ಬರಲಿರುವ ಜ್ಯೇಷ್ಠ ಮಾಸದ ಹಬ್ಬ, ವ್ರತ, ಉಪವಾಸ ಆಚರಣೆಗಳಿವು..
ಹಿಂದೂ ಕ್ಯಾಲೆಂಡರ್ ಪ್ರಕಾರ, ಜೂನ್ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಎರಡನೇ ತಿಥಿಯಿಂದ ಪ್ರಾರಂಭವಾಗುತ್ತದೆ. ಜೂನ್‌ನಲ್ಲಿ, ಗಂಗಾ ದಸರಾ ಮತ್ತು ನಿರ್ಜಲ ಏಕಾದಶಿ ಸೇರಿದಂತೆ ಅನೇಕ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳು ಬರುತ್ತವೆ.
ಜ್ಯೇಷ್ಠ ಮಾಸ(Jyesta Maas)ದ ಶುಕ್ಲ ಪಕ್ಷದ ಎರಡನೇ ತಾರೀಖಿನಿಂದ ಜೂನ್(June) ತಿಂಗಳು ಆರಂಭವಾಗಲಿದೆ. ಅಂದರೆ ಮೇ 31ರಿಂದ ಜೇಷ್ಠ ಮಾಸ ಆರಂಭವಾಗಲಿದೆ. ಇದು ಜೂನ್ 29ರಂದು ಕೊನೆಗೊಳ್ಳಲಿದೆ. ಈ ಬಾರಿಯ ಜೂನ್ ತಿಂಗಳನ್ನು ಧಾರ್ಮಿಕ ದೃಷ್ಟಿಯಿಂದ ಅತ್ಯಂತ ವಿಶೇಷವೆಂದು ಪರಿಗಣಿಸಲಾಗಿದೆ. ಈ ವರ್ಷ 2022ರಲ್ಲಿ, ಜೂನ್‌ನಲ್ಲಿ ರಂಭಾ ತೃತೀಯಾ, ಗಂಗಾ ದಸರಾ ಮತ್ತು ವಿಷ್ಣು(Lord Vishnu)ವಿಗೆ ಸಮರ್ಪಿತವಾದ ಎರಡು ಏಕಾದಶಿ(Ekadashi) ಉಪವಾಸ(fast)ಗಳನ್ನು ಆಚರಿಸಲಾಗುತ್ತದೆ. ಅದರಲ್ಲಿ ಒಂದು ನಿರ್ಜಲ ಏಕಾದಶಿಯಂದು ಮತ್ತು ಇನ್ನೊಂದು ಯೋಗಿನಿ ಏಕಾದಶಿಯಂದು ಬೀಳುತ್ತದೆ. ಧಾರ್ಮಿಕ ದೃಷ್ಟಿಕೋನದಿಂದ ಜೂನ್ ತಿಂಗಳಲ್ಲಿ ಯಾವೆಲ್ಲ ವ್ರತ, ಉಪವಾಸಗಳು, ಹಬ್ಬಗಳು ಬರುತ್ತವೆ ಎಂದು ತಿಳಿಯೋಣ.
2 ಜೂನ್ 2022, ರಂಭಾ ತೃತೀಯಾ(Rambha Tritiya)
ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಮೂರನೇ ದಿನ, 2 ಜೂನ್ 2022, ಗುರುವಾರ ರಂಭಾ ತೃತೀಯಾ ಉಪವಾಸವನ್ನು ಆಚರಿಸಲಾಗುತ್ತದೆ. ಒಳ್ಳೆಯ ಗಂಡ ಸಿಗಲಿ ಎಂಬ ಆಸೆಯಿಂದ ಅವಿವಾಹಿತ ಹುಡುಗಿಯರು ಈ ವ್ರತ ಆಚರಿಸಿದರೆ, ವಿವಾಹಿತ ಮಹಿಳೆಯರು ತಮ್ಮ ಗಂಡನ ದೀರ್ಘಾಯುಷ್ಯ ಮತ್ತು ಮಕ್ಕಳ ಪ್ರಗತಿಗಾಗಿ ಈ ವ್ರತವನ್ನು ಆಚರಿಸುತ್ತಾರೆ. ಅದೃಷ್ಟವನ್ನು ಪಡೆಯಲು ಅಪ್ಸರೆಯಾದ ರಂಭಾ ಈ ವ್ರತವನ್ನು ಮಾಡಿದ್ದಳು ಎಂದು ನಂಬಲಾಗಿದೆ. ಅಂದಿನಿಂದ ಈ ಉಪವಾಸವನ್ನು ಆಚರಿಸಲಾಗುತ್ತಿದೆ.
