ಆರೋಗ್ಯಕರ ಜೀವನಶೈಲಿ ಫಾಲೋ ಮಾಡೋ ನಾಲ್ಕು ರಾಶಿಗಳಿವು.. ನೋಡಿ ಅನುಸರಿಸಿ
ಈ ರಾಶಿಗಳು ಸದಾ ತಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಮುಂದು. ಆರೋಗ್ಯ, ಆಹಾರ, ವ್ಯಾಯಾಮದ ಕಟ್ಟುನಿಟ್ಟನ್ನು ಅನುಸರಿಸುತ್ತಾ ಆರೋಗ್ಯಕರ ಜೀವನಶೈಲಿ ಹೊಂದಿದ ಈ ನಾಲ್ಕು ರಾಶಿಗಳು ಇತರರಿಗೆ ಮಾದರಿಯಾಗಿರುತ್ತವೆ.
ನಮ್ಮಲ್ಲಿ ಬಹಳಷ್ಟು ಜನರು ಯಾವಾಗಲೂ ಫಿಟ್ಟಾದ ದೇಹ ಮತ್ತು ಜಿಮ್‌ನ ಕಲ್ಪನೆಯಿಂದ ಆಕರ್ಷಿತರಾಗಿರುತ್ತಾರೆ. ಆದರೆ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಸೋಮಾರಿತನದಿಂದ, ನಿಯಮಿತವಾಗಿ ಆರೋಗ್ಯಕರ ಜೀವನಶೈಲಿ ಅನುಸರಿಸುವುದು ಹೆಚ್ಚಿನವರಿಗೆ ಸವಾಲಾಗಿದೆ. ಅದೊಂದು ಕನಸಿನ ಬದುಕುವ ವಿಧಾನವಾದರೂ ಫಾಲೋ ಮಾಡುವುದು ಕಷ್ಟ. ಜಂಕ್ ಫುಡ್‌ಗಳ ಸೆಳೆತ, ವ್ಯಾಯಾಮ ಮಾಡುವ ಕಷ್ಟ, ಮನೋರಂಜನೆಯ ಸಮಯ ಇವನ್ನೆಲ್ಲ ಮೀರಿ ಹೆಲ್ದೀ ಲೈಫ್‌ಸ್ಟೈಲ್‌ನತ್ತ ಮುಖ ಮಾಡುವುದು ಸುಲಭವೇನಲ್ಲ.
ಆದರೆ ಹತ್ತರಲ್ಲಿ ಒಬ್ಬರಿರುತ್ತಾರೆ, ಅವರ ಮನಸ್ಸು ಮತ್ತು ದೇಹ ಸದಾ ಆರೋಗ್ಯವನ್ನು ಕಾಪಾಡಿಕೊಳ್ಳುವತ್ತ ಸಿದ್ಧವಿರುತ್ತವೆ. ಅವರು ಸದಾ ತಮ್ಮ ಮಾನಸಿಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಹೆಚ್ಚಿನ ಗಮನ ಕೊಡುತ್ತಾರೆ. ಏನೇ ಬಂದರೂ ನಿಯಮಿತ ವ್ಯಾಯಾಮವನ್ನು, ಡಯಟ್ಟನ್ನು ತಪ್ಪಿಸುವುದಿಲ್ಲ. ಹೆಲ್ದೀ ಲೈಫ್‌ಸ್ಟೈಲ್‌ಗಾಗಿ ನಿಮ್ಮನ್ನು ನೀವು ಪ್ರೋತ್ಸಾಹಿಸಿಕೊಳ್ಳಲು ಹೀಗೆ ಹೆಲ್ದಿಯಾಗಿ ಬದುಕುವ ನಾಲ್ಕು ರಾಶಿಯವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬಹುದು. ಅಂಥ ಆರೋಗ್ಯಕರ ಜೀವನಶೈಲಿ ಅನುಸರಿಸುವ 4 ರಾಶಿಚಕ್ರ ಚಿಹ್ನೆಗಳು ಇಲ್ಲಿವೆ.
ವೃಷಭ ರಾಶಿ(Taurus)
ವೃಷಭ ರಾಶಿಯವರು ಭಾವನಾತ್ಮಕ ಸ್ಥಿರತೆಯನ್ನು ಹೊಂದಿರುತ್ತಾರೆ ಮತ್ತು ಅದಕ್ಕಾಗಿಯೇ ಅವರು ಇದ್ದಲ್ಲಿ ಬಲವಾದ ಶಕ್ತಿಯುತ ವೈಬ್ ಅನ್ನು ತರುತ್ತಾರೆ. ಅವರು ಉತ್ತಮ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯದ ಬೆಲೆಯನ್ನು ತಿಳಿದಿದ್ದಾರೆ ಮತ್ತು ಅದಕ್ಕಾಗಿ ಹೋರಾಡಲು ಯಾವಾಗಲೂ ಸಿದ್ಧರಾಗಿರುತ್ತಾರೆ. ಇದಲ್ಲದೆ, ಅವರ ಉತ್ಸಾಹಭರಿತ ಸ್ವಭಾವವು ಅವರ ಉದ್ದೇಶಿತ ಗುರಿಗಳನ್ನು ಸಾಧಿಸಲು ಯಾವಾಗಲೂ ಸಜ್ಜಾಗಿರುತ್ತದೆ.
