Asianet Suvarna News Asianet Suvarna News

ಚಿಕ್ಕ ವಯಸ್ಸಿನಲ್ಲಿಯೇ ಧನವಂತರಾಗುವ ಅದೃಷ್ಟ ಈ ರಾಶಿಯವರಿಗಿದೆ!

ರಾಶಿಚಕ್ರದಲ್ಲಿ ಪ್ರತಿ ರಾಶಿಯಲ್ಲೂ ಒಂದೊಂದು ವಿಶೇಷತೆ ಇರುತ್ತದೆ. ರಾಶಿ ಮತ್ತು ಅಧಿಪತಿ ಗ್ರಹದ ಆಧಾರದ ಮೇಲೆ ರಾಶಿಯ ಸ್ವಭಾವಗುಣಗಳನ್ನು, ಅದೃಷ್ಟ ಯೋಗಗಳನ್ನು ತಿಳಿಯಬಹುದು. ಧನ ಸಮೃದ್ಧಿ, ಅದೃಷ್ಟ, ಬುದ್ಧಿವಂತಿಕೆ, ಪ್ರಾಮಾಣಿಕತೆ, ಪರಿಶ್ರಮ ಹೀಗೆ ಹಲವು ಗುಣಗಳಲ್ಲಿ ಕೆಲವು ರಾಶಿಯವರು ಭಾಗ್ಯಶಾಲಿಗಳಾಗಿರುತ್ತಾರೆ. ಕೆಲವು ರಾಶಿಯವರು ಉತ್ತಮ ವಾಗ್ಮಿಗಳಾದರೆ, ಕೆಲವರು ಚತುರತೆಯನ್ನು ಹೊಂದಿರುತ್ತಾರೆ. ಹಾಗೆಯೇ ಈ ಕೆಲವು ರಾಶಿಯವರು ಚಿಕ್ಕ ವಯಸ್ಸಿನಲ್ಲೇ ಧನವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಆ ರಾಶಿಗಳ ಬಗ್ಗೆ ತಿಳಿಯೋಣ..

These Zodiac signs are fortunate to be rich in their early age
Author
Bangalore, First Published Jul 20, 2020, 2:53 PM IST
  • Facebook
  • Twitter
  • Whatsapp

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡುವುದರ ಮೂಲಕ ವ್ಯಕ್ತಿಯ ಭವಿಷ್ಯದ ಹಲವಾರು ವಿಷಯಗಳನ್ನು ತಿಳಿಯಬಹುದು. ಗುಣ, ಸ್ವಭಾವ, ವಿದ್ಯಾಭ್ಯಾಸ, ವಿವಾಹ, ಉದ್ಯೋಗ, ರಾಜಯೋಗ, ಅದೃಷ್ಟ ಹೀಗೆ ಎಲ್ಲ ವಿಚಾರಗಳನ್ನು ಹುಟ್ಟಿದ ಘಳಿಗೆ, ರಾಶಿ, ನಕ್ಷತ್ರಗಳಿಂದ ತಿಳಿಯಬಹುದು. ಜಾತಕದ ಆಧಾರದ ಮೇಲೆ ವ್ಯಕ್ತಿಯ ಹಣವಂತನಾಗುವನೋ ಅಥವಾ ಜೀವನವನ್ನು ಎಷ್ಟು ವೈಭವಯುತವಾಗಿ ನಡೆಸಬಲ್ಲ ಎಂಬಿತ್ಯಾದಿ ವಿಷಯಗಳನ್ನು ಸಹ ತಿಳಿದುಕೊಳ್ಳಬಹುದಾಗಿದೆ. 

ನಕ್ಷತ್ರ ಮತ್ತು ರಾಶಿಗಳಿಗೆ ಅದರದ್ದೇ ಆದ ಗುಣ ಸ್ವಭಾವಗಳಿರುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಾನ, ಸ್ಥಿತಿಯನ್ನು ಗಮನಿಸುವುದರ ಜೊತೆಗೆ ರಾಶಿ ಮತ್ತು ರಾಶಿಯ ಅಧಿಪತಿ ಗ್ರಹವನ್ನು ತಿಳಿದು ವ್ಯಕ್ತಿಯ ಭವಿಷ್ಯದ ಬಗ್ಗೆ ಹೇಳುತ್ತಾರೆ. ಕೆಲವು ರಾಶಿಯಲ್ಲಿ ಜನಿಸಿದವರು ಅದೃಷ್ಟವಂತರಾದರೆ, ಮತ್ತೆ ಕೆಲವು ರಾಶಿಯವರು ಹೆಚ್ಚು ಬುದ್ಧಿವಂತರಾಗಿರುತ್ತಾರೆ. ರಾಶಿಯ ಅಧಿಪತಿ ಗ್ರಹವು ಶುಭವಾಗಿದ್ದು, ಸಂಪತ್ತು ಮತ್ತು ವೈಭವಕ್ಕೆ ಕಾರಕವಾಗಿದ್ದರೆ ಆ ವ್ಯಕ್ತಿಗಳು ಭಾಗ್ಯಶಾಲಿಗಳಾಗುತ್ತಾರೆ. 

ಇದನ್ನು ಓದಿ: ಈ ಐದು ರಾಶಿಯವರ ಹೆಂಡತಿಯರು ಅದೃಷ್ಟವಂತರು..!

ಹನ್ನೆರಡು ರಾಶಿಗಳಲ್ಲಿ ಪ್ರತಿ ರಾಶಿಯು ಒಂದಕ್ಕಿಂತ ಒಂದು ಭಿನ್ನ ಮತ್ತು ಅದರದ್ದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಕೆಲವು ರಾಶಿಯವರು ಮಾತ್ರ ಹೆಚ್ಚು ಭಾಗ್ಯಶಾಲಿಯಾಗಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಹಣವಂತರಾಗುವ ಅದೃಷ್ಟವನ್ನು ಹೊಂದಿರುತ್ತಾರೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಯಾವ್ಯಾವ ರಾಶಿಯವರಿಗಿದೆ ಬೇಗ ಹಣವಂತರಾಗುವ ಯೋಗ? ಎನ್ನುವ ಬಗ್ಗೆ ತಿಳಿಯೋಣ.

ಮೇಷ ರಾಶಿ
ರಾಶಿಗಳ ಸಾಲಿನಲ್ಲಿ ಮೊದಲಾಗಿರುವ ಮೇಷರಾಶಿಯ ಅಧಿಪತಿ ಗ್ರಹ ಮಂಗಳವಾಗಿದೆ. ಈ ರಾಶಿಯವರಿಗೆ ಹಣ ಸಂಪಾದಿಸುವ ಹುಮ್ಮಸ್ಸು ಬೇರೆ ಎಲ್ಲರಿಗಿಂತ ಕೊಂಚ ಹೆಚ್ಚೇ ಇರುತ್ತದೆ. ಇವರಿಗೆ ಇದರ ಜೊತೆಗೆ ಭಾಗ್ಯವೂ ಕೈ ಜೋಡಿಸುತ್ತದೆ. ಯಾವುದೇ ಕೆಲಸದಲ್ಲೂ ಯಶಸ್ಸನ್ನು ಕಾಣುತ್ತಾರೆ. ಹಣ ಸಂಪಾದಿಸುವ ಅವಕಾಶ ಯಾವಾಗಲೂ ಇವರ ಜೊತೆ ಇರುವ ಕಾರಣ ಜೀವನದಲ್ಲಿ ಸದಾ ಸುಖ ಮತ್ತು ಸಮೃದ್ಧಿಯನ್ನು ಕಾಣುತ್ತಾರೆ. ಭಾಗ್ಯಶಾಲಿಯೂ ಆಗಿರುವ ಈ ರಾಶಿಯವರು ಜೀವನದ ಎಲ್ಲ ಸುಖವನ್ನು ಪಡೆಯುವಲ್ಲಿ ಸಫಲರಾಗುತ್ತಾರೆ.

ಇದನ್ನು ಓದಿ: ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು?

ವೃಷಭ ರಾಶಿ
ಈ ರಾಶಿಯವರು ಸುಖ, ಸಂಪನ್ನತೆ ಮತ್ತು ಐಷಾರಾಮಿ ಜೀವನವನ್ನು ನಡೆಸುತ್ತಾರೆ. ಸುಖ, ವೈಭವ, ಸೌಂದರ್ಯ ಮತ್ತು ಸಮೃದ್ಧಿಯ ಕಾರಕನಾಗಿರುವ ಶುಕ್ರಗ್ರಹವು ಈ ರಾಶಿಯ ಅಧಿಪತಿಯಾಗಿದ್ದಾನೆ. ಹಾಗಾಗಿ ವೃಷಭ ರಾಶಿಯವರು ಭಾಗ್ಯಶಾಲಿಗಳು ಮತ್ತು ಧನವಂತರಾಗಿರುತ್ತಾರೆ. ಈ ರಾಶಿಯರಿಗೆ ಅದೃಷ್ಟ ಯಾವಾಗಲೂ ಜೊತೆಗಿರುವ ಕಾರಣ ಉತ್ತಮ ಉದ್ಯೋಗ ಮತ್ತು ಗೌರವಾದರಗಳು ದೊರೆಯುತ್ತವೆ.

These Zodiac signs are fortunate to be rich in their early age

ಕಟಕ ರಾಶಿ
ಕರ್ಕಟಕ ರಾಶಿಯವರು ತುಂಬಾ ಕಡಿಮೆ ವಯಸ್ಸಿನಲ್ಲೇ ಹಣವಂತರಾಗುತ್ತಾರೆ. ಪರಿಶ್ರಮಿಗಳಾಗಿರುವ ಇವರು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಯಾವುದೇ ಕೆಲಸವನ್ನು ಮನಸ್ಸಿಟ್ಟು ಮಾಡುವ ಇವರಿಗೆ ಭಾಗ್ಯವು ಸದಾ ಜೊತೆಗಿರುತ್ತದೆ. ರಾಶಿಯ ಅಧಿಪತಿ ಚಂದ್ರನಾಗಿರುವ ಕಾರಣ ನೇತೃತ್ವ ಕ್ಷಮತೆ ಉತ್ತಮವಾಗಿರುತ್ತದೆ. 

ಸಿಂಹ ರಾಶಿ
ಈ ರಾಶಿಯವರು ಅದೃಷ್ಟ ಮತ್ತು ಪರಿಶ್ರಮದಿಂದ ಉತ್ತಮ ಜೀವನವನ್ನು ಹೊಂದುತ್ತಾರೆ. ಕಿರಿಯ ವಯಸ್ಸಿನಲ್ಲೇ ಧನವಂತರಾಗುವ ಭಾಗ್ಯ ಸಿಂಹ ರಾಶಿಯವರಿಗಿದೆ. ರಾಶ್ಯಾಧಿಪತಿ ಸೂರ್ಯ, ಹಾಗಾಗಿ ಸೂರ್ಯನಂತೆ ಪ್ರಖರತೆಯಷ್ಟೇ ಸಾಮರ್ಥ್ಯ ಇವರಿಗಿರುತ್ತದೆ. ಐಷಾರಾಮಿ ವಸ್ತುಗಳನ್ನು ಹೊಂದುವ ಆಸಕ್ತಿ ಹೆಚ್ಚಾಗಿರುತ್ತದೆ. ಹಣವಂತರಾಗಿರುವ ಇವರು ವೈಭವಯುತ ಜೀವನವನ್ನು ನಡೆಸುತ್ತಾರೆ.

ಇದನ್ನು ಓದಿ: ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!

ಧನು ರಾಶಿ 
ಧನು ರಾಶಿ ಸಹ ಭಾಗ್ಯಶಾಲಿ ರಾಶಿಗಳ ಪಟ್ಟಿಗೆ ಸೇರುತ್ತದೆ. ಈ ರಾಶಿಯ ಅಧಿಪತಿ ಗುರುಗ್ರಹ. ಹಾಗಾಗಿ ಬುದ್ಧಿವಂತಿಕೆಯ ಜೊತೆಗೆ ಅದೃಷ್ಟವು ಇವರಿಗೆ ಸಂಪತ್ತನ್ನು ತಂದುಕೊಡುತ್ತದೆ. ಐಷಾರಾಮಿ ಜೀವನ ಮತ್ತು ಧನ ಸಮೃದ್ಧಿಯನ್ನು ಪಡೆಯುವ ಯೋಗ ಇವರಿಗೆ ಪ್ರಾಪ್ತವಾಗುತ್ತದೆ. ಮುಖ್ಯವಾಗಿ ಧನು ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆ ಇರುವ ಕಾರಣ ಸುಖಮಯ ಜೀವನವನ್ನು ನಡೆಸುತ್ತಾರೆ.

Follow Us:
Download App:
  • android
  • ios