Asianet Suvarna News Asianet Suvarna News

ಚೈತ್ರ ಅಮಾವಾಸ್ಯೆಯಂದು ಕೂಡಿ ಬರಲಿದೆ ವಿಶೇಷ ಯೋಗ!

ಚೈತ್ರ ಅಮಾವಾಸ್ಯೆಯ ದಿನ ವಿಶೇಷ ಯೋಗಾಯೋಗಗಳು ಕೂಡಿ ಬರುತ್ತಿವೆ. ಇದರ ಮಹತ್ವವೇನು? ಯಾವ ಸಮಯದಲ್ಲಿ ಯೋಗವಿರುತ್ತದೆ? ಅದರಿಂದೇನಾಗುತ್ತದೆ ನೋಡೋಣ. 

Special yoga is being made on Chaitra Amavasya skr
Author
Bangalore, First Published Mar 31, 2022, 10:14 AM IST | Last Updated Mar 31, 2022, 10:14 AM IST

ಚೈತ್ರ ಮಾಸ ಕೃಷ್ಣ ಪಕ್ಷದ ಕಡೆಯ ದಿನವೇ ಚೈತ್ರ ಅಮಾವಾಸ್ಯೆ(Chaitra Amavasya)ಯಾಗಿದೆ. ಚೈತ್ರ ಅಮಾವಾಸ್ಯೆಗೆ ಹಿಂದೂ ಕ್ಯಾಲೆಂಡರ್‌ನಲ್ಲಿ ವಿಶೇಷ ಮಹತ್ವವಿದೆ. ಈ ದಿನ ಪವಿತ್ರ ನದಿಗಳಲ್ಲಿ ಸ್ನಾನ ಮಾಡಿ, ಪಿತೃಗಳನ್ನು ಸ್ಮರಿಸುವುದು, ದಾನ ಧರ್ಮ ಮಾಡುವುದರಿಂದ ವಿಶೇಷ ಫಲಗಳು ಸಿದ್ಧಿಸಲಿವೆ. ಈ ಬಾರಿ ಚೈತ್ರ ಅಮಾವಾಸ್ಯೆಯು ಏಪ್ರಿಲ್ 1ರಂದು ಬರಲಿದೆ. ಈ ಬಾರಿಯ ಚೈತ್ರ ಅಮಾವಾಸ್ಯೆ ಬಹಳ ವಿಶೇಷವಾಗಿದೆ. ಏಕೆಂದರೆ ಈ ಪುಣ್ಯ ದಿನದಂದು ಸಾಕಷ್ಟು ಅಪರೂಪದ ಯೋಗಗಳು(rare yogas) ಕೂಡಿ ಬರುತ್ತಿವೆ. ಈ ದಿನ ನಡೆಸುವ ಪಿತೃ ಕಾರ್ಯಗಳು ವಿಶೇಷ ಫಲಗಳನ್ನು ನೀಡಲಿವೆ. ಪಿತೃಗಳು ಮುನಿಸಿಕೊಂಡರೆ ಮನೆಯಲ್ಲಿ ಯಾವುದೇ ಒಳಿತಾಗುವುದಿಲ್ಲ, ಏಳ್ಗೆ ಸಾಧ್ಯವಿಲ್ಲ, ಮಕ್ಕಳಾಗದೆ ಹೋಗಬಹುದು, ಮಕ್ಕಳು ಮಾತು ಕೇಳದೆ ಮೊಂಡರಾಗಬಹುದು. ಹಾಗಾಗಿ, ಅಮಾವಾಸ್ಯೆಯ ದಿನ ಅವರನ್ನು ಮೆಚ್ಚಿಸಿ, ಅವರ ಆಶೀರ್ವಾದ ಪಡೆಯುವುದು ಮುಖ್ಯವಾಗಿದೆ. 

ಯಾವೆಲ್ಲ ಯೋಗಗಳು ಚೈತ್ರ ಅಮಾವಾಸ್ಯೆಯಂದು ಕಾಣಿಸುತ್ತಿವೆ, ಅವುಗಳ ಮಹತ್ವವೇನು, ಚೈತ್ರ ಅಮಾವಾಸ್ಯೆಯ ಶುಭ ಮುಹೂರ್ತವೇನು, ಪೂಜಾ ವಿಧಾನವೇನು ನೋಡೋಣ. 

ಚೈತ್ರ ಅಮಾವಾಸ್ಯೆ ಶುಭ ಮುಹೂರ್ತ(auspicious time)
ಚೈತ್ರ ಅಮಾವಾಸ್ಯೆ ದಿನಾಂಕ- 1 ಏಪ್ರಿಲ್ 2022
ಅಮಾವಾಸ್ಯೆ ತಿಥಿ ಆರಂಭ ಸಮಯ- ಮಾರ್ಚ್ 31ರ ಮಧ್ಯಾಹ್ನ 12.22
ಅಮಾವಾಸ್ಯೆ ತಿಥಿ ಕೊನೆಯಾಗುವ ಸಮಯ- ಏಪ್ರಿಲ್ 1 ರ ಬೆಳಗ್ಗೆ 11.53.

ಯುಗಾದಿ ವರ್ಷ ಭವಿಷ್ಯ: ಯಾವ ರಾಶಿಗೆ ಹೇಗಿರಲಿದೆ?

