Astrology Tips: ಮನಶ್ಶಾಂತಿ ಬೇಕಿದ್ದರೆ ಜ್ಯೋತಿಷ್ಯದ ಈ ಸೂತ್ರ ಪಾಲಿಸಿ!

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಒತ್ತಡದ ಜೀವನ ಅನಿವಾರ್ಯವಾಗಿದೆ. ಇಂಥ ಜೀವನ ಶೈಲಿಯಲ್ಲಿ ನೆಮ್ಮದಿಯನ್ನು ಕಾಣಲು ಎಲ್ಲರೂ ಬಯಸುತ್ತಾರೆ. ಮಾನಸಿಕ ನೆಮ್ಮದಿಯನ್ನು ಪಡೆಯಲು ಜ್ಯೋತಿಷ್ಯ ಶಾಸ್ತ್ರದ ಈ ಕೆಲವು ಸಲಹೆಗಳನ್ನು ಪಾಲಿಸಬಹುದು. ಹಾಗಾದರೆ ಅಂತಹ ಸಲಹೆಗಳು ಯಾವುವು ಎಂಬುದನ್ನು ನೋಡೋಣ.... 

Follow this astrological tips for peace of mind

ಮನುಷ್ಯನಿಗೆ ನೆಮ್ಮದಿ (Calm) ಬಹಳ ಮುಖ್ಯ. ಜೀವನದಲ್ಲಿ ನೆಮ್ಮದಿಗಾಗಿ ಎಲ್ಲರೂ ಹಾತೊರೆಯುತ್ತಾರೆ. ಮನುಷ್ಯ ಎಷ್ಟೇ ದುಡ್ಡು (Money) ಮಾಡಿದರೂ ನೆಮ್ಮದಿಯನ್ನು ಅರಸಿಕೊಂಡು ಹೋಗುವುದನ್ನು ನಾವು ನೋಡುತ್ತೇವೆ. ಹೀಗಾಗಿ ನೆಮ್ಮದಿಯ ಬಾಳು (Life) ಎಷ್ಟರಮಟ್ಟಿಗೆ ಸಿಗುತ್ತದೆ ಎಂಬುದು ಬಹಳ ಮುಖ್ಯವಾಗುತ್ತದೆ. ಇನ್ನು ಕೆಲವು ಸಲ ನೆಮ್ಮದಿ ಸಿಗುವಂತಿದ್ದರೂ ನಾವೇ ನಮಗರಿವಿಲ್ಲದೆ ಅದನ್ನು ದೂರವಿರುವಂತೆ ಮಾಡಿಕೊಂಡಿರುತ್ತೇವೆ. 

ಆದರೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳುವುದು, ಶಾಂತವಾಗಿಟ್ಟುಕೊಳ್ಳುವುದು (Peace) ನಮ್ಮ ಕೈಯಲ್ಲೂ ಇರುತ್ತದೆ. ಕೆಲವೊಮ್ಮೆ ಪರಿಸ್ಥಿತಿಗಳ ಕೈಗೊಂಬೆಯಾದರೂ ಸಹ ಕೆಲವೊಂದು ಮಾರ್ಗಗಳನ್ನು ನಾವು ಅನುಸರಿಸುವುದರಿಂದ ನಮಗೆ ಯಾವುದು ಬೇಕೋ ಅದನ್ನು ಪಡೆಯಬಹುದಾಗಿದೆ. ಅಂದರೆ, ನಾವು ಸದಾ ಧನಾತ್ಮಕವಾಗಿಯೇ (Positive) ಚಿಂತಿಸಬೇಕು. ಎಂಥ ಪರಿಸ್ಥಿತಿ ಎದುರಾದರೂ ಆತ್ಮವಿಶ್ವಾಸದಿಂದ ಇದ್ದರೆ ಗೆಲುವು (Win) ನಿಶ್ಚಿತ. ಭಾವನಾತ್ಮಕವಾಗಿ (Emotionally) ಮತ್ತು ಮಾನಸಿಕವಾಗಿ (Mentally) ಸಮತೋಲನ ಕಾಯ್ದುಕೊಳ್ಳಲು ನೆಗೆಟಿವ್ (Negative) ಚಿಂತೆಗಳನ್ನು ಬಿಟ್ಟುಬಿಡುವುದು ಒಳ್ಳೆಯದು. 

