Asianet Suvarna News Asianet Suvarna News

Zodiac Sign Special: ಜನ್ಮರಾಶಿಯ ಪ್ರಕಾರ ಇದನ್ನು ಸಾಧಿಸದೇ ನೀವು ಸಾಯುವುದಿಲ್ಲ!

ನೀವು ಇಂದು ಜೀವನದಲ್ಲಿ ಏನೂ ಅಲ್ಲದಿರಬಹುದು. ಆದರೆ ಸಾಧಿಸುವ ಛಲ, ಬುದ್ಧಿವಂತಿಕೆ, ಪ್ರತಿಭೆ ಇವುಗಳು ನಿಮ್ಮನ್ನು ಎಲ್ಲಿಂದ ಎಲ್ಲಿಗೋ ಒಯ್ದು ಮುಟ್ಟಿಸಬಲ್ಲವು. ನಿಮ್ಮ ಜನ್ಮರಾಶಿಗೆ ಅನುಗುಣವಾಗಿ, ನೀವು ಇವುಗಳನ್ನು ಸಾಧಿಸುತ್ತೀರಿ ಎಂದು ಹೇಳಬಹುದು. ಅದರ ಕಡೆ ನಿಮ್ಮ ದೃಷ್ಟಿಯಿಡಿ.

 

you cant die with out achieving this according to your zodiac signs
Author
First Published Sep 2, 2022, 2:00 PM IST

ನಿಮ್ಮ ಮಹತ್ವಾಕಾಂಕ್ಷೆಗಳು, ಆಯ್ಕೆಗಳು, ಆದ್ಯತೆಗಳು, ಕನಸುಗಳು ಮತ್ತು ಉದ್ದೇಶಗಳು ಸಮಾಜದಲ್ಲಿ ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ಜ್ಯೋತಿಷ್ಯ ಪ್ರಕಾರ ನಿಮ್ಮ ವ್ಯಕ್ತಿತ್ವ, ಆಯ್ಕೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ನಿರ್ಧರಿಸುವಲ್ಲಿ ನಿಮ್ಮನ್ನು ಆಳುವ ಗ್ರಹಗಳು, ನಿಮ್ಮ ಜನ್ಮರಾಶಿ ಮೂಲಭೂತ ಪಾತ್ರವನ್ನು ವಹಿಸಿದೆ. ಪ್ರತಿ ವ್ಯಕ್ತಿಯೂ ವಿಶಿಷ್ಟ. ಆದ್ದರಿಂದ ವಿಭಿನ್ನ ಗುರಿಗಳು ಮತ್ತು ಉದ್ದೇಶಗಳನ್ನು ಹೊಂದಿರುತ್ತಾನೆ. ನಿಮ್ಮ ಜೀವನದ ಉದ್ದೇಶವನ್ನು ಗುರುತಿಸಲು ಮತ್ತು ಅರ್ಥ ಮಾಡಿಕೊಳ್ಳಲು ನಿಮಗೆ ರಾಶಿಚಕ್ರದ ಸಾಧನಾ ವಿವರವನ್ನು ಇಲ್ಲಿ ಕೊಡಲಾಗಿದೆ.

