Asianet Suvarna News Asianet Suvarna News

ಈ ರಾಶಿಗಳ ಜನ ಬಹುಬೇಗ ತಂತ್ರಜ್ಞಾನದ ವ್ಯಸನಿಗಳಾಬಲ್ಲರು

ನಾವೆಲ್ಲರೂ ಇಂದು ಒಂದಲ್ಲ ಒಂದು ರೀತಿಯಲ್ಲಿ ತಂತ್ರಜ್ಞಾನದ ವ್ಯಸನ ಹೊಂದಿದ್ದೇವೆ. ಅಗತ್ಯವಿಲ್ಲದಿದ್ದರೂ ಮೊಬೈಲ್‌ ನೋಡುತ್ತ ಕಾಲ ಕಳೆಯುವುದು ಇದಕ್ಕೆ ಸಾಕ್ಷಿ. ಆದರೂ ಕೆಲವು ರಾಶಿಯ ಜನ ಇದರಲ್ಲಿ ಇನ್ನೂ ಮುಂದೆ. ಈ ರಾಶಿಗಳ ಜನ ಬೇರೆಲ್ಲರಿಗಿಂತ ಬೇಗ ತಂತ್ರಜ್ಞಾನದ ವ್ಯಸನ ಹೊಂದುತ್ತಾರೆ.
 

These zodiac sign people can be addicted to technology
Author
First Published Sep 2, 2022, 7:03 PM IST

ಎಲ್ಲರೂ ಇಂದು ತಂತ್ರಜ್ಞಾನದ ದಾಸರಾಗಿದ್ದೇವೆ. ಎಲ್ಲರೂ ಒಂದಲ್ಲ ಒಂದು ರೀತಿಯ ತಂತ್ರಜ್ಞಾನವನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡಿದ್ದೇವೆ. ತಂತ್ರಜ್ಞಾನದ ಒಂದು ಸ್ವರೂಪವಾದ ಮೊಬೈಲ್‌ ಬಳಕೆಯನ್ನೇ ತೆಗೆದುಕೊಂಡರೆ, ಮೊಬೈಲ್‌ ಇಲ್ಲದೆ ನಾವಿಂದು ಬದುಕಲಾರೆವು. ಬಹಳಷ್ಟು ಜನ ಮೊಬೈಲ್‌ ಇಲ್ಲದೆ ಅರ್ಧ ಗಂಟೆಯೂ ಇರಲಾರರು. ಸುದ್ದಿ, ಹೊಸ ಪ್ರಕಟಣೆ, ಆಹಾರ-ಬಟ್ಟೆ ಖರೀದಿ, ಬ್ಯಾಂಕಿಂಗ್‌ ಮುಂತಾದ ಕೆಲಸಗಳಿಗೆ ಮೊಬೈಲೇ ಇಂದು ಆಧಾರ. ಮೊಬೈಲೊಂದು ಕೈಲಿದ್ದರೆ ಎಷ್ಟು ಗಂಟೆ ಸಮಯವನ್ನಾದರೂ ನಾವು ಕಳೆಯಬಲ್ಲೆವು. ಎಲ್ಲಾದರೂ ಕಾಯಬೇಕಾದ ಪರಿಸ್ಥಿತಿ ಬಂದಾಗ ಮೊಬೈಲ್‌ ಒಂದಿದ್ದರೆ ಸಾಕು. ಅದಿಲ್ಲವಾದರೆ, ಕಾಯುವಿಕೆ ಸಾಕುಸಾಕೆನಿಸುತ್ತದೆ. ಸುಮ್ಮನೆ ಮೊಬೈಲ್‌ ಸ್ಕ್ರೀನ್‌ ಮೇಲೆ ಕೈಯಾಡಿಸುತ್ತ, ಒಮ್ಮೆ ಸ್ಕ್ರಾಲ್‌ ಮಾಡುತ್ತ ಸಮಯ ಯಾಪನೆ ಮಾಡುತ್ತೇವೆ. ಕೆಲವರು ಮೊಬೈಲ್‌ ಮಾತ್ರವಲ್ಲ, ಟ್ಯಾಪ್‌ ಟಾಪ್‌, ಟ್ಯಾಬ್‌, ಸೇರಿದಂತೆ ಇನ್ನಿತರ ಸ್ಮಾರ್ಟ್‌ ಸಲಕರಣೆಗಳನ್ನು ಬಳಸುವಲ್ಲೂ ತಜ್ಞತೆ ಹೊಂದಿರುತ್ತಾರೆ. ಅಷ್ಟೇ ಅಲ್ಲ, ದೈನಂದಿನ ಕಾರ್ಯಕ್ಕೆ ಅಗತ್ಯವಲ್ಲದಿದ್ದರೂ ಬಳಕೆ ಮಾಡುವಲ್ಲಿ ಆಸಕ್ತಿ ತಳೆದಿರುತ್ತಾರೆ. ಗ್ಯಾಜೆಟ್‌ ಗಳ ಬಳಕೆಗೆ ಸಂಬಂಧಿಸಿ ಒಂದಿಷ್ಟು ಗೀಳು ಹೊಂದಿರುತ್ತಾರೆ. ಅಷ್ಟೇ ಏಕೆ, ಗ್ಯಾಜೆಟ್‌ ಗಳ ವ್ಯಸನವನ್ನೂ ಹೊಂದಿರುವವರು ಸಾಕಷ್ಟಿದ್ದಾರೆ. ಕೆಲವರಿಗೆ ಗ್ಯಾಜೆಟ್‌ ಗಳನ್ನು ಎಷ್ಟು ಪ್ರಮಾಣದಲ್ಲಿ, ಯಾವಾಗ ಬಳಕೆ ಮಾಡಬೇಕೆಂಬ ಸ್ಪಷ್ಟತೆ ಇರುವುದಿಲ್ಲ. ಬೇಕಾಬಿಟ್ಟಿ ಬಳಕೆ ಮಾಡುತ್ತಾರೆ. ಗ್ಯಾಜೆಟ್‌ ಒಂದನ್ನೇ ತಮ್ಮ ಪ್ರಪಂಚವನ್ನಾಗಿ ಮಾಡಿಕೊಳ್ಳುತ್ತಾರೆ. ಕೆಲವು ನಿರ್ದಿಷ್ಟ ರಾಶಿಗಳ ಜನರು ಇದರಲ್ಲಿ ಭಾರೀ ಮುಂದೆ. ಅವರು ಗ್ಯಾಜೆಟ್‌ ಗಳ ವ್ಯಸನಕ್ಕೆ ತುತ್ತಾಗಬಲ್ಲರು. ಆ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ.