ರಾಶಿ ಪ್ರಕಾರ VijayaDashamiಯಂದು ಹೀಗೆ ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ
ಮಕರ ರಾಶಿ (Capricorn)
ಮಕರ ರಾಶಿಯಲ್ಲಿ ಜನಿಸಿದವರು ಶಾಂತ ಮತ್ತು ಶಿಸ್ತಿನ ಸ್ವಭಾವದವರು. ಯಾವಾಗಲೂ ತಮ್ಮ ಯೋಗಕ್ಷೇಮದತ್ತ ಗಮನ ಹರಿಸುತ್ತಾರೆ. ಅವರು ಬಲವಾದ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಪಡೆಯಲು ಕಷ್ಟಪಡುತ್ತಾರೆ. ಅವರು ಸ್ಥಿರತೆಯ ಕಲೆಯನ್ನು ಕರಗತ ಮಾಡಿಕೊಂಡಿರುವುದರಿಂದ ಅವರನ್ನು ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಮುರಿಯುವುದು ಕಠಿಣ ವಿಷಯಗಳಲ್ಲಿ ಒಂದಾಗಿದೆ. ಮಕರ ರಾಶಿಯವರು ಆರೋಗ್ಯದ ವಿಷಯದಲ್ಲಿ ಇತರರನ್ನು ಸುಲಭವಾಗಿ ಪ್ರಭಾವಿಸಬಹುದು ಮತ್ತು ಪ್ರೇರೇಪಿಸಬಹುದು.
ಸಿಂಹ ರಾಶಿ(Leo)
ಬೆಂಕಿಯಿಂದ ಆಳಲ್ಪಡುವ ಸಿಂಹ ರಾಶಿಯವರು ಎಲ್ಲೇ ಇರಲಿ ಅಥವಾ ಏನೇ ಮಾಡಿದರೂ ತಮ್ಮ ಆರೋಗ್ಯವನ್ನು ಯಾವಾಗಲೂ ನೋಡಿಕೊಳ್ಳುತ್ತಾರೆ. ಅವರು ಎಂದಿಗೂ ಯಾವುದೇ ತಂತ್ರಗಳನ್ನು ಬಿಡುವುದಿಲ್ಲ ಮತ್ತು ಕಟ್ಟುನಿಟ್ಟಾದ ಜೀವನಶೈಲಿ ಬಿಟ್ಟುಕೊಡುವುದಿಲ್ಲ. ಏಕೆಂದರೆ ಅವರು ಸುಂದರವಾಗಿ ಕಾಣಲು ಮತ್ತು ಪ್ರಶಂಸೆಯ ಪದಗಳನ್ನು ಕೇಳಲು ಬಯಸುತ್ತಾರೆ. ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ಜನರು ಯಾವಾಗಲೂ ಮುಂಚಿತವಾಗಿ ಯೋಜನೆಯನ್ನು ಮಾಡುತ್ತಾರೆ. ಅವರ ಉತ್ಸಾಹಭರಿತ ಮನೋಭಾವದಿಂದಾಗಿ ಸುಂದರ ದೇಹವನ್ನು ಸಾಧಿಸುತ್ತಾರೆ.
Mars transit 2022: ಈ ರಾಶಿಗಳ ಲಕ್ ತಿರುಗಲು ಇನ್ನು ಹದಿನೈದೇ ದಿನ!
ವೃಶ್ಚಿಕ ರಾಶಿ(Scorpio)
ವೃಶ್ಚಿಕ ರಾಶಿಯವರು ಆರೋಗ್ಯವೇ ಸಂಪತ್ತು ಎಂಬ ಮಾತನ್ನು ಬಲವಾಗಿ ನಂಬುವುದರಿಂದ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯಾವುದೇ ಕಷ್ಟಕರವಾದ ಹೆಜ್ಜೆಯನ್ನು ತೆಗೆದುಕೊಳ್ಳುತ್ತಾರೆ. ಈ ರಾಶಿಚಕ್ರದ ಜನರು ಆರೋಗ್ಯವನ್ನು ಪಡೆದುಕೊಳ್ಳುವ, ಉಳಿಸಿಕೊಳ್ಳುವ ವಿಷಯಕ್ಕೆ ಬಂದಾಗ ಸಾಕಷ್ಟು ಧೈರ್ಯ ಮತ್ತು ಭಾವೋದ್ರಿಕ್ತರಾಗಿರುತ್ತಾರೆ. ಅವರು ಆರೋಗ್ಯಕ್ಕಾಗಿ ತಾವು ಓದಿದ, ಕೇಳಿದ ವಿಷಯವನ್ನು ಪಾಲಿಸುತ್ತಾರೆ. ಸಣ್ಣ ನೆಗಡಿಯಾದರೂ ಕಟ್ಟುನಿಟ್ಟಾದ ಪಥ್ಯ ಪಾಲಿಸುತ್ತಾರೆ. ಆಹಾರದಿಂದಲೇ ಆರೋಗ್ಯ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಫಿಟ್ನೆಸ್ ಫ್ರೀಕ್ಸ್ ಎಂಬುದು ಅವರಿಗೆ ಸೂಕ್ತ ಪದವಾಗಿದೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.