Asianet Suvarna News Asianet Suvarna News

Baba Vanga predictions: 2022ರಲ್ಲಿ ಮತ್ತೊಂದು ವೈರಸ್ ದಾಳಿ, ಬಾಬಾ ವಾಂಗಾ ಭವಿಷ್ಯ

ಜಗತ್ಪಸಿದ್ಧ ಅಂಧ ಭವಿಷ್ಯಕಾರರಾದ ಬಾಬಾ ವಾಂಗಾ 2022ಕ್ಕೆ ಭೂಮಿಯ ಮೇಲಿನ ಜನರ ಭವಿಷ್ಯ ನುಡಿದಿದ್ದಾರೆ. ಅದರಂತೆ, ಬರಲಿರುವ ವರ್ಷ ಹೊಸ ವೈರಸ್, ಏಲಿಯನ್ ದಾಳಿ ಇನ್ನಿತರೆ ಸಮಸ್ಯೆಗಳನ್ನು ಎದುರಿಸಬೇಕಿದೆ. 

SHOCKING New Year predictions by Baba Vanga skr
Author
Bangalore, First Published Dec 26, 2021, 11:01 AM IST

ಅನ್ಯ ಗ್ರಹವಾಸಿಗಳು ಭೂಮಿ ಮೇಲೆ ಆಸ್ಟ್ರಾಯ್ಡ್ ದಾಳಿ ನಡೆಸಲಿದ್ದಾರೆ, ಹೊಸ ವೈರಸ್ಸೊಂದು ಮನುಕುಲವನ್ನು ಮತ್ತಷ್ಟು ಕಂಗೆಡಿಸಲಿದೆ, ಕುಡಿಯುವ ನೀರಿನ ಸಮಸ್ಯೆಯಿಂದ ನಗರಗಳು ನಲುಗಲಿವೆ, ಮಿಡತೆಗಳ ದಾಳಿಯಿಂದ ರೈತರು ಕಂಗಾಲಾಗುತ್ತಾರೆ... 2022ಕ್ಕೆ ಜಗತ್ಪ್ರಸಿದ್ಧ ಭವಿಷ್ಯಕಾರಿಣಿ ವಾಂಗಾ ಬಾಬಾ(Baba Vanga) ನುಡಿದಿರುವ ಭವಿಷ್ಯಗಳಿವು..

ಬಲ್ಗೇರಿಯಾ ಮೂಲದ ಬಾಬಾ ವಾಂಗಾ 12ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡು ಅಂಧ(blind)ರಾದರು. ಆಗಿನಿಂದ ದೇವರು ತನಗೆ ದಿವ್ಯದೃಷ್ಟಿ ನೀಡಿದ ಎನ್ನುವ ಅವರಿಗೆ ಎಲ್ಲ ವರ್ಷದ ಭವಿಷ್ಯ ಕಾಣಸಿಗುತ್ತಿತ್ತಂತೆ. ಈಕೆ ಆಧುನಿಕ ನಾಸ್ಟ್ರಡಾಮಸ್ ಎಂದೇ ಹೆಸರಾಗಿದ್ದಾರೆ. ಮೂಲತಃ ಹೆಸರು ವಾಂಗೇಲಿಯಾ ಪಂಡೇವಾ ಗಸ್ಟೆರೋವಾ ಎಂದು. ಈಕೆ ಮಾಡಿದ 9/11 ದಾಳಿ, ಬ್ರೆಕ್ಸಿಟ್ ಭವಿಷ್ಯ, ಡಯಾನಾ ಸಾವು, ಥೈಲ್ಯಾಂಡ್ ಸುನಾಮಿ, ಒಬಾಮಾ ಅಧ್ಯಕ್ಷ ಪದವಿ ಬಗೆಗಿನ ಭವಿಷ್ಯ ಎಲ್ಲವೂ ಇದುವರೆಗೂ ನಿಜವಾಗಿವೆ. 1996ರಲ್ಲೇ ವಾಂಗಾ ಮೃತಪಟ್ಟಿದ್ದರೂ 5079ನೇ ಇಸವಿಯವರೆಗೆ ಆಕೆ ಭವಿಷ್ಯ ನುಡಿದಿದ್ದಾರೆ. 5079ರಲ್ಲಿ ಜಗತ್ತು ಕೊನೆಯಾಗುತ್ತದೆ ಎಂಬುದು ಆಕೆಯ ಮಾತು. ಈಕೆ 2022ನೇ ಇಸವಿಗೆ ನುಡಿದಿರುವ ಭವಿಷ್ಯ ಏನು ನೋಡೋಣ..

