Asianet Suvarna News Asianet Suvarna News

Garuda Purana: ಇಂಥ ಸುಲಕ್ಷಣ ಪತ್ನಿ ಇದ್ದ ಪತಿಯೇ ಅದೃಷ್ಟವಂತ!

ದಾಂಪತ್ಯ ಸುಂದರ ಸಂಬಂಧ. ಅದು ಪ್ರೀತಿ ಮತ್ತು ನಂಬಿಕೆಯ ಮೇಲೆ ನಿಂತಿದೆ. ಗರುಡ ಪುರಾಣದಲ್ಲಿ ಯಾವ ರೀತಿಯ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟವಂತರು ಎಂದು ಹೇಳಲಾಗಿದೆ.

Such women are called Sulakshana according to Garuda Purana they are lucky for men skr
Author
First Published Mar 7, 2023, 12:56 PM IST | Last Updated Mar 7, 2023, 12:56 PM IST

ಗಂಡ ಹೆಂಡತಿ ದಾಂಪತ್ಯ ರಥದ ಎರಡು ಚಕ್ರಗಳು. ಸಂತೋಷದ ದಾಂಪತ್ಯ ಜೀವನಕ್ಕೆ ಪತಿ-ಪತ್ನಿಯರ ನಡುವೆ ಸಾಮರಸ್ಯವಿರುವುದು ಬಹಳ ಮುಖ್ಯ. ಇವರಲ್ಲಿ ಯಾವುದಾದರೊಂದು ದೋಷವಿದ್ದರೆ, ಜೀವನದ ವಾಹನವು ಸರಿಯಾಗಿ ಓಡಲು ಸಾಧ್ಯವಾಗುವುದಿಲ್ಲ. ಗಂಡನ ಜೀವನದಲ್ಲಿ ಹೆಂಡತಿಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಧರ್ಮಗ್ರಂಥಗಳಲ್ಲಿ ಹೆಂಡತಿಯನ್ನು ಅರ್ಧಾಂಗಿನಿ ಎಂದು ಕರೆಯಲು ಇದು ಕಾರಣವಾಗಿದೆ, ಅಂದರೆ ಗಂಡನ ಅರ್ಧದಷ್ಟು ಪತ್ನಿಯೇ, ಆಕೆ ಇಲ್ಲದೆ ಪತಿ ಅಪೂರ್ಣ.

ಗರುಡ ಪುರಾಣದ ಒಂದು ಶ್ಲೋಕದಲ್ಲಿ, ಕೆಲ ಗುಣಗಳನ್ನು ಹೊಂದಿರುವ ಹೆಂಡತಿ ಪುರುಷನಿಗೆ ಅದೃಷ್ಟದೇವತೆಯಾಗುತ್ತಾಳೆ ಎಂದು ಹೇಳಲಾಗಿದೆ. ಗರುಡ ಪುರಾಣದ ಶ್ಲೋಕದ ಪ್ರಕಾರ, 'ಸ ಭಾರ್ಯಾ ಯಾ ಗೃಹೇ ದಕ್ಷ ಸಾ ಭಾರ್ಯಾ ಯಾ ಪ್ರಿಯಂವದಾ. ಸಾ ಭಾರ್ಯಾ ಯಾ ಪತಿಪ್ರಾಣಾ ಸಾ ಭಾರ್ಯಾ ಯಾ ಪತಿವ್ರತಾ'
ಗರುಡ ಪುರಾಣದ ಈ ಶ್ಲೋಕದಲ್ಲಿ ಹೆಣ್ಣಿನ ನಾಲ್ಕು ಗುಣಗಳಾದ ಗೃಹ ದಕ್ಷ, ಪ್ರಿಯಂವದಾ, ಪತಿಪ್ರಾಣ ಮತ್ತು ಪತಿವ್ರತಗಳನ್ನು ಹೇಳಲಾಗಿದೆ, ಅದು ಪ್ರತಿಯೊಬ್ಬ ಹೆಣ್ಣಿನಲ್ಲಿಯೂ ಇರಲೇಬೇಕು. ಅಂತಹ ಗುಣಗಳನ್ನು ಹೊಂದಿರುವ ಹೆಂಡತಿಯನ್ನು ಸುಲಕ್ಷಣ ಎಂದು ಕರೆಯಲಾಗುತ್ತದೆ ಮತ್ತು ಅಂತಹ ಹೆಂಡತಿಯನ್ನು ಪಡೆಯುವ ಪುರುಷನು ಅದೃಷ್ಟವಂತ ಪತಿ. ಈ ಗುಣಗಳ ಅರ್ಥವನ್ನು ತಿಳಿಯಿರಿ.

ಗೃಹ ದಕ್ಷ
ಗೃಹ ದಕ್ಷ ಎಂದರೆ ಮನೆ ಕೆಲಸದಲ್ಲಿ ನುರಿತ ಮಹಿಳೆ. ಅಡುಗೆ ಮಾಡುವುದು, ಶುಚಿಗೊಳಿಸುವುದು, ಮನೆಯನ್ನು ಅಲಂಕರಿಸುವುದು, ಬಟ್ಟೆ-ಪಾತ್ರೆಗಳು, ಅತಿಥಿ-ಆತಿಥ್ಯ, ಕುಟುಂಬದ ಜವಾಬ್ದಾರಿಯನ್ನು ಪೂರೈಸುವುದು, ಸೀಮಿತ ಸಂಪನ್ಮೂಲದಲ್ಲಿ ಸಂಸಾರ ನಡೆಸುವುದು ಇತ್ಯಾದಿ ಕೆಲಸಗಳನ್ನು ಚೆನ್ನಾಗಿ ಅರಿತ ಮಹಿಳೆ ತನ್ನ ಪತಿಗೆ ಅದೃಷ್ಟವಂತಳು. ಅಲ್ಲದೆ, ಅಂತಹ ಮಹಿಳೆ ತನ್ನ ಪತಿ ಮತ್ತು ಕುಟುಂಬದಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಾಳೆ.

ಚಾಣಕ್ಯನ ನೀತಿ: ಇಲ್ಲೆಲ್ಲಾ ನಿಂತರೆ ನರಕಕ್ಕೆ ಸಮಾನವಂತೆ, ಯಾಕಿರಬಹುದು?

ಪ್ರಿಯಂವದಾ
ಪ್ರಿಯಂವದಾ ಎಂದರೆ ಮಧುರವಾದ ಮಾತು. ಪತಿಯೊಂದಿಗೆ ಮಾತನಾಡುವಾಗ ಸಿಹಿ ಮತ್ತು ಸಂಯಮದ ಭಾಷೆಯಲ್ಲಿ ಮಾತನಾಡುವ ಮಹಿಳೆ, ಆ ಮಹಿಳೆ ತನ್ನ ಗಂಡನಿಂದ ತುಂಬಾ ಪ್ರೀತಿಯನ್ನು ಪಡೆಯುತ್ತಾಳೆ.

ಪತಿಪ್ರಾಣ
ಪತಿಪ್ರಾಣವನ್ನು ಪತಿಪಾರಾಯಣ ಸ್ತ್ರೀ ಎಂದೂ ಕರೆಯುತ್ತಾರೆ. ಅಂತಹ ಮಹಿಳೆಯರು ಗಂಡ ಹೇಳಿದ ಮಾತುಗಳನ್ನು ಅನುಸರಿಸುತ್ತಾರೆ. ಅವಳು ಗಂಡನ ಹೃದಕ್ಕೆ ನೋವು ನೀಡುವಂಥ ಕೆಲಸವನ್ನು ಎಂದಿಗೂ ಮಾಡುವುದಿಲ್ಲ. ಅದಕ್ಕಾಗಿಯೇ ಅವರ ಗಂಡಂದಿರು ಕೂಡ ಅಂತಹ ಮಹಿಳೆಗೆ ಪ್ರೀತಿ ಮತ್ತು ಗೌರವವನ್ನು ನೀಡುತ್ತಾರೆ. ಗಂಡನ ಮನಸ್ಸನ್ನು ಅರಿತು ಅವನ ಇಚ್ಚೆಯನರಿವ ಪತ್ನಿ ಈಕೆ. ಇಚ್ಛೆಯನರಿತು ನಡೆವ ಪತ್ನಿ ಇರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ ಎಂಬ ವಚನವೂ ಇದನ್ನೇ ಹೇಳುತ್ತದೆ ಅಲ್ಲವೇ?

Gautam buddha story: ಕೆಟ್ಟ ಕಾಲ ಕಳೆದ ಬಳಿಕ ಒಳ್ಳೆಯ ಕಾಲ ಬಂದೇ ಬರುತ್ತದೆ..

ಪತಿವ್ರತಾ
ಒಬ್ಬ ಮಹಿಳೆಯು ತನ್ನ ಗಂಡನನ್ನು ಹೊರತುಪಡಿಸಿ ಬೇರೆ ಯಾವುದೇ ಪುರುಷನ ಬಗ್ಗೆ ತನ್ನ ಮನಸ್ಸಿನಲ್ಲಿ ಎಂದಿಗೂ ತಪ್ಪು ಆಲೋಚನೆಗಳನ್ನು ತರುವುದಿಲ್ಲ. ಮದುವೆಯ ನಂತರ ತನ್ನ ದೇಹ ಮತ್ತು ಮನಸ್ಸನ್ನು ತನ್ನ ಪತಿಗೆ ಮಾತ್ರ ಅರ್ಪಿಸುವ ಹೆಂಡತಿಯಾಗಿರಬೇಕು. ಅಂತಹ ಗುಣಗಳನ್ನು ಹೊಂದಿರುವ ಹೆಂಡತಿಯನ್ನು ಮಾತ್ರ ಶಾಸ್ತ್ರಗಳಲ್ಲಿ ಪರಿಶುದ್ಧೆ ಎಂದು ಕರೆಯಲಾಗುತ್ತದೆ. ಗರುಡ ಪುರಾಣದಲ್ಲಿಯೂ ಹೇಳಲಾಗಿದೆ, ತನ್ನ ಗಂಡನ ಬಗ್ಗೆ ಮಾತ್ರ ಕಲ್ಪನೆಯಲ್ಲೂ ಕಾಣುವವಳನ್ನು ಹೊಂದಿರುವಂಥ ಮಹಿಳೆಯ ಗಂಡ ಖಂಡಿತವಾಗಿ ಬಹಳ ಅದೃಷ್ಟವಂತ.

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios