ಜಾತಕದಲ್ಲಿ ಈ ದೋಷಗಳಿದ್ದರೆ ಪರಿಹರಿಸಿಕೊಳ್ಳಿ!!!

ಜಾತಕದಲ್ಲಿ ಗ್ರಹದೋಷಗಳು ಅಂದರೆ ಕಾಳಸರ್ಪ ದೋಷ, ಪಿತೃ ದೋಷ ಹೀಗೆ ಬೇರೆ ಬೇರೆ ದೋಷಗಳು ಇದ್ದಲ್ಲಿ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಜಾತಕವನ್ನು ಪರಿಶೀಲಿಸಿಕೊಂಡು ದೋಷಗಳಿದ್ದಲ್ಲಿ ಅದಕ್ಕೆ ತಕ್ಕ ಪರಿಹಾರವನ್ನು ಮಾಡಿಕೊಳ್ಳ ಬೇಕಾಗುತ್ತದೆ. ಹಾಗಾಗಿ ಜಾತಕದಲ್ಲಿರಬಹುದಾದ ದೋಷಗಳ ಬಗ್ಗೆ ತಿಳಿಯೋಣ.
 

These dosha in Horoscope causes difficulties in life

ಜಾತಕ (Horoscope) ಅಥವಾ ಕುಂಡಲಿಯು ಒಬ್ಬ ವ್ಯಕ್ತಿಯ ಬಗ್ಗೆ ಸಂಪೂರ್ಣ ಚಿತ್ರಣವನ್ನು ಕೊಡುತ್ತದೆ. ಹುಟ್ಟಿನ ದಿನ, ಸಮಯ, ಘಳಿಗೆಯ ಆಧಾರದ ಮೇಲೆ ಜಾತಕವನ್ನು ಬರೆಯಲಾಗುತ್ತದೆ. ಜಾತಕದಲ್ಲಿ ನಕ್ಷತ್ರ, ರಾಶಿ, ಗ್ರಹಗತಿ, ಪಾದಗಳು ಸೇರಿದಂತೆ ಇನ್ನಿತರ ವಿಷಯಗಳು ಅಡಕವಾಗಿರುತ್ತವೆ. ಇವುಗಳ ಲೆಕ್ಕಾಚಾರದ ಮೇಲೆ ತಾರಾಗಣಗಳನ್ನು ಲೆಕ್ಕಹಾಕಿ ಶುಭ ಇಲ್ಲವೇ ಅಶುಭ ಫಲಗಳನ್ನು ತಿಳಿಯಬಹುದಾಗಿದೆ. ಹೀಗಾಗಿ ಜಾತಕದಲ್ಲಿರುವ ದೋಷಗಳನ್ನು (Jataka Dosha) ಮೊದಲೇ ತಿಳಿದುಕೊಂಡರೆ ಅವುಗಳಿಗೆ ಪರಿಹಾರಗಳನ್ನು (Solution) ಕಂಡುಕೊಳ್ಳಲು ಅನುಕೂಲವಾಗುತ್ತದೆ. ಹೀಗಾಗಿ ಸಮಸ್ಯೆಗಳು (Difficulties) ಹೇಗಿರಲಿವೆ ಎಂದಬುದನ್ನು ಗಮನಿಸೋಣ..

ಕಾಳಸರ್ಪ ದೋಷ (Kalasarpa Dosha)
ಜಾತಕದಲ್ಲಿ ರಾಹು-ಕೇತುವಿನಿಂದ (Rahu -ketu) ಉಂಟಾಗುವ ದೋಷಕ್ಕೆ ಕಾಳಸರ್ಪ ದೋಷ ಎಂದು ಹೇಳಲಾಗುತ್ತದೆ. ಈ ದೋಷವಿದ್ದರೆ ಸಂತಾನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜೊತೆಗೆ ಹಣಕ್ಕೆ (Money) ಸಂಬಂಧಿಸಿದ ತೊಂದರೆಗಳು ಕಾಡುತ್ತವೆ. ಜೀವನದಲ್ಲಿ ಏರಿಳಿತವನ್ನು ಕಾಣಬೇಕಾಗುತ್ತದೆ. ಈ ದೋಷವಿದ್ದರೆ ಸೂಕ್ತ ಪರಿಹಾರ ಮಾಡಿಸಿಕೊಳ್ಳಬೇಕಿದೆ. 

