Navratri 2022: ತಾಯಿ ದುರ್ಗೆಯ 10 ಆಯುಧಗಳ ಕೆಲಸವೇನು ಗೊತ್ತಾ?
ದುರ್ಗಾ ದೇವಿಯ ಹತ್ತು ತೋಳುಗಳು ಅವಳು ತನ್ನ ಭಕ್ತರನ್ನು ಎಲ್ಲ ದಿಕ್ಕುಗಳಿಂದ ಅಂದರೆ ಎಂಟು ಮೂಲೆಗಳು ಮತ್ತು ಆಕಾಶ ಹಾಗೂ ಭೂಮಿಯಿಂದ ರಕ್ಷಿಸುತ್ತಾಳೆ ಎಂಬುದನ್ನು ಸಂಕೇತಿಸುತ್ತದೆ.
ತಾಯಿ ದುರ್ಗೆಯು 10 ಕೈಗಳಲ್ಲಿ 10 ರೀತಿಯ ಆಯುಧ ಹಿಡಿದು ನಿಂತ ಶಕ್ತಿಯ ಸುಂದರ ರೂಪವನ್ನು ನೀವು ಬಹಳಷ್ಟು ಬಾರಿ ಕಣ್ತುಂಬಿಕೊಂಡಿರಬಹುದು. ಆದರೆ, ಎಂದಾದರೂ ಅಷ್ಟೊಂದು ಆಯುಧಗಳನ್ನು ಆಖೆಯ ಹಿಡಿದಿರುವುದೇಕೆ, ಅವು ಏನನ್ನು ಸಂಕೇತಿಸುತ್ತವೆ, ಅವುಗಳ ಪ್ರಾಮುಖ್ಯತೆ ಏನು ಎಂದು ಯೋಚಿಸಿದ್ದೀರಾ?
ತಾಯಿ ದುರ್ಗೆ ಅಂದರೆ ಅಪರಿಮಿತ ಶಕ್ತಿ. ಆಕೆ ಶಕ್ತಿಯು ಸರ್ವೋಚ್ಚ ದೈವಿಕ ರೂಪ. ದುಷ್ಟರನ್ನು ನಾಶಮಾಡಲು ಮತ್ತು ಜಗತ್ತಿನಲ್ಲಿ ಸದ್ಗುಣ ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ದೇವಿ ಸದಾ ಸಜ್ಜಾಗಿರುತ್ತಾಳೆ. ದುರ್ಗಾ ದೇವಿ ಎಂದರೆ ಆಕೆ ಅನೇಕ ದೇವರುಗಳ ಸಂಯೋಜಿತ ಶಕ್ತಿಗಳೊಂದಿಗೆ ಅವತರಿಸಲ್ಪಟ್ಟವಳು. ಹಾಗಾಗಿ, ಆಕೆಯ ಶಕ್ತಿ ಎಲ್ಲ ದೇವರಿಗಿಂತಲೂ ಅಪರಿಮಿತವಾಗಿದೆ. ಹಾಗಾಗಿಯೇ ಅವಳನ್ನು ಸರ್ವಶಕ್ತೆ ಎನ್ನುವುದು. ಅಷ್ಟೇ ಅಲ್ಲ, ಆಕೆ ಎಲ್ಲ ದುಃಖವನ್ನು ನಿವಾರಿಸುವ ದುರ್ಗತಿನಾಶಿನಿ ಕೂಡಾ.
ದುರ್ಗೆಯ ಆಯುಧಗಳು
ದುರ್ಗಾ ದೇವಿಯ 10 ಕೈಗಳು 10 ದೈವಿಕ ಆಯುಧಗಳನ್ನು ಹಿಡಿದಿರುತ್ತವೆ. ಈ ಆಯುಧಗಳು ಇತರ ದೇವರಿಂದ ಆಕೆ ಪಡೆದ ಉಡುಗೊರೆಗಳಾಗಿವೆ. ದುರ್ಗಾದೇವಿಯು ಹತ್ತು ಕೈಗಳಲ್ಲಿ ಶಂಖ, ಚಕ್ರ, ಕಮಲ, ಖಡ್ಗ, ಬಾಣ, ತ್ರಿಶೂಲ, ಗದೆ, ಸಿಡಿಲು, ಹಾವು ಮತ್ತು ಜ್ವಾಲೆಯನ್ನು ಹಿಡಿದಿದ್ದಾಳೆ.
ಆಯುಧಗಳ ಮಹತ್ವ ಶಂಖ(Conch) ಶಂಖವು 'ಓಂ' ಎಂಬ ಆದಿಸ್ವರದ ಸಂಕೇತವಾಗಿದೆ. ಇದರಿಂದ ಇಡೀ ಸೃಷ್ಟಿಯು ಹೊರಹೊಮ್ಮಿತು.
ಸಂಕೇತ
ಈ ಆಯುಧಗಳು ವಾಸ್ತವವಾಗಿ ಪ್ರತಿಯೊಬ್ಬ ವ್ಯಕ್ತಿಯು ಹೊಂದಿರಬೇಕಾದ ಮಾನವ ನಡವಳಿಕೆಯ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತವೆ. ದುರ್ಗಾ ದೇವಿಯ ಹತ್ತು ತೋಳುಗಳು ಅವಳು ತನ್ನ ಭಕ್ತರನ್ನು ಎಲ್ಲಾ ದಿಕ್ಕುಗಳಿಂದ ಅಂದರೆ ಎಂಟು ಮೂಲೆಗಳಿಂದ ಜೊತೆಗೆ, ಆಕಾಶ ಮತ್ತು ಭೂಮಿಯಿಂದ ರಕ್ಷಿಸುತ್ತಾಳೆ ಎಂಬುದನ್ನು ಸಂಕೇತಿಸುತ್ತದೆ. ಮಾ ದುರ್ಗಾ ಈ ಹತ್ತು ಶಕ್ತಿಶಾಲಿ ಆಯುಧಗಳನ್ನು ಹೊತ್ತುಕೊಂಡು ಎಲ್ಲಾ ಪ್ರಾಣಿಗಳ ರಾಜನಾದ ಸಿಂಹದ ಮೇಲೆ ಕುಳಿತು ದುಷ್ಟರ ವಿರುದ್ಧ ಯುದ್ಧಕ್ಕೆ ಹೋಗುತ್ತಾಳೆ.
ಆಯುಧಗಳ ಮಹತ್ವ
ಶಂಖ(Conch)
ಶಂಖವು 'ಓಂ' ಎಂಬ ಆದಿಸ್ವರದ ಸಂಕೇತವಾಗಿದೆ. ಇದರಿಂದ ಇಡೀ ಸೃಷ್ಟಿಯು ಹೊರಹೊಮ್ಮಿತು. ವರುಣನು ಇದನ್ನು ತಾಯಿಗೆ ಉಡುಗೊರೆಯಾಗಿ ನೀಡಿದ್ದಾನೆ.
ಖಡ್ಗ(Sword)
ಖಡ್ಗವು ತಮ್ಮ ಋಣಾತ್ಮಕತೆಯನ್ನು ಜಯಿಸಲು ತಾರತಮ್ಯದ ಅರ್ಥವನ್ನು ಬಳಸಲು ಮಾನವರಿಗೆ ಸೂಚಿಸುವ ಬುದ್ಧಿಶಕ್ತಿಯ ತೀಕ್ಷ್ಣತೆಯನ್ನು ಸೂಚಿಸುತ್ತದೆ.
ತ್ರಿಶೂಲ(Trident)
ತ್ರಿಶೂಲವು ಮೂರು ಚೂಪಾದ ಅಂಚುಗಳನ್ನು ಹೊಂದಿದೆ. ಇದು ಮಾನವರ ತಮಸ್ (ನಿಷ್ಕ್ರಿಯತೆ ಮತ್ತು ಜಡ ಪ್ರವೃತ್ತಿ), ರಜಸ್ (ಅತಿ ಚಟುವಟಿಕೆ ಮತ್ತು ಆಸೆಗಳು) ಮತ್ತು ಸತ್ವ (ಸಕಾರಾತ್ಮಕತೆ ಮತ್ತು ಶುದ್ಧತೆ) ಎಂಬ ಮೂರು ಗುಣಗಳನ್ನು ಸೂಚಿಸುತ್ತದೆ.
