Asianet Suvarna News Asianet Suvarna News

Temple Special: ಈ ಶ್ರೀಮಂತ ದೇವಸ್ಥಾನಗಳ ಆಸ್ತಿ ಎಷ್ಟು ಬಲ್ಲಿರಾ?

ಭಾರತದ ಅತಿ ಶ್ರೀಮಂತ ದೇವಾಲಯ ಎಂಬ ಹೆಗ್ಗಳಿಕೆ ಪಡೆದಿರುವ ಈ ದೇವಾಲಯಗಳ ಆಸ್ತಿ ಮೌಲ್ಯ ಕೇಳಿದ್ರೆ ಖಂಡಿತಾ ಬೆರಗಾಗ್ತೀರಿ..

These are the Richest Temples in India skr
Author
Bangalore, First Published Dec 26, 2021, 5:24 PM IST

ಭಾರತವು ಧಾರ್ಮಿಕ ಸ್ಥಳಗಳಿಗೆ ಹೆಸರಾಗಿದೆ. ಇಲ್ಲಿ ಗಲ್ಲಿ ಗಲ್ಲಿಯಲ್ಲೂ ದೇವಾಲಯಗಳಿವೆ. ಪ್ರತಿ ಊರಿನಲ್ಲೂ ಹಲವಾರು ದೇವಾಲಯಗಳಿದ್ದೂ, ಪ್ರತಿಯೊಂದೂ ತನ್ನದೇ ಆದ ವೈಶಿಷ್ಠ್ಯತೆಗಳನ್ನು, ಕತೆಗಳನ್ನು ಹೊಂದಿವೆ. ಈ ದೇವಾಲಯಗಳು ಭಕ್ತಿಯ ಕೇಂದ್ರವಷ್ಟೇ ಅಲ್ಲ, ಇವು ಶ್ರೀಮಂತಿಕೆಗೂ ಹೆಸರಾಗಿವೆ. ಭಾರತದ ಅತಿ ಶ್ರೀಮಂತ ದೇವಾಲಯಗಳು ಯಾವೆಲ್ಲ ಗೊತ್ತಾ?

ಪದ್ಮನಾಭ ಸ್ವಾಮಿ ದೇವಸ್ಥಾನ(Padmanabhaswamy Temple), ಕೇರಳ
ತಿರುವನಂತಪುರಂನಲ್ಲಿರುವ ಪದ್ಮನಾಭಸ್ವಾಮಿ ದೇವಾಲಯ ಜಗತ್ತಿನಲ್ಲೇ ಅತಿ ಶ್ರೀಮಂತ ಹಿಂದೂ ದೇವಾಲಯವಾಗಿದೆ. ದೇವಾಲಯದ ಆಸ್ತಿಯಲ್ಲಿ ಬಂಗಾರ, ವಜ್ರ ವೈಢೂರ್ಯ, ಚಿನ್ನದ ನಾಣ್ಯಗಳು, ವಿಗ್ರಹಗಳು ಎಲ್ಲವೂ ಸೇರಿವೆ. ಬರೋಬ್ಬರಿ 20 ಶತಕೋಟಿ ಡಾಲರ್‌ ಮೌಲ್ಯದ ಆಸ್ತಿ ಇಲ್ಲಿನ ಆರು ಕಮಾನುಗಳಲ್ಲಿ ತುಂಬಿದೆ. 

