ಪ್ರತಿ ಸ್ತ್ರೀಯರಿಗೂ ತಮ್ಮ ಮದುವೆ ಬಗ್ಗೆ ಅವರದ್ದೇ ಆದ ಕನಸುಗಳು ಇರುತ್ತವೆ. ತನ್ನ ಗಂಡ ಹೀಗಿರಬೇಕು, ಹಾಗಿರಬೇಕು, ಅಷ್ಟು ಸಂಪಾದಿಸಬೇಕು, ನನ್ನನ್ನು ಹೇಗೆಲ್ಲ ನೋಡಿಕೊಳ್ಳಬೇಕು? ಬಹಳ ಮುಖ್ಯವಾಗಿ ತನ್ನನ್ನು ತುಂಬ ತುಂಬ ತುಂಬಾ ಪ್ರೀತಿ ಮಾಡಬೇಕು ಎಂಬ ಕನಸುಗಳನ್ನು ಹೊತ್ತಿರುತ್ತಾರೆ. ಹೀಗೆ ಜೀವನ ಪರ್ಯಂತ ಪ್ರೀತಿ ಮಾಡುವ ಗಂಡನ್ನು ಹುಡುಕುವುದು ಹೇಗೆ..? ಅದನ್ನು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಹೌದು. ಮದುವೆಗೆ ಮುಂಚೆ ಜಾತಕ ನೋಡುವುದು ಬಹಳ ಮುಖ್ಯವಾಗುತ್ತದೆ. ಇಲ್ಲಿ ಎಲ್ಲ ಹೊಂದಾಣಿಕೆಯಾದ ಮೇಲೆಯೇ ಮದುವೆಗೆ ಅಸ್ತು ಎಂದು ಹೇಳಲಾಗುತ್ತದೆ. ಗಣಗಳ ಲೆಕ್ಕಾಚಾರ, ಗ್ರಹಕೂಟಗಳ ಹೊಂದಾಣಿಕೆ, ರಾಶಿಗಳ ತುಲನೆ ಎಲ್ಲವನ್ನೂ ನೋಡಿರಲಾಗುತ್ತದೆ. ಆದರೆ, ಇಲ್ಲೂ ಒಂದು ನಿಮಗೆ ತಿಳಿದಿರದ ವಿಷಯವಿದೆ. ಕೆಲವೊಂದು ರಾಶಿಯವರನ್ನು ಮದುವೆಯಾದರೆ ಅವರು ಹೆಂಡತಿಯನ್ನು ತುಂಬ ಪ್ರೀತಿ ಮಾಡುತ್ತಾರೆನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ.

ಇದನ್ನು ಓದಿ: ನಿಮ್ಮ ರಾಶಿ ನೋಡಿ ವಾರದ ಈ ದಿನವೇ ವ್ರತ ಮಾಡಿ..!. 

ಈ ಐದು ರಾಶಿಗಳ ಯುವಕರನ್ನು ಮದುವೆಯಾದರೆ ಅವರ ಹೆಂಡತಿಯರಿಗೆ ಅದೃಷ್ಟವೋ ಅದೃಷ್ಟ. ಅಷ್ಟರ ಮಟ್ಟಿಗೆ ಅವರನ್ನು ಇಷ್ಟಪಡುತ್ತಾರೆ. ಅದೂ ಜೀವನ ಪರ್ಯಂತ. ಯಾವುದೇ ಕಪಟವಿಲ್ಲದೆ, ನಿಷ್ಕಲ್ಮಶ ಪ್ರೀತಿಯನ್ನು ನೀಡುತ್ತಾರೆ. ಹಾಗಾದರೆ ಈ ಐದು ರಾಶಿ ಯಾವುದು ಎಂಬ ಬಗ್ಗೆ ನೋಡೋಣವೇ..?