ಸುದರ್ಶನ ಚಕ್ರ (Sudarshan Chakra)
ಇದು ದುರ್ಗೆಗೆ ಭಗವಾನ್ ವಿಷ್ಣುವಿನ ಉಡುಗೊರೆಯಾಗಿದೆ. ಸುದರ್ಶನ ಚಕ್ರವು ಸೃಷ್ಟಿಯ ಕೇಂದ್ರವಾಗಿದೆ ಮತ್ತು ಇಡೀ ವಿಶ್ವವು ಅವಳ ಸುತ್ತ ಸುತ್ತುತ್ತದೆ ಎಂಬುದನ್ನು ಸಂಕೇತಿಸುತ್ತದೆ.
ಕಮಲ (Lotus)
ಕಮಲವು ಬ್ರಹ್ಮನ ಉಡುಗೊರೆಯಾಗಿದ್ದು, ಬುದ್ಧಿವಂತಿಕೆಯನ್ನು ಪ್ರತಿನಿಧಿಸುತ್ತದೆ. ಜೊತೆಗೆ ಜ್ಞಾನದ ಮೂಲಕ ವಿಮೋಚನೆಯನ್ನು ಪ್ರತಿನಿಧಿಸುತ್ತದೆ. ದುರ್ಗೆಯ ಸಹಾನುಭೂತಿಯಿಂದ ಜನರು ತಮ್ಮ ಲೌಕಿಕ ಬಂಧನ ಮತ್ತು ದುಷ್ಟತನದಿಂದ ಕಳಚಿಕೊಂಡು ಮೋಕ್ಷ ಅಥವಾ ವಿಮೋಚನೆಯನ್ನು ಪಡೆಯಲು ಸಹಾಯ ಮಾಡುತ್ತದೆ.
ಕೊಡಲಿ(axe)
ಕೊಡಲಿಯು ವಿಶ್ವಕರ್ಮನ ಶಕ್ತಿಯನ್ನು ಸಂಕೇತಿಸುತ್ತದೆ. ಇದು ನಾಶ ಮಾಡುವ ಮತ್ತು ಸೃಷ್ಟಿಸುವ ಶಕ್ತಿಯನ್ನು ಹೊಂದಿದೆ.
ವಜ್ರ (Thunderbolt)
ದುರ್ಗೆಗೆ ಇಂದ್ರನ ಉಡುಗೊರೆಯಾದ ಇದು ದೃಢತೆ, ನಿರ್ಣಯ ಮತ್ತು ಸರ್ವೋಚ್ಚ ಶಕ್ತಿಯ ಸಂಕೇತವಾಗಿದೆ. ದುರ್ಗೆಯು ತನ್ನ ಭಕ್ತರ ಮನೋಶಕ್ತಿಯನ್ನು ವಜ್ರದಂತೆ ಧೃಢವಾಗಿಸುತ್ತಾಳೆ.
ಹಾವು(Snake )
ಹತ್ತನೇ ಕೈ ನಿಜವಾಗಿಯೂ ಹಾವನ್ನು ಹಿಡಿದಿರಬೇಕು. ಇದು ಪ್ರಜ್ಞೆ ಮತ್ತು ಶಿವನ ಪುಲ್ಲಿಂಗ ಶಕ್ತಿಯನ್ನು ಸಂಕೇತಿಸುತ್ತದೆ.
गीत -2
ಗದೆ(Mace)
ಗದೆಯು ಮಾನವರ ಬುದ್ಧಿಯ ಮೊನಚನ್ನು ಪ್ರತಿನಿಧಿಸುತ್ತಿದ್ದು, ಇದು ಮಾತೆ ದುರ್ಗೆಗೆ ನಿಷ್ಠೆ, ಪ್ರೀತಿ ಮತ್ತು ಭಕ್ತಿಯನ್ನು ಪ್ರದರ್ಶಿಸಲು ಪ್ರೇರೇಪಿಸುತ್ತದೆ.
ಬಿಲ್ಲು ಬಾಣ(Bow and Arrow)
ಬಿಲ್ಲು ಮತ್ತು ಬಾಣವು ಶಕ್ತಿಯ ಸಂಕೇತಗಳಾಗಿದ್ದರೆ, ಬಿಲ್ಲು ಸಂಭಾವ್ಯ ಶಕ್ತಿಯನ್ನು ಪ್ರತಿನಿಧಿಸುತ್ತದೆ, ಬಾಣವು ಚಲನ ಶಕ್ತಿಯನ್ನು ಪ್ರತಿನಿಧಿಸುತ್ತದೆ.