Asianet Suvarna News Asianet Suvarna News

ವಿಜಯ ದಶಮಿಯಂದು ಈ ಕಾರ್ಯ ಮಾಡಿದರೆ ಎಲ್ಲದರಲ್ಲೂ ವಿಜಯ ನಿಮ್ಮದೇ!

ವಿಜಯ ದಶಮಿಯಂದು ಈ ಪರಿಹಾರಗಳನ್ನು ಮಾಡುವುದರಿಂದ ಶತ್ರುಗಳನ್ನು ಸೋಲಿಸಬಹುದಷ್ಟೇ ಅಲ್ಲ, ನೀವು ಮಾಡುವ ಪ್ರತಿ ಕಾರ್ಯದಲ್ಲೂ ವಿಜಯಿಯಾಗಬಹುದು. 

Take these measures on Dussehra enemies will be defeated skr
Author
First Published Oct 3, 2022, 12:36 PM IST

ವಿಜಯ ದಶಮಿ ಎಂದರೇ ಒಳಿತಿನ ಗೆಲುವು ಮತ್ತು ಕೆಟ್ಟದ್ದರ ಸೋಲು. ಇಂದು ತ್ರೇತಾಯುಗದಲ್ಲಿ ಶ್ರೀರಾಮನು ರಾವಣನು ಸಂಹರಿಸಿದ ದಿನ. ದುರ್ಗೆಯು ಮಹಿಷಾಸುರನನ್ನು ಅಳಿಸಿದ ದಿನ.. ಈ ದಿನ ಬಹಳ ವಿಶೇಷವಾಗಿದ್ದು ಒಳ್ಳೆಯತನಕ್ಕೆಂದೂ ಗೆಲುವಿದೆ ಎಂಬುದನ್ನು ಸಾಬೀತುಪಡಿಸುತ್ತದೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ, ದಸರಾ ಹಬ್ಬವನ್ನು ಪ್ರತಿ ವರ್ಷ ಅಶ್ವಿನ್ ಮಾಸದ ಶುಕ್ಲ ಪಕ್ಷದ ಹತ್ತನೇ ದಿನದಂದು ಆಚರಿಸಲಾಗುತ್ತದೆ.ಈ ವರ್ಷ ಅಕ್ಟೋಬರ್ 5ರಂದು ದಸರಾ. ಈ ಸಮಯದಲ್ಲಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಶತ್ರುಗಳನ್ನು ಸೋಲಿಸಲು ಸಾಧ್ಯವಿದೆ. ಅಷ್ಟೇ ಅಲ್ಲ, ಈ ಪರಿಹಾರ ಕ್ರಮಗಳು ನಿಮ್ಮನ್ನು ಮಾಡುವ ಪ್ರತಿ ಕೆಲಸದಲ್ಲೂ ವಿಜಯಿಯಾಗಿಸುತ್ತವೆ. ನಿಮ್ಮ ಕಡೆಯಿಂದ ಪ್ರಾಮಾಣಿಕತೆ, ನಿಷ್ಠೆ, ಪರಿಶ್ರಮ ಇರಬೇಕಷ್ಟೇ. 

ದಸರಾದಂದು ಈ ಪರಿಹಾರ ಕಾರ್ಯ ಮಾಡಿ(Dasara remedies)
ಶಮಿ ವೃಕ್ಷದ ಬುಡದಲ್ಲಿ ದೀಪ ಹಚ್ಚಿ

ದಸರಾ ದಿನದಂದು ಶಮೀ ವೃಕ್ಷದ ಬಳಿ ದೀಪ ಹಚ್ಚಿ ಶ್ರೀರಾಮನನ್ನು ಧ್ಯಾನಿಸಿ. ಹೀಗೆ ಮಾಡುವುದರಿಂದ ಶತ್ರುಗಳನ್ನು ಸೋಲಿಸಬಹುದು ಎಂದು ನಂಬಲಾಗಿದೆ. ಇದರಿಂದ ಎಲ್ಲಾ ರೀತಿಯ ನ್ಯಾಯಾಲಯದ ಪ್ರಕರಣಗಳಲ್ಲಿ ಗೆಲುವು ಸಿಗುತ್ತದೆ. ಶಮಿ ವೃಕ್ಷದ ಕೆಳಗೆ ದೀಪವನ್ನು ಹಚ್ಚುವುದರಿಂದ ಅದೃಷ್ಟ ಬರುತ್ತದೆ.

Navratri 2022: ತಾಯಿ ದುರ್ಗೆಯ 10 ಆಯುಧಗಳ ಕೆಲಸವೇನು ಗೊತ್ತಾ?

ಮಾತಾ ರಾಣಿಯ ಪೂಜೆ
ದಸರಾ ದಿನದಂದು, ಮಧ್ಯಾಹ್ನದ ಶುಭ ಸಮಯದಲ್ಲಿ ಮಾತಾ ರಾಣಿಯನ್ನು ಪೂಜಿಸಿ ಮತ್ತು 10 ವಿಧದ ಹಣ್ಣುಗಳನ್ನು ಅರ್ಪಿಸಿ. ಹಣ್ಣುಗಳನ್ನು ಅರ್ಪಿಸುವಾಗ, 'ಓಂ ವಿಜಯೇ ನಮಃ' ಎಂದು ಜಪಿಸುತ್ತಿರಿ. ಪೂಜೆಯ ನಂತರ ಹಣ್ಣುಗಳನ್ನು ಬಡವರಿಗೆ(Donate fruits to poor) ಹಂಚಬೇಕು. ಇದರಿಂದ ಎಲ್ಲ ಕ್ಷೇತ್ರಗಳಲ್ಲಿ ಜಯ ಸಿಗಲಿದೆ. ವ್ಯಾಪಾರ ಮತ್ತು ಉದ್ಯೋಗದಲ್ಲಿ ಬರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.

