64 ದಿನಗಳ ಬಳಿಕ ಮತ್ತೆ ಮಕರ ರಾಶಿಗೆ ಶನಿ ಪ್ರವೇಶ, ಈ 2 ರಾಶಿಯ ಕಥೆ ಏನು?
Astrology prediction in Kannada: ಶನಿ ಗ್ರಹವು ಹಾಲಿ ಕುಂಭ ರಾಶಿಯಲ್ಲಿ ಸ್ಥಿತನಾಗಿದ್ದು, ಜುಲೈ 12ರಿಂದ ಶನಿಯು ಮಕರ ರಾಶಿಗೆ ಪ್ರವೇಶವನ್ನು ಮಾಡಲಿದ್ದಾನೆ. ಶನಿಯ ಈ ರಾಶಿ ಪರಿವರ್ತನೆಯಿಂದ ಕೆಲವು ರಾಶಿಯವರ ಮೇಲೆ ವಿವಿಧ ರೀತಿಯ ಪರಿಣಾಮಗಳು ಆಗಲಿದ್ದು, ಯಾವ ರಾಶಿಯ ವ್ಯಕ್ತಿಗಳ ಮೇಲೆ ಏನೆಲ್ಲಾ ಬದಲಾವಣೆಗಳು ಆಗಲಿವೆ ಎಂಬುದನ್ನು ನೋಡೋಣ...
ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಶನಿ ಗ್ರಹಕ್ಕೆ (Saturn Planet) ವಿಶೇಷ ಮಹತ್ವವನ್ನು ನೀಡಲಾಗಿದೆ. ಶನಿಯು ಆಯಾ ವ್ಯಕ್ತಿಗಳಿಗೆ ಅವರ ಕರ್ಮಗಳ ಆಧಾರದ ಮೇಲೆ ಫಲಗಳನ್ನು ನೀಡುತ್ತಾನೆ. ಶನಿಯ ಕಠಿಣ ಸ್ವಭಾವದಿಂದಾಗಿ ಹಾನಿಕಾರಕ ಗ್ರಹ ಎಂದು ಕರೆಯಲಾಗುತ್ತದೆ. ಆದರೆ ಶನಿ ದೇವರು ಎಲ್ಲರಿಗೂ ಕೆಟ್ಟದ್ದನೇ ಮಾಡುವವನಲ್ಲ. ಶನಿ ದೇವರ ಕೃಪಾಶೀರ್ವಾದವನ್ನು ಪಡೆದವರು ಏರುಗತಿಯಲ್ಲಿ ಸಾಗುತ್ತಾರೆ. ಯಾರ ಜಾತಕದಲ್ಲಿ (Horoscope) ಶನಿ ಗ್ರಹವು ಉಚ್ರಾಯ ಸ್ಥಾನದಲ್ಲಿದೆಯೋ ಆ ಜಾತಕದವರಿಗೆ ಜೀವನದಲ್ಲಿ (Life) ಎಲ್ಲ ಸೌಕರ್ಯಗಳೂ ಲಭ್ಯವಾಗಲಿದೆ. ಅದೇ ರೀತಿ ಯಾರ ಜಾತಕದಲ್ಲಿ ಈ ಗ್ರಹವು ದುರ್ಬಲವಾಗಿದೆಯೋ ಅವರಿಗೆ ದುಃಖಗಳು, ಸಮಸ್ಯೆಗಳು (Problems) ತಪ್ಪಲಾರವು.
ಯಾವುದೇ ರಾಶಿಯಲ್ಲಿ ಶನಿಯು ಎರಡೂವರೆ ವರ್ಷಗಳ ಕಾಲ ಸ್ಥಿತನಾಗಿರುತ್ತಾನೆ. ಪ್ರಸ್ತುತ ಸಮಯದಲ್ಲಿ ಶನಿ ವಕ್ರನಾಗಿದ್ದು, ಕುಂಭ (Aquarius) ರಾಶಿಯಲ್ಲಿ ಸ್ಥಿತನಾಗಿದ್ದಾನೆ. ಜುಲೈ 12ರಿಂದ ಶನಿಯು ಮಕರ (Capricorn) ರಾಶಿಗೆ ಪ್ರವೇಶಿಸಲಿದ್ದು, ಹಲವು ರಾಶಿಯವರ ಸ್ಥಿತಿಗತಿಗಳು ಬದಲಾವಣೆಯನ್ನು ಹೊಂದಲಿವೆ. ಈಗ ಶನಿಯ ರಾಶಿ ಪರಿವರ್ತನೆಯಿಂದ (Zodiac transit) ಯಾವ ರಾಶಿ ಚಕ್ರದವರ ಮೇಲೆ ಹೆಚ್ಚಿನ ಪ್ರಭಾವವಾಗಲಿದೆ..? ಅವರಲ್ಲಾಗುವ ಬದಲಾವಣೆಗಳು ಏನು ಎಂಬುದನ್ನು ನೋಡೋಣ....
ಜುಲೈ 12ರಿಂದ ಮಕರಕ್ಕೆ ಪ್ರವೇಶ
ಏಪ್ರಿಲ್ 29, 2022ರಿಂದ ಕುಂಭ ರಾಶಿಯಲ್ಲಿಯೇ ಸ್ಥಿತನಾಗಿದ್ದ ಶನಿಯು ಇದೀಗ ಜುಲೈ (July) 12 ರಂದು ಬೆಳಗ್ಗೆ 10:28 ರ ನಂತರ ಮಕರ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಪ್ರಸ್ತುತ ಸಮಯದ ಬಗ್ಗೆ ಹೇಳುವುದಾದರೆ ಶನಿಯು ಈಗ ಮಕರ, ಕುಂಭ ಮತ್ತು ಮೀನ (Pisces) ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಅದೇ ಸಮಯದಲ್ಲಿ ಶನಿಯು ಕರ್ಕಾಟಕ (Cancer) ಮತ್ತು ವೃಶ್ಚಿಕ ರಾಶಿಯ ಮೇಲೂ ಪರಿಣಾಮವನ್ನು ಬೀರುತ್ತಿದ್ದಾನೆ.
ಇದನ್ನೂ ಓದಿ: ವೃಷಭ ರಾಶಿ ಮಾಸಿಕ ಭವಿಷ್ಯ: ಹೊಸ ಉದ್ಯೋಗ, ಭಾರಿ ಧನಲಾಭ!
ಜುಲೈ 12ರಿಂದ ಶನಿ ಅರ್ಧಾಷ್ಟಮ ಮತ್ತು ಸಾಡೇಸಾತಿ ಆರಂಭ:
ಜುಲೈ 12, 2022ರಿಂದ 2023ರ ಜನವರಿ 17ರವರೆಗೆ ಮಕರ ರಾಶಿಯಲ್ಲಿ ಶನಿಯು ಸ್ಥಿತನಾಗಿರುತ್ತಾನೆ. ಈ ಸಮಯದಲ್ಲಿ ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿಯ ಅರ್ಧಾಷ್ಟಮದಿಂದ ಮುಕ್ತಿ ದೊರಕಲಿದೆ. ಆದರೆ, ಮಿಥುನ ಮತ್ತು ತುಲಾ ರಾಶಿಯ ವ್ಯಕ್ತಿಗಳಿಗೆ ಅರ್ಧಾಷ್ಟಮ ಪ್ರಾರಂಭವಾಗುತ್ತದೆ. ಇದರ ಜೊತೆಗೆ ಈ ಸಮಯದಲ್ಲಿ ಮೀನ ರಾಶಿಯ ವ್ಯಕ್ತಿಗಳು ಸಾಡೇಸಾತ್‌ನಿಂದ ಮುಕ್ತಿ ಹೊಂದಲಿದ್ದಾರೆ. ಬಳಿಕ ಧನು ರಾಶಿಯವರಿಗೆ (Sagittarius) ಈ ಸಾಡೇಸಾತ್ ಆರಂಭವಾಗಲಿದೆ. ಇದರ ಜೊತೆಗೆ ಮಕರ ಮತ್ತು ಕುಂಭ ರಾಶಿಯವರಿಗೂ ಸಾಡೇಸಾತ್ ಮುಂದರಿಯಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಜುಲೈ 12ರಿಂದ 2023ರ ಜನವರಿ 17ರವರೆಗೆ ಧನು, ಮಕರ ಮತ್ತು ಕುಂಭ ರಾಶಿಯ ಮೇಲೆ ಶನಿ ಸಾಡೇಸಾತ್ ಇರಲಿದೆ. ಹಾಗೆಯೇ ಮಿಥುನ (Gemini) ಮತ್ತು ತುಲಾ (Libra) ರಾಶಿಯವರಿಗೆ ಶನಿ ಅರ್ಧಾಷ್ಟಮ ಇರಲಿದೆ.
ಇದನ್ನೂ ಓದಿ: ಜಾತಕದ ಮೊದಲ ಮನೆಯಲ್ಲಿದ್ದರೆ ಸೂರ್ಯ, ಸಿಗುತ್ತೆ ಐಶಾರಾಮಿ ಸೌಕರ್ಯ!
ಶನಿದೇವರ ಕೃಪೆಗೆ ನೀವೇನು ಮಾಡಬೇಕು?
ಶನಿ ದೇವರ ಕೃಪೆಗೆ ಪಾತ್ರರಾಗಿ ಅವನಿಂದ ಬರುವ ಸಂಕಷ್ಟಗಳಿಂದ ಪಾರಾಗಲು ಅನೇಕ ಮಾರ್ಗಗಳಿವೆ. ಶನಿ ದೇವರನ್ನು ಮೆಚ್ಚಿಸಲು ಶನಿವಾರದಂದು ಸಾಸಿವೆ ಎಣ್ಣೆ (Mustard Oil), ಛತ್ರಿ (Umbrella), ಕಂಬಳಿ (Blanket), ಕಪ್ಪು ಬಟ್ಟೆ (Black Dress), ಇಡೀ ಉದ್ದಿನ ಬೇಳೆ, ಲೋಹ, ಎಳ್ಳು, ಅನ್ನ (Rice), ಔಷಧಿ (Medicine) ಇತ್ಯಾದಿಗಳನ್ನು ದಾನ ಮಾಡಬೇಕು. ಹತ್ತಿರದಲ್ಲಿ ಶನಿ ದೇವಸ್ಥಾನವಿದ್ದರೆ ಅಲ್ಲಿಗೆ ಭೇಟಿ ನೀಡಿ ಆರಾಧನೆ ಮಾಡಬೇಕು. ಶನಿವಾರ ಮತ್ತು ಮಂಗಳವಾರ ಹನುಮಂತನನ್ನು ಪೂಜಿಸಬೇಕು. ಈ ಮಾರ್ಗೋಪಾಯಗಳನ್ನು ಅನುಸರಿಸಿದರೆ ಶನಿ ದೇವರ ಕೃಪಾಶೀರ್ವಾದ ನಿಮ್ಮದಾಗುತ್ತದೆ.