•    ಮೇಷ (Aries)
ಮೇಷ ರಾಶಿಯ (Zodiac Sign) ಜನ ತಮ್ಮ ರೂಢಿಗತ ಜೀವನಶೈಲಿಯ (Routine) ಬಗ್ಗೆ ಭಾರೀ ಬೇಗ ಬೇಸರ (Bore) ಹೊಂದುತ್ತಾರೆ. ಇವರ ಪಾಲಿಗೆ ತಂತ್ರಜ್ಞಾನ (Technology) ದೈನಂದಿನ ಬೇಸರದ ಜೀವನದಿಂದ ಬಿಡುಗಡೆಯ ಹಾದಿಯಾಗಿ ತೋರುತ್ತದೆ. ಇವರು ತಂತ್ರಜ್ಞಾನದ ವ್ಯಸನಕ್ಕೆ (Addiction) ತುತ್ತಾಗಬಲ್ಲರು.  ಆನ್‌ ಲೈನ್‌ (Online) ಪ್ರಪಂಚದ ಗಾಸಿಪ್‌ ಗಳನ್ನು ಇಷ್ಟಪಡುತ್ತಾರೆ. ನೈಜವಾದ ಪ್ರಪಂಚದ ಸತ್ಯವನ್ನು ಮರೆತು ಮೊಬೈಲ್‌ ನಲ್ಲಿ ಮುಳುಗಬಲ್ಲರು. ಬೇರೆ ಯಾವ ಕೆಲಸವನ್ನಾದರೂ ಬಿಡಲು ಸಿದ್ಧರಾಗಬಲ್ಲರು, ಮೊಬೈಲ್‌ ಮಾತ್ರ ಬೇಕೇ ಬೇಕು ಎನ್ನುವ ಸ್ಥಿತಿ ತಲುಪಬಲ್ಲರು.