ತಿರುಪತಿ ವೆಂಕಟೇಶ್ವರ ದೇವಾಲಯ(Tirupati Venkateswara Temple), ಆಂಧ್ರ ಪ್ರದೇಶ
ಆಂಧ್ರಪ್ರದೇಶದಲ್ಲಿರುವ ತಿಮ್ಮಪ್ಪ ಸ್ವಾಮಿಯ ದೇವಾಲಯ ಭಾರತದ ಖ್ಯಾತ ದೇವಾಲಯಗಳಲ್ಲೊಂದು. ದಾನ ಹಾಗೂ ಕಾಣಿಕೆಯಾಗಿ ಬರುವ ಹಣ, ಆಸ್ತಿಗಳ ಲೆಕ್ಕದಲ್ಲಿ ಇದು ಜಗತ್ತಲ್ಲೇ ಅತಿ ಶ್ರೀಮಂತ ದೇವಾಲಯ. ಕೇವಲ ಕಾಣಿಕೆಯ ರೂಪದಲ್ಲೇ ವರ್ಷಕ್ಕೆ 650 ಕೋಟಿ ರುಪಾಯಿ ಈ ದೇವಾಲಯಕ್ಕೆ ಹರಿದು ಬರುತ್ತದೆ. ಅದಲ್ಲದೆ, ಇಲ್ಲಿನ ಪ್ರಸಿದ್ಧ ಪ್ರಸಾದ ಲಡ್ಡು ಮಾರಾಟದಿಂದಲೇ ಲಕ್ಷಗಟ್ಟಲೆ ಹಣ ಬರುತ್ತದೆ. 

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ
 
ಸಾಯಿಬಾಬಾ ದೇವಾಲಯ(Saibaba Shrine), ಶಿರಡಿ
ಶಿರಡಿಯಲ್ಲಿರುವ ಸಾಯಿಬಾಬಾ ದೇವಾಲಯಕ್ಕೆ ಜಗತ್ತಿನಾದ್ಯಂತ ಭಕ್ತ ಗಣವಿದೆ. ಮಹಾರಾಷ್ಟ್ರದ ಅತಿ ಶ್ರೀಮಂತ ದೇವಾಲಯಗಳಲ್ಲಿ ಈ ಸಾಯಿಬಾಬಾ ದೇವಾಲಯವೂ ಒಂದು. ದೇವಾಲಯದಲ್ಲಿ 32 ಕೋಟಿಯ ಬಂಗಾರವಿದೆ. ಅದರ ಹೊರತಾಗಿ, ಪ್ರತಿ ವರ್ಷ ಇಲ್ಲಿಗೆ 360 ಕೋಟಿ ರೂ. ಮೌಲ್ಯದ ಹಣ ಕಾಣಿಕೆ ರೂಪದಲ್ಲಿ ಬರುತ್ತದೆ. 

ವೈಷ್ಣೋದೇವಿ ದೇವಾಲಯ(Vaishno Devi Temple), ಜಮ್ಮು
ಜಮ್ಮುವಿನ ವೈಷ್ಣೋದೇವಿ ದೇವಾಲಯ ಮಾತಾ ರಾಣಿ ಎಂದೂ ಹೆಸರು ಪಡೆದಿದೆ. ಪ್ರತಿ ವರ್ಷ ವೈಷ್ಣೋದೇವಿ ಯಾತ್ರೆ ನಡೆಸುವವರ ಸಂಖ್ಯೆ ದೊಡ್ಡದಿದೆ. ಭಾರತದಲ್ಲಿರುವ 51 ಶಕ್ತಿಪೀಠಗಳಲ್ಲಿ ಇದು ಒಂದಾಗಿದೆ. ಪ್ರತಿ ವರ್ಷ ಜಗತ್ತಿನಾದ್ಯಂತ ಬರುವ ಯಾತ್ರಿಕರಿಂದಲೇ 500 ಕೋಟಿಗೂ ಹೆಚ್ಚು ಕಾಣಿಕೆ ಹಣ ಇಲ್ಲಿ ಸಂಗ್ರಹವಾಗುತ್ತದೆ. 

Great Sages: ಸಪ್ತರ್ಷಿಗಳೆಂದರೆ ಯಾರು, ಅವರ ವಿಶೇಷತೆಗಳೇನು?