ಮೇಷ ರಾಶಿ (Aries)
ಮೇಷ ರಾಶಿಯು ಬಹಳ ಸ್ಪರ್ಧಾತ್ಮಕ ಮತ್ತು ಉತ್ಸಾಹದ ಸಂಕೇತ ಇರುವಂಥದು. ಜೀವನದಲ್ಲಿ ಮೇಷ ರಾಶಿಯ ಮುಖ್ಯ ಉದ್ದೇಶ ಎಲ್ಲಾ ಕ್ಷೇತ್ರಗಳಲ್ಲಿ ಸುಲಭವಾಗಿ ಮುನ್ನಡೆಯುವುದು. ಅದು ಕಲೆ, ಸಂಸ್ಕೃತಿ, ಮನರಂಜನೆ ಇತ್ಯಾದಿಗಳಲ್ಲಿ ಇರಬಹುದು. ಹೀಗಾಗಿ ನೀವು ರಿಯಲ್‌ ಎಂಟರ್‌ಟೈನರ್‌ ಆಗದೇ ಸುಮ್ಮನಾಗಬೇಡಿ. ನಿಮ್ಮ ಮಿತಿಯಿಲ್ಲದ ಶಕ್ತಿ, ಕಡಿವಾಣವಿಲ್ಲದ ಉತ್ಸಾಹ ಮತ್ತು ಭರವಸೆಯೊಂದಿಗೆ ಜನರನ್ನು ಪ್ರೇರೇಪಿಸುವುದು ನಿಮ್ಮ ಗುರಿ. ಸ್ವಾಭಾವಿಕ, ಕ್ರಿಯಾತ್ಮಕ ಮತ್ತು ಸಾಹಸ ಮನೋಭಾವವನ್ನು ಹೊಂದಿದ್ದೀರಿ. ನಿಮ್ಮ ಸ್ವತಂತ್ರ ಸ್ವಭಾವದಿಂದಾಗಿ ನೀವು ನಾಯಕನಾಗಬಹುದು.

ವೃಷಭ ರಾಶಿ (taurus)
ವೃಷಭ ರಾಶಿಯು ಸ್ಥಿರತೆಗಾಗಿ ಶ್ರಮಿಸುತ್ತದೆ. ಯಾವುದೇ ಯೋಜನೆಯ ಅಡಿಪಾಯವಾಗಬಲ್ಲದು. ಇವರ ಜೀವನದ ಉದ್ದೇಶ ತಮ್ಮ ಮತ್ತು ಸುತ್ತಮುತ್ತಲಿನ ಜನರಿಗೆ ವಿಶ್ವಾಸಾರ್ಹ ಬದುಕು ಕಲ್ಪಿಸುವುದು. ನೀವು ಯಾವುದಕ್ಕಾಗಿ ಇದ್ದೀರಿ ಎಂಬುದರ ಬಗ್ಗೆ ಬಲವಾದ ಕಲ್ಪನೆಯನ್ನು ಹೊಂದಿರಿ. ನಿಮ್ಮ ಶಕ್ತಿಯುತ, ದೃಢವಾದ ಶಕ್ತಿಯನ್ನು ನೆಚ್ಚಿರಿ. ನೀವು ಬಂಡೆಯಂತೆ ಇತರರು ಅವಲಂಬಿಸಬಹುದಾದ ವ್ಯಕ್ತಿ. ಉತ್ಪಾದಕ ಮತ್ತು ಪ್ರಾಮಾಣಿಕ. ನೀವು ಯಾವುದೇ ಸಂಸ್ಥೆಯ ಆಧಾರಸ್ತಂಭವಾಗಬಹುದು. ಅಥವಾ ನೀವೇ ಒಂದು ಸಂಸ್ಥೆಯನ್ನು ಸ್ಥಾಪಿಸಿದರೆ ಗ್ರೇಟ್‌ ಉದ್ಯಮಿಯಾಗುತ್ತೀರಿ.

ಮಿಥುನ ರಾಶಿ (gemini)
ಮಿಥುನವು ಎಲ್ಲಕ್ಕಿಂತ ಸಾಮಾಜಿಕ ಒಡನಾಡಿ. ಮಿಥುನ ರಾಶಿಯ ಮುಖ್ಯ ಉದ್ದೇಶ ಜನರನ್ನು ಒಟ್ಟುಗೂಡಿಸುವುದು, ಅವರನ್ನು ಒಂದುಗೂಡಿಸುವುದು. ಇವರು ಅಪರಿಚಿತರೊಂದಿಗೆ ಮಾತನಾಡಲು ಮತ್ತು ಎಲ್ಲರೊಂದಿಗೆ ಸ್ನೇಹ (Friendship) ಬೆಳೆಸಲು ಇಷ್ಟಪಡುತ್ತಾರೆ. ನಿರಂತರ ಕುತೂಹಲ ಇರುವವರು. ನಿಮಗೆ ಹೆಚ್ಚು ದಿನಚರಿ ಅಥವಾ ಜವಾಬ್ದಾರಿಯೊಂದಿಗೆ ಅಂಟಿಕೊಳ್ಳದಂತಹ ಉತ್ತೇಜಕ ಕೆಲಸ ಅಗತ್ಯ. ಟ್ರೆಕ್ಕರ್‌ ಆಗಿ, ಪೇಂಟಿಂಗ್‌ ಮಾಡಿ, ಸಾಹಿತ್ಯ ಬರೆಯಿರಿ ಅಥವಾ ಕೌನ್ಸೆಲಿಂಗ್‌ (Counselling) ಮಾಡಿ. ಯಾವುದನ್ನೇ ಮಾಡಿದರೂ ಕ್ರಿಯೇಟಿವ್‌ ಆಗಿ ಮಾಡುತ್ತೀರಿ.

ಕಟಕ ರಾಶಿ (cancer)
ಜೀವನದಲ್ಲಿ ಕಟಕದವರ ಮುಖ್ಯ ಉದ್ದೇಶವೆಂದರೆ ಬೇಷರತ್ತಾಗಿ ಪ್ರೀತಿಸುವುದು ಹೇಗೆ ಎಂದು ಜಗತ್ತಿಗೆ ತೋರಿಸುವುದು. ಇವರು ನೀವು ಅವಲಂಬಿಸಬಹುದಾದ ಉತ್ತಮ ವ್ಯಕ್ತಿಗಳು. ನಿಮಗೆ ಅಗತ್ಯವಿರುವಾಗ ಇವರು ಯಾವಾಗಲೂ ನಿಮ್ಮೊಂದಿಗೆ ಇರುತ್ತಾರೆ. ನೀವು ಬಹು ದೃಢವಾದ ಕುಟುಂಬವನ್ನು ಕಟ್ಟುವಲ್ಲಿ ಆಧಾಸ್ತಂಭದಂತೆ ಕೆಲಸ ಮಾಡುತ್ತೀರಿ. ಪೋಷಣೆಯನ್ನು ಮಾಡುತ್ತೀರಿ. ನಿಮ್ಮದು ಮಾತೃಹೃದಯ (Mother's Heart). ಎಲ್ಲರಿಗೂ ಕಾಳಜಿ ವಹಿಸುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ನೀವು ಅತ್ಯುತ್ತಮ ಸಲಹೆಗಾರರಾಗುವಿರಿ. ಸಂಸ್ಥೆಯ ಕ್ರಿಯೇಟಿವ್‌ ಹೆಡ್‌ (Creative) ಅಥವಾ ಎಚ್‌ಆರ್‌ ಆಗುವಿರಿ.

Luck ನಿಮ್ಮದಾಗಬೇಕಾ? ಸ್ವಲ್ಪ ಹೀಗ್ ಮಾಡಿ ನೋಡಿ, ಅದೃಷ್ಟ ಖುಲಾಯಿಸದೇ ಇರುತ್ತಾ ನೀವೇ ಹೇಳಿ?

ಸಿಂಹ ರಾಶಿ (leo)
ಇವರು ಹೋದಲ್ಲೆಲ್ಲಾ ತಮ್ಮದೇ ಆದ ಬೆಳಕನ್ನು ಸೃಷ್ಟಿಸುತ್ತಾರೆ, ತಮ್ಮ ವ್ಯಕ್ತಿತ್ವ ಮತ್ತು ವರ್ಚಸ್ಸಿನಿಂದ ಜನರನ್ನು ಮಂತ್ರಮುಗ್ಧಗೊಳಿಸುತ್ತಾರೆ. ಇವರ ಜೀವನದ ಮುಖ್ಯ ಉದ್ದೇಶವೆಂದರೆ ಜಗತ್ತಿಗೆ ಧೈರ್ಯ ತುಂಬುವುದು. ನೀವು ಜನಸಂದಣಿಯಿಂದ ಪ್ರತ್ಯೇಕವಾಗಿ ನಿಲ್ಲಲು ಹುಟ್ಟಿದ್ದೀರಿ. ನೀವು ಬದುಕಿನ ಪ್ರಯಾಣವು ನಿಮ್ಮ ಸೃಜನಶೀಲ ಶಕ್ತಿಯನ್ನು ಅನ್ವೇಷಿಸಲು ಮತ್ತು ನಿಮ್ಮೊಳಗೆ ಇರುವ ಶಕ್ತಿಯನ್ನು ಪೋಷಿಸಲು ನಡೆಯುತ್ತದೆ. ನೀವು ಆಧ್ಯಾತ್ಮಿಕವಾಗಿ (Spiritual) ಉನ್ನತ ಸಾಧನೆ ಮಾಡಿದರೆ ಏನೂ ಅಚ್ಚರಿಪಡಬೇಕಿಲ್ಲ.

