Astrology Prediction: ರಸ್ತೆಯಲ್ಲಿ ದುಡ್ಡು ಸಿಕ್ಕರೆ ಏನರ್ಥ?! ಇದರಿಂದ ಒಳ್ಳೇದಾಗತ್ತಾ ಅಥವಾ ಕೆಟ್ಟದ್ದಾ?
ದಾರಿಯಲ್ಲಿ ಹಣ ಸಿಕ್ಕರೆ ಅದನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಜ್ಯೋತಿಷ್ಯ ಶಾಸ್ತ್ರ (Astrology) ಹೇಳುವ ಪ್ರಕಾರ ದಾರಿಯಲ್ಲಿ ಸಿಗುವ ದುಡ್ಡು ಹಲವು ಸಂಕೇತಗಳ ಸೂಚನೆಯಾಗಿರುತ್ತದೆ. ಆ ಸಂಕೇತಗಳು ಶುಭವೋ ಅಶುಭವೋ ಎಂಬುದನ್ನು ತಿಳಿಯೋಣ...
ರಸ್ತೆಯಲ್ಲಿ (Road) ಹೋಗುವಾಗ ಸಾಮಾನ್ಯವಾಗಿ ಎಲ್ಲರಿಗೂ ದುಡ್ಡು (Money) ಸಿಕ್ಕಿರುತ್ತದೆ. ಅದನ್ನು ತೆಗೆದುಕೊಳ್ಳಬೇಕೋ ಬೇಡವೋ ಎಂಬ ಗೊಂದಲ (Confusion) ಸಹಜವಾಗಿ ಮೂಡಿರುತ್ತದೆ. ತೆಗೆದುಕೊಳ್ಳಬೇಕೆಂದು ಕೆಲವರು ಹೇಳಿದರೆ, ತೆಗೆದುಕೊಂಡರೆ ಮತ್ತೇನಾದರೂ ತೊಂದರೆ (Problem) ಆಗಿಬಿಟ್ಟರೆ ಎಂದೂ ಯೋಚಿಸಿರುತ್ತೇವೆ. ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ ದಾರಿಯಲ್ಲಿ ಸಿಕ್ಕ ದುಡ್ಡು ಭವಿಷ್ಯದ (Future) ಘಟನೆಗಳ ಬಗ್ಗೆ ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ದಾರಿಯಲ್ಲಿ ದುಡ್ಡು ಬೀಳಿಸಿಕೊಂಡರೆ ಅಥವಾ ದಾರಿಯಲ್ಲಿ ದುಡ್ಡು ಸಿಕ್ಕರೆ ಅದು ಭವಿಷ್ಯದ ಯಾವುದೋ ವಿಚಾರಗಳನ್ನು ತಿಳಿಸುವ ಸಂಕೇತವಾಗಿದೆ. ದುಡ್ಡು ಬೀಳಿಸಿಕೊಂಡವರಿಗೆ ಬೇಸರವಾದರೆ, ಹಣ ಸಿಕ್ಕವರಿಗೆ ಖುಷಿಯಾಗುತ್ತದೆ. ನೋಟು (Note), ನಾಣ್ಯ (Coin) ಹೀಗೆ ಸಿಕ್ಕರೆ ಅದು ಯಾವ ಸಂಕೇತ ಎಂಬುದರ ಬಗ್ಗೆ ತಿಳಿಯೋಣ.
ದಾರಿಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ತಾಗಿ (Accidentally) ಹಣ ಸಿಕ್ಕರೆ ಅದು ದೇವರು (God) ಜತೆಗಿದ್ದಾನೆ ಎಂಬುದರ ಸಂಕೇತವನ್ನು ತೋರಿಸುತ್ತದೆ. ಅಷ್ಟೇ ಅಲ್ಲದೆ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದರಲ್ಲಿ ಯಶಸ್ಸು (Success) ಸಿಗುತ್ತದೆ ಎಂಬುದರ ಸಂಕೇತವಾಗಿದೆ.
ದಾರಿಯಲ್ಲಿ ಹೋಗುತ್ತಿರುವಾಗ ಹಣ ಸಿಕ್ಕರೆ ಅದು ಭವಿಷ್ಯದಲ್ಲಿ ಯಾವುದೋ ಶುಭ ಸುದ್ದಿ ಸಿಗುತ್ತದೆ ಎಂಬುದನ್ನು ಸೂಚಿಸುತ್ತದೆ. ದಾರಿಯಲ್ಲಿ ಸಿಕ್ಕ ನಾಣ್ಯವು ಮುಂದಿನ ದಿನಗಳಲ್ಲಿ ಹೊಸ ಕಾರ್ಯವನ್ನು (New Task) ಆರಂಭಿಸುವುದರ ಸೂಚನೆಯನ್ನು ಸಹ ನೀಡುತ್ತದೆ. ಅಷ್ಟೇ ಅಲ್ಲದೆ ಉದ್ಯೋಗದಲ್ಲಿ (Job) ಬಡ್ತಿ (Promotion) ಸಿಗುವ ಸೂಚನೆಯನ್ನು ತಿಳಿಸುವುದಲ್ಲದೇ ಯಶಸ್ಸು ಮತ್ತು ಸಂಪತ್ತು (Wealth) ಸಿಗುವ ಸಂಕೇತ ಇದಾಗಿರುತ್ತದೆ.
ಮುಂಜಾನೆ ಹಣ ಸಿಕ್ಕರೆ (Morning)
ಬೆಳಗಿನ ಹೊತ್ತು ರಸ್ತೆಯಲ್ಲಿ ಹೋಗುವಾಗ ಹಣ ಸಿಕ್ಕರೆ ಅದು ಗುಡ್ ಲಕ್‌ನ (Good Luck) ಸಂಕೇತವಾಗಿರುತ್ತದೆ. ಇದರಿಂದ ವ್ಯಕ್ತಿಯ ಏಳಿಗೆಯಾಗುತ್ತದೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಸಿಕ್ಕ ಹಣವನ್ನು ಜೋಪಾನವಾಗಿ ಎತ್ತಿಡಬೇಕು ಎಂದು ಸಹ ಹೇಳಲಾಗುತ್ತದೆ.
ಇದನ್ನು ಓದಿ: Astrology Tips: ಮನಶ್ಶಾಂತಿ ಬೇಕಿದ್ದರೆ ಜ್ಯೋತಿಷ್ಯದ ಈ ಸೂತ್ರ ಪಾಲಿಸಿ!
ಹಿರಿಯರ ಆಶೀರ್ವಾದ (Blessings of elders)
ರಸ್ತೆಯಲ್ಲಿ ಸಿಗುವ ಹಣವು ಹಿರಿಯರ ಅಥವಾ ಪೂರ್ವಜರ ಆಶೀರ್ವಾದವೆಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಸಿಕ್ಕ ಹಣವನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ತಿಳಿಯುವ ಸಲುವಾಗಿಯು ಹಿರಿಯರು ಈ ರೀತಿ ಮಾಡಿರುತ್ತಾರೆ ಎಂಬ ನಂಬಿಕೆಯೂ (Trust) ಇದೆ.
ಹೆಚ್ಚು ಮೌಲ್ಯದ ಹಣ ದೊರೆತಾಗ
ಕೆಲವೊಮ್ಮೆ ಪರ್ಸ್ (Purse) ಅಥವಾ ಹೆಚ್ಚಿನ ಮೌಲ್ಯದ ಹಣ ರಸ್ತೆಯಲ್ಲಿ ಬಿದ್ದಿರುತ್ತದೆ. ಅಂತಹ ಸಮಯದಲ್ಲಿ (Time) ಮೊದಲು ಅದು ಯಾರಿಗೆ ಸೇರಿದ್ದು ಎಂಬುದನ್ನು ತಿಳಿಯಲು ಪ್ರಯತ್ನಿಸಬೇಕು. ಹಾಗೊಮ್ಮೆ ತಿಳಿಯದೇ ಇದ್ದಲ್ಲಿ ಆ ಹಣದಲ್ಲಿ ಒಂದು ಭಾಗವನ್ನು ಬಡವರಿಗೆ (The Poor) ಮತ್ತೊಂದು ಭಾಗವನ್ನು ಧಾರ್ಮಿಕ (Religious) ಕಾರ್ಯಗಳಿಗೆ ವಿನಿಯೋಗಿಸಬೇಕು. ನಂತರದಲ್ಲಿ ಉಳಿದ ತನ್ನ ಜೋಪಾನವಾಗಿ ಎತ್ತಿಟ್ಟುಕೊಳ್ಳಬೇಕು.
ಇದನ್ನು ಓದಿ: Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು
ಹಣ ತೆಗೆದುಕೊಳ್ಳುವಾಗ ಇರಲಿ ಎಚ್ಚರ (Beware)
ಹಣ ರಸ್ತೆಯಲ್ಲಿ ಬಿದ್ದಿತ್ತು ಅಂದಮಾತ್ರಕ್ಕೆ ತಕ್ಷಣ ಅದನ್ನು ತೆಗೆದುಕೊಳ್ಳುವುದಲ್ಲ. ಅದು ಮತ್ತೊಬ್ಬರ ಶ್ರಮದ ಫಲವು ಆಗಿರಬಹುದು. ಹಾಗಾಗಿ ಮೊದಲು ಅದು ಯಾರಿಗಾದರೂ ಸೇರಿರುವುದೇ ಎಂಬುದನ್ನು ತಿಳಿಯಬೇಕು. ಅಷ್ಟೇ ಅಲ್ಲದೆ ಈ ರೀತಿ ಹಣ ಸಿಗುವುದು ದೇವರ ಪರೀಕ್ಷೆ ಸಹ ಆಗಿರುತ್ತದೆ. ವ್ಯಕ್ತಿಯ ಪ್ರಾಮಾಣಿಕತೆಯನ್ನು (Honesty) ದೇವರು ಪರೀಕ್ಷಿಸಲು ಈ ರೀತಿ ಹಣ ಸಿಗುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಪ್ರಾಮಾಣಿಕ ವ್ಯಕ್ತಿಗಳ ಜತೆಗೆ ದೇವರು ಸದಾ ಇರುತ್ತಾನೆ. ಆ ಮೂಲಕ ಲಕ್ಷ್ಮೀ (Goddess Laxmi) ಒಲಿದು ಬರುತ್ತಾಳೆ.