ವಿಶೇಷ ಯೋಗಗಳು
ಚೈತ್ರ ಅಮಾವಾಸ್ಯೆಯ ದಿನ ಈ ಬಾರಿ ವಿಶೇಷ ಯೋಗಗಳು ಘಟಿಸುತ್ತಿವೆ. ಬ್ರಹ್ಮ ಯೋಗ, ಇಂದ್ರ ಯೋಗ, ಸರ್ವಾರ್ಥ ಸಿದ್ಧಿ ಯೋಗದೊಂದಿಗೆ ರೇವತಿ ನಕ್ಷತ್ರ, ಅಮೃತ ಸಿದ್ಧಿ ಯೋಗ ಎಲ್ಲವೂ ಕೂಡಿಬರುತ್ತಿವೆ. ಹಾಗಾಗಿ ಈ ದಿನವು ಸರ್ವರಿಗೂ ಶ್ರೇಷ್ಠವಾಗಿದೆ. 

ಬ್ರಹ್ಮ ಯೋಗ(Brahma Yoga)- ಏಪ್ರಿಲ್ 1ರ ಬೆಳಗ್ಗೆ 9 ಗಂಟೆಯಿಂದ 9.37ರವರೆಗೆ ಬ್ರಹ್ಮ ಯೋಗ ಇರಲಿದೆ. ಇದಾದ ಬಳಿಕ ಇಂದ್ರ ಯೋಗ ಆರಂಭವಾಗಲಿದೆ. 
ಸರ್ವಾರ್ಥ ಸಿದ್ಧಿ ಯೋಗ- ಬೆಳಗ್ಗೆ 10.40ರಿಂದ ಏಪ್ರಿಲ್ 2ರ ಬೆಳಗ್ಗೆ 6.10ರವರೆಗೂ ಈ ಯೋಗ ಇರಲಿದೆ. 
ಅಭಿಜಿತ್ ಮುಹೂರ್ತ- 12 ಗಂಟೆಯಿಂದ 12.50ರವರೆಗೆ
ಅಮೃತ ಸಿದ್ಧಿ ಯೋಗ- ಏಪ್ರಿಲ್ 1 ರ ಬೆಳಗ್ಗೆ 10.40ರಿಂದ ಏಪ್ರಿಲ್ 2ರ ಬೆಳಗ್ಗೆ 6.10ರವರೆಗೆ. 

ಈ ಐದು ರಾಶಿಗಿದೆ ಈ ವರ್ಷ ಕನಸಿನ ಮನೆ ಕೊಳ್ಳೋ ಯೋಗ

ಚೈತ್ರ ಅಮಾವಾಸ್ಯೆ ಪೂಜಾ ವಿಧಾನ(Puja Method)
ಚೈತ್ರ ಅಮಾವಾಸ್ಯೆಯ ದಿನ ಬ್ರಹ್ಮ ಮುಹೂರ್ತದಲ್ಲಿ ಎದ್ದು ಪವಿತ್ರ ನದಿಯಲ್ಲಿ ಸ್ನಾನ ಮಾಡಬೇಕು. ಹಾಗೆ ನದಿಗಳಲ್ಲಿ ಸ್ನಾನ ಮಾಡಲಾಗದವರು ತಾವು ಸ್ನಾನ ಮಾಡುವ ನೀರಿಗೆ ಗಂಗೆಯ ನೀರನ್ನು ಸೇರಿಸಿಕೊಂಡು ಸ್ನಾನ ಮಾಡಬಹುದು. ಬಳಿಕ ತಾಮ್ರದ ಪಾತ್ರೆಯಲ್ಲ ಸೂರ್ಯನಿಗೆ ಅರ್ಘ್ಯ ನೀಡಬೇಕು. ಬಳಿಕ ನಿಮ್ಮ ಸಾಮರ್ಥ್ಯಕ್ಕನುಗುಣವಾಗಿ ಬಟ್ಟೆ, ಧಾನ್ಯ, ಹಸು ಹಣ್ಣುಗಳನ್ನು ದಾನ ಮಾಡಬೇಕು. ಇದರೊಂದಿಗೆ ಈ ದಿನ ಪಿತೃಗಳಿಗಾಗಿ ಅಡುಗೆ ತಯಾರಿಸಿ ಅವರಿಗೆ ಪಿಂಡ ಪ್ರದಾನ ಮಾಡಬೇಕು. ತರ್ಪಣ ಬಿಡಬೇಕು ಇದರಿಂದ ಪಿತೃಗಳ ಆಶೀರ್ವಾದ ದೊರೆಯಲಿದೆ. 
ಅಮಾವಾಸ್ಯೆಯ ದಿನ ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಿ. ನೀಲಿ ಹೂಗಳು, ಕಪ್ಪು ಎಳ್ಳು ಹಾಗ ಎಳ್ಳೆಣ್ಣೆಯನ್ನು ಶನಿ(Lord Shani)ಗೆ ಅರ್ಪಿಸಿ. 
ಈ ದಿನ ಉಪವಾಸ ಆಚರಿಸುವುದರಿಂದ ಪಿತೃಗಳಿಗೆ ಮೋಕ್ಷ ದೊರಕಲಿದೆ. 

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

Latest Videos
Follow Us:
Download App:
  • android
  • ios