ನೀಲಕಂಠನ ಪೂಜೆ
ರಾವಣನನ್ನು ಕೊಲ್ಲುವ ಮೊದಲು ಶ್ರೀರಾಮನು ನೀಲಕಂಠ(NeelKant)ನನ್ನು ನೋಡಿದ್ದನು. ನೀಲಕಂಠನನ್ನು ಶಿವನ ರೂಪವೆಂದು ಪರಿಗಣಿಸಲಾಗಿದೆ. ಆದ್ದರಿಂದ, ದಸರಾ ದಿನದಂದು ಇವನನ್ನು ನೋಡುವುದು ತುಂಬಾ ಒಳ್ಳೆಯದು. ದಸರಾ ಅಥವಾ ವಿಜಯದಶಮಿಯ ದಿನದಂದು ನೀಲಕಂಠನ ದೇವಾಲಯಕ್ಕೆ ಭೇಟಿ ನೀಡಿ ಪೂಜಿಸಿ. ಹೀಗೆ ಮಾಡುವುದರಿಂದ ಶತ್ರುಗಳನ್ನು ಸೋಲಿಸುವುದು ಸುಲಭವಾಗುತ್ತದೆ ಎಂದು ನಂಬಲಾಗಿದೆ.

ಪೊರಕೆ ದಾನ
ದಸರಾದ ಸಂಜೆ ಲಕ್ಷ್ಮಿ ದೇವಿಯನ್ನು ಧ್ಯಾನಿಸುತ್ತಾ ದೇವಸ್ಥಾನಕ್ಕೆ ಹೋಗಿ ಪೊರಕೆ(broom)ಯನ್ನು ದಾನ ಮಾಡಿ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.

ತೆಂಗಿನಕಾಯಿ ದಹನ
ದಸರಾ ದಿನದಂದು, ಸಂಪೂರ್ಣ ನೀರಿರುವ ತೆಂಗಿನಕಾಯಿ(coconut)ಯನ್ನು ತೆಗೆದುಕೊಂಡು ಅದನ್ನು ನಿಮ್ಮ ತಲೆಯ ಸುತ್ತಲೂ 21 ಬಾರಿ ತಿರುಗಿಸಿ. ಈಗ ಅದನ್ನು ದಸರಾದ ರಾವಣ ದಹನದ ಬೆಂಕಿಯಲ್ಲಿ ಹಾಕಿ. ಹೀಗೆ ಮಾಡುವುದರಿಂದ ನಿಮ್ಮ ಎಲ್ಲಾ ಕಾಯಿಲೆಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ.

ಸುಂದರಕಾಂಡ ಪಠಣ
ದಸರಾ ದಿನದಂದು ಸುಂದರ ಕಾಂಡವನ್ನು ಪಠಿಸುವುದರಿಂದ ಎಲ್ಲಾ ರೋಗಗಳು(diseases) ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುತ್ತವೆ.

ಆರೋಗ್ಯಕರ ಜೀವನಶೈಲಿ ಫಾಲೋ ಮಾಡೋ ನಾಲ್ಕು ರಾಶಿಗಳಿವು.. ನೋಡಿ ಅನುಸರಿಸಿ

ಲಾಡುಗಳು
ದಸರಾ ದಿನದಿಂದ ಸತತ 43 ದಿನಗಳ ಕಾಲ ನಾಯಿಗೆ ಪ್ರತಿದಿನ  ಕಡಲೆ ಹಿಟ್ಟಿನ ಲಾಡುಗಳನ್ನು ತಿನ್ನಿಸಿ. ಇದು ನಿಮ್ಮ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ.

ರಹಸ್ಯ ದಾನ
ನಂಬಿಕೆಗಳ ಪ್ರಕಾರ, ದಸರಾದಂದು ರಾವಣ ದಹನದ ನಂತರ ಗುಟ್ಟಾಗಿ ದಾನ ಕಾರ್ಯಗಳನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ನಿಮ್ಮ ಈ ದಾನದ ವಿಷಯವಾಗಿ ಯಾರಿಗೂ ಹೇಳಬೇಡಿ.

ನಕಾರಾತ್ಮಕ ಶಕ್ತಿ ಓಡಿಸಲು
ದಸರಾ ದಿನದಂದು, ಕುಲದೇವತೆಯನ್ನು ಧ್ಯಾನಿಸುತ್ತಾ ಮನೆಯ ಎಲ್ಲಾ ಸದಸ್ಯರ ಮೇಲೆ ಕರ್ಪೂರದ ತುಂಡನ್ನು ಚಾಕಿಸಿ ಟೆರೇಸ್ ಅಥವಾ ಏಕಾಂತ ಸ್ಥಳದಲ್ಲಿ ಎಸೆಯಿರಿ. ಹೀಗೆ ಮಾಡುವುದರಿಂದ ಮನೆಯ ಎಲ್ಲಾ ನಕಾರಾತ್ಮಕ ಶಕ್ತಿಗಳು ನಾಶವಾಗುತ್ತವೆ ಎಂದು ನಂಬಲಾಗಿದೆ.

Follow Us:
Download App:
  • android
  • ios