9 ಜೂನ್ 2022, ಗುರುವಾರ - ಗಂಗಾ ದಸರಾ(Ganga Dussehra)
ಈ ವರ್ಷ ಗಂಗಾ ದಸರಾ ಹಬ್ಬವನ್ನು ಜೂನ್ 9 ರಂದು ಆಚರಿಸಲಾಗುತ್ತದೆ. ಇದು ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಹತ್ತನೆಯ ದಿನದಂದು ಬರುತ್ತದೆ. ಈ ದಿನ ಗಂಗೆಯನ್ನು ಪೂಜಿಸುವ ಸಂಪ್ರದಾಯವಿದೆ. ಗಂಗಾ ದಸರಾ ದಿನದಂದು ಪವಿತ್ರವಾದ ಗಂಗಾ ನದಿ(River Ganga)ಯಲ್ಲಿ ಸ್ನಾನ ಮಾಡುವುದರಿಂದ ಎಲ್ಲ ಪಾಪಗಳಿಂದ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ.
ಜೂನ್ ಈ ನಾಲ್ಕು ರಾಶಿಗಳಿಗೆ ವರವಾಗಲಿದೆ, ನಿಮ್ಮ ರಾಶಿ ಇದರಲ್ಲಿದೆಯೇ?
ಜೂನ್ 11, 2022, ಶನಿವಾರ- ನಿರ್ಜಲ ಏಕಾದಶಿ(Nirjala Ekadashi)
ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿ ಆಚರಿಸುವ ನಿರ್ಜಲ ಏಕಾದಶಿಯ ಉಪವಾಸವನ್ನು ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಆಚರಿಸಲಾಗುತ್ತದೆ. ಈ ಉಪವಾಸದ ದಿನ ನೀರನ್ನೂ ಕುಡಿಯದೆ ಉಪವಾಸ ಆಚರಿಸಲಾಗುತ್ತದೆ. ಹಾಗಾಗಿಯೇ ಇದಕ್ಕೆ ನಿರ್ಜಲ ಎಂಬ ಹೆಸರು ಬಂದಿರುವುದು. ಈ ದಿನ ಮಾಡುವ ಏಕಾದಶಿ ಉಪವಾಸವು ವರ್ಷ ಪೂರ್ತಿ ಮಾಡುವ 24 ಏಕಾದಶಿಗಳಿಗೆ ಸಮಾನವಾಗಿರುತ್ತದೆ ಎಂದು ಪರಿಗಣಿಸಲಾಗಿದೆ.
ಜೂನ್ 14, 2022, ಗುರುವಾರ- ಸಂತ ಕಬೀರ ಜಯಂತಿ(Kabeera Jayanti)
ಪ್ರತಿ ವರ್ಷ ಜ್ಯೇಷ್ಠ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯಂದು ಕಬೀರ ಜಯಂತಿ ಆಚರಿಸಲಾಗುತ್ತದೆ. ಈ ವರ್ಷ ಕಬೀರ ಜಯಂತಿಯು ಜೂನ್ 14ರಂದು ಬರಲಿದೆ. ಸಂತ ಕಬೀರರು ತಮ್ಮ ಜೀವಿತಾವಧಿಯಲ್ಲಿ ಮೂಢನಂಬಿಕೆ ಮತ್ತು ಬೂಟಾಟಿಕೆಗಳನ್ನು ಹೋಗಲಾಡಿಸಲು ಜನರಲ್ಲಿ ಭಕ್ತಿಯನ್ನು ತುಂಬುವ ಕೆಲಸವನ್ನು ಮಾಡಿದರು.