ಸಿದ್ದಿ ವಿನಾಯಕ ದೇವಾಲಯ(Siddhivinayak Temple), ಮುಂಬೈ
ಮುಂಬೈನ ಪ್ರಭಾದೇವಿಯಲ್ಲಿರುವ ಸಿದ್ದಿವಿನಾಯಕ ದೇವಾಲಯ ಗಣಪತಿ ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಗಮನ ಸೆಳೆಯುತ್ತದೆ. ದೇವಾಲಯ ಸಮಿತಿಯು ಮುಂಬೈ ನಗರದ ಅತಿ ಶ್ರೀಮಂತ ಟ್ರಸ್ಟ್ ಆಗಿದೆ. ಬಾಲಿವುಡ್ ನಟನಟಿಯರಿಂದ ಹಿಡಿದು ಉದ್ಯಮಿಗಳವರೆಗೆ ಮುಂಬೈನ ಗಣ್ಯರೆಲ್ಲ ನಂಬಿಕೊಂಡಿರುವ ದೇವಾಲಯ ಇದಾಗಿದೆ. ಇಲ್ಲಿಗೆ ಪ್ರತಿ ವರ್ಷ ಕನಿಷ್ಠ 125 ಕೋಟಿ ರುಪಾಯಿ ದೇಣಿಗೆಯಾಗಿ ಹರಿದು ಬರುತ್ತದೆ. 

ಗೋಲ್ಡನ್ ಟೆಂಪಲ್(Golden Temple), ಅಮೃತಸರ್
ಪಂಜಾಬ್‌ನ ಅಮೃತಸರದಲ್ಲಿರುವ ಅತಿ ವೈಭವೋಪೇತವಾದ ಶ್ರೀ ಹರ್ಮಂದಿರ್ ಸಾಹೇಬ್  ಅಥವಾ ಗೋಲ್ಡನ್ ಟೆಂಪಲ್ ಕಣ್ಣಿಗೂ ಹಿತ, ಮನಸ್ಸಿಗೂ ಹಿತ ತರುವಂಥದ್ದು. ಯಾವುದೇ ಧರ್ಮ ಬೇಧವಿಲ್ಲದೆ ಬಂದವರೆಲ್ಲರ ಹೊಟ್ಟೆ ತುಂಬಿಸುವ ಕಾಯಕಕ್ಕೆ ಈ ಸಿಖ್ ದೇವಾಲಯ ಪ್ರಸಿದ್ಧಿ ಪಡೆದಿದೆ. ಈ ದೇವಾಲಯದ ಮೇಲಾವರಣ ಪೂರ್ತಿ ಸಂಪೂರ್ಣ ಅಪ್ಪಟ ಚಿನ್ನದಿಂದ ಮಾಡಲಾಗಿದೆ. ಸಿಖ್ಖರ ಪವಿತ್ರ ಗ್ರಂಥ ಗುರು ಗ್ರಂಥ್ ಸಾಹಿಬ್ ನ್ನು ಇಲ್ಲಿ ಮುತ್ತುರತ್ನ ಖಚಿತ ಸ್ಥಳದ ಮೇಲಿರಿಸಲಾಗಿದೆ. 

ಮೀನಾಕ್ಷಿ ದೇವಾಲಯ(Meenakshi Temple), ಮಧುರೈ
ಮೀನಾಕ್ಷಿ ಅಮ್ಮನ್ ದೇವಾಲಯವು ಬಹಳಷ್ಟು ಪ್ರವಾಸಿಗರು ಹಾಗೂ ಭಕ್ತರನ್ನು ಸೆಳೆಯುತ್ತದೆ. ಈ ಪಾರ್ವತಿ ಹಾಗೂ ಶಿವನ ದೇವಾಲಯವು ಜಗತ್ತಿನ 7 ಹೊಸ ಅದ್ಭುತಗಳ ಪಟ್ಟಿ ಆಯ್ಕೆಪಟ್ಟಿಯಲ್ಲಿ ಟಾಪ್ 30ರಲ್ಲಿ ಸ್ಥಾನ ಪಡೆದಿತ್ತು. ಇಲ್ಲಿಗೆ ಕೂಡಾ ವಾರ್ಷಿಕ ಕೋಟ್ಯಂತರ ರೂಪಾಯಿ ದೇಣಿಗೆಯಾಗಿ ಬರುತ್ತದೆ. 
 

Follow Us:
Download App:
  • android
  • ios