ಪ್ರವಾಹ(flood)
2022ರಲ್ಲಿ ಏಷ್ಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಬಹಳಷ್ಟು ಬಾರಿ ಪ್ರವಾಹಕ್ಕೆ ನಲುಗುತ್ತವೆ. ಮತ್ತೆ ಮತ್ತೆ ಬರುವ ಪ್ರವಾಹಕ್ಕೆ ಚೇತರಿಸಿಕೊಳ್ಳಲು ಒದ್ದಾಡಬೇಕಾಗುತ್ತದೆ. ಬಹಳಷ್ಟು ಜನರ ಬದುಕು ಅಸ್ತವ್ಯಸ್ತವಾಗುತ್ತದೆ.

ಈ ರಾಶಿಯ ಹುಡುಗರು good husband ಎನಿಸಿಕೊಳ್ಳಲಿದ್ದಾರೆ, ನಿಮ್ಮ ಪಾರ್ಟ್ನರ್‌ ಈ ರಾಶಿಯವರಾ ನೋಡಿ..

ಮತ್ತೊಂದು ಮಾರಕ ವೈರಸ್?!(A new lethal virus)
ಅಬ್ಬಾ, ಈ ಕರೋನಾ ವೈರಸ್, ಓಮಿಕ್ರಾನ್ ಎಲ್ಲ ಯಾವಾಗ ಮುಗಿಯುತ್ತೋ ಎಂದು ಜಗತ್ತು ಕಾಯುತ್ತಿರುವ ನಡುವೆಯೇ ವಾಂಗಾ ಬಾಬಾ ಹೇಳಿರುವ ಭವಿಷ್ಯ ಕಂಗೆಡಿಸಲಿದೆ. ಸೈಬೀರಿಯಾ(Siberia)ದಲ್ಲಿ ಇದುವರೆಗೂ ಹಿಮಗಟ್ಟಿದಂತಿದ್ದ ಹೊಸ ವೈರಸ್ಸೊಂದು ಸಂಶೋಧಕರಿಗೆ ಸಿಗಲಿದೆ ಎಂದಿದ್ದಾರೆ. ತಾಪಮಾನ ಏರಿಕೆಯಿಂದ ಬಿಡುಗಡೆಯಾಗಲಿರುವ ಈ ವೈರಸ್, ನಿಯಂತ್ರಣ ತಪ್ಪಿ ಹರಡಲಿದೆ ಎಂದಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ವಿಫಲವಾಗಲಿದೆ.

2022 Horoscope: ಹೊಸ ವರ್ಷ ಸಿಂಹ ರಾಶಿಗೆ ಅದೃಷ್ಟ, ಉಳಿದ ರಾಶಿಗಳಿಗೆ ಹೇಗಿರಲಿದೆ?

ಕುಡಿಯುವ ನೀರಿನ ಸಮಸ್ಯೆ(Drinking water crisis)
ಕಳೆದ ಕೆಲ ವರ್ಷಗಳಿಂದ ನೀರಿನ ಸಮಸ್ಯೆ ಎಲ್ಲೆಡೆ ಇದ್ದೇ ಇದೆ. ವಾಂಗಾ ಪ್ರಕಾರ, ಜಗತ್ತಿನ ಪ್ರಮುಖ ನಗರಗಳು ಕುಡಿಯುವ ನೀರಿನ ಸಮಸ್ಯೆಯಿಂದ 2022ರಲ್ಲಿ ಬಳಲಲಿವೆ. ನದಿಗಳು ಕಲುಷಿತವಾಗಿ ಬಳಸಲು ಅಯೋಗ್ಯವಾಗುವುದರಿಂದ ಅವನ್ನು ಶುದ್ಧೀಕರಿಸುವ ಕಾರ್ಯ ಮಾಡಬೇಕಿದೆ.

