Asianet Suvarna News Asianet Suvarna News

ಶನಿದೇವರ ಫೋಟೋವನ್ನು ಮನೆ ದೇವರ ಕೋಣೆಯಲ್ಲಿ ಏಕೆ ಇಡಬಾರದು?

ಶಿವ ಲಯಕಾರನಾದರೂ ಹೆದರದ ಭಕ್ತರು ಶನಿ ದೇವರು ಎಂದರೆ ಸ್ವಲ್ಪ ಹೆಚ್ಚೇ ಭಯಪಡುತ್ತಾರೆ. ಕೆಲವೊಮ್ಮ ಜಾತಕದ ಅನುಸಾರವಾಗಿ ಶನಿಯ ಆರಾಧನೆ ಮಾಡಬೇಕಾದ ಪರಿಸ್ಥಿತಿಯೂ ಬಂದೊದಗುತ್ತದೆ. ಆದರೆ, ಇಲ್ಲಿ ಎಷ್ಟು ಜಾಗ್ರತೆ ವಹಿಸಿದರೂ ಕಷ್ಟವೇ. ಸ್ವಲ್ಪ ಹೆಚ್ಚು ಕಮ್ಮಿಯಾದರೂ ಶನಿ ದೇವರ ಸಿಟ್ಟಿಗೆ ತುತ್ತಾಗಬೇಕಾಗುತ್ತದೆ. ಇನ್ನು ಶನಿ ದೇವನನ್ನು ಪ್ರಸನ್ನಗೊಳಿಸಬೇಕು ಎಂದು ಮನೆಯೊಳಗೆ ಶನಿದೇವರ ವಿಗ್ರಹವೋ, ಫೋಟೋವನ್ನಿಟ್ಟರೆ ಏನಾಗುತ್ತದೆ..? ಏಕೆ ಯಾರೂ ಫೋಟೋಗಳನ್ನು ಇಟ್ಟುಕೊಳ್ಳುವುದಿಲ್ಲ ಎಂಬ ಬಗ್ಗೆ ಇಲ್ಲಿ ನೋಡೋಣ…

Why no one keeps lord Shanis photo in the temple of the house
Author
Bangalore, First Published Jul 18, 2020, 7:20 PM IST

ಶನಿಯಿಂದ ಎಷ್ಟೇ ಒಳ್ಳೆಯದಾಗುತ್ತದೆ ಎಂದರೂ ಸ್ವಲ್ಪ ಎಡವಟ್ಟಾದರೂ ಕಷ್ಟಗಳು ಬಂದೀತೆಂಬ ಭಯ ಸಾಮಾನ್ಯವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಹೀಗಾಗಿ ಶನಿದೇವರ ಫೋಟೋ ಇಲ್ಲವೇ ವಿಗ್ರಹಗಳನ್ನು ಮನೆಯ ದೇವರ ಕೋಣೆಗಳಲ್ಲಿ ಸಾಮಾನ್ಯವಾಗಿ ಇಡಲು ಹೋಗುವುದಿಲ್ಲ. ಆದರೆ, ಕೆಲವರು ಧೈರ್ಯ ಮಾಡಿ ಇಟ್ಟರೆಂದರೆ, ಇದರಿಂದ ಅನೇಕ ಕಷ್ಟಗಳೂ ಎದುರಾಗಬಹುದು ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಪೌರಾಣಿಕ ಕಾಲದಿಂದಲೂ ಹಿಂದು ಧರ್ಮದಲ್ಲಿ ಪೂಜೆ ಪುನಸ್ಕಾರಕ್ಕೆ ಅದರದ್ದೇ ಆದ ಸ್ಥಾನಮಾನಗಳನ್ನು ಕೊಡಲಾಗಿದೆ. ಪೂಜೆಗಳನ್ನು ಕೇವಲ ಧನಪ್ರಾಪ್ತಿಗೋಸ್ಕರ ಮಾಡದೆ, ಏಳಿಗೆ, ಸದ್ಗತಿ, ಶಾಂತಿ-ನೆಮ್ಮದಿ, ಸಕಾರಾತ್ಮಕ ಶಕ್ತಿ ನೆಲೆಸಲೂ ಮಾಡುತ್ತಾರೆ. ಸನಾತನ ಸಂಸ್ಕೃತಿಯ ಅನುಸಾರ ಕೆಲವು ದೇವರ ಅನುಷ್ಠಾನ ಹಾಗೂ ಪೂಜೆಗಳನ್ನು ಮಾಡಬೇಕೆಂದಿದ್ದರೆ ಬಹಳ ಜಾಗ್ರತೆ ಅಗತ್ಯವಿದ್ದು, ನಿಯಮಗಳನ್ನು ಅನುಸರಿಸಲೇಬೇಕು. ಹೀಗೆ ಮಾಡದಿದ್ದರೆ ಕಷ್ಟಗಳನ್ನು ನಾವಾಗಿಯೇ ಮೈಮೇಲೆ ಎಳೆದುಕೊಂಡಂತೆ.

ಇದನ್ನು ಓದಿ: ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!.

ದೇವರನ್ನು ಆರಾಧನೆ ಮಾಡುವ ಸಲುವಾಗಿ ನಾವು ಮನೆಯಲ್ಲೇ ಹಲವು ದೇವರ ವಿಗ್ರಹಗಳನ್ನು ಇಟ್ಟು ಪೂಜೆ ಮಾಡುತ್ತೇವೆ. ಆದರೆ, ಯಾರದ್ದೇ ಮನೆಯಿರಲಿ ಶನಿ ದೇವರ ಫೋಟೋ ಅಥವಾ ವಿಗ್ರಹವು ಆ ಮನೆಯ ದೇವರ ಕೋಣೆಯಲ್ಲಿ ಕಾಣುವುದು ಬಹಳ ಅತಿ ವಿರಳವೇ ಎನ್ನಬಹುದು. 

ಶನಿ ದೇವರ ಬಗ್ಗೆ ಜನರಲ್ಲಿ ಭಯ ಇದ್ದೇ ಇದ್ದು, ಅದೇ ಭಯದಲ್ಲಿಯೇ ಶನಿದೇವರ ಪೂಜೆಯನ್ನು ಹೆಚ್ಚು ಮಂದಿ ಮಾಡುತ್ತಾರೆ. ಬೇರೆ ದೇವರನ್ನು ನಂಬಿ ಅದರ ಮೇಲೆ ಭಕ್ತಿ ಇಟ್ಟು ಮಾಡಿದರೆ, ಶನಿಯ ಪೂಜೆಗೆ ಮಾತ್ರ ಭಕ್ತಿ ಜೊತೆಗೆ ಭಯವೂ ಸೇರಿಕೊಂಡಿರುತ್ತದೆ. ಇಲ್ಲಿ ಇನ್ನೊಂದು ಮುಖ್ಯವಾದ ವಿಚಾರವೆಂದರೆ, ಯಾರು ಹಿರಿಯರಿಗೆ ಗೌರವ ಕೊಡುತ್ತಾರೋ, ಇಲ್ಲವೇ ತಂದೆ-ತಾಯಿಯನ್ನು ಬಹಳ ಉತ್ತಮವಾಗಿ ನೋಡಿಕೊಳ್ಳುತ್ತಾರೋ ಅಂಥವರ ಮೇಲೆ ಶನಿ ದೇವರ ಕೃಪೆ ಸದಾ ಇರುತ್ತದೆ. 

Why no one keeps lord Shanis photo in the temple of the house

ಮೂರ್ತಿ ಇಡದಿರಲು ಕಾರಣ
ಯಾವತ್ತೂ ಶನಿ ದೇವರ ಮೂರ್ತಿಯನ್ನು ಮನೆಯ ದೇವರ ಕೋಣೆಯಲ್ಲಿಡಬಾರದು. ಇದನ್ನು ಶಾಸ್ತ್ರ ಹಾಗೂ ಪುರಾಣಗಳ ಪ್ರಕಾರವೇ ಹೇಳಾಗಿದೆ. ಏಕೆಂದರೆ ಶನಿಗೆ ಒಂದು ಶಾಪವಿದೆ. ಶನಿ ಯಾರನ್ನು ನೋಡುತ್ತಾನೋ ಅವರಿಗೆ ಅನಿಷ್ಠ ಇಲ್ಲವೇ ಕೆಟ್ಟದ್ದಾಗುತ್ತದೆ ಎಂಬ ಉಲ್ಲೇಖವಿದೆ. ಹೀಗಾಗಿ ಮನೆಯಲ್ಲಿ ಶನಿದೇವರ ವಿಗ್ರಹವಿಟ್ಟು, ಅವನು ನಮ್ಮನ್ನು ಮನೆಯಲ್ಲಿ ನೋಡುವಂತೆ ಮಾಡಿದರೆ ನಾವೇ ಮೈಮೇಲೆ ಸಮಸ್ಯೆಯನ್ನು ಎಳೆದುಕೊಂಡಂತೆ ಎನ್ನಲಾಗುತ್ತದೆ. ಶನಿದೇವರ ಪೂಜೆ ಮಾಡಿಸಬೇಕು ಎಂದಾದರೆ ಯಾವುದಾದರೂ ದೇವಸ್ಥಾನದಲ್ಲಿ ಮಾಡಿಸಬೇಕು ಎಂದು ಶಾಸ್ತ್ರ ಹೇಳುತ್ತದೆ. 