ಜೂನ್ 14, 2022, ಗುರುವಾರ - ವಟ ಸಾವಿತ್ರಿ ವ್ರತ ಪೂರ್ಣಿಮಾ(Vat Savitri Vrat Purnima)
ಜೂನ್ 14 ರಂದು ಸಹ ವಟ ಸಾವಿತ್ರಿ ವ್ರತ ಆಚರಿಸಲಾಗುತ್ತದೆ. ಮೇ 30ರಂದು ಅಮಾವಾಸ್ಯೆಯ ದಿನ ಮೊದಲು ವಟ ಸಾವಿತ್ರಿ ಅಮಾವಾಸ್ಯೆ ಆಚರಿಸಲಾಗುತ್ತದೆ. ಅಂತೆಯೇ ಜೂ.14ರಂದು ವಟ ಸಾವಿತ್ರಿ ಹುಣ್ಣಿಮೆ ಆಚರಣೆ ಮಾಡಲಾಗುತ್ತದೆ. ಈ ದಿನ, ವಿವಾಹಿತ ಮಹಿಳೆಯರು ಆಲದ ಮರಕ್ಕೆ ದಾರವನ್ನು ಸುತ್ತಿ ಪತಿಯ ಆರೋಗ್ಯ, ಆಯಸ್ಸಿಗಾಗಿ ಬೇಡುತ್ತಾರೆ.
ಕ್ರೂರ ಗ್ರಹ ರಾಹು 2023ರವರೆಗೆ ಈ 3 ರಾಶಿಗಳ ಮೇಲೆ ಕೃಪೆ ತೋರುತ್ತಾನೆ!
ಜೂನ್ 24, 2022, ಶುಕ್ರವಾರ- ಯೋಗಿನಿ ಏಕಾದಶಿ(Yogini Ekadashi)
ಪ್ರತಿ ವರ್ಷ ಆಷಾಢ ಮಾಸದ ಕೃಷ್ಣ ಪಕ್ಷದ ಏಕಾದಶಿಯಂದು ಯೋಗಿನಿ ಏಕಾದಶಿ ಉಪವಾಸವನ್ನು ಆಚರಿಸಲಾಗುತ್ತದೆ. ಇದನ್ನು ಶಯನಿ ಏಕಾದಶಿ ಎಂದೂ ಕರೆಯುತ್ತಾರೆ. ಈ ಉಪವಾಸವನ್ನು ಆಚರಿಸುವುದರಿಂದ ಪಾಪಗಳು ನಾಶವಾಗುತ್ತವೆ ಮತ್ತು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಯೋಗಿನಿ ಏಕಾದಶಿಯಂದು ಉಪವಾಸ ಆಚರಿಸುವುದರಿಂದ, ಶ್ರೀಕೃಷ್ಣನ ಪ್ರಕಾರ, ಅನ್ನದಾನಕ್ಕೆ ಸಮಾನವಾದ ಫಲವನ್ನು ಪಡೆಯುತ್ತಾರೆ.
27 ಜೂನ್ 2022, ಸೋಮವಾರ - ಶಿವರಾತ್ರಿ ಮಾಸಿಕ(Monthly Shivaratri)
ಶಿವರಾತ್ರಿಯ ಹಬ್ಬವನ್ನು ಪ್ರತಿ ತಿಂಗಳ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಮಹಾಶಿವರಾತ್ರಿಯಂತೆ ಈ ಉಪವಾಸವೂ ಪುಣ್ಯಕರವೆಂದು ಪರಿಗಣಿಸಲಾಗಿದೆ. ಪ್ರತಿ ತಿಂಗಳು ಬರುವ ಈ ವ್ರತದಿಂದಾಗಿ ಇದನ್ನು ಮಾಸಿಕ ಶಿವರಾತ್ರಿ ಎಂದು ಕರೆಯಲಾಗುತ್ತದೆ. ಈ ದಿನದಂದು ಭಗವಾನ್ ಭೋಲೆನಾಥನನ್ನು ಮನಃಪೂರ್ವಕವಾಗಿ ಪೂಜಿಸುವುದರಿಂದ ಎಲ್ಲ ಇಷ್ಟಾರ್ಥಗಳು ಈಡೇರುತ್ತವೆ.