ಮಿಡತೆ ದಾಳಿ(Locust attack)
ಭಾರತದಲ್ಲಿ ತಾಪಮಾನ 50 ಡಿಗ್ರಿಗೂ ಹೆಚ್ಚು ಏರಿಕೆಯಾಗಲಿದೆ. ಇದರಿಂದ ಬರಗಾಲ ಕಾಣಿಸಿಕೊಳ್ಳಲಿದೆ. ಪರಿಣಾಮವಾಗಿ ಭಾರತದಲ್ಲಿ ಮಿಡತೆ ದಾಳಿ ಹೆಚ್ಚಲಿದ್ದು, ಬೆಳೆಗಳ ಹಾನಿಯಿಂದ ರೈತರು ಕಂಗಾಲಾಗಲಿದ್ದಾರೆ ಎಂದು ವಾಂಗಾ ಹೇಳಿದ್ದಾರೆ. 2020ರಲ್ಲೇ ಈ ಸಮಸ್ಯೆ ರಾಜಸ್ಥಾನ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಕಂಡುಬಂದಿತ್ತು. 

Health Horoscope 2022: ಹೊಸ ವರ್ಷದಲ್ಲಿ ಮಿಥುನ ರಾಶಿಗೆ ಅನಾರೋಗ್ಯ ಕಾಡುತ್ತೆ, ಉಳಿದವರಿಗೆ?

ವರ್ಚುಯಲ್ ರಿಯಾಲಿಟಿ(Virtual Reality)
ವರ್ಚುಯಲ್ ರಿಯಾಲಿಟಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದೆ. ಆದರೆ, ವಾಂಗಾ ಪ್ರಕಾರ, 2022ರಲ್ಲಿ ಇದರ ಅಧಿಪತ್ಯ ಮತ್ತಷ್ಟು ಹೆಚ್ಚಲಿದೆ. ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಕ್ರೀನ್ ಮುಂದೆಯೇ ಕಳೆಯಲಿದ್ದಾರಂತೆ. ಇದೊಂದು ವ್ಯಸನವಾಗಿ ಬದಲಾಗಲಿದ್ದು, ಜನರು ಮಾನಸಿಕ ಸಮಸ್ಯೆಗಳಿಂದ ಬಳಲಿದ್ದಾರೆ.

ಅನ್ಯ ಗ್ರಹ ಜೀವಿಗಳ ದಾಳಿ(Alien attack)
2022ರಲ್ಲಿ ಔಮುಮ ಹೆಸರಿನ ಆಸ್ಟೆರಾಯ್ಡ್‌ನ್ನು ಅನ್ಯಗ್ರಹ ಜೀವಿಗಳು ಭೂಮಿಗೆ ಕಳಿಸಿ ಆಕ್ರಮಣ ನಡೆಸಲಿದ್ದಾರಂತೆ.

ಸುನಾಮಿ(tsunami)
ಇವಿಷ್ಟೇ ಅಲ್ಲದೆ, ಜಗತ್ತು ಸುನಾಮಿ, ಭೂಕಂಪಗಳಿಂದ ನಲುಗಲಿದೆ. ಇಂಡಿಯನ್ ಓಶನ್‌ನಲ್ಲಿ ಸಂಭವಿಸುವ ಭೂಕಂಪದಿಂದ ಸುನಾಮಿ ಏಳಲಿದೆ. ಇದರಿಂದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಇಂಡೋನೇಷ್ಯಾ, ಹಾಗೂ ಭಾರತದ ತೀರ ಪ್ರದೇಶಗಳ ಮೇಲೆ ಪರಿಣಾಮ ಕಾಣಲಿದೆ ಎಂದು ವಾಂಗಾ ಹೇಳಿದ್ದಾರೆ. 

ವಾಂಗಾ ಭವಿಷ್ಯ

Follow Us:
Download App:
  • android
  • ios