1. ಕುಂಭ ರಾಶಿ
ಇದೊಂದು ಇಂಟರೆಸ್ಟಿಂಗ್ ರಾಶಿ. ಈ ರಾಶಿಯ ಹುಡುಗರ ಮೇಲೆ ಹುಡುಗಿಯರಿಗೆ ಅದೇನೋ ಒಂಥರ ಆಕರ್ಷಣೆ. ಇವರು ಅಷ್ಟೇನೂ ರೊಮ್ಯಾಂಟಿಕ್ ಆಗಿರದಿದ್ದರೂ ಪ್ರೀತಿ ಮಾಡುವುದರಲ್ಲಿ, ಪ್ರೀತಿಯನ್ನು ನೀಡುವುದರಲ್ಲಿ ಮೊದಲಿಗರು. ಮಡದಿಯನ್ನು ಬಹಳವೇ ಪ್ರೀತಿಸುವ ಇವರು, ಆಕೆಯ ಪ್ರತಿ ಕಾರ್ಯದಲ್ಲೂ, ಹೆಜ್ಜೆಯಲ್ಲೂ ಸಹಾಯವನ್ನು ಮಾಡುತ್ತಾರೆ. 

ಇದನ್ನು ಓದಿ: ಅಪರಾಧಿಯಾಗಲು ಜಾತಕದ ಈ ಗ್ರಹಗಳೇ ಕಾರಣ!

2. ವೃಷಭ ರಾಶಿ
ಈ ರಾಶಿ ಹೊಂದಿರುವ ಪತಿ ತನ್ನ ಹೆಂಡತಿಯ ಎಲ್ಲ ಮನೋಕಾಮನೆಗಳನ್ನೂ ಪೂರೈಸುತ್ತಾನೆ. ಆಕೆಗೆ ಯಾವುದೇ ಕಾರಣಕ್ಕೂ ಬೇಸರವನ್ನುಂಟು ಮಾಡುವುದಿಲ್ಲ. ಇವರಿಗೆ ಹೆಚ್ಚು ಸಿಟ್ಟು ಮಾಡುವ ಗುಣವಿದ್ದರೂ ಹೆಂಡತಿಗೆ ಯಾವತ್ತೂ ಮೋಸವನ್ನು ಮಾಡುವುದಿಲ್ಲ. ಅಷ್ಟರ ಮಟ್ಟಿಗೆ ನಿಷ್ಠೆಯನ್ನು ತೋರುತ್ತಾರೆ.

3. ಕರ್ಕಾಟಕ ರಾಶಿ
ಈ ರಾಶಿಯವರು ಒಂದು ರೀತಿಯ ಭಾವನಾ ಜೀವಿಗಳಾಗಿದ್ದು, ಹೆಂಡತಿಯನ್ನು ಹೇಗೆಲ್ಲಾ ನೋಡಿಕೊಳ್ಳಬೇಕು, ಮೆಚ್ಚಿಸಬೇಕು ಎಂಬ ಬಗ್ಗೆ ಸದಾ ಯೋಚಿಸುತ್ತಿರುತ್ತಾರೆ. ಹೀಗಾಗಿ ಮಡದಿಗೆ ಸರ್ಪ್ರೈಸ್ ಕೊಡಲು ಹೆಚ್ಚು ಇಷ್ಟಪಡುತ್ತಾರೆ. ಆ ಮೂಲಕ ಆಕೆಯನ್ನು ಸಂತೋಷವಾಗಿಡಲು ಪ್ರಯತ್ನಿಸುವುದಲ್ಲದೆ, ಸ್ವಲ್ಪ ತೋರಿಕೆ ಸ್ವಭಾವವನ್ನೂ ಹೊಂದಿರುತ್ತಾರೆ. ಏನೇ ತೋರಿಕೆಗಳನ್ನು ಪ್ರದರ್ಶಿಸಿದರೂ ಹೆಂಡತಿಯನ್ನು ಮಾತ್ರ ಬಹಳವಾಗಿಯೇ ಪ್ರೀತಿ ಮಾಡುತ್ತಾರೆ. 