ಇದನ್ನು ಓದಿ: Father And Son: ಅಪ್ಪನಿಗೆ ಹೆಮ್ಮೆ ತರುವ ಹುಡುಗರ ರಾಶಿಯಿದು..

ಶನಿ ದೋಷ (Shani dosha)
ಜಾತಕದಲ್ಲಿ ಶನಿದೋಷವಿದ್ದರೆ ಬಹಳ ಕಷ್ಟ. ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಿರಲಿ, ಅವಮಾನಗಳೂ ಎದರಾಗಬಹುದು. ಉದ್ಯಮ ಮತ್ತು ವ್ಯಾಪಾರದಲ್ಲಿ ತೊಡಗಿರುವವರು ನಷ್ಟ ಎದುರಿಸಬೇಕಾಗುತ್ತದೆ. ಮೊದಲೇ ಸೂಕ್ತ ಎಚ್ಚರಿಕೆ ವಹಿಸಬೇಕಿದೆ. 

ಕೇಮದೃಮ ದೋಷ (Ketu druma Dosha)
ಕೇಮದೃಮ ದೋಷವು ಚಂದ್ರನಿಗೆ (Moon) ಸಂಬಂಧಿಸಿದ್ದಾಗಿದೆ. ಜಾತಕದಲ್ಲಿ ಚಂದ್ರನಿರುವ ಮನೆಯ ಮುಂದೆ ಮತ್ತು ಹಿಂದೆ ಯಾವುದೇ ಗ್ರಹವು ಇಲ್ಲದಿದ್ದಾಗ ಈ ದೋಷ ಉಂಟಾಗುತ್ತದೆ.

ಕುಜ ದೋಷ (Kuja Dosha)
ಜಾತಕದ ಲಗ್ನದಲ್ಲಿ, ನಾಲ್ಕನೇ, ಐದನೇ, ಏಳನೇ, ಎಂಟನೇ ಅಥವಾ ಹತ್ತನೇ ಮನೆಯಲ್ಲಿ ಮಂಗಳ ಗ್ರಹವಿದ್ದಾಗ ಮಂಗಳ ದೋಷ ಉಂಟಾಗುತ್ತದೆ. ಕುಜದೋಷವಿದ್ದಾಗ ವಿವಾಹ ವಿಳಂಬ (Late marriage), ವಿವಾಹದಲ್ಲಿ ತೊಂದರೆ, ವಿವಾಹಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎದುರಾಗಲಿದೆ. ಇದರ ಜೊತೆಗೆ ರಕ್ತ ಸಂಬಂಧಿತ ರೋಗಗಳು ಉಂಟಾಗಲಿವೆ. ಆಸ್ತಿಗೆ ಸಂಬಂಧಿಸಿದ ಕಲಹಗಳೂ ಎದುರಾಗಬಹುದು.

ಪಿತೃ ದೋಷ (Pitru dosha)
ಜಾತಕದಲ್ಲಿ ಸೂರ್ಯ, ಚಂದ್ರ, ರಾಹು ಅಥವಾ ಶನಿಗ್ರಹಗಳಲ್ಲಿ ಯಾವುದಾದರೂ ಎರಡು ಗ್ರಹಗಳು ಒಂದೇ ಮನೆಯಲ್ಲಿದ್ದರೆ ಪಿತೃ ದೋಷ ಉಂಟಾಗುತ್ತದೆ. ಪಿತೃ ದೋಷವಿದ್ದಾಗ ಸಂತಾನಕ್ಕೆ ಸಂಬಂಧಿಸಿದಂತೆ ಹಲವು ರೀತಿಯ ಸಮಸ್ಯೆಗಳು ಉಂಟಾಗುತ್ತದೆ. ಅಂತ್ಯ ಸಂಸ್ಕಾರ ಸರಿಯಾದ ಕ್ರಮದಲ್ಲಿ ನಡೆಯದೇ ಹೋದಲ್ಲಿ, ಅನೇಕ ಸಮಸ್ಯೆಗಳು ಎದುರಾಗುತ್ತವೆ.  ಸರಿಯಾದ ಕ್ರಮದಲ್ಲಿ ಪರಿಹಾರವನ್ನು ಮಾಡಿಕೊಂಡಲ್ಲಿ ಪಿತೃ ದೋಷದಿಂದ ಮುಕ್ತಿ ಹೊಂದಬಹುದಾಗಿದೆ.

ಇದನ್ನು ಓದಿ: Astrology and dreams : ಬೆಳಗಿನ ಜಾವ ಬೀಳೋ ಕನಸುಗಳು ನಿಜವಾಗ್ತಾವಾ?

ಪ್ರೇತ ದೋಷ (Preta Dosha)
ಚಂದ್ರನೊಂದಿಗೆ ರಾಹುವಿನ ಸಂಯೋಗವು ಜಾತಕದ ಒಂದನೇ ಮನೆಯಲ್ಲಿ ಇದ್ದಾಗ ಪ್ರೇತ ದೋಷ ಬರುತ್ತದೆ. ಅಷ್ಟೇ ಅಲ್ಲದೇ ಯಾವುದಾದರೂ ಕ್ರೂರ ಗ್ರಹಗಳು ಐದನೇ ಮತ್ತು ಒಂಭತ್ತನೇ ಮನೆಯಲ್ಲಿ  ಸ್ಥಿತವಾಗಿದ್ದಾಗ ಅಂಥವರು ಯಾವುದಾದರು ಕೆಟ್ಟ ಶಕ್ತಿಯ ಪ್ರಭಾವಕ್ಕೆ ಒಳಗಾಗುತ್ತಾರೆ ಮತ್ತು ಭೂತ, ಪ್ರೇತ, ಪಿಶಾಚಿಗಳಿಂದ ತೊಂದರೆಗೆ ಒಳಗಾಗುತ್ತಾರೆ. 

ರಾಹು-ಬೃಹಸ್ಪತಿ ಸಂಧಿ (Rahu – bruhaspati sandhi)
ರಾಹು-ಬೃಹಸ್ಪತಿ ಸಂಧಿಯನ್ನು ಚಾಂಡಾಲ ದೋಷವೆಂದು ಸಹ ಕರೆಯುತ್ತಾರೆ. ಜಾತಕದಲ್ಲಿ ಗುರು ಮತ್ತು ರಾಹುವಿನ ಸಂಯೋಗವಿದ್ದಾಗ ಈ ದೋಷ ಉಂಟಾಗುತ್ತದೆ. ಜಾತಕದಲ್ಲಿ ಈ ದೋಷವಿದ್ದಾಗ ವ್ಯಕ್ತಿಯು ಕೆಟ್ಟ ಜನರ ಸಹವಾಸಕ್ಕೆ ಒಳಗಾಗುತ್ತಾನೆ. ಪರಿಹಾರಾರ್ಥವಾಗಿ ಶಾಂತಿಯನ್ನು ಮಾಡಿಕೊಂಡಲ್ಲಿ ದೋಷದಿಂದ ಮುಕ್ತಿ ಪಡೆಯಬಹುದಾಗಿದೆ.

ಗ್ರಹಣ ದೋಷ (Grahana Dosha)
ಸೂರ್ಯ ಅಥವಾ ಚಂದ್ರನ ಸಂಯೋಗ ರಾಹು-ಕೇತುವಿನೊಂದಿಗಾದಾಗ ಈ ದೋಷ ಉಂಟಾಗುತ್ತದೆ. ಈ ದೋಷವಿದ್ದ ವ್ಯಕ್ತಿಗೆ ಯಾವಾಗಲೂ ಭಯ ಕಾಡುತ್ತದೆ ಮತ್ತು ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಟ್ಟು ಹೊಸ ಕೆಲಸದ ಯೋಚನೆ ಮಾಡುವ ಮನಃಸ್ಥಿತಿಯನ್ನು ಹೊಂದುತ್ತಾನೆ.

ಅಮಾವಾಸ್ಯಾ ದೋಷ (Amavasya Dosha)
ಜಾತಕದಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಗಳು ಒಂದೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಮಾವಾಸ್ಯಾ ದೋಷ ಉಂಟಾಗುತ್ತದೆ. ಹಾಗಾಗಿ ಜಾತಕವನ್ನು ಮಾಡುವಾಗ ಚಂದ್ರನ ಸ್ಥಿತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಚಂದ್ರನು ಮನಸ್ಸಿಗೆ ಕಾರಕನಾಗಿರುತ್ತಾನೆ. ಈ ದೋಷವಿದ್ದಾಗ ವ್ಯಕ್ತಿಯು ಅನೇಕ ರೀತಿಯ ತೊಂದರೆಗಳನ್ನು ಎದುರಿಸಬೇಕಾಗುತ್ತದೆ.

Latest Videos
Follow Us:
Download App:
  • android
  • ios