ಇದನ್ನು ಓದಿ:  Chanakya Neeti: ಸುಖ ದಾಂಪತ್ಯಕ್ಕೆ ಮುಳುವಾಗುವ ಮುಖ್ಯ ಕಾರಣಗಳು

ರಾಶಿಚಕ್ರಗಳ (Zodiac) ಪ್ರಭಾವದಿಂದ ಹೀಗೆ ಏಕಾಗ್ರತೆಯನ್ನು ಕಳೆದುಕೊಳ್ಳುವುದು, ತಾಳ್ಮೆಗೆಡುವ (Patience) ಸನ್ನಿವೇಶಗಳು ಎದುರಾಗುತ್ತವೆ. ಗ್ರಹಗಳ ಸ್ಥಿತ್ಯಂತರವು ನಿಮ್ಮ ಮನಸ್ಸಿನ ಶಾಂತಿಯ ಮೇಲೆ ಪರಿಣಾಮ ಬೀರಬಹುದು. ಮನಸ್ಸಿನ ಶಾಂತಿಗಾಗಿ ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬಹುದಾಗಿದೆ. ಆ ಮಾರ್ಗದ ಬಗ್ಗೆ ತಿಳಿಯೋಣ...

• ಶಿವನ ಅನುಗ್ರಹ ಬಹಳ ಮುಖ್ಯವಾಗುತ್ತದೆ. ಶಿವನ ಶಿರದಲ್ಲಿಯೇ ಚಂದ್ರ ನೆಲೆಸಿರುತ್ತಾನೆ. ಹಾಗಾಗಿ ಶಿವನನ್ನು ಪೂಜಿಸುವುದು ಶುಭ ಫಲವನ್ನು ತಂದುಕೊಡುತ್ತದೆ. ಶಿವಲಿಂಗಕ್ಕೆ ಹಾಲು, ನೀರು ಅರ್ಪಿಸಬೇಕು. ಇದು ಮನಸ್ಸನ್ನು ಹತೋಟಿಯಲ್ಲಿಡಲು ಸಹಾಯ ಮಾಡುತ್ತದೆ. 

• ಮೂಗಿನ ತುದಿಗೆ ಕೋಪ ಬರುತ್ತಿದ್ದರೆ, ಆಗಾಗ ತಾಳ್ಮೆಗೆಡುತ್ತಿದ್ದರೆ, ಬಾಲ ಶ್ರೀಕೃಷ್ಣನನ್ನು ಧ್ಯಾನಿಸಿ, ಪೂಜಿಸುವುದರಿಂದ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.

• ಗುರುವಾರದಂದು (Thursday) ಅರ್ಧ ಭಾಗ ಬೆಳ್ಳಿ (Silver) ಮತ್ತು ಭಾಗಶಃ ಚಿನ್ನದ (Gold) ಅಂಶವುಳ್ಳ ಉಂಗುರವನ್ನು ಮೊದಲ ಬೆರಳಿಗೆ ಧರಿಸಬೇಕು. ಹೀಗೆ ಮಾಡುವುದರಿಂದ ಆಲೋಚನಾ ಪ್ರಕ್ರಿಯೆಯಲ್ಲಿ ಸ್ಥಿರತೆಯನ್ನು ಹೊಂದಬಹುದು. 

