ಆಸ್ಟಿನ್ ನಗರದಲ್ಲಿ ವೈಭವದ 'ಸ್ವಾಗತಂ ವೆಂಕಟ ಕೃಷ್ಣ'
ವಿಶ್ವ ಪರ್ಯಾಯದ ಸಂಚಾರದಲ್ಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಅಮೆರಿಕಾದ ಆಸ್ಟಿನ್ ನಗರದಲ್ಲಿ 'ಸ್ವಾಗತಂ ವೆಂಕಟ ಕೃಷ್ಣ' ಮಹೋತ್ಸವವವು ವೈಭವೋಪೇತವಾಗಿ ಜರುಗಿತು.
ವಿಶ್ವ ಪರ್ಯಾಯದ ಸಂಚಾರದಲ್ಲಿರುವ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಅಧ್ಯಕ್ಷತೆಯಲ್ಲಿ ಶ್ರೀ ವೆಂಕಟ ಕೃಷ್ಣ ವೃಂದಾವನದ ಅಮೆರಿಕಾದ ಹತ್ತನೆಯ ಶಾಖೆಯ ಪ್ರತಿಷ್ಠಾಪನಾ ಸಂದರ್ಭವಾಗಿ 'ಸ್ವಾಗತಂ ವೆಂಕಟ ಕೃಷ್ಣ' ಮಹೋತ್ಸವವವು ಆಸ್ಟಿನ್ ನಗರದಲ್ಲಿ ವೈಭವೋಪೇತವಾಗಿ ಜರುಗಿತು.
ಹತ್ತು ಪೂರ್ಣತೆಯ ಸಂಕೇತ. ಆಚಾರ್ಯ ಮಧ್ವರಿಗೆ ಪೂರ್ಣ ಜ್ಞಾನ ಮತ್ತು ಆನಂದಗಳ ಪ್ರಸಿದ್ಧಿ. ಆದ್ದರಿಂದ ಆಸ್ಟಿನ್ ಹತ್ತನೆಯ ಶಾಖೆಯಾದದ್ದು ಅತ್ಯಂತ ಮಹತ್ವಪೂರ್ಣ. ಈ ಸಮಾರಂಭವು ಶ್ರೀಪಾದರ ಪೀಠಾರೋಹಣದ ಸುವರ್ಣ ಮಹೋತ್ಸವದ (50 years) ಮಹತ್ವಪೂರ್ಣದ ದಿನದಂದು ನಡೆದು ಶ್ರೀಪಾದರ ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿ ಪ್ರಚಾರದ ದೀಕ್ಷೆಗೆ ಮಹತ್ವದ ಮೈಲುಗಲ್ಲಾಗಿದೆ. ಇದು ಇಲ್ಲಿಯ ಭಕ್ತರ ಹತ್ತಾರು ವರ್ಷಗಳ ಕನಸು ನನಸಾದ ಸಂಧರ್ಭವೆಂದು ಸ್ಥಳೀಯರು ಸಂತಸ ಪಟ್ಟರು.
ಈ ಸಂದರ್ಭದಲ್ಲಿ, ಉಡುಪಿಯ ಶ್ರೀ ಕೃಷ್ಣ, ಮುಖ್ಯಪ್ರಾಣ ಹಾಗು ರಾಘವೇಂದ್ರ ಸ್ವಾಮಿಗಳ ವೃಂದಾವನ, ಪ್ರತಿಮೆಗಳ ಮೆರವಣಿಗೆಯು, ಭಜನೆ, ಕೋಲಾಟ, ವೇದಘೋಷ, ನಾಮ ಸಂಕೀರ್ತನೆಗಳೊಂದಿಗೆ ಆಸ್ಟಿನ್ ಹಿಂದೂ ದೇವಸ್ಥಾನದ ಗಣೇಶ ದೇವಸ್ಥಾನದಿಂದ ಪ್ರಾರಂಭಗೊಂಡು, ಶ್ರೀನಿವಾಸ ದೇವಸ್ಥಾನದ ವರೆಗೆ ವೈಭವೋಪೇತವಾಗಿ ನಡೆಯಿತು. ಈ ಸಂದರ್ಭದಲ್ಲಿ 3 ಗಂಟೆಗಳ ಕಾಲ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅನೇಕ ಮಕ್ಕಳು ಸಂಗೀತ ಹಾಗು ನೃತ್ಯ ಸೇವೆಗಳನ್ನು ಮಾಡಿದರು.
ಗುರು ಚಾಂಡಾಲ ಯೋಗ; ಈ ರಾಶಿಗಳಿಗೆ ಕಠಿಣ ಮುಂದಿನ 6 ತಿಂಗಳು
ಈ ಸಂದರ್ಭದಲ್ಲಿ ಭಾರತೀಯರ ಅಪೇಕ್ಷೆಯಂತೆ ಪಾಲ್ಗೊಂಡ ಸೆಡಾರ್ ಪಾರ್ಕ್ ನಗರದ ಮೇಯರ್ Jim Penniman-Morin ಅವರು ಹಿಂದೂ ಸಂಸ್ಕೃತಿಯ ಶಾಂತತೆ ಸೌಹಾರ್ದತೆಗಳನ್ನು ಹೊಗಳಿ ಇಲ್ಲಿನ ಹಿಂದೂಗಳಿಗೆ ಸಮರ್ಪಕ ಅನುಕೂಲತೆಯನ್ನು ಕಲ್ಪಿಸುವುದಾಗಿ ಭರವಸೆ ಕೊಟ್ಟರು. ಬಾಲಕ ಶ್ರೀಪೂರ್ಣ ಶ್ರೀಗಳು ಹಾಗೂ ಮೇಯರ್ ಅವರ ಕಿರು ಪರಿಚಯ ಮಾಡಿಕೊಟ್ಟು ಎಲ್ಲ ಸಭಿಕರ ಮೆಚ್ಚುಗೆಗೆ ಪಾತ್ರನಾದನು. ಮೇಯರ್ ಅವರು ಶ್ರೀಪೂರ್ಣನಿಗೆ ಮುಂದಿನ ಮೇಯರ್ ಆಗಲು ಯೋಗ್ಯನೆಂದು ಹಾಸ್ಯ ಚಟಾಕಿ ಹಾರೈಸಿದರು.
ಶ್ರೀಗಳು ತಮ್ಮ ಆಶೀರ್ವಚನದಲ್ಲಿ ಆಸ್ಟಿನ್ ನಗರವು ಆಸ್ತಿಕರ ನಗರವಾಗಿದೆಯಿಂದು ಪ್ರಶಂಸಿದರು. ಶ್ರೀ ಕೃಷ್ಣನು ಕಡಲನ್ನು ದಾಟಿ ದ್ವಾರಕೆಗೆ ಬಂದಂತೆ ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿ ಭಕ್ತರ ಸಂತೋಷಕ್ಕಾಗಿ ಆಸ್ಟಿನ್-ಗೆ ಬಂದಿದ್ದಾನೆಂದು ಅಭಿಪ್ರಾಯಪಟ್ಟರು. ತಮ್ಮ ಪೀಠಾರೋಹಣದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿಯೇ ಯೋಗಾಯೋಗವೆಂಬಂತೆ ಭಗವದ್ ಸಂಕಲ್ಪದಂತೆ ಉದ್ಘಾಟನೆ ಗೊಂಡ, ಇಲ್ಲಿನ ಶ್ರೀ ವೆಂಕಟ ಕೃಷ್ಣ ವೃಂದಾವನವು ದೊಡ್ಡ ಪ್ರಮಾಣದಲ್ಲಿ ವೃದ್ಧಿಗೊಳ್ಳಲೆಂದು ಆಶೀರ್ವದಿಸಿದರು. Mayor Jim ಅವರಿಗೆ ಭಗವದ್ಗೀತಾ ಕಾಣಿಕೆಯನ್ನು ನೀಡಿ ಉಡುಪಿಯ ಸಂದರ್ಶನನಕ್ಕೆ ಆಹ್ವಾನ ಕೊಟ್ಟರು. ಅನೇಕ ಭಕ್ತರಿಗೆ ಭಗವದ್ಗೀತಾ ಲೇಖನಾ ದೀಕ್ಷೆಯನ್ನು ನೀಡಿ , ತಮ್ಮ ಮುಂಬರುವ ಪರ್ಯಾಯದಲ್ಲಿ ಉಡುಪಿಗೆ ಬಂದು ಸಮರ್ಪಣೆ ಮಾಡಿ ಧನ್ಯರಾಗಬೇಕೆಂದು ಹಾರೈಸಿದರು.
Snake Dream: ಕನಸಲ್ಲಿ ಹಾವು ಕಚ್ಚಿದ್ರೆ ಮುಂದಾಗಲಿರೋ ಅನಾಹುತದ ಸೂಚನೆನಾ?
ಆಸ್ಟಿನ್ ಹಿಂದೂ ದೇವಸ್ಥಾನದ ಅಧಿಕಾರಿಗಳಾದ ಶ್ರೀ ರಾಂ ಭಾಷ್ಯಂ, ಶ್ರೀ ಸಂದೀಪ್ ವುಪ್ಪಾಲ್ ಹಾಗೂ ಅರ್ಚಕ ವೃಂದವು ಪಾಲ್ಗೊಂಡು, ವೆಂಕಟ ಕೃಷ್ಣ ವೃಂದಾವನಕ್ಕೆ ಸಂಪೂರ್ಣ ಸಹಕಾರ ಕೊಟ್ಟರು. ಅರ್ಚಕರಾದ ಅವಿನಾಶಾಚಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. ಈ ಮೂಲಕ ಆರು ತಿಂಗಳಿಂದ ಕೃಷ್ಣನ ಬರುವಿಕೆಗಾಗಿ ಕಾದ ಭಕ್ತರ ಮಹದಾಸೆ ಈಡೇರಿದ ಧನ್ಯತಾ ಭಾವ ಎದ್ದು ಕಾಣುತ್ತಿತ್ತು.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.