ಇದನ್ನು ಓದಿ: ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

ಮನೆ ಹೊರತುಪಡಿಸಿ ದೇವಸ್ಥಾನಗಳಲ್ಲೇ ಶನಿ ದೇವರ ಪೂಜೆಯನ್ನು ಏಕೆ ಮಾಡಬೇಕು? ಶನಿ ದೇವರ ದೇವಸ್ಥಾನಗಳಿಗೆ ದರ್ಶನಕ್ಕೆಂದು ಹೋದಾಗ ನೀವು ಏನು ಮಾಡಬೇಕು ಎಂಬ ಬಗ್ಗೆ ಪುರಾಣಗಳಲ್ಲೂ ಉಲ್ಲೇಖಿಸಲಾಗಿದೆ. ಈ ಬಗ್ಗೆ ನೀವು ಮೊದಲು ತಿಳಿದುಕೊಂಡೇ ಹೋದರೆ ಒಳಿತು. ಶನಿ ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ಶನಿ ದೇವರ ಕಾಲುಗಳನ್ನು ನೋಡದೆ, ಅವನ ಕಣ್ಣಿನಲ್ಲಿ ಕಣ್ಣಿಟ್ಟು ದೃಷ್ಟಿ ನೆಡಬೇಕು. ಈ ಮೂಲಕ ದರ್ಶನ ಪಡೆಯಬೇಕು ಎಂದು ಹೇಳಲಾಗುತ್ತದೆ. 

ಮನೆಯಲ್ಲಿಯೇ ಪೂಜೆ ಮಾಡಬೇಕು ಎಂಬ ಭಾವನೆ ನಿಮಗೆ ಇದ್ದಿದ್ದೇ ಆದಲ್ಲಿ ಮೊದಲು ಮನಸ್ಸಿನಲ್ಲಿಯೇ ಸ್ಮರಣೆ ಮಾಡಿಕೊಳ್ಳಿ, ಜೊತೆಗೆ ಶನಿವಾರ ಆಂಜನೇಯನ ಪೂಜೆಯನ್ನೂ ಮಾಡಬೇಕು. ಇದೆಲ್ಲದರ ನಡುವೆ ಶನಿದೇವರನ್ನೂ ಸ್ಮರಿಸಿ. ಹೀಗೆ ಮಾಡುವುದರಿಂದ ಶನಿ ಮಹಾತ್ಮನು ಪ್ರಸನ್ನನಾಗುತ್ತಾನೆ.

ಇದನ್ನು ಓದಿ: ರಾಹುವಿಗೆ ಪ್ರಿಯವಾದ ಉದ್ದಿನಕಾಳಿನ ಮಹಿಮೆ ಬಲ್ಲಿರೇನು?

ಈ ಫೋಟೋ/ಮೂರ್ತಿಗಳನ್ನೂ ಇಡಬೇಡಿ
ಈ ಮೂರ್ತಿಗಳನ್ನು ದೇವರ ಕೋಣೆಗಳಲ್ಲಿ ಇಲ್ಲವೇ ಮನೆಗಳಲ್ಲಿ ಇಡಬಾರದು. ಶನಿ ದೇವರು ಒಂದೇ ಅಲ್ಲದೆ, ರಾಹು-ಕೇತು, ಭೈರವ ಮತ್ತು ನಟರಾಜನ ಮೂರ್ತಿಗಳನ್ನು ಮನೆಯಲ್ಲಿ ಇಡಬಾರದು. ಇವರೆಲ್ಲರ ಆರಾಧನೆ ಮನೆಯಿಂದ ಹೊರಗಡೆಯೇ ಆಗಬೇಕು. ಮನೆಯೊಳಗೆ ಬಂದರೆ ಕಷ್ಟಗಳನ್ನು ಆಹ್ವಾನಿಸಿದಂತೆ ಎಂದು ಹೇಳಲಾಗುತ್ತದೆ.

Follow Us:
Download App:
  • android
  • ios