿಕೊಳ್ಳಲು ಎಲ್ಲರೂ ಹೆದರುತ್ತಾರೆ. ಏಕೆಂದರೆ ಇವರ ಕೋಪ ಮತ್ತು ನಿರ್ದಯತೆ(ngry and ruthless) ತಡೆದುಕೊಳ್ಳುವುದು ಕಷ್ಟ. 

ರೋಮನ್ ಕಾಲ್ಬೆರಳು(Roman toe)
ಹೆಬ್ಬೆರಳು ಸೇರಿದಂತೆ ಮೊದಲ ಮೂರು ಬೆರಳು ಒಂದೇ ಉದ್ದವಿದ್ದು, ಇನ್ನೆರಡು ಬೆರಳು ಗಿಡ್ಡವಾಗಿದ್ದಾಗ ಅದನ್ನು ರೋಮನ್ ಕಾಲ್ಬೆರಳು ಎನ್ನಲಾಗುತ್ತದೆ. ಈ ರೀತಿಯ ಕಾಲ್ಬೆರಳು ಹೊಂದಿದವರು ಬಹಳ ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಬದ್ಧತೆ ಹಾಗೂ ಏಕಾಗ್ರತೆ ಹೊಂದಿರುತ್ತಾರೆ. ಹೀಗಾಗಿ ಇವರು ಜೀವನದಲ್ಲಿ ಯಶಸ್ಸನ್ನು ನೋಡುತ್ತಾರೆ. ಜೀವನದಲ್ಲಿ ತಮಗೆ ಬೇಕಾದುದನ್ನು ಪಡೆಯುವ ಛಲ ಇವರಲ್ಲಿರುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಶಕ್ತಿಯ ಮೇಲೆ ನಂಬಿಕೆ ಇರುತ್ತದೆ. 

Saturnಗೆ ಇವು ಮಿತ್ರ ಗ್ರಹಗಳು, ಈ ರಾಶಿಯ ಮೇಲಿರುತ್ತೆ ಶನಿಕೃಪೆ

ಗ್ರೀಕ್ ಕಾಲ್ಬೆರಳು(Greek toe)
ಕಾಲಿನ ಮಧ್ಯದ ಬೆರಳು ಉಳಿದೆಲ್ಲ ಬೆರಳುಗಳಿಗಿಂತ ಉದ್ದವಿದ್ದರೆ ಅದನ್ನು ಗ್ರೀಕ್ ಕಾಲ್ಬೆರಳು ಎನ್ನಲಾಗುತ್ತದೆ. ಅವರು ಜೀವನ ಮತ್ತು ಕೆಲಸಗಳ ಕಡೆಗೆ ಬಹಳ ವಿಶಿಷ್ಟವಾದ ನಿಲುವನ್ನೂ, ಇತರರಿಗಿಂತ ವಿಭಿನ್ನ ವಿಧಾನವನ್ನೂ ಹೊಂದಿದ್ದಾರೆ. ಅವರ ನಿಖರವಾದ ಮತ್ತು ತಾರ್ಕಿಕ ಚಿಂತನೆಯಿಂದಾಗಿ, ಅವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಎಲ್ಲರೂ ಇವರ ಮೇಲೆ ಅವಲಂಬಿತರಾಗುತ್ತಾರೆ.

ಉದ್ದ, ದೊಡ್ಡ ಹೆಬ್ಬೆರಳು(Long, big toe)
ಕೇವಲ ಹೆಬ್ಬೆರಳು ಮಾತ್ರ ತುಂಬಾ ಉದ್ದವಾಗಿದ್ದು, ಉಳಿದ ನಾಲ್ಕೂ ಬೆರಳು ಸಮಾನ ಉದ್ದವಾಗಿರುತ್ತವೆ. ಕಾಲ್ಬೆರಳುಗಳು ಹೀಗಿದ್ದಾಗ ವ್ಯಕ್ತಿಯು ಬಹಳ ಶಾಂತವಾದ, ಸಮಾನ ಚಿತ್ತದ ವ್ಯಕ್ತಿತ್ವ ಹೊಂದಿರುತ್ತಾನೆ. ಸಮಚಿತ್ತದಿಂದ ಎಲ್ಲ ವಿಷಯಗಳನ್ನು ಸ್ವೀಕರಿಸುವುದಲ್ಲದೆ, ಜೀವನದಲ್ಲಿ ದೊಡ್ಡ ದೊಡ್ಡ ತಪ್ಪುಗಳನ್ನು ಮಾಡಲಾರರು. 

Weekly Horoscope: ಮೇಷಕ್ಕೆ ಸವಾಲಿನ ವಾರ, ಸಿಂಹಕ್ಕೆ ಜವಾಬ್ದಾರಿಗಳ ಭಾರ

ಎರಡನೇ ಬೆರಳು ಉದ್ದವಿದ್ದರೆ
ಕಾಲಿನ ಎರಡನೇ ಬೆರಳು ಉಳಿದೆಲ್ಲ ಬೆರಳುಗಳಿಗಿಂತ ಉದ್ದವಿದ್ದರೆ ಅಂಥ ವ್ಯಕ್ತಿಯು ಎಲ್ಲಿಯೂ ಸುಮ್ಮನೆ ಸಮಯ ವ್ಯರ್ಥ ಮಾಡುತ್ತಾ ಕುಳಿತುಕೊಳ್ಳುವವನಲ್ಲ. ಯಾವಾಗಲೂ ಒಂದಿಲ್ಲೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ಸದಾ ಬ್ಯುಸಿಯಾಗಿರುವ ಇವರು ಸಾಕಷ್ಟು ಹವ್ಯಾಸಗಳನ್ನು ಹೊಂದಿರುತ್ತಾರೆ. ತುಂಬಾ ಸೃಜನಶೀಲರಾಗಿರುತ್ತಾರೆ. ಹೀಗಾಗಿ, ಜೀವನದಲ್ಲಿ ಸಾಕಷ್ಟು ಸ್ನೇಹಿತರನ್ನೂ, ಯಶಸ್ಸನ್ನೂ ನೋಡುತ್ತಾರೆ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Follow Us:
Download App:
  • android
  • ios