ಕನ್ಯಾ ರಾಶಿ (virgo)
ಕನ್ಯಾ ರಾಶಿಯವರು ಬಹಳ ವಾಸ್ತವಿಕ ವ್ಯಕ್ತಿಗಳು. ಮಾನವಕುಲದಲ್ಲಿ ಶಾಂತಿಯನ್ನು ತರುವುದು ಇವರ ಜೀವನದ ಉದ್ದೇಶ. ಹೀಗಾಗಿ ನೀವು ಬಹುದೊಡ್ಡ ಧಾರ್ಮಿಕ ಅಥವಾ ರಾಜಕೀಯ ವ್ಯಕ್ತಿ ಆಗಬಹುದು. ಯಾವುದೇ ಪರಿಸ್ಥಿತಿಯಲ್ಲಿ ಪ್ರಮುಖ ಪಾತ್ರ ವಹಿಸಲು ನಿಮಗೆ ಕೌಶಲ್ಯ (Skill) ಇರುತ್ತದೆ. ನಿಮ್ಮ ರಾಶಿಚಕ್ರದ ಪ್ರಕಾರ ನೀವು ಶ್ರದ್ಧಾವಂತ ಕುಶಲಕರ್ಮಿ. ಅವ್ಯವಸ್ಥೆಯನ್ನು ತಪ್ಪಿಸಿ ವ್ಯವಸ್ಥೆಯನ್ನು ನೆಲೆಗೊಳಿಸುವುದು ನಿಮ್ಮ ಉದ್ದೇಶವಾಗಿ, ಖಚಿತವಾಗಿ ಈಡೇರುತ್ತದೆ.

ತುಲಾ ರಾಶಿ (libra)
ಪ್ರಪಂಚವನ್ನು (World) ಇನ್ನಷ್ಟು ಉತ್ತಮ ಸ್ಥಳವನ್ನಾಗಿ ಮಾಡಲು ತಮ್ಮ ಪಕ್ಷಪಾತವಿಲ್ಲದ ಮತ್ತು ನ್ಯಾಯೋಚಿತ ನಿಲುವನ್ನು ಬಳಸುವುದು ತುಲಾ ರಾಶಿಯವರ ಜೀವನ. ಇವರು ಸಮತೋಲನ ಮತ್ತು ನ್ಯಾಯವನ್ನು ಇಷ್ಟಪಡುತ್ತಾರೆ. ಇವರು ನ್ಯಾಯಾಧೀಶ ಅಥವಾ ಬಲುದೊಡ್ಡ ನ್ಯಾಯವಾದಿಯಾಗಬಹುದು. ತಂಡದ ಕೆಲಸದಲ್ಲಿ ಯಾವಾಗಲೂ ಉತ್ತಮರು. ಸಂಘರ್ಷವನ್ನು ಪರಿಹರಿಸಲು ತರ್ಕಬದ್ಧ, ನ್ಯಾಯೋಚಿತ ಮತ್ತು ಸುಸಂಸ್ಕೃತ ವಿಧಾನವನ್ನು ಅನುಸರಿಸುತ್ತೀರಿ.