4. ಸಿಂಹ ರಾಶಿ
ಈ ರಾಶಿಯ ಹುಡುಗರ ವ್ಯಕ್ತಿತ್ವವೇ ಹಾಗೆ ಬಹುಬೇಗ ಎದುರಿಗಿನವರನ್ನು ಸೆಳೆದುಬಿಡುತ್ತಾರೆ. ಅಂಥದ್ದರಲ್ಲಿ ಹುಡುಗಿಯರು ಇಷ್ಟಪಡದೇ ಇರುತ್ತಾರೆಯೇ? ಇವರನ್ನು ನೋಡುತ್ತಿದ್ದಂತೆ ಇವರ ವ್ಯಕ್ತಿತ್ವಕ್ಕೆ ಮಾರುಹೋಗಿ ಪ್ರೀತಿಯಲ್ಲಿ ಬೀಳುತ್ತಾರೆ. ಈ ಮೂಲಕ ಅವರಿಗೆ ಆಕರ್ಷಿತರಾಗಿಬಿಟ್ಟಿರುತ್ತಾರೆ. ಈ ರಾಶಿಯ ಹುಡುಗರು ಹೆಂಡತಿಯನ್ನು ತುಂಬಾ ಪ್ರೀತಿ ಮಾಡುವ ಮೂಲಕ ಬಹಳ ಒಳ್ಳೆಯ ಗಂಡ ಎಂಬುದನ್ನು ತೋರಿಸುತ್ತಾರೆ. ಹೀಗೆ ಇಂಥ ಪತಿಯ ಪ್ರೀತಿಯನ್ನು ಅಷ್ಟೇ ಆದರದಿಂದ ಪತ್ನಿಯೂ ಸ್ವೀಕರಿಸುತ್ತಾಳೆ.

ಇದನ್ನು ಓದಿ: ರಾಹುವಿಗೆ ಪ್ರಿಯವಾದ ಉದ್ದಿನಕಾಳಿನ ಮಹಿಮೆ ಬಲ್ಲಿರೇನು?

5. ತುಲಾ ರಾಶಿ
ಆಶ್ಚರ್ಯವಾದರೂ ಇದು ಸತ್ಯ. ಈ ರಾಶಿಯ ಹುಡುಗರು ಸ್ವಲ್ಪ ಕಟ್ಟುನಿಟ್ಟು. ಯಾವುದೇ ಅಡ್ಡ ಆಲೋಚನೆಗಳು, ಪ್ರಲೋಬನೆಗಳಿಗೆ ಒಳಗಾಗದೆ ಮನೆ ಪತಿಯಂತಿರುತ್ತಾರೆ. ಅಂದರೆ, ತಮ್ಮ ಹೆಂಡತಿಯರಿಗೆ ತುಂಬಾ ನಿಷ್ಠೆ ಹಾಗೂ ಪ್ರಾಮಾಣಿಕರಾಗಿರುತ್ತಾರೆ. ಈ ರಾಶಿಯ ಹುಡುಗನನ್ನು ಮದುವೆಯಾದ ಯುವತಿಯ ಅದೃಷ್ಟ ತುಂಬಾ ಒಳ್ಳೆಯದು ಎಂದೇ ಹೇಳಬಹುದು. ಕಾರಣ, ಆಕೆಯನ್ನು ಸದಾ ಖುಷಿಯಲ್ಲಿಟ್ಟುರುತ್ತಾನೆ. ಮಡದಿಯ ಮನಸ್ಸನ್ನು ಅರಿತು,ಹೊಂದಾಣಿಕೆಯಿಂದ ಬಾಳ್ವೆ ಮಾಡುವ ಮನಸ್ಥಿತಿಯನ್ನು ಹೊಂದಿರುತ್ತಾನೆ.