ಯಾವ ರಾಶಿಯವರಿಗೆ ಯಾವ ಉದ್ಯೋಗ ಬೆಸ್ಟ್? ಇಲ್ಲಿದೆ ಲಿಸ್ಟ್

•    ಮಿಥುನ (Gemini)
ಮಿಥುನ ರಾಶಿಯವರು ಸಾಮಾಜಿಕವಾಗಿ (Social) ಹೆಚ್ಚು ಬೆರೆಯುವ ವ್ಯಕ್ತಿತ್ವ ಹೊಂದಿರುತ್ತಾರೆ. ಹೀಗಾಗಿ, ಸೋಷಿಯಲ್‌ ಮೀಡಿಯಾ (Social Media) ಮತ್ತು ಗ್ಯಾಜೆಟ್‌ (Gadget) ಗಳು ಇವರನ್ನು ಸೆಳೆಯುತ್ತದೆ. ಅಂತರ್ಜಾಲ ಮತ್ತು ತಂತ್ರಜ್ಞಾನದ ಸಹಕಾರದಿಂದ ಸಂವಹನ ಮಾಡಬೇಕೆಂಬ ತಮ್ಮ ಬಯಕೆಯನ್ನು ಪೂರೈಸಿಕೊಳ್ಳುತ್ತಾರೆ. ದಿನದಲ್ಲಿ ಎಷ್ಟು ಸಮಯ ಗ್ಯಾಜೆಟ್‌ ನಲ್ಲಿ ಕಳೆದೆ ಎನ್ನುವ ಬಗ್ಗೆ ಗಮನ ಇಡುವುದಿಲ್ಲ. ಒಂದೊಮ್ಮೆ ಫೋನ್‌ ಇಲ್ಲವಾದರೆ ಆತಂಕ ಮತ್ತು ಕಿರಿಕಿರಿ ಅನುಭವಿಸುತ್ತಾರೆ.

•    ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನ ನೇರವಾಗಿ ಜನರೊಂದಿಗೆ ಸಂಪರ್ಕ (Communication) ಸಾಧಿಸಲು ಸ್ವಲ್ಪ ಹಿಂದೇಟು ಹಾಕುತ್ತಾರೆ. ಜನ ತಮಗೆ ಮೋಸ ಮಾಡಬಹುದು ಎನ್ನುವ ಭಾವನೆ ಹೊಂದಿರುತ್ತಾರೆ. ಹೀಗಾಗಿ, ಗ್ಯಾಜೆಟ್‌ ಮೂಲಕ ಜನರ ಸಂಪರ್ಕ ಬೆಳೆಸುತ್ತಾರೆ. ಅಂತರ್ಜಾಲಗಳನ್ನು ಮೋಸಕ್ಕೆ ಒಳಗಾಗದೆ ಜನರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನಾಗಿ ಪರಿಗಣಿಸುತ್ತಾರೆ. ಅಂತರ್ಜಾಲದ ಸೌಲಭ್ಯ ಇಲ್ಲವಾದರೆ ಕೆಲವೇ ಸಮಯದಲ್ಲಿ ಪರಿತಪಿಸುತ್ತಾರೆ.

Zodiac Sign Special: ಜನ್ಮರಾಶಿಯ ಪ್ರಕಾರ ಇದನ್ನು ಸಾಧಿಸದೇ ನೀವು ಸಾಯುವುದಿಲ್ಲ!

•    ಧನು (Sagittarius) 
ನೈಜ ಬದುಕಿನಲ್ಲಾಗಲೀ ತಂತ್ರಜ್ಞಾನದಲ್ಲಾಗಲೀ ಹೊಸ ವಿಚಾರಗಳನ್ನು ಅರಿಯುವಲ್ಲಿ ಧನು ರಾಶಿಯ ಜನ ಹಿಂದೇಟು ಹಾಕುವುದಿಲ್ಲ. ಹೊಸ ಅನ್ವೇಷಣೆಗಳನ್ನು ಅರಿತುಕೊಳ್ಳಲು ಇವರಿಗೆ ಆಸಕ್ತಿ ಹೆಚ್ಚು. ಹೊಸ ಸಲಕರಣೆ (Device), ಹೊಸ ಆಪ್‌ (App) ಅರ್ಥ ಮಾಡಿಕೊಳ್ಳಲು, ಅದರಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಈ ಮೂಲಕ ತಂತ್ರಜ್ಞಾನಕ್ಕಾಗಿ ಸಾಕಷ್ಟು ಸಮಯ ವ್ಯಯ ಮಾಡುತ್ತಾರೆ. 

Follow Us:
Download App:
  • android
  • ios