ವೃಶ್ಚಿಕ ರಾಶಿ (scorpio)
ವೃಶ್ಚಿಕದವರು ಎಲ್ಲಕ್ಕಿಂತ ಹೆಚ್ಚು ಭಾವೋದ್ರಿಕ್ತರು. ಒಂದೋ ಅವರು ಸಂಪೂರ್ಣವಾಗಿ ಅದರೊಳಗೆ ಇರುತ್ತಾರೆ ಅಥವಾ ಅದರಿಂದ ಹೊರಗಿರುತ್ತಾರೆ. ನಡುವೆ ಇರುವುದಿಲ್ಲ. ಇವರು ಪೂರ್ಣ ಹೃದಯ, ಮನಸ್ಸು ಮತ್ತು ಆತ್ಮದಿಂದ ಕೆಲಸ ಮಾಡುತ್ತಾರೆ. ಎಲ್ಲವನ್ನೂ ಉತ್ತಮಗೊಳಿಸಲು ಪ್ಯಾಶನ್ ಹೊಂದಿರುತ್ತಾರೆ. ಇವರು ಮಾನವ ಸ್ವಭಾವದ ಗಾಢವಾದ ಕೋನಗಳ ಆಳವಾದ ಪರಿಶೋಧನೆಯಲ್ಲಿ ತೊಡಗುತ್ತಾರೆ. ಆರಾಮ ವಲಯದಲ್ಲಿ ಉಳಿಯದೆ ಸಾಮಾಜಿಕ ಸೇವೆಯಲ್ಲಿ ತೊಡಗುವುದು, ತಮ್ಮೆಲ್ಲ ಶಕ್ತಿಯನ್ನೂ ಅದರಲ್ಲಿ ವಿನಿಯೋಗಿಸಿ ಅನಾಥರ ಬಾಳಿಗೆ ಬೆಳಕಾಗುವುದು ಮಾಡುತ್ತಾರೆ- ಮಾಡಬೇಕು.

ಧನು ರಾಶಿ (sagittarius)
ಧನು ರಾಶಿಯವರು ಸ್ವತಂತ್ರ ಮನೋಭಾವದವರಾಗಿರುತ್ತಾರೆ ಮತ್ತು ಎಲ್ಲಕ್ಕಿಂತ ಕುತೂಹಲಕಾರಿ ವ್ಯಕ್ತಿಗಳು. ಇವರು ಪ್ರಯಾಣಿಸಲು, ಹೊಸ ಸ್ಥಳಗಳನ್ನು ಅನ್ವೇಷಿಸಲು, ಹೊಸ ಸಂಸ್ಕೃತಿಗಳ ಬಗ್ಗೆ ಕಲಿಯಲು ಮತ್ತು ತಮ್ಮ ದಿಗಂತಗಳನ್ನು ವಿಸ್ತರಿಸಲು ಇಷ್ಟಪಡುತ್ತಾರೆ. ಅವರ ಜೀವನದ ಉದ್ದೇಶ ಜಗತ್ತಿಗೆ ಮಗುವಿನಂತಹ ಕುತೂಹಲವನ್ನು ಕಲಿಸುವುದು. ನಿಮ್ಮ ದೃಷ್ಟಿ, ಆಶಾವಾದ ಮತ್ತು ನಿರೀಕ್ಷೆಗಳಿಂದ ನೀವು ಜಗತ್ತಿಗೆ ದೊಡ್ಡ ಪಾಠವಾಗುತ್ತೀರಿ. ಇತರರನ್ನು ಇನ್ನಷ್ಟು ಮತ್ತಷ್ಟು ಸುಧಾರಿಸಿ ಒಳ್ಳೆಯ ಮನಸ್ಸನ್ನು, ಜೀವನವನ್ನು ಪ್ರೀತಿಸುವುದನ್ನು ಕಲಿಸುತ್ತೀರಿ.