• ಒಂದು ವೇಳೆ ನಿರಾಸಕ್ತಿ ಮೂಡಿದ್ದರೆ ಮನಸ್ಸಿನಲ್ಲಿ ಚೈತನ್ಯ ಇರದಿದ್ದರೆ ಅಥವಾ ಮನಸ್ಸಿನಲ್ಲಿ (Mind) ಭಯ ಮೂಡಿದ್ದರೆ ಒಂದು ಸಣ್ಣ ಮಣ್ಣಿನ ಮಡಕೆಯಲ್ಲಿ ಸ್ವಲ್ಪ ಹಾಲನ್ನು ಹಾಕಿ ಅಗತ್ಯವಿರುವ ಯಾರಿಗಾದರೂ ದಾನ ಮಾಡಬೇಕು. ಕೇಸರಿ, ಅರಿಶಿನ ಮಿಶ್ರಿತ ಶ್ರೀಗಂಧದ (Sandal) ತಿಲಕವನ್ನು (Tilak) ಇಡಬೇಕು. ಇನ್ನು ಬುಧವಾರದಂದು ದೇವಸ್ಥಾನದಲ್ಲಿ ಮೊಸರನ್ನು ದಾನ ಮಾಡಬೇಕು.  

• ಚಂದ್ರನ (Moon) ಸ್ಥಾನವು ಮನಸ್ಸಿನ ಸ್ಥಿತಿಯ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹೀಗಾಗಿ 'ಓಂ ಚಂದ್ರಾಯ ನಮಃ' ಮಂತ್ರವನ್ನು ಪಠಿಸಿದರೆ ಮನಸ್ಸು ಹತೋಟಿಯಲ್ಲಿರುವುದು ಮಾನಸಿಕ ಶಾಂತಿಗೆ ಕಾರಣವಾಗುತ್ತದೆ. 

• ಶನಿವಾರದಂದು (Saturday) ಬೂದು ದಾರದಲ್ಲಿ ಸುತ್ತಿದ ಅಶ್ವಗಂಧದ ಬೇರನ್ನು ಧರಿಸುವುದರಿಂದ ಮನಸ್ಸು ಪ್ರಫುಲ್ಲವಾಗುತ್ತದೆ. 

• ಕೊನೆಯ ಬೆರಳಿಗೆ ಚಂದ್ರ ರತ್ನವನ್ನು ಧರಿಸಬೇಕು. ಇದರಿಂದ ಚಂದ್ರನ ಅನುಗ್ರಹಕ್ಕೆ ಪಾತ್ರರಾಗಬಹುದು. ಇದು ಮನಶ್ಶಾಂತಿ ದೊರೆಯಲು ಸಹಾಯಕವಾಗುತ್ತದೆ. 

ಮಾನಸಿಕ ನೆಮ್ಮದಿಯು, ಮಾನಸಿಕ ಆರೋಗ್ಯವು ಅತಿ ಮುಖ್ಯವಾಗುತ್ತದೆ. ಹೀಗಾಗಿ ಗಣೇಶನ ಸ್ತುತಿ ಮಾಡುವುದರಿಂದ ಶುಭಪಲ ದೊರೆಯಲಿದೆ. ಜೊತೆಗೆ ಗಣೇಶ ಪೂಜೆ ಮಾಡುವುದರಿಂದ ವಿಘ್ನ ನಿವಾರಕನ ಆಶೀರ್ವಾದ (Bless) ದೊರೆಯುವುದಲ್ಲದೆ, ಚಂಚಲ ಮನಸ್ಸು ದೂರವಾಗುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ. 
ಈ ಎಲ್ಲ ನಿಯಮಗಳಲ್ಲಿ ಕೆಲವನ್ನು ಪಾಲಿಸಿದರೂ ಸಾಕು, ಮಾನಸಿಕವಾಗಿ ನೆಮ್ಮದಿಯನ್ನು ಕಾಣಬಹುದಾಗಿದೆ. 

ಇದನ್ನು ಓದಿ: ಯಾವ ಸ್ಪರ್ಧೆ ಇದ್ದರೂ ಈ ರಾಶಿಯವರೇ ವಿನ್ನರ್ಸ್ !

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios