Asianet Suvarna News Asianet Suvarna News

ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!

ಯಾವುದೇ ವ್ಯಕ್ತಿಯ ಜಾತಕದ ಮೊದಲನೇ ಮನೆಯಲ್ಲಿ ಸೂರ್ಯ ಗ್ರಹವು ಸ್ಥಿತವಾಗಿದ್ದರೆ ಆ ವ್ಯಕ್ತಿಯ ಬಹಳ ಅದೃಷ್ಟವೆಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಇದಲ್ಲದೆ ಕೆಲವು ನ್ಯೂನತೆಗಳೂ ಇರಲಿದ್ದು, ಇಂತಹ ಜಾತಕವುಳ್ಳವರ ಭವಿಷ್ಯ, ಸ್ವಭಾವಗಳ ಬಗ್ಗೆ ತಿಳಿಯೋಣ. 

The sun in the first house the luxury comfort people would get
Author
Bangalore, First Published Jun 27, 2022, 10:42 AM IST

ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಸೂರ್ಯ ಗ್ರಹವನ್ನು (Sun Planet) ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯ ಗ್ರಹವು ವ್ಯಕ್ತಿಗೆ ಶಕ್ತಿ ಮತ್ತು ಬಲವನ್ನು ನೀಡುತ್ತದೆ. ಇದೇ ಕಾರಣಕ್ಕಾಗಿ ರಾಜನಂತೆಯೇ ಸೂರ್ಯ ಗ್ರಹದ ಪ್ರಭಾವವು ಇರುತ್ತದೆ. ಸೂರ್ಯನ ಪ್ರಭಾವ ಇದೆ ಎಂದಾದರೆ ಆ ವ್ಯಕ್ತಿಗಳಿಗೆ ಯಾವ ಕೆಲಸವೂ ಕಷ್ಟಕರವಾಗಲಾರದು. ಜ್ಯೋತಿಷ್ಯದ ಪ್ರಕಾರ ಯಾವ ವ್ಯಕ್ತಿಯ ಜಾತಕದಲ್ಲಿ ಸೂರ್ಯ ಗ್ರಹವು ಉಚ್ಛ ಸ್ಥಿತಿಯಲ್ಲಿದ್ದರೆ ಅವರ ಜೀವನಶೈಲಿಯು (Lifestyle) ಐಶಾರಾಮಿಯಾಗಿ (Luxury) ಇರಲಿದೆ. ಅಷ್ಟೇ ಅಲ್ಲದೆ ಜಾತಕದಲ್ಲಿ ಸೂರ್ಯ ಗ್ರಹದ ಸ್ಥಿತಿಯು ಉತ್ತಮವಾಗಿದ್ದರೆ ಆಂತರಿಕ ದೃಢತೆ ಇರುವುದಲ್ಲದೆ, ಆ ವ್ಯಕ್ತಿಯಲ್ಲಿ ಬಹಳವೇ ಆತ್ಮವಿಶ್ವಾಸ ಇರುತ್ತದೆ. ಇನ್ನು ಸೂರ್ಯ ಗ್ರಹವು ಜಾತಕದಲ್ಲಿ ಮೊದಲನೇ ಮನೆಯಲ್ಲಿ ಸ್ಥಿತವಾಗಿದ್ದರೆ ಜೀವನದಲ್ಲಿ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂಬುದನ್ನು ತಿಳಿಯೋಣ....

ಜೀವನಲ್ಲಿ ಎಲ್ಲವೂ ಲಭ್ಯ
ಜಾತಕದ (Horoscope) ಮೊದಲನೇ ಮನೆಯಲ್ಲಿ ಸೂರ್ಯ ಗ್ರಹವಿದ್ದರೆ ಜೀವನದಲ್ಲಿ ಎಲ್ಲವೂ ಸಿಗುತ್ತದೆ. ಅಲ್ಲದೆ, ನೇರ ಸ್ವಭಾವ ಮತ್ತು ಉದಾರ ಗುಣವನ್ನು ಹೊಂದಿರುತ್ತಾರೆ. ಈ ವ್ಯಕ್ತಿಗಳ ಸಹೋದರ (Brother) ಅಥವಾ ಸಹೋದರಿಯರು (Sister) ಭಾಗ್ಯಶಾಲಿಗಳಾಗಿರುತ್ತಾರೆ. ಅಲ್ಲದೇ, ಈ ವ್ಯಕ್ತಿಗಳ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಪ್ರಗತಿಯನ್ನು ಕಾಣುವುದಲ್ಲದೆ, ಅವರ ಎಲ್ಲ ಮಾತುಗಳಿಗೆ ಬೆಲೆ ಕೊಡುತ್ತಾರೆ. ತಾವು ಹಾಕಿದ ಗೆರೆಯನ್ನು ಮೀರಲಾರರು. ಈ ವ್ಯಕ್ತಿಗಳು ಧಾರ್ಮಿಕ ಹಿನ್ನೆಲೆಯನ್ನು ಉಳ್ಳವರಾಗಿದ್ದು, ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚೆಚ್ಚು ಭಾಗವಹಿಸುತ್ತಾರೆ. ಇವರು ಅತ್ಯಂತ ಪ್ರಾಮಾಣಿಕ (Honest) ವ್ಯಕ್ತಿಗಳಾಗಿದ್ದು, ನೈತಿಕತೆಗೆ ಹೆಚ್ಚಿನ ಒತ್ತನ್ನು ನೀಡುತ್ತಾರೆ. 

ಸಿಟ್ಟೇ ಹೆಚ್ಚು
ಜಾತಕದ ಮೊದಲನೇ ಮನೆಯಲ್ಲಿ ಸೂರ್ಯ ಸ್ಥಿತನಾಗಿದ್ದರೆ ಅಂತಹ ವ್ಯಕ್ತಿಗಳದ್ದ ಉಗ್ರ ಸ್ವಭಾವವಾಗಿದ್ದು, ಮೂಗಿನ ತುದಿಯಲ್ಲೇ ಸಿಟ್ಟನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಇವರಿಗೆ ಇವರ ಈ ಸಿಟ್ಟಿನ (Angry) ಸ್ವಭಾವವೇ ಮುಳವಾಗಲಿದ್ದು, ವಿವೇಕವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಜೊತೆಗೆ ಅವಿವೇಕಿಗಳು ಎಂಬ ಹಣೆಪಟ್ಟಿಯನ್ನು ಸಹ ಹೊಂದಬೇಕಾಗಿ ಬರುತ್ತದೆ.

ಮಂಗಳ ರಾಶಿ ಪರಿವರ್ತನೆ - ಈ ನಾಲ್ಕು ರಾಶಿಯವರಿಗೆ ಮಂಗಳಕರ!

ಸ್ವಲ್ಪ ಆಲಸಿಗಳು
ಸ್ವಲ್ಪ ಮಟ್ಟಿನ ಆಲಸಿಗಳು (Lazy) ಇವರಾಗಿದ್ದು, ಯಾವುದೇ ಕೆಲಸವನ್ನು ತಕ್ಷಣಕ್ಕೆ ಕೈಗೆತ್ತಿಕೊಳ್ಳುವವರಲ್ಲ. ಆದಷ್ಟು ಆ ಕೆಲಸಗಳನ್ನು ಮುಂದೂಡಲು ಇಚ್ಛೆಪಡುತ್ತಾರೆ. ಆದರೆ, ಒಂದು ವೇಳೆ ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರು ಎಂದಾದರೆ ಆ ಕೆಲಸವು ಯಶಸ್ವಿಯಾಗಿ ಪೂರ್ಣಗೊಳ್ಳುವವರೆಗೂ ವಿರಮಿಸಲಾರರು. ಇವರು ಮಹತ್ವಾಕಾಂಕ್ಷೆಯ (Ambition) ಗುಣವನ್ನು ಹೆಚ್ಚಾಗಿ ಹೊಂದಿದ್ದು, ಇದು ಇವರನ್ನು ಅಹಂಕಾರಿಗಳು ಎಂಬಂತೆ ಬಿಂಬಿಸುತ್ತದೆ. 

ತೇಜಸ್ಸಿನ ವ್ಯಕ್ತಿತ್ವ
ಇವರ ಹಣೆ ಭಾಗವು ಹೊಳಪನ್ನು ಹೊಂದಿರುವುದಲ್ಲದೆ, ಇವರ ಮೊಗದಲ್ಲಿ ತೇಜಸ್ಸು ಎದ್ದು ಕಾಣುತ್ತದೆ. ಎಂಥವರನ್ನೂ ತಮ್ಮತ್ತ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಇವರದ್ದಾಗಿರುತ್ತದೆ. ಸಂಗಾತಿಯ (ಪತಿ/ಪತ್ನಿ) (Partner) ಜಾತಕದಲ್ಲಿ ಸಂತಾನ ಯೋಗವು ಉತ್ತಮವಾಗಿಲ್ಲದಿದ್ದರೂ ಈ ಜಾತಕದ ವ್ಯಕ್ತಿಗಳಲ್ಲಿ ಸೂರ್ಯನು ಪ್ರಥಮ ಸ್ಥಾನದಲ್ಲಿದ್ದಾನೆಂದಾದರೆ ಮಕ್ಕಳ (Child) ಸಂಖ್ಯೆ ಕಡಿಮೆ ಇರುತ್ತದೆ. ಅಂದರೆ ಚಿಕ್ಕ ಸಂಸಾರವನ್ನು ಇವರು ಹೊಂದಲಿದ್ದಾರೆ. 

ಸರ್ಕಾರಿ ನೌಕರಿ ಭಾಗ್ಯ
ಈ ಜಾತಕದವರಿಗೆ ಸರ್ಕಾರಿ ನೌಕರಿ (Government Job) ದೊರೆಯುವ ಸಾಧ್ಯತೆ ಹೆಚ್ಚಿದ್ದು, ಆ ನಿಟ್ಟಿನಲ್ಲಿ ಪರಿಶ್ರಮವನ್ನು ಹಾಕಬೇಕಿದೆ. ಈ ವ್ಯಕ್ತಿಗಳು ಯಾವುದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದರೂ ತಮ್ಮ ಛಾಪನ್ನು ಮೂಡಿಸದೇ ಬಿಡುವುದಿಲ್ಲ. ಸಾಮಾಜಿಕ ಕ್ಷೇತ್ರದಲ್ಲೂ ಸಹ ಇವರು ತಮ್ಮ ಪ್ರಭಾವವನ್ನು ಬೀರುತ್ತಾರೆ. 

ಬುದ್ಧಿವಂತಿಕೆಯಿಂದಲೇ ಕೆಲಸದಲ್ಲಿ ಯಶ ಸಾಧಿಸೋ ರಾಶಿಗಳಿವು!

ಉತ್ತಮವಲ್ಲದ ವಿಚಾರಗಳು
ಜಾತಕದ ಮೊದಲ ಮನೆಯಲ್ಲಿ ಸೂರ್ಯನು ಸ್ಥಿತನಾಗಿದ್ದರೆ ಎಷ್ಟು ಒಳ್ಳೆಯದೋ ಕೆಲವಷ್ಟು ಉತ್ತಮವಲ್ಲದ ಅಂಶಗಳೂ ಇವೆ. ಇವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಹೆಚ್ಚು ಉದುರುವ ಸಾಧ್ಯತೆ ದಟ್ಟವಾಗಿದೆ. ಕಣ್ಣಿನ ಸಮಸ್ಯೆಗಳು (Eye Problems) ಬಾಧಿಸುವ ಸಾಧ್ಯತೆ ಸಹ ಇರುತ್ತದೆ. 

Follow Us:
Download App:
  • android
  • ios