ಮಕರ ರಾಶಿ (capricorn)
ಪ್ರೀತಿಪಾತ್ರರನ್ನು ಪೋಷಿಸುವ ಮತ್ತು ಬೆಂಬಲಿಸುವುದರ ಮಹತ್ವವನ್ನು ಜಗತ್ತಿಗೆ ಕಲಿಸುವುದು ಇವರ ಉದ್ದೇಶವಾಗಿದೆ. ಮಕರದವರು ಭಾವನೆಗಳಿಂದ ತುಂಬಿದ್ದು, ಪ್ರೀತಿಪಾತ್ರರಿಗೆ ವಿಶ್ವಾಸಾರ್ಹರು. ಜೀವನದಲ್ಲಿ ಆರಂಭಿಕ ಕಷ್ಟಗಳು ಅಥವಾ ವಿಳಂಬಗಳು ಇದ್ದರೂ, ಅವುಗಳನ್ನು ಮೀರಿ, ತಮ್ಮ ಕ್ಷೇತ್ರದಲ್ಲಿ ಗೌರವ ಮತ್ತು ಅಧಿಕಾರದ ಸ್ಥಾನವನ್ನು (Powerful Status) ಪಡೆಯುತ್ತಾರೆ. ಆದರೆ ಇವರ ಜೀವನ ಪ್ರಯಾಣ ಕಠಿಣ ಪರಿಶ್ರಮದಿಂದ ಕೂಡಿರುತ್ತದೆ.

ಕುಂಭ ರಾಶಿ (aquarius)
ಕುಂಭ ರಾಶಿಯವರು ತಮ್ಮ ಸಹಾನುಭೂತಿ (Compassion) ಮತ್ತು ಮಾನವೀಯ ನಡವಳಿಕೆಗೆ ಹೆಸರುವಾಸಿ. ಯಾವುದೇ ತಂತ್ರಜ್ಞಾನದಲ್ಲಿ (Technology) ಪ್ರಗತಿ ಸಾಧಿಸುವ ಮೂಲಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಸ್ವಯಂಸೇವಕರಾಗುವ ಮೂಲಕ ಈ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವುದು ಅವರ ಜೀವನದ ಉದ್ದೇಶ. ನೀವು ಸಂಪ್ರದಾಯಗಳನ್ನು ಮೀರಿ ಹೊಸ ಮಾರ್ಗಗಳನ್ನು ಹುಟ್ಟುಹಾಕುತ್ತೀರಿ. ನಿಮ್ಮ ಕೆಲಸದಲ್ಲಿ ಬಹುದೊಡ್ಡ ಸ್ಥಾನ ಹೊಂದುತ್ತೀರಿ.

ಮೀನ ರಾಶಿ (pisces) 
ಮೀನ ರಾಶಿಯವರು ಹೆಚ್ಚು ಸೃಜನಶೀಲ (Creative) ಮತ್ತು ಪ್ರತಿಭಾವಂತರು (talent). ಇವರು ಕಲೆ, ಸಂಗೀತದಂಥ ಸ್ವಯಂ ಅಭಿವ್ಯಕ್ತಿಗಳನ್ನು ಹೊಂದಿರುತ್ತಾರೆ. ಕಲಾತ್ಮಕ, ಆಧ್ಯಾತ್ಮಿಕ ಅಥವಾ ಕಾವ್ಯಾತ್ಮಕ ಶಕ್ತಿ (Poetic Power) ಇವರಲ್ಲಿರುತ್ತದೆ. ಸುತ್ತಲಿನ ಜನರು ನಿಮ್ಮಿಂದ ಇವುಗಳಲ್ಲಿ ಆನಂದವನ್ನು ಹೊಂದುತ್ತಾರೆ. ಹಾಗೇ ನೀವು ಇತರರಿಗೆ ಆಧ್ಯಾತ್ಮಿಕ ನೋಟವನ್ನು ಒದಗಿಸಬಹುದು. ನಾವೆಲ್ಲರೂ ಸಹಾನುಭೂತಿ, ದಯೆ ಮತ್ತು ಬೆಂಬಲ ನೀಡುವ ಅಗತ್ಯವಿದೆ ಎಂದು ಜನರಿಗೆ ಮನದಟ್ಟು ಮಾಡುವ ಭಾಷಣಕಾರರಾಗಬಹುದು. 

Chanakya Niti: ಈ ನಾಲ್ಕು ಚಾಣಕ್ಯ ಮಂತ್ರಗಳನ್ನು ಅಳವಡಿಸಿಕೊಂಡ ಮನೆಯೇ ಸ್ವರ್ಗ!

 

you cant die with out achieving this according to your zodiac signs


 

Follow Us:
Download App:
  • android
  • ios